ಅದೇ ವೆಂಕ - ಸೀನ - ನೊಣ

Saturday, May 26, 2007

ಸಮಯ ರಾತ್ರಿ ೧೦:೩೦ ಅಥವಾ ೧೦:೪೫... ಎಲ್ಲೇ ಇದ್ದರೂ ಬಂದು ಸಿಸ್ಟೆಮ್ ಶುರುವಿಕ್ಕಿ ಯಾಹೂ! ಧೂತವಾಹಕದಲ್ಲಿ ಲಾಗಿನ್ ಆಗುತ್ತೇನೆ.. ಅದು ನಮ್ಮ ಅಂದರೆ ವೆಂಕ,ಸೀನ,ನೊಣರ ಅಲಿಖಿತ ಒಪ್ಪಂದ... ಯಾರೊಬ್ಬರು ಇಲ್ಲದಿದ್ದರೂ ಮೆಸೆಜ್ ಮಾಡಿ ಬರಮಾಡುತ್ತೇವೆ....

ಅಲ್ಲಿ conference ಶುರು ಮಾಡಿ ಮಾತಾಡಲು ಶುರುಮಾಡಿದರೆ ಲೋಕದ ಪರಿವೆಯೆ ಇರುವುದಿಲ್ಲ... ದಿನವೂ ಮಾತಡಲು ವಿಷಯಗಳು ಅದೆಲ್ಲಿಂದ ಬರುವುದೋ ಆ ಭಗವಂತನಿಗೇ ಗೊತ್ತು..!!

ನಾವು ಶುರು ಮಾಡಿದ conference ನಲ್ಲಿ ಜನರು ಬರುತ್ತಿರುತ್ತಾರೆ..ಹೋಗುತ್ತಿರುತ್ತಾರೆ..but ನಾವ್ಗಳು ಮಾತ್ರ ಬರುವವರಿಗೆ "ಹಾಯ್!" ಹೇಳುತ್ತ ಹೋಗುವವರಿಗೆ "ಬ್ಯೆ ಬ್ಯೆ" ಹೇಳುತ್ತ ಅಲ್ಲೇ ಇರುತ್ತೇವೆ.. ಸುಮಾರು ಪ್ರತಿನಿತ್ಯ ೧ ಗಂಟೆವರೆಗೂ...
ದಿನಂಪ್ರತಿ ನಡೆಯುವ ವಿಷಯಗಳು, ವಿನೋದಮಯ ಪ್ರಸಂಗಗಳು, ಆ ದಿನದ ಅನುಭವಗಳು.. ಒಂದೇ ಎರಡೇ..ನಾವು ಹರಟೆಮಲ್ಲರೇ ಸರಿ...

ಹಾ! ಮರೆತಿದ್ದೆ..ಇಲ್ಲಿ ಪಾತ್ರ ಪರಿಚಯ ಮಾಡುವುದನ್ನೇ ಮರೆತಿದ್ದೆ..

ಮೊದಲಿಗೆ ವೆಂಕ ಅಂದರೆ - ಶ್ರೀಧರ

ಸೀನ ಅಂದರೆ - ಶ್ರೀನಿವಾಸ (ಪ್ರೇಮ ಕವಿ) (ಬಹುಮುಖ ಪ್ರತಿಭೆ).. the list goes on..

ನೊಣ ಅಂದರೆ - ಅರುಣ(ಪರಿಸರಪ್ರೇಮಿ) (ಸಹಜ ಕವಿ)...the list goes on...

ಒಂದಷ್ಟು ದಿನ ಸೀನ ಮತ್ತೆ ನೊಣ voice conference ಮಾಡಲು ಶುರುವಿಕ್ಕಿದರು..... ನನ್ನ headphone ಸರಿ ಇಲ್ಲದುದರ ಕಾರಣ ಇವರಿಗೆ ಪಟಾಕಿ ರೀತಿಯ ಕೇಳಿಸುತ್ತಿತಂತೆ.....ಹೆ ಹೆ ಹೆ... ನಿಲ್ಲಿಸಿಬಿಟ್ಟರು... ನನಗೊಂತರಾ ಖುಷಿಯಾಯಿತು.... ನನಗೆ ಮಾತಡುವುದಕ್ಕಿಂತ type ಮಾಡಿ ನನ್ನ ಭಾವ!! ಗಳನ್ನ ವ್ಯಕ್ತಪಡಿಸುವುದು ಸುಲಭವೆಂದು..

ಎಲ್ಲರನ್ನು ನಗಿಸುತ್ತ..ಕೆಲವೊಮ್ಮೆ ಛೇಡಿಸುತ್ತಾ, ಅರುಣನ/ಶ್ರೀನಿವಾಸನ lecture/ಹಾಡು ಗಳನ್ನ ಕೇಳುತ್ತ...
ವಿಚಾರ ವಿನಿಮಯಮಾಡಿಕೊಳ್ಳುತ್ತ ನಡೆಸುವ ಹರಟೆಯ ಮಜವೆ ಬೇರೆ ಬಿಡಿ..!!

