ಒಲವೇ ಒಲವೇ ನನ್ನ ಪ್ರೀತಿಯ ಒಲವೇ
ಸೋತು ಬಂದೆ ನಿನ್ನ ಚೆಲುವಿಗೆ
ಮೆಚ್ಚಿ ಬಂದೆ ನಿನ್ನ ಒಲವಿಗೆ
ನಿನ್ನ ಕಂಗಳೇ ನನ್ನ ಬಾಳಿನ ದೀಪ
ನಿನ್ನ ಪ್ರೀತಿಯೇ ನನ್ನ ಜೀವನದ ರೂಪ
ಪ್ರೀತಿಸು ಪ್ರೀತಿಸು ಎಂದು ಗೋಗರೆಯಲಾರೆ
ನೀನೇ ಪ್ರೀತಿಸು ನನ್ನ ಪ್ರೀತಿಯ ಆಳ ಅರಿತಾಗಲೇ
ನೀನಿಲ್ಲದೆ ನಾ ಬದುಕಲಾರೆ ಎಂದು ಹೇಳಲಾರೆ
ನೀ ಜೊತೆಗಿದ್ದರೆ ಬಾಳು ಸುಂದರ ಎಂದು ಹೇಳಬಲ್ಲೆ
ಕನಸಲೂ ನೀನೇ ಮನಸಲೂ ನೀನೇ ಎಂದು ಬಣ್ಣಿಸಲಾರೆ
ನನ್ನದೇ ಆದರ್ಶಗಳ ಮಧ್ಯ ನಿನ್ನ ಪ್ರೀತಿಯನ್ನ ಹುಡುಕುತ್ತಾ ಬಂದೆ
ಸಾಧ್ಯವಿದ್ದಷ್ಟು ನಿನಗಾಗಿಯೇ ಕಾಯುವೆ ಓ ಕನಸಿನಬಾಲೆ
ಇದು ಪ್ರೇಮಕವಿತೆಯಲ್ಲ ಚೆಲುವೆ ನನ್ನ ನಿಜ ಜೀವನದ ವಾಸ್ತವ.....
--ರಶ್ಮಿ.ಆರ್
ಕೃಪೆ : http://samarasa.blogspot.com/2007/08/blog-post.html
ಬಡಿಸುವ ಬಳಗ
1 week ago
2 comments:
ಬಾಲೆ??
ನಮಸ್ಕಾರ ರಶ್ಮಿ......
ಕವಿತೆಯ ಬಾವವನ್ನು ಚೆನ್ನಾಗಿ ಬಿಂಬಿಸಿದ್ದಿರಾ ಎಲ್ಲು ಹಾದಿ ತಪ್ಪಿಲ್ಲ
ಒಲವೇ ಒಲವೇ ನನ್ನ ಪ್ರೀತಿಯ ಒಲವೇ
ಸೋತು ಬಂದೆ ನಿನ್ನ ಚೆಲುವಿಗೆ
ಮೆಚ್ಚಿ ಬಂದೆ ನಿನ್ನ ಒಲವಿಗೆ
ನಿನ್ನ ಕಂಗಳೇ ನನ್ನ ಬಾಳಿನ ದೀಪ
ನಿನ್ನ ಪ್ರೀತಿಯೇ ನನ್ನ ಜೀವನದ ರೂಪ
ಈ ಮೇಲಿನ ಸಾಲುಗಳಂತು ಅಮೃತದಷ್ಟ್ಟು ಸವಿಯಾಗಿದೆ.ಅವುಗಳ ಭಾವರ್ಥವಂತು ಅರ್ಥಪೂರ್ಣವಾಗಿದೆ..
ಆದರೆ ನೀನು ಯಾಕೆ ಬಾಲೆ ಅಂತ ಪ್ರಸ್ತಾಪಿಸಿದ್ದಿಯಾ?
Post a Comment