ನಾನು ಬ್ರಹ್ಮ ಮತ್ತು ಮುಖ್ಯಮಂತ್ರಿ - ಭಾಗ 4

Monday, October 8, 2007

"ಬ್ರಹ್ಮ..... ಕೇಳಿಸಿಕೋ..ನನ್ನ ಪ್ರಣಾಳಿಕೆಯನ್ನು..ಬಹಳ ಸುಧೀರ್ಘವಾಗಿರುತ್ತದೆ ಎಂದನಿಸುತ್ತಿದೆ ನನಗೆ.."

ರಾಮರಾಜ್ಯವನ್ನು ಕಟ್ಟುವ ಕನಸು ನನ್ನದು...ನೀ ಕೊಡುವ ವರವನ್ನು ಜನೋಪಯೋಗಿ ಕಾರ್ಯಗಳಿಗೆ ಉಪಯೋಗಿಸುವ ಹಂಬಲ ನನ್ನದು..ನಿನ್ನ ಆಶೀರ್ವಾದವಿರಲಿ.... ಎಂದಿನಂತೆ ತಪ್ಪಿದರೆ ಎಚ್ಚರಿಸು ಬ್ರಹ್ಮ...Thanks for the Coffee."

ಬ್ರಹ್ಮ ನಸುನಗುತ್ತಾ..." ಶುರುಮಾಡು ನಿನ್ನ ಪ್ರಣಾಳಿಕೆಯನ್ನು....ಕೇಳುವ ಕಾತರ ನನ್ನದು..."

ಬ್ರಹ್ಮ ವ್ಯಕ್ತಿಯೊಬ್ಬ ಸಮಾಜದಲ್ಲಿ ಗುರುತರವಾದ ಬದಲಾವಣೆಗಳನ್ನು ತರಬೇಕಾದರೆ....ಬುದ್ದಿಶಕ್ತಿ, ಹಣ, ಅಧಿಕಾರವಿರಬೇಕು...ವಿಪರ್ಯಾಸವೆಂದರೆ ನಮ್ಮ ರಾಜ್ಯದ ದೊಡ್ಡ ದೊಡ್ಡ ಸ್ಥಾನಗಳ್ಳಿರುವ ಅಂದರೆ ನಮ್ಮ ಮಂತ್ರಿ ಮಹೋದಯರು ಅನಕ್ಷರಸ್ತರು.. ಹಾ! ಹಾಗೆಂದ ಮಾತ್ರಕ್ಕೆ ಅನಕ್ಷರಸ್ತರೆಲ್ಲರು ಬುದ್ದಿ ಇಲ್ಲದಿರುವರಲ್ಲ....ಆದರೆ ನಮ್ಮ ಮಂತ್ರಿಗಳಿಗೆ ಇನ್ನೊಬ್ಬರನ್ನು ಕುರ್ಚಿಯಿಂದ ಕೆಳಗಿಳಿಸುವ ಹುನ್ನಾರದಲ್ಲೆ ತಮ್ಮೆಲ್ಲ ಬುದ್ದಿಶಕ್ತಿಗಳನ್ನು ವಿನಿಯೊಗಿಸುತ್ತಾರೆ,,,,ಭ್ರಷ್ಟಾಚಾರದಲ್ಲಿ ಕೈಗೂಡಿ ಹಣಗಳಿಸುತ್ತಾರೆ..... ಬರಿ ರೌಡಿ ಶೀಟರ್ಗಳು, ದುರಹಂಕಾರಿಗಳೇ, ಬುದ್ದಿ ಮಂಕು ಬಡಿದಿರುವ ತರಲೆಗಳೆ ತುಂಬಿಕೊಂಡಿದೆ ನಮ್ಮ ಇಂದಿನ ರಾಜ ಕಾರಣ...."

ಬ್ರಹ್ಮ ನಾನು ಯುವಜನತೆ ಯಲ್ಲಿ ಭರವಸೆಯನ್ನು ಹೊಂದಿದ್ದೀನೆ....ಯುವಜನತೆ ಏನು ಬೇಕಾದರು ಮಾಡಬಲ್ಲರು...
ಯಾವುದೇ ಕಾಲೇಜಿನ ತಡೆದು ಕೇಳಿದರೆ "ಏನಪ್ಪಾ...ಎನಾಗಬೇಕೆಂದಿರುವೀ ನೀ..." ಎಂದರೆ...