ಹೀಗೆ ನಮ್ಮ conference ಸಾಧ್ಯವಾದಷ್ಟು ದಿನಗಳ ಕಾಲ ನಡೆಯಲಿ ಎಂದು ಆಶಿಸುತ್ತ ನನ್ನೀ ಲೇಖನವನ್ನ ಮುಗಿಸುತ್ತೇನೆ... ಈ ಸ್ನೇಹ ಸದಾ ಕಾಲ ಹೀಗೆ ಇರಲಿ...

ಹೀಗೆ ಕೆಳಕೊಟ್ಟ ಕೊಂಡಿಗಳನ್ನ ಹಾಗೆ ಓದಿಬಿಡಿ...ಚೆನ್ನಾಗಿವೆ
http://gandabherunda.blogspot.com/2007/05/blog-post_26.html

http://speaktonature.blogspot.com/2007/05/blog-post_25.html

ಅಂದ ಹಾಗೆ ನಿಮಗಾರಿಗಾದರು ನಮ್ಮ ಹರಟೆಯಲ್ಲಿ ಪಾಲ್ಗೊಳ್ಳುವ ಆಸಕ್ತಿಯಿದ್ದಲ್ಲಿ ೧೦:೩೦ ಗೆ ಧೂತವಾಹಕದಲ್ಲಿ ಲಾಗಿನ್ ಆಗ್ಬಿಡಿ..ಸಿಗೋಣ ಅಲ್ಲಿ... ಬರ್ತೀರಾ ತಾನೆ??????

ಉಪಹಾರ ಕೇಂದ್ರದ ಮಸಾಲೆ ದೋಸೆ

Saturday, May 19, 2007

ನಾನು ನ್ಯಾಷನಲ್ ಹೈಸ್ಕೂಲಿನ ವಿದ್ಯಾರ್ಥಿ, ಶನಿವಾರ ಬಂತೆಂದರೆ ನನಗೊಂತರ ಖುಷಿ.. ಅಂದು ಉಪಹಾರ ಕೇಂದ್ರದ ಮಸಾಲೆ ದೋಸೆ ಯನ್ನು ಮೆಲ್ಲಬಹುದು ಎಂದು.. ಶನಿವಾರದಂದು ನಮಗೆ ತರಗತಿಗಳು 7:30 ಗೆಲ್ಲ ಶುರುವಾಗಿಬಿಡುತಿತ್ತು..
ಬೆಳ್ಳಂಬೆಳಗ್ಗೇನೆ ಎದ್ದು ಅಮ್ಮನ ಬಳಿ 10ರೂಪಾಯಿಇಸಿದುಕೊಳ್ಳುತ್ತಿದ್ದೆ... ಶನಿವಾರದಂದು 5 periodಗಳು ಇರುತ್ತಿದ್ದವು.. ಮೊದಲು 3 periods ಅಮೆಲೆ ಮಿಕ್ಕವು.. 10ಗಂಟೆಗೆ ತಿಂಡಿಗೆಂದು ಬಿಡುತ್ತಿದ್ದರು.. ಆಗ ನಮ್ಮದೊಂದು ಗುಂಪು ಇತ್ತು.. ಬಿಟ್ಟೊಡನೆಯೆ ನಾನು,ರಂಜನ್,ಪವನ್,ಸುಧನ್ವ,ಶ್ರೀರಾಮ್,ಸಂದೀಪ್,ನಿರಂಜನ್,ಜಯಂತ್.. ಉಪಹಾರ ಕೇಂದ್ರದೆಡೆಗೆ ಧಾವಿಸುತ್ತಿದ್ದೆವು.. ಬೇಗ ಹೋದರೆ ಬೇಗ ತಿಂದು ವಾಪಸು ಬರಬಹುದು ಎಂದು.... ಬಹಳ ಸಾರಿ ನಾವು ಹೋಗುವ ಹೊತ್ತಿಗೆ rush ಆಗಿಬಿಡುತಿತ್ತು..ಅಲ್ಲೆ ಜೈನ್ ಕಾಲೇಜ್ ಸಹ ಇದೆ... ಅವರೊಂದಷ್ಟು ಜನ ಸೇರಿಬಿಡುತ್ತಿದ್ದರು..

ಆ ಕಾಲೇಜಿನ ಮಂದಿಯನ್ನು ಕಂಡರೆ ನಮಗೊಂದು ರೀತಿಯ ದಿಗಿಲು ಹಾಗೆ ಅಸಡ್ಡೆಯು ಸಹ ಇತ್ತು.ಕಾರಣ ಅವರ ಥಳುಕು ಬಳುಕು ವೇಷಗಳು... ಹಾಗು ಅವರಾಡುತ್ತಿದ್ದ ಮಾತುಗಳು.. ಅವರ tussa pussa ಆಂಗ್ಲ ಭಾಷೆಯನ್ನು ಕೇಳಿ ನನಗಂತು ಒಮ್ಮೊಮ್ಮೆ ದಿಗಿಲಾಗುತ್ತಿತ್ತು...

