ಹಾಗೆ ಮುಂದಕ್ಕೆ ಬಾಗಿದ ಬ್ರಹ್ಮ ನನ್ನ ತಲೆ ನೇವರಿಸುತ್ತಾ "ಮಗೂ.. ನಿನಗೆ ನಾನು ಹೇಳಲು ಆಗುವುದಿಲ್ಲ, ಹೇಳಿದರೂ ನಿನಗೆ ಅರ್ಥವಾಗುವಿದಿಲ್ಲ, ಅದೆಲ್ಲ ನಿನ್ನ ವಯಸ್ಸಿಗೆ ಮತ್ತು ನಿನ್ನ ಬುದ್ದಿ ವ್ಯಾಪ್ತಿಗೆ ಮೀರಿದ ಉತ್ತರಗಳು, ವೃಥಾ ಕಾಲಹಾರಣ ಅಷ್ಟೇ.... ನಿನಗೆ ವರ ಕೊಡಲು ಬಂದಿದ್ದೇನೆ... ಕೇಳು..." ಎಂದನು..
"ಹಾ!! ನನ್ನ ಬುದ್ದಿವ್ಯಾಪ್ತಿಗೆ ಮೀರಿದ್ದೇ..?? ಸರಿ ನನಗೇ ಏಕೆ ವರ ನೀಡಲು ಬಂದಿರುವೆ...ನನಗೆ ಸಮಂಜಸವಾದ ಉತ್ತರನನ್ನು ನೀಡಿದರೆ ಮಾತ್ರ ವರವೋ ಶಾಪವೋ ಅದರ ಬಗ್ಗೆ ಮಾತಾಡುವ... "...
"hmmm....ನಿನಗೆ ಏಕೆ ವರವೆಂದರೆ..ಅದೆಲ್ಲ ನಮ್ಮ ಚಿತ್ರಗುಪ್ತರ ಮಗನಾದ ದಾಸ್ ಗುಪ್ತನ ಕೈಚಳಕ..."
"ಏನೆಂದಿರಿ...ದಾಸ್ ಗುಪ್ತನೇ..ಚಿತ್ರಗುಪ್ತನ ಮಗ...??? "..
"ಹೌದು..ದಾಸ್ ಗುಪ್ತ.. ನಮ್ಮ ದೇವಲೋಕದ ಮಂದಿಗೆ ಕಂಪ್ಯೂಟರ್ ಪರಿಕರಗಳನ್ನು ಪರಿಚಯಿಸಿದಾತ.. ದಾಸ್ ಗುಪ್ತ..
ಈ ದಾಸ್ ಗುಪ್ತಾ ಭೂಲೋಕದ ಅದರಲ್ಲೋ ಬೆಂಗಳೂರಿನ ಮಾಹಿತಿ ತಂತ್ರಗ್ನಾನದ ಒಟವನ್ನು ಕಂಡು ತನ್ನ ಸ್ವಪರಿಶ್ರಮದಿಂದಲೇ ಕಲಿತ..... ಅಪ್ಪ ಚಿತ್ರಗುಪ್ತನ ಪಡಿಪಾಟಲು ನೋಡಲಾಗದೆ ಅಪ್ಪನ ಕೆಲಸದಲ್ಲಿ ಸಹಭಾಗಿಯಾದ..... ಚಿತ್ರಗುಪ್ತರ ಕೆಲಸ ನಿನಗೆ ತಿಳಿದೇ ಇದೆಯಲ್ಲವೆ... ಯಮಲೋಕಕ್ಕೆ ಬರುವರೆಲ್ಲರ ಪೂರ್ವಾಪರವನ್ನು ಓದಿ ಅವನ ಪಾಪ ಪುಣ್ಯಗಳ ವರದಿ ಯನ್ನು ಯಮಧರ್ಮರಾಯನಿಗೆ ಒಪ್ಪಿಸುವುದು..ಇಷ್ಟು ಕಾಲವು ಇದೆಲ್ಲ ತನ್ನ ಸ್ವಹಸ್ತದಿಂದ ಚಿತ್ರಗುಪ್ತರು ಮಾಡುತ್ತಿದ್ದರು.... ಆ ಮಾಹಿತಿಯೆಲ್ಲವನ್ನು ಈಗ database ರೂಪದಲ್ಲಿ ಕಂಪ್ಯೂಟರ್ ನಲ್ಲಿ ವ್ಯವಸ್ಥೆ ಮಾಡಿದ್ದಾನೆ ನಮ್ಮ ದಾಸ್ ಗುಪ್ತ... ಚಿತ್ರಗುಪ್ತರ ಕೆಲಸ ಈಗ ಸಲೀಸಾಗಿದೆ... ಕೇಸುಗಳ ವಿಲೇವಾರಿ ತುಂಬ ತ್ವರಿತಗತಿಯಲ್ಲಿ ಸಾಗುತ್ತಿದೆ.."
ಮಧ್ಯಕ್ಕೆ ನಿಲ್ಲಿಸಿ ನಾನು.. "ಅಯ್ಯಾ ಬ್ರಹ್ಮದೇವ...ನಾನು ಕೇಳಿದ್ದಕ್ಕೂ ನೀನು ಹೇಳುತ್ತಿರುವುದಕ್ಕೂ ಎತ್ತಣದಿಂತ್ತೆಣ ಸಂಭಂದವಯ್ಯ... ನನಗೊಂದೂ ತಿಳಿಯದಾಗಿದೆ..."
"ಹಹ್ಹಹ್ಹ..ಮಗೂ ನಾನು ಸಂಪೂರ್ಣ ವಿಷಯ ಹೇಳುವವರೆಗಿನ ತಾಳ್ಮೆ ನಿನ್ನದಾಗಬೇಕು... ತಾಳ್ಮೆ...ತಾಳ್ಮೆ..ಜಗತ್ತಿನ ಸಾಕಷ್ತು ಮಹೋನ್ನತ ಕಾರ್ಯಗಳು ತಾಳ್ಮೆಯಿಂದಲೇ ಆದುದ್ದಾಗಿದೆ... ತಾಳ್ಮೆ ಬೆಳೆಸಿಕೋ..."
ಬ್ರಹ್ಮನ ತಾಳ್ಮೆಯ ವಿಷಯ ಮನಮುಟ್ಟಿತು...ಸ್ತಬ್ದನಾಗಿಬಿಟ್ಟೆ... full lecture ಕೊಡಕ್ಕೆ ready ಆಗಿ ಬಂದಿದ್ದಾನೆ ಬ್ರಹ್ಮ..." ಸರಿ ಸ್ವಾಮಿ ನೀವು continue ಮಾಡಿ...ನಿಮ್ಮ ಲಹರಿಗೆ ಅಡ್ಡಿ ಪಡಿಸುವುದಿಲ್ಲ... ಮುಂದುವರೆಸಿ.." ಎಂದೆ
ಹೀಗೆ ದಾಸ್ ಗುಪ್ತನು ಕಂಪ್ಯೂಟರಿನಿಂದ ದೇವಲೋಕದಲ್ಲಿ, ಯಮಲೋಕದಲ್ಲಿ ಕ್ರಾಂತಿಯನ್ನು ಉಂಟು ಮಾಡಿದ..ಹೀಗೆ ಸಾಗುತ್ತಿರಲು ಒಂದು ದಿನ ನನಗೂ ಹಾಗೂ ದಾಸ್ ಗುಪ್ತನಿಗೆ ವಾಗ್ವಾದ ಉಂಟಾಯಿತು....
ಆತನ ವಾದ ಇಷ್ಟೆ..."ಬ್ರಹ್ಮ ದೇವ ಭೂಲೋಕ ಬಹಳ ಹದೆಗೆಟ್ಟು ಹೋಗಿದೆ...ಎಲ್ಲೆಲ್ಲೂ ಆರಾಜಕತೆ, ಭ್ರಷ್ಟಾಚಾರ, ಅನೀತಿ, ಸುಲಿಗೆ, ಮೋಸ, ಧಗಾ, ವಂಚನೆಗಳು ಸರ್ವೇಸಾಮನ್ಯವಾಗಿಬಿಟ್ಟಿದೆ... ಇದನ್ನು ತಹಬಹದಿ ತರುವ ಮಾತಂತೂ ದುಸ್ಸಾಧ್ಯ, ಸತ್ಯವೆಂಬುದು ಭೂಲೋಕದಲ್ಲಿ ಅಸ್ತಿತ್ವದಲ್ಲೇ ಇಲ್ಲ, ಧರ್ಮ ತನ್ನ ಕಾಲುಗಳನ್ನು ಕಳೆದು ಕೊಂಡು ಬೀದಿ ಬದಿಯಲ್ಲಿ ಬಿದ್ದಿದೆ ಎನ್ನುವುದು ನನ್ನ ವಾದ.."
"ದಾಸ್ ಗುಪ್ತನೇ ..ನೀನು ಭೂಲೋಕದ ಕೇವಲ ಒಂದು ಮುಖವನ್ನು ಮಾತ್ರವೇ ನೋಡಿದ್ದೀಯ, ಬಹುಶ: ನಿನಗೆ ಬರಿ ದುಷ್ಟರೇ ಕಾಣಿಸಿರಬಹುದು, ಸತ್ಯವೆಂಬುವುದು ಎಲ್ಲ ಕಾಲಗಳಲ್ಲಿಯು ನಿತ್ಯ ಸೂರ್ಯನಂತೆ ಹೊಳೆಯುತ್ತಿರುತ್ತದೆ... ಸೂರ್ಯನನ್ನು ಮೋಡ ಮರೆಮಾಚಿದುದಕ್ಕೆ ಸೂರ್ಯನೇ ಇಲ್ಲವೆಂಬುದು ನಿಮ್ಮ ತಪ್ಪು ಗ್ರಹಿಕೆ.... ಸತ್ಯವೆಂಬುದು ದಟ್ಟ ಕಾನನದಲ್ಲಿ ಬೇಸಿಗೆಯ ಮಾಸದಲ್ಲಿ ಹರಿಯುವ ನಿರ್ಮಲವಾದ ಪುಟ್ಟ ಝರಿಯಂತೆ...ಹುಡುಕುವ ತಾಳ್ಮೆಯಿರಬೇಕು...ಅದರೆಡೆಗೆ ಹೋಗುವ ಪ್ರಯತ್ನ ನಮ್ಮದಾಗಬೇಕು..."
ಇದರಿಂದ ಸ್ವಲ್ಪ ಮುಂಗೋಪಿಯಾದ ದಾಸ್ ಗುಪ್ತನು ಕ್ರುದ್ದನಾದ... "ಸರಿ ಹಾಗಿದ್ದರೆ ನಿಮ್ಮ ಈ ಭೂಲೋಕದಲ್ಲಿ ಆ ಥರದ ವ್ಯಕ್ತಿಯನ್ನು ತೋರಿಸಿಬಿಡಿ.... ನನ್ನ ಸೋಲನ್ನು ನಾನು ಒಪ್ಪುವೆ..."
"ನೋಡು ದಾಸ್ ಗುಪ್ತ.. ನೀನು ಒಡ್ಡಿರುವ ಸವಾಲನ್ನು ನಾನು ಸ್ವೀಕರಿಸಿದ್ದೇನೆ... ಹಾಗೆಂದ ಮಾತ್ರಕ್ಕೆ ಇಡೀ ಭೂಮಂಡಲದಲ್ಲಿ ಒಬ್ಬ ಆ ರತ್ನವನ್ನು ಹುಡುಕುವುದು ದುಸ್ಸಾಧ್ಯವೇ ಸರಿ... ನನ್ನ ಪ್ರಕಾರ ಪ್ರತಿಯೊಬ್ಬ ಮನುಜನಲ್ಲೂ
ಆ ವಸ್ತುನಿಷ್ಟ ಗುಣ, ಸತ್ಯಪರತೆ, ಎಲ್ಲವೂ ಇರುತ್ತದೆ, ಕೆದಕಿ ತೆಗಯಬೇಕು, ಅವನ ಪ್ರಕೃತಿದತ್ತವಾದ ಪರಿಸರದಲ್ಲಿ ಬೆಳೆದುದರ ಕಾರಣದಿಂದ ಆತ ಕೆಟ್ಟವನೆನಿಸಬಹುದು..."
ಹಾಗೆಂದ ಕೂಡಲೇ ದಾಸ್ ಗುಪ್ತನು ಗುಡುಗತೊಡಗಿದ...
"ಎಲೈ ಬ್ರಹ್ಮನೇ, ನಿಮ್ಮ ಉತ್ಪ್ರೇಕ್ಷೆಯು ತನ್ನ ಪರಮಾವಧಿಯನ್ನು ತಲುಪಿದೆ...., ನಾನು ನನ್ನ ಕಂಪ್ಯೂಟರಿನ ಸಹಾಯದಿಂದ ನಿಮಗೆ ಒಬ್ಬನನ್ನು ಹುಡುಕಿಕೊಡುತ್ತೇನೆ, ಅವನ ಬಳಿ ನೀವು ತೆರಳಿ ಅವನಿಗೆ ವರ ನೀಡಿ, ಅವನು ತನ್ನ ಕೊಟ್ಟ ವರವನ್ನು ಹೇಗೆ ಉಪಯೋಗಿಸಿಕೊಳ್ಳುತ್ತಾನೆ ಎಂಬುದರ ಮೇಲೆ ಮಾನವನ ಗುಣ ನಿಮ್ಮ ಅರಿವಿಗೆ ಬರುತ್ತದೆ..."