"ಡಾಕ್ಟರ್, ಎಂಜಿನಿಯರ್...ಇತ್ಯಾದಿ ಇತ್ಯಾದಿ...ಯಾವೊಬ್ಬನು ನಾನು ರಾಜಕಾರಣಿಯಾಗುವೆ ಎನ್ನುವುದಿಲ್ಲ...ನಾನು ಮಂತ್ರಿಯಾಗುವೆ..ಎನ್ನುವುದಿಲ್ಲ...ನಾನು ಸೈನ್ಯಕ್ಕೆ ಸೇರುತ್ತೇನೆ ಎನ್ನುವುದಿಲ್ಲ...ಎಲ್ಲರು ಅವರವರ ಅನೂಕೂಲಗಳನ್ನೆ ನೋಡಿಕೊಳ್ಳುವವರೆ..."

"ಬ್ರಹ್ಮ....ನಾನು ಅಧಿಕಾರಕ್ಕೆ ಬಂದಕೂಡಲೇ...ಈ ಕೆಳಕಂಡ ಸೂತ್ರಗಳನ್ನು ಅಳವಡಿಸಲು ಇಷ್ಟ ಪಡುತ್ತೇನೆ.."

1)ಯಾವುದೇ ಮಂತ್ರಿಯಾಗುವವನ ವಯಸ್ಸು 30 ದಾಟಿರಬಾರದು.....ಮುಖ್ಯಮಂತ್ರಿಯಾಗುವವನ ವಯಸ್ಸು 35 ದಾಟಿರಬಾರದು..
2)ಮಂತ್ರಿಯಾಗಬಯಸುವವನು ಕನಿಷ್ಟಪಕ್ಷ double graduate ಆಗಿರಬೇಕು..."
3)ಆತ ಪ್ರತಿಭಾವಂತನಾಗಿರಬೇಕು...
4)ರೌಡಿ ಲಿಸ್ಟ್ನಲ್ಲಿರಬಾರದು, ಅವನ ಚಾರಿತ್ರವಂತನಾಗಿರಬೇಕು...
5)ಆ ಕ್ಷೇತ್ರದ ಜನರು ಆತನ ಬಗ್ಗೆ ಒಳ್ಳೆ ಅಭಿಪ್ರಾಯವನ್ನು ಹೊಂದಿರಬೇಕು....
6)ಅವನಿಗೆ ನಾಯಕತ್ವದ ಗುಣಗಳಿರಬೇಕು...
7)ಎಲ್ಲಕಿಂತ ಹೆಚ್ಚಾಗಿ ಆತನಲ್ಲಿ ಜನರಿಗೆ ಒಳ್ಳೆಯದು ಮಾಡುವ ತುಡಿತ, ಹಂಬಲವಿರಬೇಕು...

ವಯಸ್ಸಾದವರನ್ನು Jury ವಿಭಾಗಕ್ಕೆ ಹಾಕಬೇಕು...50 ದಾಟಿದ ಮಂತ್ರಿಗಳೆಲ್ಲ.. ತಮ್ಮ ಅನುಭವಗಳನ್ನು
ಯುವತೆಗೆ ಮಾರ್ಗದರ್ಶನವೀಯುವುದಲ್ಲಿ ವಿನಿಯೋಗಿಸಬೇಕು.. ಅಂದರೆ ಯಾವೊಬ್ಬನು ಮಂತ್ರಿಯಾಗಳು ಇಚ್ಚಿಸುವವನ ವಯಸ್ಸು 50ಕ್ಕೆ ಮೆಲೆ ದಾಟಿರಬಾರದು... ಮಂತ್ರಿಯಾಗಳು ಅರ್ಹತೆಯುಳ್ಳವವನಿಗೆ ಕೇವಲ ಜನಬಲವೊಂದಿದ್ದರೆ ಸಾಲದು...
IAS,IPS ಮಟ್ಟದ ಪರೀಕ್ಷೆಗಳಿರಬೇಕು... ರಾಜಧರ್ಮ, Political, ಕ್ಲಿಷ್ಟ ಪರಿಸ್ಥಿಗಳನ್ನು ಎದುರಿಸುವ
ತಂತ್ರಗಾರಿಕೆಯನ್ನು, ಸ್ಥೈರ್ಯವನ್ನು ಪರೀಕ್ಷಿಸುವಂತಾಗಿರಬೇಕು.... ಪಾರದರ್ಶಕ ವ್ಯವಸ್ಥೆ ನನ್ನ ಗುರಿ....