ಎಲ್ಲರು 10ರೂಪಾಯಿಗಳನ್ನು ತಂದಿರುತ್ತಿದ್ದರು... ಅದನ್ನು ಒಬ್ಬನ ಕೈಗೆ ಕೊಟ್ಟು... "ಹೋಗು.. token ತಗೊ" ಎಂದುಬಿಡುತ್ತಿದ್ದೆವು... ಆ rush ನಲ್ಲಿ ನುಗ್ಗಿ ಟೋಕನ್ ಸಂಪಾದಿಸುವುದೆ ಒಂದು ಸಾಹಸ.. ಮಗದೊಬ್ಬನನ್ನು ಕಳಿಸಿ "ಹೋಗು order ಕೊಡು" ಎನ್ನುವುದು... ಆ ದೋಸೆ ಮಾಡುವವನನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದೆವು.. ಅಹಾ ಆತ ದೋಸೆಯನ್ನು ಹುಯ್ಯುವುದೇನು....ತುಪ್ಪ! ಸುರಿಯುವುದೇನು.... ಕೆಂಪು ಚಟ್ನಿಯನ್ನು ಅದಕ್ಕೆ ಸವರಿ... ಆಲೂಗಡ್ಡೆ ಪಲ್ಯವನ್ನು ಎತ್ತಿ ದೋಸೆಯ ಮದ್ಯಕ್ಕೆ ಒಗೆದು..ದೋಸೆ ಯನ್ನು ಸುತ್ತಿಕೊಡುತ್ತಿದ್ದ ರೀತಿ.. ಚಮತ್ಕಾರವೆ ಸರಿ..
ಗರಿಗರಿ ಮಸಾಲೆ ದೋಸೆ ready...

ನಮ್ಮ ಮನೆಗಳಲ್ಲಿ ಹೀಗೇಕೆ ಮಾಡುವುದಿಲ್ಲವೆಂದು..ಹಾಗು ಇಲ್ಲಿನ ಬರುವಷ್ಟು ವಾಸನೆ ಏಕೆ ಬರುವುದಿಲ್ಲವೆಂದು ಹಲವಾರು ಬಾರಿ ಯೋಚಿಸುತ್ತಿದ್ದೆ..


ಅಷ್ಟರೊಳಗೆ ಮಿಕ್ಕವರು ಸ್ಥಳ ಹಿಡಿದು ಕೊಳ್ಳುತ್ತಿದ್ದರು... ಹೋಗಿ ನಿಂತು ಎಲ್ಲರೊಡನೆ ಹರಟುತ್ತ ತಿನ್ನುವ ಮಜವೆ ಬೇರೆ..

ಎಲ್ಲರನ್ನು ರೇಗಿಸುತ್ತ.."ಲೊ ಎಷ್ಟೊತ್ ಮಾಡ್ತ್ಯ ತಿನ್ನಕ್ಕೆ..ತಿನ್ನೋ ಬೇಗ....ಸಾಕು ಅವ್ಳನ್ನ ನೋಡಿದ್ದು...ತಿನ್ನು"..

ಹೀಗೆ ತಿಂದು ಮುಗಿಸಿ....ಕೈತೊಳೆದು ಬರುತ್ತಿದ್ದೆವು..ನಾನಂತು ಸರಿಯಾಗಿ ಕೈತೊಳೆಯಿತ್ತಿರಲಿಲ್ಲ..ಕಾರಣ ದೋಸೆಯ ವಾಸನೆ ಮತ್ತೆ ಮತ್ತೆ ಮೂಸಿ ಮೂಸಿ ಆನಂದಿಸಿವುದಾಗಿತ್ತು..ಹೆ ಹೆ ಹೆ....

ಅದರ ವಾಸನೆ ಇರುವವರೆಗು ಮೂಸುವುದು.... ಆಗ ಉಪಹಾರ ಕೇಂದ್ರದಲ್ಲಿ ದೋಸೆಗೆ 9/- ರೂ ಇತ್ತು..ಮಿಕ್ಕ ಒಂದು ರೂಪಾಯ್ನಲ್ಲಿ "bambaiya" ತಿನ್ನುವುದು... ಮತ್ತೆ ಎಲ್ಲರು 1 ರೂಪಾಯಿ ಕೂಡಿಸಿ ಕೊಳ್ಳುವುದು.. ಕೆಲವರು ಅದು ಕೆಟ್ಟದು ಎಂದು.. "ಗುಟ್ಕ" ತರದ್ದು...ಅದಕ್ಕೆಲ್ಲ ದಾಸರಾಅಗಬಾರದು ಎಂದು..ತಿನ್ನುತ್ತಿರಲಿಲ್ಲ... ನಾವುಗಳು 2 packet ಕೊಂಡು ತಿಂದು....ಅಲ್ಲಿಂದ ಕಾಲ್ತೆಗೆಯುತ್ತಿದ್ದೆವು....ತರಗತಿಗೆ... ಮುಂದಿನ ಶನಿವಾರ ಮತ್ತದೇ ಕಾರ್ಯಕ್ರಮ...

