ರಿಸೆಷನ್ ಜಾರಿಯಲ್ಲಿದೆ...

Tuesday, May 19, 2009


ಹೌದು ಸದ್ಯಕ್ಕೆ ರಿಸೆಷನ್ ಜಾರಿಯಲ್ಲಿದೆ, ಅಮೇರಿಕಾದ 'ಅಣ್ಣ' ಸೀನಿದರೆ ಇಲ್ಲಿನವರಿಗೆಲ್ಲಾ ಚಳಿ ಜ್ವರ. ಇಡೀ ವಿಶ್ವವೇ ಆರ್ಥಿಕ ಹಿಂಜರಿತದ 'ಜರ್ಕ್' ನಲ್ಲಿರುವಾಗ ನಮ್ಮ ನಿಮ್ಮಂತಹ ಶ್ರೀಸಾಮನ್ಯರು ಏನು ತಾನೆ ಮಾಡಿಯಾರು? ಒಂದಾನೊಂದು ಕಾಲದಲ್ಲಿ software ಉದ್ಯೋಗಿಗಳು ಯಾವಾಗೆಂದರೆ ಆಗ ವಿಮಾನ ಹತ್ತಿ ಪರದೇಶಕ್ಕೆ ಹೋಗಿ ಬರುತ್ತಿದ್ದರು, ಈಗ ಯಾವಾಗ ಬೇಕಾದರೂ 'ಪಿಂಕ್ ಸ್ಲಿಪ್' ಪಡೆದು ಮನೆಗೆ ಬರುವಂತಾಗಿದೆ. 'ಬಯಸದೇ ಬರುವ ಭಾಗ್ಯ' ವನ್ನು ತಪ್ಪಿಸಿಕೊಳ್ಳಲು ಆದಷ್ಟು ಹೆಣಗುತ್ತಾರೆ. ಇನ್ನು ಹೆಚ್ಚಾಗಿ ರಿಸೆಷನ್ ಬಗ್ಗೆ ಮಾತನಾಡಿ ನಿಮ್ಮ ಬ್ಲಡ್ ಪ್ರೆಶರ್ ಏರಿಸುವುದಿಲ್ಲ, ನನಗೆ ಗೊತ್ತು ದಿನಾ ಆಫೀಸಿನಲ್ಲಿ ಇದರ ಬಗ್ಗೆ ಚರ್ಚೆ ಅಲ್ಲಲ್ಲಿ ಸಮಯ ಸಿಕ್ಕಾಗ ನಡೆಸುತ್ತಿರುತ್ತೀರಿ, ಮಿನಿ ಮೀಲ್ಸ್ ತಿನ್ನುವಾಗ, ಕೆಪಚ್ಚಿನೋ ಹೀರುವಾಗ, ಪಕ್ಕದ ಕ್ಯೂಬಿಕಲ್ ನಲ್ಲಿ ಗುಂಪು ಸೇರಿದಾಗ ಇವೇ ಮಾತುಗಳು ಎಂದು ನನಗೆ ಗೊತ್ತು, ಎಷ್ಟೇ ಆದರೂ ನಾವು 'ಮಧ್ಯಮ' ವರ್ಗದವರು, ಇದೆಲ್ಲವನ್ನು ಎದುರಿಸುವ ಛಾತಿಯನ್ನು ಆ ಬ್ರಹ್ಮ ಹುಟ್ಟುವಾಗಲೇ ನಮ್ಮ ರಕ್ತದಲ್ಲಿ ಮಿಕ್ಸ್ ಮಾಡಿ ಕಳುಹಿಸಿದ್ದಾನೆ ಎಂದು. ಆದರೂ ಇಂತಹ ಕಾಲದಲ್ಲಿ ನನ್ನದೊಂದಿಷ್ಟು ರಿಸೆಷನ್ ಟಿಪ್ಸ್. ನೋಡಿ ನಿಮ್ಮ ಅನುಕೂಲ ಹೇಗಿದೆಯೋ??