ಹೀಗೆಂದು ಹೇಳಿದ ದಾಸ್ ಗುಪ್ತನು ಒಂದಷ್ಟು algorithms run ಮಾಡಿ, ಒಬ್ಬ ವ್ಯಕ್ತಿಯನ್ನು ಕೇವಲ ಕೆಲ ಕ್ಷಣಗಳಲ್ಲಿ ನನಗೆ ಒಬ್ಬ ಮುಖವನ್ನು ತೋರಿಸಿದ.....
ನಾನು ಮಧ್ಯ ತಡೆದು.... "ಆ ದುರಾದೃಷ್ಟಶಾಲಿ ನಾನೇ????????" ಎಂದು ಅವಾಕ್ಕಾದೆ...
ಬ್ರಹ್ಮನು ಮುಗುಳ್ನಗುತ್ತಾ.. "ಹೌದು.." ಎಂದ..
ಅಲ್ಲೆ ಕುಸಿದು ಬೀಳುವ ಭಾವ ನನ್ನಲುಂಟಾಯಿತು.....
ಈ processನಲ್ಲಿ bejaan fitting ಇದೆ ಎಂದು ಭಾವಿಸಿ..."ಅಲ್ಲ ಬ್ರಹ್ಮ..ನಿನಗೆ ನಮ್ಮ ಭೂಮಂಡಲ ಮನುಷ್ಯರ ಮಾಹಿತಿ ನಿಮಗೆ ಹೇಗೆ ದೊರೆಯಿತು ಎನ್ನುವುದೇ ನನ್ನ ಯಕ್ಷಪ್ರಶ್ನೆಯಾಗಿದೆ.... ಹೇಗೆ ಸಿಕ್ಕಿತು ನಮ್ಮೆಲ್ಲರ ವಿವರಗಳು??"
ಬ್ರಹ್ಮ ನಸು ನಗುತ್ತ, ನನ್ನ ತಲೆ ನೇವರಿಸುತ್ತಾ ನಾವು Orkut ನಿಂದ ನಿಮ್ಮೆಲ್ಲರ ಮಾಹಿತಿಯನ್ನು ಪಡೆದೆವು...
ನಾನು ಮತ್ತೆ ಗಿಲ್ಲಿಕೊಂಡೆ....ನೋವಾಗಲಿಲ್ಲ...ನನ್ನ ಸ್ಪರ್ಶೇಂದ್ರಿಯಗಳು ತಮ್ಮ ಕಾರ್ಯವನ್ನು ನಿಲ್ಲಿಸಿದವೆಂದು ತೋರುತ್ತದೆ...
(ಸಶೇಷ).......
ನಾನು ಬ್ರಹ್ಮ ಮತ್ತು ಮುಖ್ಯಮಂತ್ರಿ -- ಭಾಗ - 2
Monday, September 10, 2007Posted by Sridhar Raju at 8:15 PM 6 comments
ನಾನು ಬ್ರಹ್ಮ ಮತ್ತು ಮುಖ್ಯಮಂತ್ರಿ ....ಭಾಗ - 1
Thursday, September 6, 2007
phoooooooooooooooooooosssssssssssshhhhhhhhhhhhhh...........flash...flash...flash....flash...
ನನ್ನ ಸುತ್ತಲು ಗಾಢವಾದ ಕತ್ತಲು....ಎಲ್ಲೋ ನಭೋಮಂಡಲದಲ್ಲಿದ್ದ ಭಾವನೆ.... ತಾರೆಗಳು ಸಹ ಇರಲಿಲ್ಲ..ವಿಶ್ವವು ಮುಗಿದೇಹೋಯಿತೇ??
ನನ್ನ ತಾಯಿ ಎಲ್ಲಿ??
ನನ್ನ ತಂಗಿ??
ನನ್ನ ಗೆಳೆಯರೆಲ್ಲ ಏನಾದರು??
ಕಾಫಿ...??
ಒಮ್ಮೆಲೆ ದುಖ ಮಡುಗಟ್ಟತೊಡಗಿತು...
ಮತ್ತೆ ನಾನಿಲ್ಲಿ ಏನು ಮಾಡುತ್ತಿದ್ದೇನೆ??... ಉತ್ತರ ಸಿಗದ ಸಾಕಷ್ಟು ಪ್ರಶ್ನೆಗಳು ಮನಸ್ಸಿನಲ್ಲಿ ಸುಳಿದಾಡುತ್ತಲೇ ಇದ್ದವು... ಒಮ್ಮೆ ತಲೆ ಕೊಡವಿಕೊಂಡೆ..
ಕೊಂಚ ಧೈರ್ಯ ಮಾಡಿ ಕೇಳಿದೆ ಆ ಆಕೃತಿಗೆ... "ನೀನಾರು" ??
ಕನ್ನಡ ಬರುತ್ತದೋ ಇಲ್ಲವೋ ಇದಕ್ಕೆ.. ಅಂತಹ ಸ್ಥಿತಿಯಲ್ಲಿ ಎದೆ ಬಗಿದರೂ ಕನ್ನಡ ಬಿಟ್ಟು ಬೆರೆ ಭಾಷೆ ಹೊರಬರುತ್ತಿರಲ್ಲಿಲ್ಲ...
ಮತ್ತದೇ ಮಂದಸ್ಮಿತ ವದನ.. ಏನೋ ಒಂದು ಆಕರ್ಷಣೆ ಆ ಮುಖದಲ್ಲಿ ಎದ್ದು ಕಾಣುತ್ತಿತ್ತು...
ಮೆಲ್ಲಗೆ ಉತ್ತರಿಸಿತು..
"ನಾನು ಸೃಷ್ಟಿಕರ್ತ ಬ್ರಹ್ಮ...." ಎಂದು ಹೇಳಿ ಸುಮ್ಮನಾಯಿತು.
ಬ್ರಹ್ಮನೇ...ಇಲ್ಲೇನು ಕೆಲಸ.... ಇಲ್ಲೇಕೆ ಬಂದಿದ್ದಾನೆ... ಇನ್ನು ನಾನು ಕಥೆ,ಕಾದಂಬರಿಗಳನ್ನು ಹೆಚ್ಚಾಗಿ ಓದುವುದನ್ನು ನಿಲ್ಲಿಸಬೇಕು.. ಇಲ್ಲವಾದರೆ ಹೀಗೆ ಆಗುವುದು.. ಮತ್ತೊಮ್ಮೆ ಗಿಲ್ಲಿಕೊಂಡೆ..ಅಷ್ಟರಲ್ಲಿ...
"ಇಲ್ಲ ಮಗೂ...ಇದು ಕನಸಲ್ಲ ವಾಸ್ತವ...ನಾನು ಬ್ರಹ್ಮ.. ನಿನಗೆ ಬೇರಾವ ಸಂದೇಹವೂ ಬೇಡ.."
ಈ ಬ್ರಹ್ಮ ನ ಬಗ್ಗೆ ನನಗೆ ಗೊತ್ತಿರೋ ಶ್ಲೋಕಗಳೇ ಇರಲಿಲ್ಲ..ಇದ್ದುದ್ದೆ ಆಗಿದ್ದರೆ... ಅಣ್ಣಾವ್ರು "ಕವಿರತ್ನ ಕಾಳಿದಾಸ" ಚಿತ್ರದಲ್ಲಿ ಕಾಳಿಯನ್ನು ನೋಡಿ ಶ್ಲೋಕ ಹೇಳುತ್ತಾರಲ್ಲ..ಆ scene create ಮಾಡುತ್ತಲಿದ್ದೆ..ಚೆ ಚೆ....
"ನಿನಗೆ ವರ ಕೊಡಲು ಬಂದಿದ್ದೇನೆ...ಏನು ಬೇಕೋ ಕೇಳು ಮಗೂ.."....
ನನಗೆ ಸಿಡಿಲು ಹೊಡೆದಂತಾಯಿತು...ವರವೆ ನನಗೆ....ಮಾಡಿರೋದೆಲ್ಲ ಹಲ್ಕಾ ಕೆಲಸಗಳೇ...ನನಗೆ ವರ... ಏನು ಬ್ರಹ್ಮ ವರ ಕೆಟ್ಟೋದನೇ ಎಂದುಕೊಳ್ಳುತ್ತಿದ್ದೆ..
ನನಗೆ ನಿಜಕ್ಕೊ ದಿಗಿಲಾಗತೊಡಗಿತು...ಏನೋ ಅನಾಹುತ ಆಗಬಹುದೆಂಬ ಭಾವನೆ...ವರ ಗಿರ ಅಂತೆಲ್ಲ ಮಾತಾಡ್ತಿದಾನಲ್ಲಪ್ಪ ಬ್ರಹ್ಮ... ಕೆಟ್ಟು ಕೆರ ಹಿಡಿದಿರೋ ಕಲಿಯುಗದಲ್ಲಿ ಇದೆಲ್ಲಾ ಸಾಧ್ಯವೇ???...
"ಮಗೂ.." ಅಮ್ಮ ಪ್ರೀತಿಯಿಂದ ಕರೆಯುವ ಹಾಗೆ ಕರೆದ ಬ್ರಹ್ಮ..
"ನಿನ್ನ ಮನಸ್ಸಿನಿಂದ ಯುಗಗಳ ಪರಿಕಲ್ಪನೆ ತೆಗೆದುಹಾಕು.. ಸೃಷ್ಟಿಕರ್ತನು ಎಲ್ಲ ಕಾಲಗಳಲ್ಲಿಯು ಇರುವ..ಇರುವವ..
ತ್ರೇತಾಯುಗದಲ್ಲಿ, ದ್ವಾಪರಯುಗದಲ್ಲಿ ನಾವು ಸಹ ಇಲ್ಲೇ ಒಡಾಡಿಕೊಂಡಿರುತ್ತಿದ್ದೆವು... frequent visits -u...

"ಏಕೆ ಈ ನಗು" ?? ಎಂದೆ.
ನನ್ನ ಪ್ರಶ್ನೆಗೆ ಉತ್ತರ ನೀಡಲು ಮುಂದೆ ಬಾಗತೊಡಗಿದ....
ನಾನು ಸ್ವಲ್ಪ ಹಿಂದಕ್ಕೆ ಸರಿದೆ... ಕಪಾಳಮೋಕ್ಷ ಆಗಿಬಿಟ್ಟರೆ???
Posted by Sridhar Raju at 2:22 AM 9 comments
ಆಣಿಮುತ್ತುಗಳು
Thursday, August 9, 2007ನನ್ನ ಸ್ನೇಹಿತರ ಆಣಿಮುತ್ತುಗಳು...ನನ್ನ ಮೇಲೆ ಒಂದಷ್ಟು ಪ್ರಭಾವ!! ಬೀರಿದಂತವು...
"ತಿಂಗಳ ಕೊನೆಯ ಸಂಬಳ ಪಡೆಯುವುದೇ ನಮ್ಮ ಕೆಲಸಗಳ ಗುರಿಯಾಗಬಾರದು..ಅದಕ್ಕಿಂತ ಹೆಚ್ಚಿನಾದುದನ್ನು ಏನಾದರೂ ಸಾಧನೆ ಮಾಡಬೇಕು.." --ಪರಿಸರಪ್ರೇಮಿ
"ಯುದ್ಧಂ ತ್ಯಜತ , ಸ್ಪರ್ಧಾಂ ತ್ಯಜತ, ಮೈತ್ರೀಂ ಭಜತ ಮೈತ್ರೀಂ ಭಜತ...." --ಗಂಡಭೇರುಂಡ
"ನಮ್ಮನ್ನು ಯಾರು ಬೇಡ ಎನ್ನುವವರೋ ಅವರೂ ಸಹ ನಮಗೆ ಬೇಡ.." --ರಂಜನ್
"ನನ್ನ ಪ್ರಕಾರ ಜೀವನದ ಅಂದ್ರೆ ಅಸಾಧ್ಯವಾದುದನ್ನ ಪ್ರಾಮಾಣಿಕತೆಯಿಂದ ಸಾಧ್ಯವಾಗಿಸುವುದು.."