ನಾನಂತು ಕಾಯುತ್ತಿದ್ದೆ...ಎಂದು ಶನಿವಾರ ಬರುವುದೊ..ಎಂದು ಮಸಾಲೆ ದೋಸೆ ತಿನ್ನುವುದೊ..ಎಂದು... ನನಗೆ ಆಗ ಹೆಚ್ಚಾಗಿ ಹಣ ಸಿಗುತ್ತಿರಲಿಲ್ಲ...
ಪ್ರತಿ ದಿನವು ಹೀಗೆ ಹೊರಗಡೆ ತಿನ್ನುವುದಾಗಿದ್ದರೆ ಎಷ್ಟು ಚೆನ್ನಾಗಿರುವುದೆಂದು ಭಾವಿಸಿಕೊಳ್ಳುತ್ತಿದ್ದೆ.. ಹೀಗೆ ಬೇಕಾದಾಗಲೆಲ್ಲ ಹೊರಗಡೆ ಹೋಗಿ ತಿನ್ನಲು... 10 ರೂಪಯಿಗಳನ್ನು ಖರ್ಚು ಮಾಡಲು ಹಿಂದು ಮುಂದೆ ನೋಡುತ್ತಲಿದ್ದೆ... ಶನಿವಾರ ನನಗೆ ಆ 10ರೂಪಾಯಿ ಸಿಗುತ್ತಿದ್ದುರ ಕಾರಣ ತರಗತಿಗಳು ಬೇಗ ಶುರುವಾಗುವುದರಿಂದ.. ನಮ್ಮ ತಾಯಿಗೆ ತಿಂಡಿ ತಯಾರಿಸಲು ಸಾಧ್ಯವಿರುತ್ತಿರಲಿಲ್ಲ..ಹಾಗಾಗಿ ಹೊರಗಡೆ ತಿಂದುಕೊ ಎಂದು..10 ರೂಪಾಯಿ ಕೊಡುತ್ತಿದ್ದರು...

ಇಂದು ಖರ್ಚು ಮಾಡುವ ಚೈತೈನ್ಯ ಇದೆ..10 ರೂಪಯಿಗಳಿಗೆಲ್ಲ ಲೆಕ್ಕ ಇಡುವುದಿಲ್ಲ... ಹೊರಗಡೆ ಹೋದರೆ ಹಣ ಖರ್ಚು ಮಾಡಲು ಹಿಂದು ಮುಂದು ನೋಡುವುದಿಲ್ಲ.. ತಿಂಗಳ ಕೊನೆಗೆ ಒಂದಷ್ಟು ಐದಂಕೆಯ ಸಂಬಳ ನನ್ನ ಖಾತೆಗೆ ಜಮೆ ಆಗುತ್ತದೆ... ಆದರೆ ೧೦ ರೂಪಯಿಗಳನ್ನು ಜತನವಾಗಿ ಕಾಪಿಟ್ಟುಕೊಂಡು ಬಂದು ತಿನ್ನುತ್ತಿದ್ದ ರೀತಿಗೂ. ಅದರಲ್ಲಿ ನನಗೆ ಸಿಗುತ್ತಿದ್ದ ಸುಖಕ್ಕೂ.. ಇಂದು ಕೆಲ ನೂರುಗಳು..ಜೇಬಿನಲ್ಲಿ ಇದ್ದರೂ ಅದನ್ನು ಯಥೇಚ್ಚವಾಗಿ ಖರ್ಚು ಮಾಡಿದರೂ
ಅಂದಿನ ೧೦ರೂಪಯಿಗಳನ್ನ ಖರ್ಚು ಮಾಡಿ ಉಂಟಾಗುತ್ತಿದ್ದ ಸಂತೋಷ ಇಂದು ನನ್ನಲಾಗುವುದಿಲ್ಲ..

ಇಂದು ಪ್ರತಿದಿನ ಹೋಗಿ ತಿನ್ನುವ ಸಾಮರ್ಥ್ಯವಿದ್ದರೂ.. ಅಂದಿನಷ್ಟು ಕಾತರತೆ,ಉತ್ಸುಕತೆ, ಇಂದು ನನ್ನಲ್ಲಿಲ್ಲ..
ಕಾರಣ ಗೊತ್ತಿಲ್ಲ ಎಂದಷ್ಟೆ ಹೇಳಬಹುದು...

ಗೊಂದಲಮಯ "ಉಭಯಕುಶಲೋಪರಿ"...