ಮುಖ್ಯಮಂತ್ರಿಯಾಗುವವನಿಗೆ ಇದೆಲ್ಲಾ ಬದಲಾವಣೆಗಳು ಮಾಡುವ ಅಧಿಕಾರವಿರುತ್ತದೋ ಇಲ್ಲವೋ, ನನಗಂತೂ ಬೇಕು..

ಇನ್ನು ಮಂತ್ರಿಗಳನ್ನು ಆರಿಸುವ ಜನತೆ...ಮತದಾನ ಮಾಡುವ ಮಹಾಜನಗಳು....ಮತದಾನಕ್ಕೊಂದು ಒಂದಷ್ಟು ಕಟ್ಟಳೆಗಳನ್ನು ವಿಧಿಸುತ್ತೇನೆ... ನಾವು ಹಲವಾರು ಬಾರಿ ವೃತ್ತಪತ್ರಿಕೆಗಳಲ್ಲಿ ನೋಡುತ್ತಿರುತ್ತೇವೆ.. ಕೇವಲ ಶೇಕಡ.. 45% 65% ಮತದಾನವೆಂದು..... ಮುಂದೆ ಹೀಗೆ ಆಗಬಾರದು...ಕನಿಷ್ಟ ಪಕ್ಷ 9೦% ಇರಬೇಕು...ವಿಪರ್ಯಾಸವೆಂದರೆ ಹಳ್ಳಿಗಳಲ್ಲಿ ದುಡ್ಡಿಗೆ ಮತವನ್ನು ಮಾರಿಕೊಂಡುಬಿಟ್ಟಿರುತ್ತಾರೆ..ಹಳ್ಳಿ ಮುಗ್ದರಿಗೆ ಅವರ ಮತವು ಎಷ್ಟು ಮೌಲ್ಯವುಳ್ಳದ್ದು ಎಂದು... ಇನ್ನೊಂದು ಅಂಶವೆಂದರೆ ಇದರಲ್ಲಿ ಹೆಚ್ಚಾಗಿ ಯುವಕರು ಯುವತಿಯರು ಪಾಳ್ಗೊಳ್ಳದಿರುವುದು.....ಇದೊಂದು ವಿಪರ್ಯಾಸವೇ ಸರಿ... ಎಲ್ಲ ಯುವಜನತೆ ಪಾಳ್ಗೊಳ್ಳಲೇಬೇಕೆಂಬ ಕಟ್ಟಳೆ ವಿಧಿಸುತ್ತೇನೆ... ಇನ್ನೊಂದು ವಿಚಾರವೆಂದರೆ ಮತದಾನಕ್ಕಿಂತ ಮುಂಚೆ ಆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ತಿಗಳ ಪೂರ್ವಾಪರವನ್ನು ತಿಳಿಕೊಂಡಿರುವಂತಾಗಿರಬೇಕು..ಇದಕ್ಕಾಗಿ ಆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ತಿಗಳು ತಮ್ಮ ಕಲ್ಯಾಣಗುಣಗಳನ್ನು ಮುಂಚೆಯೇ ಜನರ ಮುಂದೆ ವಿವರಿಸಬೇಕಾಗಿರತ್ತದೆ..... ಇದೆಲ್ಲ ಕಡ್ಡಾಯವಾಗಿ ಪಾಲಿಸುವಂತೆ ಆದೇಶವನ್ನು ಹೊರಡಿಸುತ್ತೇನೆ...ಆರಂಭದಲ್ಲಿ ಕಷ್ಟವಾಗಬಹುದು..... ಆದರೆ ಅಸಾಧ್ಯವಂತು ಅಲ್ಲ.... ದೇಶದ ಅಭಿವೃದ್ದಿಯ ಕನಸು ಇದು...ಆಗಲೇಬೇಕು... ಆಬ್ದುಲ್ ಕಲಾಂ ಹೇಳುವಂತೆ ನಾವು 2020 ಹೊತ್ತಿಗೆ ಖಂಡಿತಾ ಅಭಿವೃದ್ದಿಹೊಂದಿದ ದೇಶವಾಗಿರುತ್ತದೆ ಎನ್ನುವ ಭರವಸೆ ನನ್ನದು.....