--- ನಿಮ್ಮ ಪ್ರೀತಿಯ ಸೋಮು
"ಜೀವನದಲ್ಲಿ ಏನೇನು ತಪ್ಪು ಮಾಡಬಾರದು ಅನ್ನೋದಕ್ಕೆ ನೀನೇ perfect example.." --ಸಂದೀಪ್
"Life is just a matter of our convenience..." -- ಸಿಂಧು
"ಕಾರಣಗಳಿಲ್ಲದೆ ಒಬ್ಬರನ್ನು ಇಷ್ಟಪಡಲು ಸಾಧ್ಯ, ಅದೇ.. ಕಾರಣಗಳಿಲ್ಲದೆ ಯಾರೊಬ್ಬರನ್ನು ದ್ವೇಷಿಸಲು ಆಗುವುದಿಲ್ಲ.."
-- ರಾಧಾ
"Do whatever you want,
be however you like,
lead the life in your own way...." --ಶೃತಿ ಶರ್ಮಾ
ಕೊನೆಯದಾಗಿ ಉಪೇಂದ್ರ ಚಿತ್ರದ ನನ್ನ ಅಚ್ಚು ಮೆಚ್ಚಿನ ಆಣಿಮುತ್ತು... :-)
"ಸತ್ಯ ಯಾವತ್ತೂ ಕಹಿ.. ಸುಳ್ಳೇ ಮಜಾ ಜಾಸ್ತಿ, ಜನರು ಮಜಾ ಮಾಡಲಿಕ್ಕೆ ಇಷ್ಟ ಪಡ್ತಾರೆ..." -- ಉಪೇಂದ್ರ
Posted by Sridhar Raju at 7:12 PM 9 comments
ಒಲವೇ...
Friday, August 3, 2007ಒಲವೇ ಒಲವೇ ನನ್ನ ಪ್ರೀತಿಯ ಒಲವೇ
ಸೋತು ಬಂದೆ ನಿನ್ನ ಚೆಲುವಿಗೆ
ಮೆಚ್ಚಿ ಬಂದೆ ನಿನ್ನ ಒಲವಿಗೆ
ನಿನ್ನ ಕಂಗಳೇ ನನ್ನ ಬಾಳಿನ ದೀಪ
ನಿನ್ನ ಪ್ರೀತಿಯೇ ನನ್ನ ಜೀವನದ ರೂಪ
ಪ್ರೀತಿಸು ಪ್ರೀತಿಸು ಎಂದು ಗೋಗರೆಯಲಾರೆ
ನೀನೇ ಪ್ರೀತಿಸು ನನ್ನ ಪ್ರೀತಿಯ ಆಳ ಅರಿತಾಗಲೇ
ನೀನಿಲ್ಲದೆ ನಾ ಬದುಕಲಾರೆ ಎಂದು ಹೇಳಲಾರೆ
ನೀ ಜೊತೆಗಿದ್ದರೆ ಬಾಳು ಸುಂದರ ಎಂದು ಹೇಳಬಲ್ಲೆ
ಕನಸಲೂ ನೀನೇ ಮನಸಲೂ ನೀನೇ ಎಂದು ಬಣ್ಣಿಸಲಾರೆ
ನನ್ನದೇ ಆದರ್ಶಗಳ ಮಧ್ಯ ನಿನ್ನ ಪ್ರೀತಿಯನ್ನ ಹುಡುಕುತ್ತಾ ಬಂದೆ
ಸಾಧ್ಯವಿದ್ದಷ್ಟು ನಿನಗಾಗಿಯೇ ಕಾಯುವೆ ಓ ಕನಸಿನಬಾಲೆ
ಇದು ಪ್ರೇಮಕವಿತೆಯಲ್ಲ ಚೆಲುವೆ ನನ್ನ ನಿಜ ಜೀವನದ ವಾಸ್ತವ.....
--ರಶ್ಮಿ.ಆರ್
ಕೃಪೆ : http://samarasa.blogspot.com/2007/08/blog-post.html
Posted by Sridhar Raju at 2:56 PM 2 comments
ಒಂದಷ್ಟು ಸಾಲುಗಳು......
Sunday, July 29, 20071)ಟಿ.ಎನ್.ಸೀತಾರಾಮರ "ಮನ್ವಂತರ" ಧಾರವಾಹಿಯ title track ಈ ಸಾಲುಗಳು..
"ಮನಸಿನ ಪುಟಗಳ ನಡುವೆ ನೆನಪಿನ ನವಿಲುಗರಿ
ಕಾರ್ಮುಗಿಲ ಅಂಚಿನಲ್ಲಿ ಭರವಸೆಯ ಹೊನ್ನಝರಿ
ಕಣ್ಣೀರೇ ಕಡಲಾಗಿ ಭಾವಗಳೋ ಬರಡಾಗಿ
ಮನದ ಮಡಿಲ ತುಂಬಾ ನೋವಿನಲೆಯ ಬಿಂಬ.."
ನೆನಪನ್ನು ನವಿಲುಗರಿಗೆ ಹೋಲಿಸಿರುವುದು ನನಗೆ ಬಹಳ ಇಷ್ಟವಾಯಿತು..
2)ಟಿ.ಎನ್.ಸೀತಾರಾಮರ ನಿರ್ದೇಶನ ಚಿತ್ರ "ಮತದಾನ" ದ ಒಂದು ಹಾಡು.
"ನಾಯಿ ತಲಿ ಮ್ಯಾಲಿನ ಬುತ್ತಿ ಸಂಸಾರ
ಇದನರಿತು ಅರಿತೂ ಮಂದಿ ಬಿದ್ದಾರ ಹಿಂದ ಬಿದ್ದಾರ.."
3)"ಪ್ರೇಮದ ಕಾಣಿಕೆ" ಚಿತ್ರದ ಅಣ್ಣಾವ್ರ ಈ ಸೂಪರ್ ಹಾಡು..
"ಬಾನಿಗೊಂದು ಎಲ್ಲೆ ಎಲ್ಲಿದೆ..
ನಿನ್ನಾಸೆಗೆಲ್ಲಿ ಕೊನೆಯಿದೆ.
ಏಕೆ ಕನಸು ಕಾಣುವೆ..
ನಿಧಾನಿಸು ನಿಧಾನಿಸು..
ಆಸೆಯೆಂಬ ಬಿಸಿಲುಕುದುರೆ ಏಕೆ ಎರುವೆ
ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ
ಅವನ ನಿಯಮ ಮೀರಿ ಇಲ್ಲಿ ಎನು ಸಾಗದು
ನಾವು ಎಣಿಸಿದಂತೆ ಎನು ನಡೆಯದು
ವಿಷಾದವಾಗಲಿ ವಿನೋದವಾಗಲಿ ಅದೇನೆ ಆಗಲಿ ಅವನೆ ಕಾರಣ..
ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು
ಬಯಸಿದಾಗ ಕಾಣದಿರಿವ ಎರಡು ಮುಖಗಳು
ಹರುಷವೊಂದೆ ಯಾರಿಗುಂಟು ಹೇಳು ಜಗದಲಿ
ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ
ದುರಾಸೆಯೇತಕೆ ನಿರಾಸೆಯೆತಕೆ ಅದೇನೆ ಬಂದರೂ ಅವನ ಕಾಣಿಕೆ.. "
4)"ಹೊಂಬಿಸಿಲು" ಚಿತ್ರದ ಈ ಹಾಡು..
"ನೀರ ಬಿಟ್ಟು ನೆಲದ ಮೇಲೆ ದೊಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಸಾಗದು.
ನಿನ್ನ ಬಿಟ್ಟು ನನ್ನ ನನ್ನ ಬಿಟ್ಟು ನಿನ್ನ ಜೀವನಾ ಸಾಗದು
ಲೋಕದಲ್ಲಿ ಗಂಡು ಹೆಣ್ಣಿಗಾಸರೆ
ಆದರಿಲ್ಲಿ ನಾನು ನಿನ್ನ ಕೈಸೆರೆ
ಕೂಡಿ ನಲಿವ ಆಸೆ ಮನದಿ ಕಾಡಿದೆ
ಹಿತವು ಎಲ್ಲಿ ನಾವು ಬೇರೆ ಆದರೆ.."
"ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ
ಸಿಂಧೂರ ಬಿಂದು ನಗಲಮ್ಮ ಎಂದು
ಎಂದೆಂದು ಇರಲಮ್ಮ ಈ ದಿವ್ಯ ಬಂಧ
ತುಟಿ ಮೇಲೆ ಬಂದಂತ ಮಾತೊಂದೆ ಒಂದು
ಎದೆಯಲ್ಲಿ ಉಳಿದದ್ದು ಮುನ್ನೂರ ಒಂದು.."
ವಿಷ್ಣುವರ್ಧನ್ ರವರ ಅಭಿನಯ ಈ ಹಾಡಿನಲ್ಲಿ ಅಮೋಘ..
6)"ಮುಂಗಾರು ಮಳೆ" ಚಿತ್ರದ ಈ ಸಾಲುಗಳು..
"ಅನಿಸುತಿದೆ ಯಾಕೊ ಇಂದು
ನೀನೇನೆ ನನ್ನವಳೆಂದು
ಮಾಯದ ಲೋಕದಿಂದ
ನನಗಾಗಿ ಬಂದವಳೆಂದು
ಅಹಾ ಎಂತ ಮಧುರ ಯಾತನೆ
ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೆ..
ತುಟಿಗಳ ಹೂವಲಿ ಆದದ ಮಾತಿನ ಸಿಹಿ ಇದೆ
ಮನಸಿನ ಪುಟದಲಿ ಕೇವಲ ನಿನ್ನದೆ ಸಹಿ ಇದೆ
ಹಣೆಯಲಿ ಬರೆಯದ ನಿನ್ನ ಹೆಸರ ಹೃದಯದಿ ನಾನೆ ಕೊರೆದಿರುವೆ
ನಿನಗುಂಟೆ ಇದರ ಕಲ್ಪನೆ.
ನನ್ನ ಹೆಸರ ಕೂಗೆ ಒಮ್ಮೆ ಹಾಗೆ ಸುಮ್ಮನೇ..."
7)"ಅಮೃತಧಾರೆ" ಚಿತ್ರದ ಈ ಮೂರು ಸಾಲುಗಳು
" ನೀ ಅಮೃತಧಾರೆ ಕೋಟಿ ಜನುಮ ಜೊತೆಗಾತಿ
ನೀ ಅಮೃತಧಾರೆ ಇಹಕು ಪರಕು ಸಂಗಾತಿ
ನೀ ಇಲ್ಲವಾದರೆ ನಾ ಹೇಗೆ ಬಾಳಲಿ.."
8)"ನವತಾರೆ" ಚಿತ್ರದ ಹಂಸಲೇಖರ ಸಂಗೀತ-ಸಾಹಿತ್ಯ ವಿರುವ ಸೊಗಸಾದ ಸಾಲುಗಳು
"ನೀರಿನಂತೆ ನಿರ್ಮಲ
ಹೂವಿನಂತೆ ಕೋಮಲ
ಮಂಜಿನಂತೆ ಶೀತಲ
ಹಾಡಿನಂತ ಹಂಬಲ
ಬಾನಿನಂತೆ ನಿಶ್ಚಲ
ಎಳೆಯ ಬಿಸಿಲಲಿ ಮಳೆಯ ಹನಿಯಲಿ ಪ್ರೇಮ
ಎದೆಯ ಗೂಡಲಿ ಮದುರ ನೆನಪಲಿ ಪ್ರೇಮ
ಪ್ರೇಮ ಅಳಿಯದು ಪ್ರೇಮ ಮರೆಯದು ಎಂದು ಭೂಮಿಯಲಿ
ಭೂಮಿ ತಿರುಗಲು ಜೀವ ಉಳಿಯಲು ಪ್ರೇಮ ನೆಲೆಸಿರಲಿ.."
9) ಸಿ.ಅಶ್ವತ್ ರವರ ಕಂಠಸಿರಿಯ ಈ ಸಾಲುಗಳು
"ನನ್ನವಳು ಈ ನನ್ನಾಕೆ
ಹರಿಯುವ ನದಿಯಲ್ಲ ಸರಿವ ಸರಿತೆಯಲ್ಲ
ಇವಳೊಂದು ಪುಟ್ಟ ಕೊಳ
ನನ್ನ ಬಾಳಿನ ಜೀವ ಜಲ..."
10)"ಯುಗಪುರುಷ" ಚಿತ್ರದ ಸಾಲುಗಳು...
"ಯಾವುದೋ ಈ ಬೊಂಬೆ ಯಾವುದೋ
ಊರ್ವಶಿಯ ಕುಲವೊ ಮೇನಕೆಯ ಚೆಲುವೊ
ಯಾವುದೋ ಈ ಅಂದ ಯಾವುದೋ
ಬೇಲೂರಿನ ಶಿಲೆಯೊ ಶಾಂತಲೆಯ ಕಲೆಯೊ
ಕಾಳಿದಾಸನ ಪ್ರೇಮಗೀತೆಯೊ ಕಾಳಿದಾಸನ ಪ್ರೇಮಗೀತೆಯೊ
ನೀನ್ಯಾರೊ ತಿಳಿಯದಿದ್ದರೂ ನನಗೇನೇ ರಾಧೆ..