1)ನೀವು ಅತಿಯಾಗಿ ಫೋನಿನಲ್ಲಿ ಮಾತನಾಡುವುದಾದರೆ ಅದಕ್ಕಾಗಿ ನಾಲ್ಕಂಕಿಯ ಮೊತ್ತವನ್ನು ಪಾವತಿಸುವವರಾದರೆ ಮೊದಲು ಆ ಹುಚ್ಚಾಟವನ್ನು ಬಿಡಿ, ಗೂಗಲ್ ಟಾಕ್ ಎಂದು ಪುಟಾಣಿ ಅದ್ಭುತವಾದ software ವೇರ್ ಇದೆ, ಅದನ್ನು ಯಥೇಚ್ಚವಾಗಿ ಬಳಸಿ ನಿಮ್ಮ ಗೆಳೆಯರೊಡನೆ ಹರಟೆ ಹೊಡೆಯಲು, ಅದು ಬೋರಾದರೆ ಯಾಹೂ ಮೆಸ್ಸೆಂಜರ್ ಗೆ ಲಾಗಿನ್ ಆಗಿ ಸ್ಮೈಲೀ ಗಳನ್ನು ಹಾಕಿಕೊಂಡು ನಲಿಯಿರಿ.

2)ಫೋನ್ ಮಾಡಲೇ ಬೇಕೆನಿಸಿದರೆ ಆಫೀಸಿನ ನಂಬರಿನಿಂದ ಕರೆ ಮಾಡಿ.

3)ಟ್ರೆಕ್ಕು , ಟ್ರಿಪ್ಪು ಗಳನ್ನು ಪ್ರತೀ ವಾರಂತ್ಯ ಮಾಡುವವರಂತಾಗಿದ್ದರೆ ಮೊದಲು ಇರುವ ರಕ್ ಸ್ಯಾಕನ್ನು ಅಟ್ಟದ ಮೇಲಿಡಿ. 4೦೦ ಮರಗಳನ್ನು ಕಡಿಯಲು ಹೊರಟ್ಟಿದ್ದಾರೆ ಲಾಲ್ ಬಾಗಿನಲ್ಲಿ , ಹೋಗಿ ಮೊದಲು ನೋಡಿ, ಎಷ್ಟು ಬೇಗ ಆದರೆ ಅಷ್ಟು ಬೇಗ. ಯಾವತ್ತು ಧರಾಶಾಯಿಯಾಗುವವೊ?? ಅಂದಹಾಗೆ ಹಲಸೂರು ಕೆರೆಯನ್ನು ನೋಡಿದ್ದೀರ?? ವಾಟ್ ಅಬೌಟ್ ಬೆಳ್ಳಂದೂರ್ ಲೇಕ್? ಯಾವುದೋ ಊರಿನ ಯಾವುದೋ ಕಾಡನ್ನು ದುಡ್ಡು ತೆತ್ತು ದಡ್ಡರಾಗುವ ಮೊದಲು ಇವನ್ನು ನೋಡಿ.