Monday, May 7, 2007

ಇದೊಂದು ಗೊಂದಲ...ಬಹಳ ವರ್ಷಗಳಿಂದ ಕಾಡುತ್ತಿರುವ ಗೊಂದಲವಿದು... ನಿಮ್ಮ ಬಳಿ ಹಂಚಿಕೊಳ್ಳುವ ಉದ್ದೇಶದಿಂದ ನನ್ನೀ ಲೇಖನ..... ಯಾರದರು ಪರಿಚಯಸ್ಥರು ಎದುರು ಸಿಕ್ಕಾಗ ಅಥವ ಯಾವುದಾದರು ಕಾರ್ಯಕ್ರಮಗಳಿಗೆ ಹೋದಾಗ ಸಂಭಾಷಣೆಯನ್ನು ಹೇಗೆ ಶುರುಮಾಡುವೆದೆಂದು??... ಅದಕ್ಕೆ "ಉಭಯಕುಶಲೋಪರಿ" ಎಂದು ಹೆಸರು...

ಸಾಮನ್ಯವಾಗಿ ನಾನು ಹೆಚ್ಚು ಮದುವೆ-ಮುಂಜಿ ಕಾರ್ಯಕ್ರಮಗಳಿಗೆ ಹೋಗುವುದಿಲ್ಲ..... ಹೋದರೂ ಯಾವುದಾದರು ಮೂಲೆಯೊಂದರಲ್ಲಿ ಕುಳಿತಿರುತ್ತೇನೆ.... ಕರ್ಮಕ್ಕೆ ನಮ್ಮ ಸಮುದಾಯದಲ್ಲಿ ನನ್ನ ವಯೋಮಾನದವರು ಕಮ್ಮಿ... ಎಲ್ಲಾ ಕಾರ್ಯಕ್ರಮಗಳಲ್ಲೂ ಅವರು ಸಿಗುವುದಿಲ್ಲ... ಸಿಕ್ಕರೆ ಅವರೊಂದಿಗೆ ಅಂಡಲೆಯಬಹುದು...ಇಲ್ಲವಾದರೆ ಯಾವುದಾದರೊಂದು ಮೂಲೆಯಲ್ಲಿ ಒಂಟಿ ಪಿಶಾಚಿಯ ಹಾಗೆ ಬಿದ್ದಿರುತ್ತೇನೆ.... :-( ಎಷ್ಟೊ ಸಲ ತೀರ ಹತ್ತಿರದ ಸಂಬಂಧಿಗಳ "ನಾಮಕರಣಕ್ಕೆ" ಹೋಗಿರುತ್ತೇನೆ.. ಮತ್ತೆ ಯಾವಗಲಾದರೊಮ್ಮೆ ಮತ್ತೆ ಅದೇ ಮನೆಗೆ ಹೋದಾಗ..ಆ ಮಗು ಬೆಳೆದು ದೊಡ್ಡದಾಗಿರುತ್ತದೆ,ಅಲ್ಲೇ ಆಟವಾಡುತ್ತಿರುತ್ತದೆ,ಯಾರ ಮಗುವೆಂದೆ ತಿಳಿಯುವುದಿಲ್ಲ... ಹೆಸರು ಕೂಡ ನೆನಪಿರುವುದಿಲ್ಲ..ಅದೊಂದು ಫಜೀತಿ...

ಮದುವೆಗಳಿಗೆ ಹೋದಾಗ...ಯಾರಾದರು ಹಿರಿಯರು ಎದುರು ಸಿಕ್ಕಾಗ.."ಚೆನ್ನಾಗಿದ್ದೀರ??"...ಹೀಗೆ ಕೇಳುವುದು ವಾಡಿಕೆ..ಅಲ್ಲವೆ..?? ನನಗೇಕೊ ಹಾಗೆ ಕೇಳಲು ಮನಸೇ ಬರುವುದಿಲ್ಲ.. ಕೇಳಿದರೂ...ಅದೊಂದು ಸಿದ್ದ ಉತ್ತರವಿರುತ್ತದೆ..
"ಚೆನ್ನಾಗಿದ್ದೀನಿ..ನೀನು"??..ಅದಕ್ಕೆ ನಾನು ಕೂಡ."ಚೆನ್ನಾಗಿದ್ದೀನಿ" ಎನ್ನುತ್ತೇನೆ... ಇದ್ಯಾವ ಪರಿಯ ಸಂಭಾಷಣೆ...??? ನನಗಂತೂ ಅರ್ಥವಾಗುವುದಿಲ್ಲ....

ಅಲ್ಲ ಅವರು ಚೆನ್ನಾಗಿದ್ದರೆಷ್ಟು ಬಿಟ್ಟರೆಷ್ಟು??..... ಅವರು ಚೆನ್ನಾಗಿದ್ದರೆ ನಾವೇನೊ ಸಂತೋಷ ಪಡುವಹಾಗೆ...ಇಲ್ಲವಾದರೆ ನಾವೇನು ಮರುಗುತ್ತೆವೆಯೆ?? ಇಲ್ಲ... ಸುಮ್ಮನೆ ಬೂಟಾಟಿಕೆ ಮಾತುಗಳವು ಎಂದು ನನ್ನ ಅಭಿಪ್ರಾಯ... ತೀರ ಹತ್ತಿರವಾದವರ ಬಳಿ ಈ ರೀತಿಯ ಪ್ರಶ್ನೆಗಳು ಕೇಳುವುದರಲ್ಲಿ ಅರ್ಥವಿದೆ...