ಕಲ್ಲಾಗಿ ನಾನು ನಿಂತರೂ ಕರಗಿ ನೀರಾಧೆ.. ಏಕಾದೆ..
ಈ ಹಾಡು ನಿನ್ನದಾದರೂ ರಾಗ ನಾನಾದೆ
ಯಾರೇನೇ ಹೇಳದಿದ್ದರು ನನಗೆ ಜೊತೆಯಾದೆ..ಹೇಗಾದೆ "
Posted by Sridhar Raju at 11:16 AM 11 comments
ಗೋವಿಂದಾ ಗೋವಿಂದಾ...
Saturday, July 28, 2007
"ಲೋ ನಿನಗೆ ಸ್ವಲ್ಪನಾದ್ರು ತಲೆ ಇದ್ಯಾ?? ..ತಿರುಪತಿಗೆ ಅಂತ ಹೋಗ್ತಿದ್ಯ, ಬುಕ್ ಮಾಡ್ಸಿಲ್ಲ, ಟೈಮ್ ಗೊತ್ತಿಲ್ಲ , ವೀಕೆಂಡ್ ಬೇರೆ, ರಶ್ ಇರತ್ತೋ, ಬಸ್ ಸಿಗಲ್ಲಾ, ಪ್ಲಾನ್ ಮಾಡೋದ್ ಬೇಡ್ವಾ , ಸುಮ್ನೆ ಪಕ್ಕದೂರಿಗೆ ಹೋಗಿ ಬರೋ ತರ ಮಾತಡ್ತಾ ಇದ್ಯಲ್ಲ, ಅವಸ್ಥೆ ಪಟ್ಟೆಲ್ಲಾ ಹೋಗ್ಬೇಡ, ಬಸ್ ಸಿಗ್ಲಿಲ್ಲಾ ಅಂದ್ರೆ ತೆಪ್ಪಗೆ ವಾಪಸ್ ಮನೆಗೆ ಬಂದುಬಿಡು.." ಹೀಗೆ ಸಾಗುತ್ತಿತ್ತು ಅವರ ಬುದ್ದಿಮಾತುಗಳು....
ಹಾ! ಮರೆತಿದ್ದೆ ನಮ್ಮೀ ತಿರುಪತಿಯ ಕರ್ಮಕಾಂಡದ ಸಹವರ್ತಿಗಳನ್ನು ಹೆಸರನ್ನು ಹೇಳಲು ಇಚ್ಚಿಸುತ್ತೇನೆ..
ಕೆಂಪರಾಜ್, ನಾನು,ವಿಕಾಸ್,ರಾಜೇಶ್, ಮಂಜುನಾಥ ಮಂಜುವಿನ ಚುರುಕುತನದಿಂದಾಗಿ ನಮಗೆ ತಿರುಪತಿಗೆ ಅಷ್ಟಾಗಿ ತೊಂದರೆಯಿಲ್ಲದೆ ಬಸ್ ದೊರಕಿತು. ಎಲ್ಲರೂ ಕುಳಿತು ಹರಟಲನುವಾದೆವು, ನಮ್ಮ ಮುಂದುಗಡೆಯಿದ್ದ ಸೀಟಿನಲ್ಲಿ ಒಂದಷ್ಟು ಪಡ್ಡೆ ಐಕಳುಗಳಿದ್ದವು..ವಿಚಿತ್ರವಾಗಿ ಕೇಕೆ ಹಾಕುತ್ತಾ ಕಿರುಚಾಡುತ್ತಿದ್ದರು... ತಟ್ಟನೆ ನಾನು,ಕೆಂಪ,ರಾಜೇಶ ಕುಳಿತಿದ್ದ ಕಡೆ ಏನೋ ಬಿದ್ದಹಾಗೆ ಆಯಿತು..ಕೆಳಗೆ ಬಿದ್ದ ವಸ್ತುವನ್ನೆತ್ತಿ ನೋಡಿದರೆ ಕಿಟಕಿಯ ಗಾಜಿನ ಸಂದುಗಳಿಂದ ಬರುತ್ತಿದ್ದ ಕಿರುಬೆಳಕಿನಲ್ಲಿ Kingfisher ಬೀರ್ ಬಾಟಲಿ ಪ್ರತಿಫಲಿಸುತ್ತಿತ್ತು... ನಾವು ಮೂವರು ಒಬ್ಬರೊಬ್ಬರನ್ನು ಬೆಕ್ಕಸಬೆರಗಾಗಿ ನೋಡಿಕೊಂಡು ಆ ಪಡ್ಡೆ ಐಕಳಿಗೆ ಅದನ್ನು ಹಸ್ತಾಂತರಿಸಿದೆವು!!!
ಶನಿವಾರ ಮುಂಜಾವು ಸುಮಾರು ನಾಲ್ಕೂವರೆ ಹೊತ್ತಿಗೆ ತಿರುಪತಿಯನ್ನು ತಲುಪಿದೆವು... ಅಲ್ಲಿಂದಲೇ ನಮಗೆ ಶನಿ ಕಾಟ ಶುರುವಾಗಿತ್ತೆಂದು ತೋರುತ್ತದೆ.. ಇಳಿದು ನೋಡಿದರೆ ಹನುಮಂತನ ಬಾಲವನ್ನು ಮೀರಿಸಿದ queue ಬಸ್ ನಿಲ್ದಾಣದಲ್ಲಿ "ಸುದರ್ಶನ" ticket ಗಾಗಿ ನಿಂತಿತ್ತು.. ಅ queue ನಲ್ಲಿ ನಿಂತು ನಮ್ಮ ಸರತಿಗಾಗಿ ಕಾದು ticket ದೊರಕುವ ಆಸೆ ನಮಗಾರಿಗೂ ಇರಲಿಲ್ಲ..ಮತ್ತೆ ಮಂಜು ತನ್ನ plan execute ;-) ಮಾಡಲನುವಾದ...
ಐದು ನಿಮಿಷ ಬಿಟ್ಟು ಫೋನ್ ಮಾಡಿದ.."ಲೋ ಬೇಗ ಬನ್ರೋ ticket ಸಿಗ್ತಾ ಇದೆ..."ಎಂದು
ನಾವೆಲ್ಲ ಇಬ್ಬಿಬ್ಬರಾಗಿ ಗುಂಪಿನಿಂದ ಆಚೆಯಾಗಿದ್ದೆವು..ಎಲ್ಲಾರೂ ಜೊತೆಯಾಗಿ ಸೇರಿ ರೈಲ್ವೆ ನಿಲ್ದಾಣದ ticket counterನ ಬಳಿ ಬರುವುದೊರಳಗೆ 5:05am "tickets for sudarshana will be issued only between 2am-5am " ಎಂದು ಯಾರೋ ಹೇಳಿದರು... ಅಲ್ಲಿ ಸರಿಯಾದ ವ್ಯವಸ್ಥೆಯೆಂಬುದೇ ಇಲ್ಲ..ಯಾರೊಬ್ಬರಿಗೂ ಸರಿಯಾದ ಮಾಹಿತಿಯೇ ದೊರೆಯುತ್ತಿರಲಿಲ್ಲ..ಮುಂಚೆ ticket 6ರ ವರೆಗು ಕೊಡುತ್ತಿದ್ದರಂತೆ..ನಮ್ಮ ದುರಾದೃಷ್ಟ, ಅಂದು 5ಗೆ ಮುಗಿಸ್ಬಿಟ್ಟಿದ್ದರು...ಇದರ ಅರಿವೆ ನಮಗಿರಲಿಲ್ಲ... ಯಾರ ಶಾಪವೊ ಏನೋ... ಅಂದು ನಮ್ಮ ಗ್ರಹಗತಿಗಳು ಚೆನ್ನಾಗಿದ್ದು ticket ದೊರೆತಿದ್ದೇ ಆಗಿದ್ದಲ್ಲಿ...ಅಂದೇ ಬೆಳಿಗ್ಗೆ ಸುಮಾರು 11ಗಂಟೆಗೆಲ್ಲಾ ತಿಮ್ಮಪ್ಪನ ದರುಶನ ಆಗಿಬಿಡುತಿತ್ತು..we just missed it. :-( ಆ ಐದು ನಿಮಿಷದ ತಡಕ್ಕಾಗಿ ನಾವು ತೆತ್ತ ಬೆಲೆ ಅಷ್ಟಿಷ್ಟಲ್ಲ...
ಅಲ್ಲಿ ನಾವು ಕೇಳಿದವರೆಲ್ಲ ತಲೆಗೊಂದಂತೆ ಮಾತನಾಡುತ್ತಿದ್ದರು... ಮತ್ತದೇ ಗೋಳು ನಮಗೆಲ್ಲೂ ನಂಬಲರ್ಹ ಮಾಹಿತಿ ಕೊನೆವರೆಗೂ ದೊರೆಯಲೇಇಲ್ಲ ....
ಆದಕಾರಣ ಅಂದು ರಾತ್ರಿ ಅಂದರೆ ಶನಿವಾರ ರಾತ್ರಿ ತಿರುಮಲ ಬೆಟ್ಟವನ್ನು ಹತ್ತಿ ಬೆಟ್ಟದಲ್ಲೇ ದರುಶನ ticket ಪಡೆದು ಮುಂದುವರೆಯುವ ಎಂದು ಸಮಾಲೋಚಿಸಿ ಶನಿವಾರದಂದು ಅಲ್ಲೆ ತಿರುಪತಿಯ ಬಳಿಯಿರುವ "ಕಾಳಹಸ್ತಿ" ಮತ್ತು "ಅಲಮೇಲು ಮಂಗಾಪುರಮ್" ದೇವಸ್ಥಾನಗಳನ್ನು ದರ್ಶಿಸುವ ಎಂದು ನಿರ್ಧರಿಸಿದೆವು..
ಅಲ್ಲೇ ಬಸ್ ಸ್ಟಾಂಡ್ ಸಮೀಪದಲ್ಲಿದ್ದ ಹೊಟೆಲೊಂದರಲ್ಲಿ ಉಳಿದು ಸ್ನಾನಾದಿಕಾರ್ಯಗಳನ್ನು ಮುಗಿಸಿ ತಿಂಡಿ ತಿಂದು "ಕಾಳಹಸ್ತಿ" ಕಡೆಗೆ ಬಸ್ಸನ್ನೇರಿ ಹೊರಟೆವು..
ಸಮಯ ಸುಮಾರು ಹತ್ತೂವರೆ ಇರಬಹುದು..ನಾವು ಕಾಳಹಸ್ತಿ ತಲುಪಿದಾಗ ಬಿರುಬಿಸಿಲು... ಯಮಯಾತನೆ ಆಗುತ್ತಿತ್ತು..
"ಕಾಳಹಸ್ತಿ" ದೇವಾಲಯ ಸೊಗಸಾಗಿದೆ.... ಯಾವ ರಾಜ ಕಟ್ಟಿಸಿದನೋ ಅದರ ವಾಸ್ತು ಯಾವ ಶೈಲಿಯೊ ನನಗೊಂದೂ ತಿಳಿಯದು.... ಎಲ್ಲೆಲ್ಲೂ ಸುಂದರ ಶಿಲ್ಪಗಳ ಕೆತ್ತನೆ ಎದ್ದು ಕಾಣುತ್ತಿತ್ತು.. ಬಹಳ ಅಚ್ಚುಕಟ್ಟಿನಿಂದ ಕುಶಲಕರ್ಮಿಗಳು ತಮ್ಮ ಕೆಲಸವನ್ನು ಮಾಡಿದ್ದರು.. ದೇವಾಲಯದ ವಿಸ್ತೀರ್ಣ ಕೂಡ ಬಹಳ ದೊಡ್ಡದಿತ್ತು..ಅದು ಶಿವನ ದೇವಾಲಯ... ಪಾತಳ ಗಣೇಶನನ್ನು ದರ್ಶಿಸಿ ಶಿವನ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತೆವು queue ಬಹಳ ಉದ್ದವಾಗಿತ್ತು... ವೀಕೆಂಡ್ ಪ್ರಭಾವವೋ ಎನೋ ಬಹಳ ಜನ ಜಮಾಯಿಸಿದ್ದರು... ನಾನು ಕಳೆದ ಸಲ ಹೋಗಿದ್ದಾಗ ಅಂದರೆ ಮೂರು ವರ್ಷದ ಕೆಳಗೆ ಕೆವಲ 10-15ನಿಮಿಶ ದಲ್ಲಿ ದರುಶನ ವಾಗಿತ್ತು.. ಆ ದೇವಸ್ಥಾನದಲ್ಲೂ!! ಸಹ ದರುಶನಕ್ಕಾಗಿ ನಾವು ಸುಮಾರು 2ಗಂಟೆಗಳು queue ನಲ್ಲಿ ಕಳೆದವು... ಇಲ್ಲೇ ಇಷ್ಟೊತ್ತು ಆಗಬೇಕಾದರೆ ಇನ್ನು ತಿಮ್ಮಪ್ಪನ ಗತಿಯೇನು ಎಂಬ ಕಳವಳ ನನ್ನ ಮನಸ್ಸಿನಲ್ಲಿ ಇನ್ನಿಲ್ಲದಂತೆ ಸುಳಿದಾಡುತಿತ್ತು..