ಇನ್ನು ಪಕ್ಷಗಳ ವಿಚಾರ....ನಮ್ಮ ದೇಶದಲ್ಲಿ ಕಾಲಿಗೊಂದು ಕೊಸರಿಗೊಂದು ಎನ್ನುವಂತೆ ರಾಜಕೀಯ ಪಕ್ಷಗಳಿವೆ...
ಈ ಪಕ್ಷಗಳ ಸದ್ಯದ ಕೆಲಸವೆಂದರೆ ಅಧಿಕಾರದಲ್ಲಿರುವವರನ್ನು ಕೆಳಗಿಳಿಸುವುದು...ವಿರೋಧಪಕ್ಷವೆಂದರೆ ಅದರ ಕೆಲಸವೆಂದರೆ ಕುರ್ಚಿಯಲ್ಲಿರುವವರನ್ನು ಕೆಳಗಿಳಿಸುವುದು...ಇಲ್ಲಸಲ್ಲದ ಆರೊಪಗಳನ್ನು ಮಾಡಿಕೊಂಡು...

ನಾನು ಅಧಿಕಾರಕ್ಕೆ ಬಂದ ಕೂಡಲೆ ಎರಡು ಪಕ್ಷಗಳ ಹೊರತಾಗಿ ಬೇರೆಲ್ಲ ಪಕ್ಷಗಳನ್ನು ನಿರ್ನಾಮಮಾಡಲು ಆದೇಶ ಹೊರಡಿಸುತ್ತೇನೆ.... ಒಂದು ಆಡಳಿತ ಪಕ್ಷ ಇನ್ನೊಂದು ವಿರೋಧ ಪಕ್ಷ ....ಬೇರಾವ ಪಕ್ಷವು ಅಸ್ಥಿತ್ವದಲ್ಲಿರಬಾರದು...ಮಂತ್ರಿಗಳಾದವರು ಆಡಳಿತಪಕ್ಷದಲ್ಲಿರಬೇಕು ಅಥವಾ ವಿರೋಧಪಕ್ಷದಲ್ಲಿರಬೇಕು...

ನಾನು ಮಧ್ಯ ತಡೆದು..."ಬ್ರಹ್ಮ ಏನು ತುಂಬಾ silent ಆಗಿದ್ದೀಯ... ಎನನ್ನಿಸುತ್ತಿದೆ ನಿನಗೆ"..

"ನಾನು ಹುಚ್ಚನಿಗೆ ವರ ನೀಡುತ್ತಿದ್ದೀನೆ ಎಂದನಿಸುತ್ತಿದೆ ನನಗೆ..ಇಷ್ಟೊಂದು ಬದಲಾವಣೆಗಳು ಸಾಧ್ಯವೆ ಮಗೂ..ನಿನ್ನ ಕನಸು ಬಹಳ ದೊಡ್ಡದಿದೆ...ಆದರೆ ಒಂದಂತೂ ಹೆಳಬಲ್ಲೆ ನಾನು ದಾಸ್ ಗುಪ್ತನ ಮೇಲೆ ವಿಜಯವನ್ನು ಸಾಧಿಸಬಹುದು....ನಿನ್ನ ಪ್ರಣಾಳಿಕೆ ಮುಗಿಯಿತೋ..." ಎಂದ..

"ಇಲ್ಲ ಬ್ರಹ್ಮ..ಕನಸುಗಳು ಬೆಟ್ಟದಷ್ಟಿವೆ....ಇದಕ್ಕೆ ನನಗೆ ನಿನ್ನ ವರ ಬೇಕೇ ಬೇಕು...ಹೇಗಿದ್ದರೂ ನೀನೆ ಹುಡುಕಿಕೊಂಡು ಬಂದಿರುವೆ...ಇದನ್ನು ವೃಥಾ ವ್ಯರ್ಥ ಮಾಡಲು ನನಗಿಷ್ಟವಿಲ್ಲ...ಇದಕ್ಕೆ ನನಗೆ ಅಪಾರ ಹಣ
ಮತ್ತು ಇಷ್ಟು ಬದಲಾವಣೆಗಳನ್ನು ಸಾಧ್ಯವಾಗಿಸುವ ಅಧಿಕಾರ ಬೇಕು..., ಕೊಡುವೆಯಾ??"