ನಮ್ಮ ತಾಯಿ ನನಗೆ ಆಗಾಗ ಬಯ್ಯುತಿರುತ್ತಾರೆ....ಮನೆಗೆ ಬಂದ ಅತಿಥಿಗಳನ್ನು ಸರಿಯಾಗಿ ವಿಚಾರಿಸುವುದಿಲ್ಲವೆಂದು..
ಯಾರೊ ಮದುವೆಗೊ ಮತ್ಯಾವುದಕ್ಕೊ ಕರೆಯಲು ಬಂದಿರುತ್ತಾರೆ...ಅವರನ್ನು ಹೋಗಿ ಕೇಳಳೆ..."ನೀವು ಚೆನ್ನಾಗಿದ್ದೀರ" ಎಂದು..

ನಮ್ಮ ದೊಡ್ಡಮ್ಮ ಒಮ್ಮೆ ನನ್ನ ತಾಯಿಯ ಬಳಿ ಹೇಳಿದ್ದರಂತೆ..." ನಿನ್ನ ಮಗ... ನಾನು ಮನೆಗೆ ಬಂದರೆ.... ಹೇಗಿದ್ದೀರ?? ಅಂತ ಕೂಡ ವಿಚಾರಿಸುವುದಿಲ್ಲ ಎಂದು..... ಅದೇನು ಅಂತ ಬೆಳೆಸಿದ್ದೀರೊ ನಿಮ್ಮ ಮಕ್ಕಳನ್ನ"!!!

ಅಲ್ಲ ನಮ್ಮ ದೊಡ್ಡಮ್ಮನ ಪರಿಸ್ಥಿತಿ ನನಗೆ ಗೊತ್ತು..ಅವರಿಗೆ ಮಧುಮೇಹ ಇದೆ..ಮೇಲಾಗಿ ಮಂಡಿಚಿಪ್ಪಿನ ಶಸ್ತ್ರಚಿಕಿತ್ಸೆ ಬೇರೆ ಮಾಡಬೇಕಿದೆ... ಎಲ್ಲದಕ್ಕಿಂತ ಹೆಚ್ಚಾಗಿ ಅವರಿಗೆ ವಯಸ್ಸಾಗಿದೆ... ಅವರ ಬಳಿ ಹೋಗಿ ಕೇಳಲೆ
"ದೊಡ್ಡಮ್ಮ ನೀವು ಚೆನ್ನಾಗಿದ್ದೀರ??" ಎಂದು....

ನನ್ನ ಬುದ್ದಿ ತಿಳಿದೆ ನನ್ನ ತಂಗಿ ನನ್ನನ್ನು ಛೇಡಿಸುತ್ತಿರುತ್ತಾಳೆ..ಯಾವುದಾದರು ಕಾರ್ಯಗಳಿಗೆ ಹೋದರೆ..
"ಆ ಮಗುವಿನ ಹೆಸರೇನು?? ಹೇಳು ನೋಡುವ??..."

"ಅಲ್ಲಿ ಒಡಾಡುತ್ತಿದ್ದಾರಲ್ಲ ಅವರು ಯಾರು?" ಹೀಗೆ....

ಅವಳಿಗೆ ತಮಾಷೆ... ನನಗೆ ಸಂಕಟ...

ಅದಕ್ಕೆ ಈನಡುವೆ.. ಬೇರೆ ರೀತಿಯ ಪ್ರಶ್ನೆಗಳನ್ನ ಕೇಳುತ್ತೇನೆ...

"ಎನಪ್ಪಾ ಏನು ಸಮಾಚಾರ?"

"ನಿಮ್ಮ ಕೆಲಸ ಹೇಗೆ ನಡೆಯುತ್ತಿದೆ?"...

"ದೊಡ್ಡಮ್ಮ ನಿಮ್ಮ ಆರೋಗ್ಯ ಹೇಗಿದೆ"? ;-) ಹೀಗೆ....

ಎನಾದರೊಂದು ಮಾತಾಡಲೆಬೇಕಲ್ಲವೆ..ಅದಕ್ಕೆ ಹೀಗೆ...

ಈ ಪ್ರಶ್ನೆಗಳ ಸಾಲಿಗೆ ನಿಮ್ಮ ಸಲಹೆಗಳೇನಾದರು ಇವೆಯೆ??..ಇದ್ದರೆ ಹೇಳಿ.. ಖಂಡಿತ ಸೇರಿಸಿಕೊಳ್ಳುವೆ...

'ಕುಡುಕ-DRUNKARD' ಎನ್ನುವ ಮುಂಚೆ ಒಮ್ಮೆ ಯೋಚಿಸಿ...!!!