ಹೊರಬಂದು ಅಲ್ಲೆ ಇದ್ದ ಹೊಟೆಲೊಂದರಲ್ಲಿ ಹೊಕ್ಕು ಊಟ ಮಾಡಿದೆವು.... ರುಚಿ-ಶುಚಿಯ ಯಾವುದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಾನಂತೂ ಚೆನ್ನಾಗಿ ತಿಂದೆ....ಅದಕ್ಕಾಗಿ ಈಗ ಪರಿತಪಿಸುತ್ತಿದ್ದೇನೆ :-(, ರಾಜೇಶ ಸಾಂಬಾರಿನಿಂದ ಪೇಪರಿನ ಚೂರನ್ನು ಹೊರತೆಗೆದ...!! ನಾನಾಗಿದ್ದರೆ ಅಂದು ಇದ್ದ ಹಸಿವಿನಲ್ಲಿ ಅದನ್ನು ಕೂಡ ಗಮನಿಸದೆ ತಿಂದುಬಿಡುತ್ತಿದ್ದೆನೇನೊ..!!!
ಅಲ್ಲಿಂದ ಹೊರಬಿದ್ದು ಮತ್ತೆ ತಿರುಪತಿಯೆಡೆಗೆ ಸಾಗಿದೆವು... ಬಸ್ನಲ್ಲಿ ಎಲ್ಲಾರಿಗೂ ಒಳ್ಳೆ ನಿದ್ದೆ.. ಹೊಟೆಲ್ ತಲುಪಿ ಮತ್ತೆ ಎಲ್ಲರೂ ಮತ್ತೊಂದು ಸುತ್ತು ನಿದ್ದೆ ಮಾಡಿದೆವು... ಸುಮ್ಮರು 5:45ರ ವೇಳೆಗೆ ರೂಮ್ ಚೆಕ್ ಔಟ್ ಮಾಡಿ ಅಲಿಪಿರಿಗೆ ಬಂದಿಳಿದೆವು...ತಿರುಮಲ ಬೆಟ್ಟಕ್ಕೆ ನಾವು ಹತ್ತಿ ಹೋಗುವೆದೆಂದು ನಿರ್ಧರಿಸಿದ್ದೆವು.. ಅಲಿಪಿರಿಯಿಂದ ಪಯಣ ಶುರುವಾಗುತ್ತದೆ... ಸರಿಯಾಗಿ ಮೂರುಸಾವಿರದಾಐವತ್ತು(3500) ಮೆಟ್ಟಿಲುಗಳು ಹತ್ತಿದರೆ ವೆಂಕಟಾದ್ರಿ ಬೆಟ್ಟ ತಲುಪುತ್ತೇವೆ.. ತಿರುಮಲ ದೇವಸ್ಥಾನ ಇರುವುದು "ವೆಂಕಟಾದ್ರಿ" ಬೆಟ್ಟದಲ್ಲಿ...ಒತ್ತು ಏಳು ಬೆಟ್ಟಗಳೊನ್ನೊಳಗೊಂಡಿದೆ ತಿರುಪತಿ.. ಈ ಏಳು ಬೆಟ್ಟಗಳನ್ನು ಸವೆಸಿ ನಡೆದರೆ ಕೊನೆಯ ಅಂದರೆ ಏಳನೆಯ ಬೆಟ್ಟವಾದ "ವೆಂಕಾಟದ್ರಿ" ಅಲ್ಲಿ ತಿಮ್ಮಪ್ಪನ್ನ ದರುಶನ ಸಾಧ್ಯ... :-)
ಯಾತ್ರಾರ್ಥಿಗಳಿಗೆ ಎಲ್ಲೂ ತೊಂದರೆಯಾಗದಂತೆ ದಾರಿ ಮಧ್ಯೆ ಸಾಕಷ್ಟು ತಂಗುದಾಣಗಳು ಇವೆ ಮೆಟ್ಟಿಲು ಹತ್ತುವಾಗ..ಮಧ್ಯೆ ಮಧ್ಯೆ ನಾವು ವಿರಮಿಸಿಕೊಳ್ಳುತ್ತಿದ್ದವು.. ಸಮಚಿತ್ತ,ಸಮವಯಸ್ಕರೊಡನೆ ಇದ್ದುದ್ದೆನಾದ್ದರಿಂದ ಹತ್ತುವ ಪ್ರಯಾಸ ನನಗಾಗಲಿಲ್ಲ... ದಾರಿಉದ್ದಕ್ಕು ಹಾಸ್ಯಚಟಾಕಿಗಳು ಹಾರಡುತ್ತಿದ್ದವು, ಮಧ್ಯೆ ಮಧ್ಯೆ " ಲೊ ತಿರುಪತಿಗೆ ಬಂದಿದ್ದೀವೆ ಇಲ್ಲಾದರೂ double meanings ಬಿಟ್ಟು ಮಾತಾಡ್ರೊ ಎಂದು ಕೆಂಪ ಬೊಬ್ಬೆಯಿಡುತ್ತಿದ್ದ.. ಕಣ್ಮುಚ್ಚಿ ನಡೆದರೂ ಸಹ ನಾವು ಬೆಟ್ಟವನ್ನು ಹತ್ತಬಹುದು..ಅಷ್ಟು ಅಚ್ಚುಕಟ್ಟಾಗಿ ಮೆಟ್ಟಿಲುಗಳನ್ನು ನಿರ್ಮಿಸಿದ್ದಾರೆ..ಎಲ್ಲೂ ಸಹ ಅಂಕು ಡೊಂಕುಗಳಿಲ್ಲ.. ಬೆಟ್ಟ ಹಟ್ಟುತ್ತಿದ್ದೇವೆ ಎಂಬ ಅರಿವು ಸಹ ಆಗುವುದಿಲ್ಲ ನಮಗೆ... ಹೆಚ್ಚಾಗಿ ದಣಿವು ಸಹ ಆಗಲಿಲ್ಲ ನನಗೆ..ಪ್ರಾಯಶ: ಒಂದಷ್ಟು ಚಾರಣಗಳನ್ನು ಮಾಡಿದ್ದೆನಾದ್ದರಿಂದ ನನಗೆ ಹೀಗೆಂದೆನಿಸಿರಬಹುದು.. "ತಡಿಯಂಡಮೋಳ್" ಬೆಟ್ಟದ ಚಾರಣ ಮುಂದೆ ಇದೇನೂ ಲೆಕ್ಕಕಿಲ್ಲ ಬಿಡಿ...ಎಂದು ಸಾಕಷ್ಟು ಬಾರಿ ಎಲ್ಲಾರಿಗೂ ಹೇಳುತ್ತಲಿದ್ದೆ.. ಸುಮಾರು 3500 ಮೆಟ್ಟಿಲುಗಳನ್ನು 3ಗಂಟೆಗಳ ಅವಧಿಯಲ್ಲಿ ಮುಗಿಸಿ ತಿರುಮಲ ಬೆಟ್ಟವನ್ನು 11ಕ್ಕೆ ತಲುಪಿದೆವು.. ನಮಗಾಗಿ ಕಾದಿತ್ತು ಅಲ್ಲೊಂದು ಶಾಕ್!!
"ಲೊ ಥೂ ನಿನ್ನ..ಟಾಸ್ ಹಾಕ್ಬೇಕಾ??..ಅದೆಲ್ಲಾ ಬೇಡ....ನಡಿ ನಡಿ.. ಧರ್ಮದರ್ಶನಕ್ಕೆ ಹೊರಟುಬಿಡೋಣ..ಏನಾಗುತ್ತೊ ಆಗಲಿ" ಎಂದು ಯಾರೋ ಹೇಳಿದರು.... ಇದು ನಮ್ಮೆಲ್ಲರ ಒಕ್ಕೊರಲಿನ ನಿರ್ಧಾರವಾಗಿರಲಿಲ್ಲ..ಪರಿಸ್ಥಿತಿ ಹೊಡೆತಕ್ಕೆ ಸಿಲುಕಿ ಬೇರೆ ದಾರಿ ಕಾಣದೆ ಹೋದದ್ದು.. ಮತ್ತೆ ಎಲ್ಲರೂ ಲಗುಬಗೆಯಿಂದ ಬೆಟ್ಟದ ಮೇಲಿನ ವರೆಗೂ ಹೊತ್ತು ತಂದಿದ್ದ ಸಾಮಗ್ರಿಗಳನ್ನು ಒಂದು ಲಾಕರಿನಲ್ಲಿ ಹಾಕಿ ಕುಳಿತೆವು..ರಾಜೇಶ ಮತ್ತು ಮಂಜು ಕೂದಲು ಮುಡಿ ಕೊಟ್ಟು ನಮ್ಮೊಡನೆ ಸೇರಿದರು...... ಅತ್ತ ವಿಕಾಸ್ ಅದನ್ನೇ ಬಡಬಡಿಸುತ್ತಿದ್ದ.. "ಲೋ ಕೆಳಗಡೆ ಹೋಗಿದ್ದರೆ ticket ಸಿಕ್ತಿತ್ತು ಕಣ್ರೋ... ನೋಡ್ತಾಇರಿ ಸೋಮವಾರ ಆಗುತ್ತೆ ನಾವು ದರುಶನ ಮಾಡೋದು.. ತುಂಬ ಸುಸ್ತಾಗುತ್ತೆ " ಎಂದು..
ಅತ್ತ ಮಂಜು ಮತ್ತೆ ರಾಜೇಶ ಮುಡಿಕೊಡಲು ಹೋಗಿದ್ದಾಗ ನಾವು ಮೂವರು ಅಂದರೆ ನಾನು,ಕೆಂಪ,ವಿಕಾಸ ಒಂದು ದೊಡ್ಡ ಹಜಾರದಲ್ಲಿ ಕುಳಿತಿದ್ದೆವು..ಅಲ್ಲಿ ಸಾಕಷ್ಟು ಲಾಕರ್ಸ್ ಗಳಿದ್ದವು.... ಅಲ್ಲೆ ನೆಲದ ಮೇಲೆ ಸಾಕಷ್ಟು ಮಂದಿ ಮಲಗಿದ್ದರು... ಅವರು ಏತಕ್ಕಾಗಿ ಕಾಯುತ್ತಿದ್ದರು, ಏಕೆ ಇಲ್ಲಿ ಮಲಗಿದ್ದರು ಎಂದು ನಮಗೆ ಅರ್ಥವೆ ಆಗಲಿಲ್ಲ..ಒಂದು ನಿರಾಶ್ರಿತರ ಶಿಬಿರದಲ್ಲಿದ್ದೇವೊ ಎಂಬ ಭಾವ ನನ್ನನ್ನು ಸದಾ ಕಾಡುತಿತ್ತು.. ಕೆಂಪ ಇನ್ನೂ ಮೌನವಾಗೆ ಕುಳಿತಿದ್ದ....ಆ ಸರಿ ಹೊತ್ತಿನಲ್ಲಿ ನಡೆಯುತ್ತಿದ್ದ ಘಟನಾವಳಿಗಳನ್ನು ಕಂಡು ರೇಗಿ ಹೋಗಿದ್ದಿರಬೇಕು..ಮೈದಡವಿ ಕೇಳಿದೆ.."ಏನಾಯಿತೊ ಅವಾಗಲಿಂದ silent ಆಗೆ ಇದ್ದಿಯಾ" ಅಂತ..ಅದಕ್ಕೆ ಆತ ."ನಾನು ಹೋದ ಕಡೆಯಲೆಲ್ಲ ಹೀಗೆ ಆಗುತ್ತದೆ...ಸರಿಯಾದ ವ್ಯವಸ್ಥೆ ಇರುವುದಿಲ್ಲ, ಎಲ್ಲೆಲ್ಲೊ ಅರಾಜಕತೆ, ಸಮಯಕ್ಕೆ ಸರಿಯಾದ ಮಾಹಿತಿ ದೊರೆಯುವುದಿಲ್ಲ, ಎಲ್ಲಾ ಕಡೆಯು ಹೀಗೆಯೆ, ನಾವೆಂದಿಗು ಬದಲಾಗುವುದೇ ಇಲ್ಲವೆ..?? ಇದನ್ನ ಸರಿ ಮಾಡುವುದಕ್ಕೆ ಯಾರು ಸಹ initiative ಸಹ ತೆಗುದುಕೊಳ್ಳುವುದಿಲ್ಲ... ಏಕೆ ಹೀಗೆ??" ಎಂದು... ಒಹೋ ಈತ ಬಹಳ serious ಆಗಿ ಯೋಚಿಸುತ್ತಿದ್ದಾನೆ ಎಂದು ಅರಿತು... "ಎಲ್ಲರೂ ಸಹ ತಮ್ಮ ಕೆಲಸ ಕಾರ್ಯ ಮುಗಿದ ಮೆಲೆ ಆ ಕಡೆ ತಿರುಗಿ ಸಹ ನೋಡುವುದಿಲ್ಲ ಕಣೊ.. ನಿನಗಿಲ್ಲಿ ಇಂದು ಸರಿಯಾಗಿ ನಡೆಯುತ್ತಿಲ್ಲವೆಂದು ಪರಿತಪಿಸುತ್ತಿದ್ದೆಯ.. ಅದೆ timeಗೆ correct ಆಗಿ ಎಲ್ಲಾ ಸುಸೂತ್ರವಾಗಿ ನಡೆದಿದ್ದರೆ ಇದರ ಬಗ್ಗೆ ಯೋಚನೆ ಸಹ ನಿನಗೆ ಬರುತ್ತಿರಲಿಲ್ಲ.. ಎಲ್ಲ ನಮ್ಮ bad luck " ಎಂದು ಹೇಳಿ ಸುಮ್ಮನಾದೆ...