ಬ್ರಹ್ಮ...."ಖಂಡಿತವಾಗಿ...ಬೇಗ ಮುಗಿಸು ನಿನ್ನ ಪ್ರಣಾಳಿಕೆಯನ್ನು.....ಬಹಳ ಹೊತ್ತಾಯಿತು ನಾನು ಬಂದು..."

ಬ್ರಹ್ಮ ಎಲ್ಲಿಂದ ಬಂದ...ಮತ್ತೆ ಎಲ್ಲಿಗೆ ಹೋಗುವ...ನಾನು ಎಲ್ಲಿದ್ದೇನೆ....ಎನ್ನುವ ಭಾವ ಮತ್ತೆ ಕಾಡತೊಡಗಿತು...

-----(ಮುಗಿದಿಲ್ಲ)

ನನ್ನ ಶತ್ರು.......

Thursday, October 4, 2007

ದಿವ್ಯಾ : ಹೂ! ಶ್ರೀಧರ್ ನನ್ನ ಪಾಡು ನನ್ನ ಶತ್ರುವಿಗೆ ಮಾತ್ರ ಬರ್ಬೇಕು....

ನಾನು : ಹೋ! ನಿಂಗೆ ಶತ್ರುಗಳು ಇದ್ದಾರ??

ದಿವ್ಯಾ : ನನಗೆ ಗೊತ್ತಿರೋ ಮಟ್ಟಿಗೆ ಯಾರು ಇಲ್ಲ..ಇದ್ರೆ ಅವ್ರಿಗೆ ಬರ್ಬೇಕು ಈ ಪಾಡು...

ನಾನು : ನನಗೊಬ್ಬ ಶತ್ರು ಬೇಕು....

ದಿವ್ಯಾ : ನನಗೂ ಕೂಡ!...



ಒಳ್ಳೇ ಚಾಕೋಲೇಟ್ ಕೇಳಿದ ಹಾಗೆ ಇಬ್ಬರು ಸಮ್ಮತಿಸಿದೆವು..ಶತ್ರುವಿಗಾಗಿ..ಆ ಕ್ಷಣದಲ್ಲಿ ನನಗೊಬ್ಬ ಶತ್ರು ಬೇಕಾಗಿತ್ತು...ನನ್ನ ಶತ್ರುವಿಗೆ ಇರಬೇಕಾದ ಗುಣಲಕ್ಷಣಗಳನ್ನು ಆಕೆಯ ಮುಂದೆ ವಿವರಿಸುತ್ತಾ ಹೋದೆ..ನಿಮಗೂ ನನ್ನ ಶತ್ರುವಾಗುವ ಅರ್ಹತೆಯಿದ್ದಲ್ಲಿ ಅರ್ಜಿ ಗುಜರಾಯಿಸಬಹುದು...ತುಂಬು ಹೃದಯದ ಸ್ವಾಗತವೀಯುತ್ತೇನೆ..ಅದಕ್ಕಾಗಿ ಈ ಲೇಖನ....


"ಶ್ರೀಧರ್, ಅವನಾ ತುಂಬಾ soft -u, silent -u, innocent -u, ;-).ತುಂಬ helpful!! ಕಣಪ್ಪಾ ಅವನು..."(ಯಾರು ಹೇಳಿದ್ದು??)

"ಮಚ್ಚಿ, ನೀನು ನಂಗೆ ಹೆಲ್ಪ್ ಮಾಡ್ತೀಯ ಅಂದುಕೊಂಡಿದ್ದೆ..ನೀನು ಹಿಂಗಂದ್ಬಿಟ್ರೆ ಹೇಗೆ?? "(ಯಾಕ್ ಅನ್ಬಾರ್ದು??)

"ಶ್ರೀಧರ್, ನಿನ್ನ ನೋಡಿದ್ರೆ ನನ್ನ ತಮ್ಮನ ನೆನಪಾಗುತ್ತದೆ, ಅವನೂ ಸಹ ನಿನ್ನ ಹಾಗೆ silent, soft(ಅದಿಕ್ಕೆ??)

ನನಗೆ ಬದಲಾವಣೆ ಬೇಕಾಗಿದೆ....ಸಾಕಾಗಿದೆ..... ಅದಕ್ಕಾಗಿ ನನಗೊಬ್ಬ ಶತ್ರು ಬೇಕು :-) :-).. ಇಲ್ಲಿಂದಲೇ ಬದಲಾವಣೆ ಶುರುವಾಗಲಿ...ನಾನೂ ಸಹ ಜನರನ್ನು ದ್ವೇಷಿಸಬಲ್ಲೆ ಎಂದು ತೋರಿಸಬೇಕು... ;-) ನನ್ನ ಶತ್ರುವಿಗೆ ಬೇಕಾದ ಗುಣಲಕ್ಷಣಗಳನ್ನು ಕೆಳಗೆ ನಮೂದಿಸಿದ್ದೇನೆ..ನೋಡಿ...