4)'ಪ್ರೀತಿ' ಯಲ್ಲಿ ಬಿದ್ದಿದ್ದರೆ ಇಂದಿನಿಂದ 'ಏಳುವ' ಪ್ರಯತ್ನ ಮಾಡಿ. ಗರ್ಲ್ ಫ್ರೆಂಡ್ ಬಾಯ್ ಫ್ರೆಂಡ್ ಗಳಿಗೆ ದುಬಾರಿ ಗಿಫ್ಟ್ ಕೊಟ್ಟು ಕಂಡ ಕಂಡ ಕಡೆ ಸುತ್ತಿ ದುಡ್ಡು ಪೋಲು ಮಾಡಬೇಡಿ, ಗಿಫ್ಟಾಗಿ ಕತೆ, ಕವನಗಳನ್ನು ಬರೆದು ಕೊಡಿ, ಇಷ್ಟ ಪಟ್ಟಾರು. "ಯಾಕೆ ಜುಗ್ಗ ಆಗಿದ್ಯಾ" ಎಂದರೆ ಮುಂದೆ ನಮ್ಮ ಭವಿಷ್ಯಕ್ಕಾಗಿ ಹಣ ಕೂಡಿಡುತ್ತಿದ್ದೇನೆಂದು ಹೇಳಿ. 'ಕಾರ್ನರ್ ಹೌಸ್' ನಲ್ಲಿ ಐಸ್ ಕ್ರೀಮ್ ನೆಕ್ಕುವ ಬದಲು 'ಅರುಣ್' ಕಪ್ ಐಸ್ ಕ್ರೀಮ್ ತಿನ್ನುವುದು ಉತ್ತಮ. ವಿದ್ಯಾಬಾಲನ್ ಮತ್ತು ಮಾಧವನ್ ನಟಿಸಿರುವ 'ಏರ್ ಟೆಲ್' ನ ಹೊಸ ಜಾಹೀರಾತಿಗೆ ಮಾರುಹೋಗಿದ್ದರೆ ಈ ಪಾಯಿಂಟನ್ನು ಬಿಟ್ಟುಬಿಡಿ.

5)ವಾರಕ್ಕೊಮ್ಮೆ 'ಮದ್ಯ' ಪಾನ ಮಾಡಿ ತೂರಾಡುವವರು ತಿಂಗಳಿಗೊಮ್ಮೆ ತೂರಾಡಿದರೆ ಅವರಿಗೇ ಉತ್ತಮ. ಸೀಸೈಡ್, ಲೇಕ್ ಸೈಡ್ ಹೋಟೆಲುಗಳನ್ನು ಬಿಟ್ಟು ರೂಮುಗಳಲ್ಲಿ ಕುಡಿದು,ಉಪ್ಪಿನಕಾಯಿ ನೆಕ್ಕುವುದು ಲೇಸು.

6)ಆಫೀಸಿನಲ್ಲಿ ನೀವು ಮಾಡುವ ಪ್ರತಿಯೊಂದು ಕೆಲಸವೂ ನಿಮ್ಮ ಮ್ಯಾನೇಜರರ ದೃಷ್ಟಿಗೆ ಬೀಳಲಿ. ಪರ್ವಾಗಿಲ್ಲ ಹುಡುಗ ಕೆಲಸ ಮಾಡುತ್ತಿದ್ದಾನೆ ಎಂದು ಅನಿಸಿಕೊಂಡರೆ ನೀವು ಸೇಫ್ , ಅಪ್ಪಿ ತಪ್ಪಿಯೂ ಕೂಡ ಅವರ ಬಳಿ 'ಪಂಗಾ' ತೆಗೆದುಕೊಳ್ಳಬೇಡಿ.

7)ಮಲ್ಟೀಪ್ಲೆಕ್ಸ್ ಗಳಲ್ಲಿ ಸಿನೆಮಾ ನೋಡುವ ಅಭ್ಯಾಸವನ್ನು ಬಿಡಿ, ಬೆಂಗಳೂರಿನಲ್ಲಿ ಇನ್ನೂ ನಲವತ್ತು ರೂಪಾಯಿಗೆ(!!) ಸಿನೆಮಾ ತೋರಿಸುತ್ತಾರೆ, ಅಂತಹ ಥಿಯೇಟರ್ ಗಳನ್ನ ಹುಡುಕಿ. ಒಟ್ಟಿಗೆ ಮುಂದಿನ ವಾರವೇ ಹೋಗೋಣ.