ಧರ್ಮದರ್ಶನಕ್ಕೆಂದೇ ದೊಡ್ಡ ಸೆಲ್ ಗಳನ್ನು ಕಟ್ಟಿರುತ್ತಾರೆ...ಮುಖ್ಯ ದೇವಸ್ಥಾನದಿಂದ ಬಹಳ ದೂರವೆ ಈ ಸಾಲು ಶುರುವಾಗುತ್ತದೆ... ಇಲ್ಲಿ ಕಾಯಲು ಕುಳಿತರೆ ದರ್ಶನದ ವೇಳೆ ಅನಿಶ್ಚಿತ.. ಅದಕ್ಕಾಗಿಯೆ ಅಲ್ಲಿ ಯಾತ್ರಾರ್ಥಿಗಳಿಗೆ ದಣಿವಾಗಬಾರದೆಂದು!! ಬಹಳಷ್ಟು ದೊಡ್ಡ ದೊಡ್ಡ ಸೆಲ್ ಗಳನ್ನು ನಿರ್ಮಿಸಿದ್ದಾರೆ....ಅಲ್ಲಿ ಒಮ್ಮೆ ಹೋದರೆ ಹೊರಗಡೆ ಬರುವಂತಿಲ್ಲ... ಒಂದಾದರೊಂದಂತೆ ಒಂದು ಸೆಲ್ ಗಳಿಂದ ನಮ್ಮನ್ನು ಹೊರಗಡೆ ಬಿಡುತ್ತಾರೆ... ಅಂತಹ ಒಂದು ಸೆಲ್ ಗೆ ನಾವು ಐವರು ಹೋಗಿ ಕುಳಿತೆವು...ಆಗ ಸಮಯ ಭಾನುವಾರ ಮಧ್ಯರಾತ್ರಿ 2ಗಂಟೆ... ಅಲ್ಲಿಂದ ಎಂದು ಹೊರಬೀಳುವೆವು ಎಂಬುದು ಅಲ್ಲಿರುವವರ್ಯಾರಿಗು ತಿಳಿದಿರಲಿಲ್ಲ..ನಾವಿದ್ದ ಸೆಲ್ ನಲ್ಲಿ ಸುಮಾರು 600 ಜನರು ಇದ್ದರೆಂದೆನಿಸುತ್ತೆ.. ನಮಗೆ ಅಲ್ಲಿ ಕುಳಿತು ಏನು ಮಾಡುವೆದೆಂದು ತಿಳಿಯಲಿಲ್ಲ..ಒಬ್ಬೊಬ್ಬರಾಗಿ ನಿದ್ದೆಗೆ ಜಾರುತ್ತಿದ್ದರು..ಸುತ್ತಮುತ್ತಲಿನ ಜನರನ್ನು ನಾನು ಸುಮ್ಮನೆ ವೀಕ್ಷಿಸುತ್ತಿದ್ದೆ....ನಮಗೆ ಅಲ್ಲಿ ಸರಿಯಾಗಿ ಕೂತುಕೊಳ್ಳಲು ಸಹ ಜಾಗವಿರಲಿಲ್ಲ...ಸುತ್ತಲೂ ಜನ...ಸರಿಯಾಗಿ ಕಾಲು ಸಡಿಲಿಸಿ ಕೊಸರಾಡಲು ಸಹ ಜಾಗವಿಲ್ಲದಷ್ಟು ಜನ ತುಂಬಿಕೊಂಡಿದ್ದರು..ಅಲ್ಲಿದ್ದವರು ಯಾರೊ ಬೆಳಿಗ್ಗೆ 5ಗಂಟೆಗೆ ಈ ಸೆಲ್ ನಿಂದ ಹೊರಗಡೆ ಬಿಡುತ್ತಾರೆ ಎಂಬುವ ವದಂತಿ ಹಬ್ಬಿತ್ತು... ಸ್ವಲ್ಪ ಕತ್ತೆತ್ತಿ ನೋಡಿದರೆ ಸಾಕಷ್ಟು ಬೋಳು ಮಂಡೆಗಳು ಕಾಣಿಸುತಿತ್ತು..ಇದ್ಯಾವ ಪರಿಯ ಹುಚ್ಚು..ದೇವರ ದರ್ಶನಕ್ಕಾಗಿ ಇಷ್ಟೆಲ್ಲಾ ಪಡಿಪಾಟಲು ಪಟ್ಟು ದರ್ಶಿಸುವ ಅಗತ್ಯವಾದರೂ ಏನು...ಎಂದೆನ್ನುಕೊಳ್ಳುತ್ತಿದ್ದೆ..ಹಾಗೆ ಇದೇ ಪ್ರಶ್ನೆಯನ್ನು ನನ್ನ ಗೆಳೆಯರಿಗೆ ಕೇಳಿದೆ..ಅದಾಗಲೆ ವಿಕಾಸ್ ಇದ್ದ ಸ್ವಲ್ಪ ಜಾಗದಲ್ಲೆ ನಿದ್ದೆಗೆ ಜಾರಿದ್ದ...ರಾಜೇಶನು ಸಹ ಮಲಗಿದ್ದ...ನಾನು ಕೆಂಪ ಮತ್ತೆ ಮಂಜು ಕಾಲು ಚಾಚಲು ಸಹ ಜಾಗವಿಲ್ಲದೆ ಕುಳಿತಿದ್ದೆವು..ವಿಪರೀತ ನೋವಾಗುತಿತ್ತು... ಕಾಲು ಗಂಟೆಗೊಮ್ಮೆ ನಮ್ಮ ಕುಳಿತಿರುವ ಭಂಗಿಯನ್ನು ಬದಲಾಯಿಸಿಕೊಳ್ಳುತ್ತಿದ್ದೆವು.... ನಮ್ಮನ್ನು ನಾವೇ ನೋಡಿ , ನಮ್ಮ ಪರಿಸ್ಥಿತಿಗೆ ನಾವೇ ನಗಾಡಿಕೊಳ್ಳುತ್ತಿದ್ದೆವು...
ಮಂಜು ಕೇಳಿದವೆಂದೆನಿಸುತ್ತೆ.."ಎನೋ ಮಾಡೊದು ಬೆಳಿಗ್ಗೆ ವರೆಗೂ .." ಅದಕ್ಕೆ ನಾನು "ನೀನು ನನ್ನ ನೋಡಿ ನಗು, ನಾನು ನಿನ್ನ ನೋಡಿ ನಗ್ತೀನಿ.., ಅಷ್ಟ್ ಬಿಟ್ ಬೇರೆ ಎನು ಇಲ್ಲಿ ಮಾಡಕ್ ಆಗಲ್ಲ..." ಎಂದೆ... ಇನ್ನೇನು ತಾನೆ ಹೇಳಲು ಸಾಧ್ಯ..
ಹೀಗೆ ಅಲ್ಲಿ ಕುಳಿತಿದ್ದ ನನ್ನ ಗೆಳೆಯರಿಗೆ ಕೇಳಿದೆ.."ಯಾಕ್ ಮಗಾ..ಇಷ್ಟೊಂದ್ ಜನ ಇಷ್ಟೊಂದ್ ಕಷ್ಟ ಪಟ್ಟೆಲ್ಲಾ ಇಷ್ಟೊಂದು ಒದ್ದಾಡಿಕೊಂಡೆಲ್ಲ ದರ್ಶನ ಮಾಡಕ್ ಬರ್ತಾರೆ..??" ಅದಕ್ಕೆ ಮಂಜು "ಅದನ್ನೆ ಕಣೊ ಭಕ್ತಿ ಎನ್ನೋದು" ಎಂದ..
ನನಗೆ ಉರಿದು ಹೋಯಿತು... "ಲೋ ಪಿಂಡಾ ಭಕ್ತಿ... ಇಷ್ಟೆಲ್ಲ ಕಷ್ಟ ಪಟ್ಟು , ಸರಿಯಾಗಿ ಸ್ನಾನ ಊಟ ಇಲ್ಲದೆ, ಇಷ್ಟೆಲ್ಲ ದಣಿವಾಗಿ ದೇವರ ಮುಂದೆ ನಿಂತರೆ ಭಕ್ತಿ ಎಲ್ಲಿಂದ ಬರತ್ತೋ, ಎಲ್ಲ ಗುಂಪಲ್ಲಿ ಗೋವಿಂದ ಮಗಾ...ಜನರಿಗೆ ಹುಚ್ಚು..ತಾವು ಹರಕೆ ಹೊತ್ತು ಬಂದಿದ್ದನ್ನು ಈ ದೇವರಲ್ಲಿ ಬಿನ್ನವಿಸಿದರೆ...ಅದು ಜರುಗುತ್ತದೆಂದು..ಅಷ್ಟೆ... ಇನ್ನೇನಿಲ್ಲ".. ಎಂದು..
ಅದಕ್ಕೆ ಆತ "ಹೌದು...ನಾವೆಲ್ಲ ಆರ್ಥಿಕವಾಗಿ ಸಬಲರಾಗಿದ್ದರೂ ಮಾನಸಿಕವಾಗಿ ಜರ್ಜರಿತವಾಗಿಬಿಟ್ಟಿದೇವೆ." ಎಂದು ಏನೊ ಹೇಳಿದ..ಸುಮ್ಮನೆ ಗೋಣಲ್ಲಾಡಿಸಿದೆ...ರಾಜೇಶ ನಿದ್ದೆಗೆ ಜಾರಿದ್ದ... ಮಂಜು ಕುಳಿತಲ್ಲಿಯೆ ನಿದ್ದೆ ಮಾಡುತ್ತಿದ್ದ..ಕೆಂಪ ನಾನು ಮುಖ ಮುಖ ನೋಡಿಕೊಳ್ಳುತ್ತಿದೆವು... ಏನೇ ಆದರೊ ನಾನು ನಿದ್ದೆ ಮಾಡಬಾರದೆಂದು ನಿರ್ಧರಿಸಿದ್ದೆ... ನಿದ್ದೆ ಮಾಡಬೇಕಿದ್ದರೂ ಅಲ್ಲಿ ಸ್ಥಳವೇ ಇರಲಿಲ್ಲ..!!! ಸುಮ್ಮನೆ ಸುತ್ತಲೂ ಕತ್ತಾಡಿಸುತ್ತಿದ್ದೆ...
ಕಾಳಹಸ್ತಿಯಲ್ಲಿ queue ನಲ್ಲಿ ನಿಂತಿದ್ದು, ಬೆಟ್ಟ ಹತ್ತಿದುದರ ಪರಿಣಾಮ ಬಹಳವಾಗಿ ದಣಿವಾಗಿತ್ತು... ಕಣ್ಣೆಳೆಯುತಿತ್ತು.. ಒಂದಷ್ಟು ಮಧ್ಯ ವಯಸ್ಕ ಮಂದಿ ಅಲ್ಲಿ ಕೂತು ಹರಟುತ್ತಿದ್ದರು... ಜನರು ಶೌಚಕ್ಕೆ ಹೋಗಬೇಕಾದರೆ ಮಲಗಿರುವ ಮಂದಿಯನ್ನು ಸರಿಸಿ ಮಧ್ಯ ಮಧ್ಯ ಕಾಲಿಟ್ಟು ಸಾಗುತ್ತಿದ್ದರು... ನನಗೆ ಎಲ್ಲೋ ಒಂದು ಬಂದೀಖಾನೆಯಲ್ಲಿದ್ದೆವೆಂದೊ ಅನಿಸುತಿತ್ತು... ಒಮ್ಮೊಮ್ಮೆ ನಿರಾಶ್ರಿತರ ಶಿಬಿರದಲ್ಲಿದ್ದ ಭಾವ.. we were not at all comfortable ..