Tuesday, May 1, 2007

ಕೆಲ ವರ್ಷಗಳ ಹಿಂದೆ ಮಾ ಹಿರಣ್ಣಯ್ಯನವರು ನಡೆಸಿಕೊಡುತ್ತಿದ್ದ "ಮಾಸ್ಟರ್" ಎಂಬ ಕಾರ್ಯಕ್ರಮ ಈಟೀವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು....ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೋತ್ತರವಿರುತ್ತಿತ್ತು....ಅದರಲ್ಲಿ ಒಬ್ಬಾತ ಹೀಗೆ ಪ್ರಶ್ನೆಯನ್ನು ಕೇಳಿದ್ದ....
"ಪ್ರತಿದಿನ ಕುಡಿದು ತೂರಾಡಿ..ಗಲಾಟೆ ಮಾಡಿಕೊಂಡು..ಹೆಂಡತಿಯನ್ನು ಹೊಡೆಯುವವನನ್ನು ’ಕುಡುಕ’ ಎನ್ನುತ್ತಾರೆ..
ಯಾರಿಗು ತೊಂದರೆ ಕೊಡದೆ,ಗಲಾಟೆ ಮಾಡದೆ ತಮ್ಮ ಮನೆಯಲ್ಲಿ ಕುಡಿದು silent ಆಗಿ ಮಲಗುವವರನ್ನು ಕೂಡ ’ಕುಡುಕ’ ಎನ್ನುತ್ತದೆ ಸಮಾಜ... ಯಾಕೆ ಹೀಗೆ??"... ಹೀಗೆ ಸಾಗಿತ್ತು ಪ್ರಶ್ನೆ.... ಪ್ರತ್ಯುತ್ತರವಾಗಿ ಮಾ ಹಿರಣ್ಣಯ್ಯನವರು ಏನು ಉತ್ತರಿಸಿದರೆಂದು ನನಗೆ ಮರೆತುಹೋಗಿದೆ...but that question was selected as 'the' best question of that episode...

ಈ ವಿಷಯವಾಗಿ ನನ್ನ ಅಭಿಪ್ರಾಯವನ್ನು ನಿಮ್ಮ ಮುಂದೆ ನಮೂದಿಸಿದ್ದೇನೆ...

ಕುಡಿಯುವವರೆಲ್ಲರನ್ನು ’ಕುಡುಕ’ ಎನ್ನುವುದಾದರೆ.... ಕೆಲಸ ಮಾಡುವವರೆಲ್ಲರು ’ಕಾರ್ಮಿಕ’ರು... ಕೆಟ್ಟ ಮಾತುಗಳನ್ನಾಡುವವರೆಲ್ಲರು ’ಪೋಲಿಗಳು’.... ಹೀಗೆ ಸಾಗುತ್ತದೆ ಪಟ್ಟಿ....

ಕಳ್ಳತನವು ಕೆಲಸವೆ...ಹಾಗೆ ನೋಡಿದರೆ ಬಹಳ ಶ್ರಮವಹಿಸಿ ಮಾಡಬೇಕಾದ ಕೆಲಸವದು...ಅವನನ್ನು ’ಶ್ರಮಿಕ’,’ಕಾರ್ಮಿಕ’..ಎನ್ನಲಾಗುವುದೆ??....ಯೋಚಿಸಿ ನೋಡಿ... ನಾ ಹೇಳಬಯಸುವುದು ಇಷ್ಟೆ... "ಕುಡಿಯುವವರೆಲ್ಲ ಕುಡುಕರಲ್ಲ".....

ಆದರೆ ಕುಡಿತ ಚಟವಾಗಬಾರದಷ್ಟೆ... ಅದು ನನ್ನ ಕಳಕಳಿಯ ಪ್ರಾರ್ಥನೆ... :-)

ನಮ್ಮ ಸಮಾಜವೆ ವಿಚಿತ್ರ.... ಮದುವೆಗೆ ಗಂಡು ಗೊತ್ತು ಮಾಡುವಾಗ.. ಹುಡುಗ ಕುಡಿಯುತ್ತಾನೆಯೆ..ಸಿಗರೆಟ್ ಸೇದುತ್ತಾನೆಯೆ.. ಎಂದೆಲ್ಲ ಕೇಳಿ ತಿಳಿದುಕೊಳ್ಳುತ್ತಾರೆ.... ಅವನು ಕುಡಿತ..ಇತ್ಯಾದಿ ಇತ್ಯಾದಿ ಗಳೆಲ್ಲವನ್ನು ಮಾಡದಿದ್ದರೆ..ಅವನು ಸಕಲ ಸದ್ಗುಣ ಸಂಪನ್ನ... ಇಲ್ಲವಾದರೆ ನೀಚ..ದೂರ್ತ... ಹೀಗೆ...