8)ದುಡ್ಡು ಕೊಟ್ಟು ಪುಸ್ತಕ ಕೊಳ್ಳುವ ಅಭ್ಯಾಸವಿದ್ದರೆ , ಸದ್ಯಕ್ಕೆ ಮುಂದೂಡಿ. ಇದನ್ನು ನೀವು 'ಕನ್ನಡ' ಪುಸ್ತಕಗಳಿಗೆ ಅನ್ವಯಿಸದಿದ್ದರೆ ನಿಮಗೊಂದು ಸಲಾಂ. ನಮ್ಮ ಹಿಂದಿನವರ ಸಾಹಿತ್ಯ ನಿಮಗೇನು ಗೊತ್ತು ?, Old is gold -ಉ ತತ್ವಕ್ಕೆ ಬೆಲೆ ಕೊಟ್ಟು ಅವೆನ್ಯೂ ರಸ್ತೆಗೆ ಕಾಲಿಡಿ. ಅಲ್ಲಿ ಸೆಕೆಂಡ್ ಹ್ಯಾಂಡ್ ಪುಸ್ತಕಗಳು ದೊರೆಯುತ್ತವೆ, ಅವನ್ನೆಲ್ಲಾ ಓದಿ ಮುಗಿಸಿ. ಇಲ್ಲವಾದರೆ ನಗರ ಫುಟ್ ಪಾತ್ ನಲ್ಲೂ ನಡೆದಾಡಿದರೆ ನಿಮಗೆ ಸಾಕಷ್ಟು ಪುಸ್ತಕಗಳು ದೊರಕೀತು.

9)ಸಾಲ ಮಾಡಬೇಡಿ ಎಂದು ಹೇಳಬೇಕಾಗಿಲ್ಲ ಎಂದು ಭಾವಿಸುತ್ತೇನೆ.

10)ಕಾರು ಕೊಳ್ಳಲೇಬೇಕೆಂದು ಹಟ ಹಿಡಿದಿದ್ದರೆ 'ನ್ಯಾನೊ' ಕಡೆಗೆ ಗಮನ ನೀಡಿ.

ನನಗೆ ತೋಚಿದ್ದು ಇಷ್ಟು. ಇಷ್ಟನ್ನೂ ನೀವು ಯಥಾಪ್ರಕಾರವಾಗಿ ಪಾಲಿಸ ಹೊರಟರೆ ಅದು ನಿಮ್ಮ ಕರ್ಮ.

12 comments:

Parisarapremi said...

ಹ ಹ್ಹ ಹ್ಹ... ಪಾಯಿಂಟ್ ನಂ.3 ಯಾಕೋ ನಾನು ಆ ರೀತಿ ಇಲ್ಲದೆ ಇದ್ದರೂ ಹೆಗಲು ಮುಟ್ಟಿ ನೋಡಿಕೊಳ್ಳುವಂಥದ್ದಾಗಿದೆ..

ಆದರೂ ಇದರಲ್ಲೂ ನೀನು ಮಾಡಿರುವ ತಪ್ಪನ್ನು ಇಲ್ಲಿ ನಮೂದಿಸುತ್ತೇನೆ. ನೋಡು.

"ಯಾವುದೋ ಊರಿನ ಯಾವುದೋ ಕಾಡನ್ನು ದುಡ್ಡು ತೆತ್ತು ದಡ್ಡರಾಗುವ ಮೊದಲು ಇವನ್ನು ನೋಡಿ."

ಕಾಡನ್ನು ದುಡ್ಡು ತೆತ್ತು ದಡ್ಡರಾಗುವುದು ಎನ್ನುವ ಅರ್ಥವೇನೋ ಅರಿಯದಾಯಿತು.

ಇರಲಿ. ಲಾಲ್‍ಬಾಗಿನ ಕೃತ್ಯವು ಧಿಕ್ಕರಿಸಲರ್ಹ. ಅದು ಸದ್ಯಕ್ಕೆ, ಸಧ್ಯಕ್ಕೆ ನಿಂತಿದೆಯೆನಿಸುತ್ತೆ. ಆದರೂ ನ್ಯಾಷನಲ್ ಕಾಲೇಜು ಫ್ಲೈ ಓವರ್ ಕಥೆಯಂತೆ ಇದೂ ಆಗಬಹುದೆಂದು ನನ್ನ ಅನಿಸಿಕೆ. ಒಂದು ಕಡೆ ನಗರಾಭಿವೃದ್ಧಿ (?), ಇನ್ನೊಂದು ಕಡೆ ಸಂಪನ್ನಾಶ. ಸಾಕು ಈ ವಿಷಯ.