"ಲೈ...ಮಗನೆ ನೀನು ತೆಪ್ಪಗೆ ಸುಮ್ಮನಿದ್ಬಿದು.. ಅವಾಗ್ಲಿಂದ ಹೇಳಿದ್ದೆ ಹೇಳ್ತಾಇದ್ಯಾ.. ಧರ್ಮದರ್ಶನಕ್ಕೆ ಅಂತ ಬಂದಿದ್ದೀವಿ..ನಿನಗೆ ಇವಾಗ ನಮ್ಮಿಂದ ನಿಂಗೆ ಧರ್ಮದೇಟು ಬೀಳತ್ತೆ..ಸುಮ್ನಿದ್ಬಿದು.." ಎಂದು ಎಲ್ಲರೂ ಹೇಳಿದರು.. manju was over optimistic..ಯಾವಾಗ ಕೇಳಿದರೂ..ಸಹ ಇನ್ನು ಕೇವಲ ರ್ಧ ಗಂಟೆ ಯಷ್ಟೆ ಇಲ್ಲಿಂದ ಆಚೆ ಬಿಟ್ಟು ಬಿಡ್ತಾರೆ ಎಂದೆ ಹೇಳುತ್ತಿದ್ದ..ಅದಾವ ಧೈರ್ಯದ ಮೇಲೆ ಹೇಳುತ್ತಿದ್ದನೊ ನಮಗೆ ತಿಳಿಯುತ್ತಿರಲಿಲ್ಲ... ಸರಿಯಾಗಿ 12ಗಂಟೆಗೆ ನಮ್ಮನ್ನು ಅ ಸೆಲ್ ನಿಂದ ಹೊರಬಿಟ್ಟರು..ಸರಿಯಾಗಿ 10ಗಂಟೆಗಳ ಕಾಲ ಆ ಕೂಪದಲ್ಲಿ ಕಾಲಕಳೆದಿದ್ದೆವು.. ಅಲ್ಲಿಂದ ಬಿಟ್ಟೊಡನೆಯೆ ಜನರು ಮತ್ತೊಂದು queue ಸೇರಲು. ಹೋ ಎಂದು ಒಡುತ್ತಾರೆ... ವಿಪರೀತ ನೂಕುನುಗ್ಗಲಿತ್ತು... "ಏಡುಕೊಂಡಲವಾಡ ವೆಂಕಟರಮಣ ಗೋವಿಂದಾ ಗೋವಿಂದಾ" ಎಂಬ ಉದ್ಗಾರ ಭಕ್ತವರ್ಗದಿಂದ ಆಗಿಂದಾಗ್ಗೆ ಹೊರಹೊಮ್ಮುತಿತ್ತು.. ಅಲ್ಲಿಂದ ಮತ್ತೆ ಎರಡು ಗಂಟೆಗಳು queue ನಲ್ಲಿ ಸವೆಸಿ ಮುಖ್ಯದೇವಸ್ಥಾನದ ಅಂಗಳಕ್ಕೆ ಬಂದೆವು..ಅಲ್ಲಿಂದ ಎಲ್ಲರನ್ನೂ ಒಂದು ಮಾಡಿಬಿಡುತ್ತಾರೆ..
ಅಂದರೆ special entrance, VIP entrance ಎಲ್ಲರು ಒಂದೆ queue ನಲ್ಲಿ ಲೀನವಾಗಿಬಿಡುತ್ತರೆ..ಎಂದಿನಂತೆ ನೂಕುನುಗ್ಗಲು ಇತ್ತು..ಪೋಲೀಸರ ತಪಾಸಣೆ ಮುಗಿದು ಒಳಗೆ ಕಾಲಿಟ್ಟಾಗ ದೇವಸ್ಥಾನ ದ ಒಳಗೆಲ್ಲ ಚಿನ್ನದ ಕುಸುರಿಕೆಲಸ ಕಾಣಸಿತ್ತದೆ..ಎಲ್ಲೆಲ್ಲೂ ನ್ನದ plating,ಎಷ್ಟಾದರೂ ಭಾರತದ ಶ್ರೀಮಂತದೇವರಲ್ಲವೆ ತಿರುಪತಿ ತಿಮ್ಮಪ್ಪ...ಇಷ್ಟೆಲ್ಲ ಕಷ್ಟಪಟ್ಟು ಹೋದರೂ ಆ ತಿಮ್ಮಪ್ಪನ ದರುಶನವಾದ ಕೂಡಲೆ ಎಲ್ಲ ಉಪಶಮನವಾಗುತ್ತದೆ...ಎಂತದೋ ಒಂದು ಶಕ್ತಿ ಆ ಮೂರ್ತಿಯಲ್ಲಿದೆ ಎಂದು ನನಗನ್ನಿಸುತ್ತದೆ..ಬಹಳ ಸುಂದರವಾದ ಮೂರ್ತಿಯದು...ನೋಡಿದರೂ ಮತ್ತಷ್ಟು ನೋಡಬೇಕೆಂದಿನಿಸುತ್ತದೆ... ಆ ಮೂರ್ತಿಯ ದರುಶನ ಸಿಕ್ಕಿದ್ದು ಕೇವಲ 40seconds ಅಷ್ಟೆ.. ಅದೊಂದು ರೀತಿಯ ಚುಂಬಕ ಶಕ್ತಿ ಕೆಲಸ ಮಾಡುತ್ತದೆ ಎಂದು ನನ್ನ ಅಭಿಪ್ರಾಯ. ಅಷ್ಟಲ್ಲದೆ ಪ್ರಪಂಚದ ಮೂಲೆ ಮೂಲೆಯಿಂದ ಭಕ್ತರನ್ನು ಆಕರ್ಷಿಸುವುದಾದರೂ ಹೇಗೆ??? ಅಲ್ಲಿ ಸೆಲ್ ನಲ್ಲಿ ಕುಳಿತು ನಾವೆಲ್ಲ ಅಷ್ಟೆಲ್ಲ ಎಗರಾಡುತ್ತಿದ್ದರೂ ಮೂರ್ತಿಯ ದರುಶನವಾದ ಕೂಡಲೆ ಅದಾವ ಭಾವ ತುಂಬಿತೊ ಎನೋ..ದಿಗ್ಮೂಢರಾಗಿ "ದರುಶನ ಬಹಳ ಚೆನ್ನಾಗಾಯಿತು" ಎಂದು ನಮ್ಮಲ್ಲೆ ನಾವೆಂದು ಕೊಳ್ಳುತ್ತ ಹೊರ ಬಂದುಬಿಟ್ಟೆವು.. ಅಷ್ಟೆಲ್ಲ ತೊಂದರೆ ಪಡಿಪಾಟಲು ಪಟ್ಟಿದಕ್ಕೂ ಸಾರ್ಥಕವಾಯಿತೆನ್ನುವ ಭಾವ....!!!!ದರುಶನ ಮುಗಿಸಿ.. ಪ್ರಪಂಚಲ್ಲೆ ಖ್ಯಾತಿವೆತ್ತ ತಿಮ್ಮಪ್ಪನ ಹುಂಡಿಯೆಡೆಗೆ ಹೋದೆವು..ಸಾಕಷ್ಟು ನೂಕು ನುಗ್ಗಲು ಇತ್ತು.. ಒಂದು ಪ್ರದಕ್ಷಿಣೆ ಹಾಕಿ ಒಂದಷ್ಟು ಹಣವನ್ನು ಹುಂಡಿಯಲ್ಲಿ ಹಾಕಿ..ಹೊರಬಂದೆವು...ಈ ಹುಂಡಿಗೆ ಕೆಲವರು ಲಕ್ಷಗಟ್ಟಲೆ ಹಾಕುತ್ತಾರೆ.ಕೆಲವರು ತಮ್ಮ ಚಿನ್ನಭರಣಗಳನ್ನೇ ಹಾಗೆ ಕಳಚಿ ಅದರೊಳಗೆ ಹಾಕಿಬಿಡುತ್ತಾರೆ...!!
ಇಲ್ಲಿ ಜನ ಏಕೆ ಇಷ್ಟೊಂದು ಹಣ ಹಾಕುತ್ತರೆ ಎನ್ನುವುದರ ಬಗ್ಗೆ ಒಂದು ಪ್ರತೀತಿ ಇದೆ..."ಶ್ರೀನಿವಾಸನು ಪದ್ಮಾವತಿ ಜೊತೆ ಪರಿಣಯಕ್ಕೆ ಕುಬೇರನ ಬಳಿ ಸಾಲ ಮಾಡಿದ್ದನಂತೆ.. ಆ ಮದುವೆಗೆ ಆದ ಖರ್ಚನ್ನು ತೀರಿಸಲು ಜನರು ಹುಂಡಿಗೆ ದುಡ್ಡು ಹಾಕುತ್ತಾರಂತೆ..ಅಂದು ಯಾವುದೂ ಕಾಲದಲ್ಲಿ ಮಾಡಿದ ಸಾಲ ಇಂದು ಸಹ ಇನ್ನೂ ತೀರಿಲ್ಲವಂತೆ". !!
ದರುಶನ ಮುಗಿಸಿ..ಲಾಡು ಪ್ರಸಾದವನ್ನು ಪಡೆದು.. ದೇವಸ್ಥಾನದ ಪ್ರಾಂಗಣದಿಂದ ಹೊರಬಂದೆವು... ಎಲ್ಲರಿಗೂ ಸಾಕಷ್ಟು ದಣಿವಾಗಿತ್ತು...ಹೊಟ್ಟೆ ಚುರಗುಡುತಿತ್ತು..ಸಮಯ ಆಗ ಭಾನುವಾರ ಮಧ್ಯಾಹ್ನ ಎರಡೂವರೆ ಇರಬಹುದು.. ಆದಷ್ಟು ಬೇಗ ಬಸ್ ಹಿಡಿದು ಬೆಂಗಳೂರು ತಲುಪುವ ಬಯಕೆ ಎಲ್ಲರನ್ನು ಆವರಿಸಿತ್ತು.. ಲಗುಬಗೆಯಿಂದ ಊಟ ಮುಗಿಸಿ.. ಅಲ್ಲೆ ಪುಣ್ಯಕ್ಕೆ ನಮಗೆ ತಿರುಮಲೆಯಲ್ಲಿ ಬೆಂಗಳೂರಿಗೆ ಬಸ್ ದೊರೆತುದ್ದರಿಂದ ಹತ್ತಿ ಕುಳಿತೆವು... ಸರಿಯಾಗಿ 5:30pm ಗೆ ಬಸ್ ತಿರುಮಲೆಯಿಂದ ಹೊರಟು ತಿರುಪತಿಗೆ ಬಂದಿಳಿಯಿತು. ಅಲ್ಲಿಂದ 7ಕ್ಕೆ ಹೊರಟು ಮಧ್ಯ ರಾತ್ರಿ 1ಕ್ಕೆ ಬೆಂಗಳೂರು ತಲುಪಿದೆವು...ಕ್ಷೇಮವಾಗಿ....
Posted by Sridhar Raju at 7:41 PM 9 comments
Coffee,Ice Thunder, Gandhi Bazaar
Friday, July 6, 2007"ರಯ್ಯಾ!..7:30 " ಪ್ರತಿಯಾಗಿ ನನ್ನ ಮೊಬೈಲಿನಿಂದ ಆತನೆಡೆಗೆ ಸಾಗುತ್ತದೆ....
ಯಾರದರೂ ನೋಡಿದರೆ ಇದ್ಯಾವ ಪರಿಯ ಸಂಭಾಷನೆ ಯೆಂದು ಯೋಚಿಸುವರೇನೊ..
ಏನೋ dealಗಳು ನಡೆಸುವಹಾಗೆ....
ಇದರ ಸಾರಂಶ ಇಷ್ಟು ನಾನು ಮತ್ತೆ ಅರುಣ ನಾಳೆ ಬೆಳಿಗ್ಗೆ 7:30 ಕ್ಕೆ ಕಾಫಿ ಹೀರಲು Gandhi bazaarನಲ್ಲಿರುವ Ice Thunder ನಲ್ಲಿ ಭೇಟಿ ಆಗುವುದೆಂದು.. ಹೆ ಹೆ ಹೆ
ಹೀಗೆ ನಮ್ಮ ಕಾಫಿ ಭೇಟಿ ಶುರುವಾಗಿ ಸರಿಸುಮಾರು 5-6 ತಿಂಗಳು ಕಳೆದಿವೆ.. ಮುಂಚೆ ಆದರೆ "ಏನಪ್ಪಾ free ಇದ್ಯ?? ಏಷ್ಟೊತ್ತಿಗೆ ಸಿಗ್ತ್ಯ..?? " ಎಲ್ಲಿ ಭೇಟಿ ಆಗೋದು ಹೀಗೆಲ್ಲ ಸಾಗುತ್ತಿತ್ತು , ಈಗ just "ಕಾಫಿ" ಎಂದರೆ ಭೇಟಿ ನಿಶ್ಚಿತ..... ಸ್ಥಳ ಖಚಿತ
Ice Thunder ಬಿಟ್ಟರೆ ಮಹಾಲಕ್ಷ್ಮಿtiffin ರೂಮ್....ಅಲ್ಲಾದರೆ ಕಾಫಿ ಜೊತೆಗೆ ಒಂದು ಪ್ಲೇಟ್ ಖಾಲಿ ದೊಸೆ ಹೊಡೆಯುವುದು..