ಕುಡಿತವನ್ನು ಮಾನದಂಡವನ್ನಾಗಿ ಇಟ್ಟು ನೋಡುತ್ತದೆ ಸಮಾಜ..... ಅದು ತಪ್ಪೆಂದು ನನ್ನ ಭಾವನೆ...

ಯಾವುದೆ ಚಟವಿಲ್ಲದೆ...ಜೀವನದ ಅಧೋಗತಿಗೆ ಇಳಿದಿರುವವರನ್ನು ನಾ ಕಂಡಿದ್ದೇನೆ...

ನನ್ನ ಪ್ರಕಾರ ಕುಡಿಯುವವರು ಮೂರು ವಿಧ.
೧)ತಮ್ಮ ತೆವಲಿಗಾಗಿ ಕುಡಿಯುವವರು... ಕೂತೂಹಲಿಗಳು.. ;-)
೨)ಜೀವನದ ಕಷ್ಟ ಕೋಟಲೆಗಳನ್ನು ಕ್ಷಣವಾದರೂ ಮರೆಯಲೋಸುಗ ಕುಡಿಯುವವರು...
೩)ಕೊನೆಯವವರು ಅದನ್ನೆ ಚಟವಾಗಿಸಿಕೊಂಡವರು..ಇವರಿಗೆ ಕುಡೀಲಿಕ್ಕೆ ಕಾರಣವೇನು ಬೇಕಾಗಿರುವುದಿಲ್ಲ....

ನಾ ಹೇಳಬಯಸುವುದೆನೆಂದರೆ.. ’ಕುಡಿಯುವವರೆಲ್ಲ ಕುಡುಕರಲ್ಲ’... ಹಾಗೆಂದು ಅವರನ್ನು ’ಕುಡುಕರೆಂದು’ ಕರೆಯುವುದು ಸಲ್ಲ.. :-)

ಕುಡಿತವನ್ನೆ ಚಟವಾಗಿಸಿಕೊಂಡು... ತನಗೂ ತನ್ನನ್ನು ನಂಬಿಕೊಂದವರನ್ನು ತೊಂದರೆಗೀಡು ಮಾಡುವವರನ್ನು ’ಕುಡುಕರೆಂದು’ ಕರೆಯಿರಿ...ಸಾಧ್ಯವಾದರೆ ನಾಲ್ಕು ಬುದ್ದಿ ಮಾತು ಹೇಳಿ.. ಕೇಳಲಿಲ್ಲವೆಂದರೆ ನಾಲ್ಕು ವದೆಗಳು ಕೊಟ್ಟರೂ ಸರಿಯೆ...ತಪ್ಪಿಲ್ಲ....

"ಜಾಣನಿಗೆ ಮಾತಿನ ಪೆಟ್ಟು..ದಡ್ಡನಿಗೆ ದೊಣ್ಣೆ ಪೆಟ್ಟು" ಎಂದು ಕೇಳಿಲ್ಲವೆ..???
ನೀವು ಕೇಳದಿದ್ದರೇನು..ನಾನಂತೂ ಕೇಳಿದ್ದೇನೆ.. ;-)

ಯಾರಿಗೂ ತೊಂದರೆ ಕೊಡದೆ.. ಹಿರಿಯರಿಗೆ ತಿಳಿಸದೆ ;-)... ಅದನ್ನು ಚಟವಾಗಿಸಿಕೊಳ್ಳದೆ ಕುಡಿಯಲು ಮನಸಿದ್ದರೆ ಕುಡಿಯಿರಿ... ಎಷ್ಟೆ ಮಾಡಿದರೂ..ಏನೇ ಆಟವಾಡಿದರೂ..ನಿಮ್ಮ ಪರಿಧಿಯನ್ನು ಅರಿಯುವುದು ಉತ್ತಮ..

ಮೇಲೆ ಹೇಳಿದ ವಿಷಯಗಳು ನಿಮಗೆ ಒಪ್ಪಿಗೆಯಾಗದಿದ್ದಲ್ಲಿ...ನನ್ನ ನಿಲುವು ತಪ್ಪಾಗಿದ್ದಲ್ಲಿ... ಮುಕ್ತ ಚರ್ಚೆಗೆ ಆಹ್ವಾನವೀಯುತ್ತೇನೆ... with or without drinks ;-)

ವಿಶಾಲಮನೋಭಾವದವರಾಗಿ ಚರ್ಚೆಯಲ್ಲಿ ಪಾಳ್ಗೊಳ್ಳುತ್ತೀರೊ...ಅಥವಾ.."ಥೂ..!! ಕಚಡ ನನ್ಮಗ ಎನೇನೊ ಗೀಚಿದ್ದಾನೆ"..ಎಂದು ಮೂಗು ಮುಚ್ಚಿ.. ನನ್ನ ನಿಲುವಿಗೆ ವಿರುದ್ದವಾಗಿ ಮಕಾಡೆ ಮಲಗುತ್ತೀರೊ??

ನಿರ್ಣಯ ನಿಮಗೆ ಬಿಟ್ಟದ್ದು... :-)