ಇನ್ನು ನಿನ್ನ ಕೊನೆಯ ಪಾಯಿಂಟು. ಇದು ಲಾಲ್‍ಬಾಗಿನ ನಾಶಕ್ಕೆ ಪೂರಕವಾಗಿದ್ದು, ನಿನ್ನ ಇವೆರಡು ಪಾಯಿಂಟುಗಳೂ contradictory ಆಗಿದೆ. ಲಾಲಬಾಗಿನ ಮರಗಳೂ ಬೇಕು, ಓಡಾಡಲು ತೀರ ಕಡಿಮೆ ದರದಲ್ಲಿ ಕಾರೂ ಬೇಕು ನಮ್ಮ ಜನಕ್ಕೆ. ಮೆಟ್ರೋ ಇಂದ ಲಾಲ್‍ಬಾಗಿನ 400 ಮರಗಳು ಹೋದವಾದರೆ ನ್ಯಾನೋಗಳಿಂದ ಲಾಲ್‍ಬಾಗು, ಕಬ್ಬನ್ ಪಾರ್ಕು, ಬ್ಯೂಗಲ್ ರಾಕು, ಅಲಸೂರು ಕೆರೆ, ಯೆಡಿಯೂರು ಕೆರೆ ಎಲ್ಲವೂ ಹೋದೀತು.

Srikanth - ಶ್ರೀಕಾಂತ said...

ಬಹಳ ಚೆನ್ನಾಗಿದೆ. ಫಾರ್ ಎ ಚೇಂಜ್, ನಿನ್ನ ಕಾಲೆಳಿಯೋದಿಲ್ಲ ಹೋಗ್ಲಿ ಪಾಪ ಅಂತ.

Vijaya said...

Point 6 - maado ella kelsa manager ge kaansdre ellarigintha modlu pink slip sigutte ... alla ... gtalk, ym, office phone use maadi antha ella heli, maadodella mgr ge kaansli anteeyalla .... karma kaanda :-)

Madhu said...

shridhar rajuravare

recession bagge chennagi thilisiddira

vandanegalu

Lakshmi Shashidhar Chaitanya said...

ನಿಮಗೆ "gyan guru " ಕರ್ಮಕಾಂಡಪ್ರಭುಗಳು ಅಂತ ಈ ಶುಭ ಸಂದರ್ಭದಲ್ಲಿ ಪುನರ್ನಾಮಕರಣ ಮಾಡುತ್ತಿದ್ದೇನೆ.ನೀವೇ ಚಪ್ಪಾಳೆ ತಟ್ಟಿಕೊಳ್ಳುವುದು.

Srikanth - ಶ್ರೀಕಾಂತ said...

ಲಕುಮಿ, ನಾನು ಈ ಪುನರ್ನಾಮಕರಣವನ್ನು ಧಿಕ್ಕರಿಸುತ್ತೇನೆ. ನೀವೂ ಧಿಕ್ಕರಿಸಿಕೊಳ್ಳಿ. ಇಲ್ಲ ಅಂದ್ರೆ, ಗೊತ್ತಲ್ಲ...

Srinivasa Rajan (Aniruddha Bhattaraka) said...

ಹ ಹ ಹ ಹ :) ಒಳ್ಳೆ ರಿಸೆಷನ್ನು...

Sridhar Raju said...