ತಿಂದು ತೇಗಿ ಬಿಲ್ ಪಾವಸಿದ ನಂತರ ಅಲ್ಲೇ Gandhi bazaarರನ್ನು ಸುತ್ತುವುದು.... ಅಂದು ನಡೆದ ಘಟನಾವಳಿಗಳು, ಚಲನಚಿತ್ರ ವಿಶ್ಲೇಷಣೆಗಳು , ಅಗಾಗ್ಗೆ ಅಲ್ಲಲೇ ಕಾಣಿಸುವ ವಿನೋದಯಮಯ ಪ್ರಸಂಗಗಳು.. ಎಲ್ಲ ಅಂಗಡಿಗಳ ನಾಮಫಲಕಗಳನ್ನು ಓದಿ ಅದರ ಬಗ್ಗೆ commentisiಸುವುದು. ಅರುಣನಂತು ಎಲ್ಲಾದರೂ ತಪ್ಪು ತಪ್ಪಾಗಿ ಬರೆದಿದ್ದರೆ.."ನೋಡು ಅದು ಹೀಗೆ ಬರೀಬೇಕಿತ್ತು...ನೆಟ್ಟಗೆ ಬರೆಯಕ್ಕೆ ಬರಲ್ಲ ಇವ್ರಿಗೆಲ್ಲ" ಅನ್ನುವುದು. ಹೀಗೆ ಹರಟೆಗೆ ಒಂದೇ ಎರಡೇ ವಿಷಯಗಳು..........
Ice Thunderಗೆ ಹೋಗಿ ಹಬೆಯಾಡುತ್ತಿರುವ ಕಾಫಿ ಲೋಟ ಹಿಡಿದು, ಅಲ್ಲೇ ಮೆಟ್ಟಿಲ ಮೇಲೆ ಕುಳಿತು ಹರಟುವುದು. ಅರುಣನಂತು ಒಮ್ಮೊಮ್ಮೆ "ತುಂಬ ಕಾಫಿ ಕುಡೀಬಾರದು ಕಣೋ ಆರೋಗ್ಯಕ್ಕೆ ಒಳ್ಳೇದಲ್ಲ ಹಾಗೆ ಹೇಳುವವನ ಕೈಯಲ್ಲೆ ಹಬೆಯಾಡುತ್ತಿರುವ ಕಾಫಿ ಲೋಟ" ಹೆ ಹೆ ಹೆ.
ಆತನಿನ್ನೂ ಮಾತಾಡುತ್ತಲೇ ಒಂದೊ ಎರಡೊ ಸಿಪ್ ಮಾಡಿರುತ್ತಾನೆ ಅಷ್ಟರಲ್ಲಿ ನನ್ನ ಕಾಫಿ ಪಿನಿಶ್" ಲೋ ಏನೋ ಅಷ್ಟು ಬೇಗ ಕುಡೀತೀಯ..ಆಸ್ವಾದಿಸಿ ಕುಡೀಬೇಕಪ್ಪ ಕಾಫಿನ" ಅಂತ ಸಂದೇಶ...ಹೆ ಹೆ ಹೆ
ಎಷ್ಟೋ ಸಾರಿ ಕಾಫಿ ಕುಡಿದು ಮುಗಿಸಿ ಸಾಕಷ್ಟು ಬೀದಿ ಸುತ್ತಿ ಬಂದ ಮೇಲೂ ಮತ್ತೊಮ್ಮೆ ಕಾಫಿ ಕುಡಿದದ್ದು ಉಂಟು ಕಾಫಿಗೆ ಲೆಕ್ಕ ಇಡುವವರ್ಯಾರು.....ಅಲ್ಲವೆ??
ಹೀಗೆ ಸಮಯ ಸಿಕ್ಕಗಲೆಲ್ಲಾ Ice Thunder ಗೆ ಹೋಗಿ ಕಾಫಿ ಕುಡಿಯುವ ಅಭ್ಯಾಸ ಮಾಡಿಸಿದ್ದು ಮಾತ್ರ ಅರುಣ. ಹೀಗೆ ಒಂದು ದಿನ online ಇದ್ದಾಗ..ಆತ ಕೇಳಿದ್ದ.. light ಆಗಿ ಕಾಫಿ ಹೊಡ್ಯೋಣ ಬರ್ತೀರಾ"?? ಎಂದು ನನಗೆ scrap ಹಾಕಿದ್ದ.. ಇದೇನಪ್ಪಾ ಇದು ಎಂದು..ಕಾಫಿ ತಾನೆ ಹೋಗಿ ಬಂದರಾಯಿತು ಅಂತ ಹೋಗಿದ್ದೆ. ನಮ್ಮ ಗೆಳೆತನದ ಆರಂಭದ ದಿನಗಳಲ್ಲಿ "ನೀವು","ನಿಮ್ಮ"," ಏನು ಮಾಡುತ್ತೀರಾ"..ಹೀಗೆ ಮಾತಾಡಿಸುತಿದ್ದೆ ಅರುಣ ಕೂಡ ಹಾಗೆ ಮಾತಾಡಿಸುತ್ತಿದ್ದ, ಕಾಲಕ್ರಮೇಣ "ಲೋ" "ಎದ್ದುಹೋಗೋಲೋ", "ಬಾರೋ" ಆಗಿದೆ.....
ಹೀಗೆ ಅದು ಕ್ರಮೇಣ ಅಭ್ಯಾಸವಾಗಿ ಹೋಯಿತು.
ನಮ್ಮ ಈ ಕಾಫಿಯಿಂದ ಬೆಳೆದ ಸ್ನೇಹ ಸದಾಕಾಲ ಹೀಗೆ ಇರಲಿ ಎಂದು ಆಶಿಸುತ್ತೇನೆ. :-)
ಒಮ್ಮೆ ಹೀಗೆ ಸಂಜೆ ಎಂಟರ ಸಮಯವಿರಬಹುದು ಒಬ್ಬ ಸೇಲ್ಸ್ ಮನ್ ನಮ್ಮ ಬಳಿ ಬಂದು "ಸಾರ್..bed lamp ಇದು ತಗೊಳಿ ಸಾರ್.. rate ....."ಎಂದ.
ಅರುಣನು ಅದಕ್ಕೆ ಪ್ರತ್ಯುತ್ತರವಾಗಿ
"ಹೆ ಹೆ ಹೆ ಬೆಡ್ ನಲ್ಲಿ ಇರೋವಾಗ ಬೆಡ್ ಲ್ಯಾಂಪ್ ಯಾಕ್ರೀ"..ಎಂದ
ನನಗೆ ನಗು ತಡೆಯಲಾಗಲಿಲ್ಲ ,ಇಬ್ಬರೂ ನಗಲಾರಂಭಿಸಿದೆವು, ಅದೆನ್ನೆನಿಸಿತೋ ಏನೋ ಮುಂದಿನ ಪ್ರಶ್ನೆ ಹಾಕದೆ ಸೇಲ್ಸ್ ಮನ್ ಅಲ್ಲಿಂದ ಕಾಲ್ಕಿತ್ತ..ಈ ರೀತಿಯ ತರಲೆ ಪ್ರಶ್ನೆಯನ್ನು ಖಂಡಿತ ಆತ ನಿರೀಕ್ಷಿಸಿರಲಾರ, ಮುಂದೆ ಆತ ಯಾವ ಗಿರಾಕಿಯ ಬಳಿಯೂ bed lamp ಶಬ್ಧಪ್ರಯೋಗ ಮಾಡುವುದಿಲ್ಲವೆಂದು ನಂಬಿದ್ದೇವೆ.. ಹೆ ಹೆ ಹೆ..
ಇನ್ನೊಮ್ಮೆ ಹಾಗೆ ನಡೆದು ಹೋಗುತ್ತಿರುವಾಗ..ಒಂದು ಚಿಕ್ಕ ಹುಡುಗಿ ದೇವರ ಪಟವನ್ನು ಕೈಲಿ ಹಿಡಿದು..ಭಿಕ್ಷೆಗೆ ನಮ್ಮ ಮುಂದೆ ಕೈಚಾಚಿತು . ಅರುಣ "ನಾನು ದೇವರನ್ನ ನಂಬಲ್ಲ.. ನಿಂಗೆ ಹಣ ಕೊಡುವುದಿಲ್ಲವೆಂದು ಕೈಆಡಿಸಿಬಿಟ್ಟ"..
ಆ ಹುಡುಗಿ ಇವನನ್ನು ಬೆರಗುಗಣ್ಣಿನಿಂದ ದುರುಗುಟ್ಟಿ ಬಂದ ದಾರಿಗೆ ಸುಂಕವಿಲ್ಲವೆಂದು ಮುಂದೆ ಹೊರಟು ಹೋಯಿತು..ನನಗಂತೂ ಆ ಪ್ರಸಂಗ ವಿನೋದಮಯವಾಗಿ ಕಂಡಿತು..
ಮತ್ತೊಮ್ಮೆ ನಾವು ಇನ್ನೇನು ಮನೆಗೆ ಹೊರಡಲನುವಾಗಿದ್ದೆವು ಆಗ ಯಾರೊ ಪುಣ್ಯಾತ್ಮರು!! Honda Activaದ seatನ ಮೇಲೆಯೆ ಗಾಡಿಯ ಕೀಲಿಕೈ ಇಟ್ಟಿದ್ದರು!!!, ಅಲ್ಲಾ ಈಗಿನ ಕಾಲದಲ್ಲೂ ಅಷ್ಟು ಉದಾರಿಗಳೇ..ಎಲ್ಲಾರಿಗೂ ಕಾಣಿಸುವಂತೆ ಇಡುವುದು..ಕಳ್ಳಪ್ರಜೆ ಸುಲಭವಾಗಿ ಗಾಡಿಯನ್ನು ಕದಿಯಬಹುದಿತ್ತು... ನಾವು ಅದರ ಕೀಲಿಕೈಯನ್ನು foot rest ಮೇಲೆ ಇಟ್ಟು ಗಾಡಿ ತನ್ನ ಯಜಮಾನನಿಗೆ ಸೇರಲಿ ಎಂದು ಆಶಿಸಿ ಹೊರಟೆವು...
ಪ್ರಪಂಚದಲ್ಲಿ "ಕಾಫಿ" ಎಂಬ ಪೇಯ ಅಸ್ತಿತ್ವದಲ್ಲಿರುವವರೆಗು ನಮ್ಮ Ice Thunder ಭೇಟಿ ಹೀಗೆ ಸಾಗುತ್ತಿರಲಿ ಎಂದು ಆಶಿಸುತ್ತ ಈ ಲೇಖನದ ಮೂಲಕ ಅರುಣನಿಗೆ ನನ್ನದೊಂದು ಹೃತ್ಪೂರ್ವಕವಾದ ಧನ್ಯವಾದಗಳನ್ನ ಅರ್ಪಿಸುತ್ತೇನೆ.. :-)
ವಿಶೇಷ ಸೂಚನೆ: "ಮೇಲೆ ಎಲ್ಲೆಲ್ಲಿ Ice Thunder ಅಂತ ಇದೆಯೊ ಅಲ್ಲೆಲ್ಲಾ "ಬಾಲಾಜೀಸ್ ಉಪಹಾರ್" ಎಂದು ಬದಲಾಯಿಸಿಕೊಳ್ಳಿ. ವಾಸ್ತವದಲ್ಲಿ ನಾವು ಭೇಟಿ ಆಗುತ್ತಿದ್ದು ಬಾಲಾಜೀಸ್ ಉಪಹಾರ್ ನ ಎದುರುಗಡೆಯೆ ,ಕಾಫಿ ಹೀರುತ್ತಿದದ್ದು ಕೂಡ ಅಲ್ಲೇ, ಪಕ್ಕದಲ್ಲೇ ಸ್ವಲ್ಪ ಮಟ್ಟಿಗೆ ಖ್ಯಾತಿ ಪಡೆದ Ice Thunder ಇರುವುದರಿಂದ ನಾವುಗಳು Ice Thunder ಎಂದೇ ಸಂಭೋದಿಸುತ್ತಿದೆವು. ಮೊನ್ನೆ ಮೊನ್ನೆ ಗಮನಿಸಿದಾಗ ತಿಳಿಯಿತು ನಮ್ಮ ಶ್ಲಾಘನೆಗೆ ಒಳಗಾಗಿರುವುದು "ಬಾಲಜೀಸ್ ಉಪಹಾರ್" ನ ಕಾಫಿ ಎಂದು.. ರೂಡಿಯಿಂದ Ice Thunder ಎಂದೇ ಕರೆಯುವುಧು ಅಭ್ಯಾಸವಾಗಿಬಿಟ್ಟಿದೆ.. ನೀವು ಸರಿ ಮಾಡಿಕೊಳ್ಳಿ.. ಮಾಡ್ಕೊಳ್ತೀರ ಅಲ್ವೇ????
Posted by Sridhar Raju at 11:48 AM 8 comments