1) ಅವನನ್ನು ನಾನು ಪ್ರತಿದಿನವೂ ನೋಡಬೇಕು...

2) ಅವನ ಪ್ರತಿ ಚಲನವಲನಗಳ ಮಾಹಿತಿ ನನಗೆ ಸಿಗುವಂತಾಗಿರಬೇಕು..

3) ಅವನು ನನ್ನೆದುರಿಗೆ ನಡೆದು ಹೋಗುತ್ತಿದ್ದರೆ ಮನಸಾರೆ ಬೈಯ್ಯಬೇಕು..

4) ಅವನೇನಾದರು ಸಣ್ಣದೋ ದೊಡ್ಡದೋ ಸಾಧನೆ ಅಂತೇನಾದರು ಮಾಡಿದರೆ ನಾನು ಇತರರೊಂದಿಗೆ " ಅದೇನು ಮಹಾ! ನಾನೂ ಸಹಾ ಮಾಡಬಲ್ಲೆ...ಎನ್ ಅವನೊಬ್ಬನಿಗೆ ನಾ ಆಗೋದು" ಎಂದು ಕೊಚ್ಚಿಕೊಳ್ಳಬೇಕು...

5) ಅವನ ಏಳು ಬೀಳುಗಳಿಗೆ ನಾನು ಜವಾಬ್ದಾರನಾಗಿರಬಾರದು...

6) ಅವನ ದಾರಿಯಲ್ಲಿ ಬಿದ್ದರೆ ಹುಚ್ಚಾಪಟ್ಟೆ ನಗಬೇಕು.... ಕಚಡ ನನ್ಮಗ ಆಯ್ಕೊಂಡ...ಹಹ್ಹಹ್ಹಾ... ಎಂದು

7) ನನ್ನ ಪ್ರತಿ ಏಳಿಗೆಗು ಅವನು ಹೊಟ್ಟೆ ಉರಿದುಕೊಳ್ಳಬೇಕು....

8) ಅವನು ಬರಗೆಟ್ಟು ಹೋಗಿ ನನ್ನ ಬಳಿ ಸಹಾಯ ಕೇಳಲು ಬಂದರೆ "ನನ್ಮಗನೆ ಎದ್ದ್ ಹೋಗೋಲೋ....ಅನ್ನಬೇಕು"..ಆಗ ಅವನ ಪೆಚ್ಚು ಮುಖವನ್ನು ನಾನು ನೋಡಬೇಕು...

9) ನಾನು ಅವನಿಗಿಂತ ಮುಂಚೆ ಸಾಯಬೇಕು..

10) ಮೇಲ್ಕಂಡ 9 ಸೂತ್ರಗಳಂತೆ ಆತನೂ ಸಹ ನನ್ನ ಬಗ್ಗೆ ಇದೇ ಭಾವವನ್ನು ಹೊಂದಿರಬೇಕು....

ಮೇಲೆಲ್ಲಾ ಬರೀ "ಅವನು ಅವನು" ಅಂತ ಸಂಭೋದಿಸಿದ್ದೇನೆ....ಅವಳೂ ಸಹ ಆಗಬಹುದು..ಮಹಿಳಾಮಣಿಗಳಿಗು ಸಹ ಅವಕಾಶವಿದೆ... :-)

ಇಂತಹ ವಿಶೇಷ ಗುಣಗಳೊಂದಿರುವ ವ್ಯಕ್ತಿ ನನಗೆ ದೊರೆಯುತ್ತಾನೋ ಇಲ್ಲವೋ ಗೊತ್ತಿಲ್ಲ.... ಅಂತಹವರು ಸಿಕ್ಕರೆ ಜೀವನ ಮಜಾವಾಗಿರುತ್ತದೆ..

10ಕ್ಕೆ 10 ಬರಬೇಕೆಂದಿಲ್ಲ....those who will manage to get more than 6 will be eligible to become my enemy.... ಆಗುವಿರಾ??