@all : commentgaLna nodidre nimgaLge saryaag artha aagilla ansuttte article -u, yaavdakkoo innond sala odhi noDi... :-)

@parisarapremi : "ಯಾವುದೋ ಊರಿನ ಯಾವುದೋ ಕಾಡನ್ನು ದುಡ್ಡು ತೆತ್ತು ದಡ್ಡರಾಗುವ ಮೊದಲು ಇವನ್ನು ನೋಡಿ."

he he he idu ninge artha aagdidrene vaasi...

konege neenu contradictory antha heLodakke nan sammathi illa.. :-)hmmm

@srikanth : for a change ningu alpa salpa netge comment maadakke barattte antha torsidya..goodh :-)

for a change hogli paapa antha nin comment na delete maaDade uLskotheeni..illandre gottalla..

jaaNa kaNo neenu bega artha maadkontya :P

@Vijaya akka : innond sala article na oodhi...

@madhu : thank you

@lakshmi : alla adenu "gyaan guru" anbuttu heege chappaaLe na outsource maaDbidodha?? nodi nimmanthorge shobhe taralla idu.

Sridhar Raju said...

@srinivas : hoon kaNo oLLe recession -u...

Dynamic Divyaa said...

hehehe.. illi bardirakkuu neen paalsodakkuu enenuu samabhadhane illa anta elriguuu heLbiDlaaa???

nan strong dhikkhaara idakke:
ಫೋನ್ ಮಾಡಲೇ ಬೇಕೆನಿಸಿದರೆ ಆಫೀಸಿನ ನಂಬರಿನಿಂದ ಕರೆ ಮಾಡಿ.
--> office phone na official kelsagaLge maatra use maaDbeku!!
naanu kelvru 'shaadi.com' du photos du print out tagotaa irodanna noDideeni office printers use maaDkonDu.. Only I know how much i have loathed them!


hehe
ವಾರಕ್ಕೊಮ್ಮೆ 'ಮದ್ಯ' ಪಾನ ಮಾಡಿ ತೂರಾಡುವವರು ತಿಂಗಳಿಗೊಮ್ಮೆ ತೂರಾಡಿದರೆ ಅವರಿಗೇ ಉತ್ತಮ.
--> Mallya aTTiskonD bartaane!


ಇಷ್ಟನ್ನೂ ನೀವು ಯಥಾಪ್ರಕಾರವಾಗಿ ಪಾಲಿಸ ಹೊರಟರೆ ಅದು ನಿಮ್ಮ ಕರ್ಮ.
idena nin story li twist-u?? heheh yaarguu kaaNsilwaa neen koTTa 'tips' ella potato chips-u antaaa....

karmakaanDa ideas koDodu alde, karmakaanDa twist-u!!

Sridhar Raju said...

@dynamic : naan paalsthideeni antha elli heLde...neevu inthaavannella paalsidre nim karma ande ashte !!!

ಫೋನ್ ಮಾಡಲೇ ಬೇಕೆನಿಸಿದರೆ ಆಫೀಸಿನ ನಂಬರಿನಿಂದ ಕರೆ ಮಾಡಿ..
nange idru bagge salpa sahakaara ide....whose father what goes..
simply majjja maadi :-)


ninna 'madhya' dara bagegina comment -u neenu 'malya' na hithachintaki antha idrinda gottagutte...vayyy neenu..

karmakaanda is always twisty :-)

Srikanth - ಶ್ರೀಕಾಂತ said...

@ಶ್ರೀಧರ - ಸರಿಯಾಗಿ ಹೇಳಿದ್ದೀಯ. ಈ ಥರ ನಿರಾಶಾವಾದ ಮಾಡೋರ್ನ ಸುಮ್ನೆ ಬಿಡ್ಬಾರ್ದು ನೋಡು.

@ಡೈನಮಿಕ್ - ಮಲ್ಯರಂಥ ಹಿರಿಯರನ್ನು ಏಕವಚನದಲ್ಲಿ ಸಂಬೋಧಿಸುತ್ತೀಯಲ್ಲ! ನೀನು ಯಾವ ಪಾಠಶಾಲೆಯಲ್ಲಿ ಕಲೆತಿದ್ದು? ಹಿರಿಯರಿಗೆ ಗೌರವ ನೀಡಬೇಕೆಂದು ಹೇಳಿಕೊಡಲಿಲ್ಲವೇ ಅಲ್ಲಿ?