ಕುಪ್ಪಳಿ ಪ್ರವಾಸ ...

Wednesday, May 20, 2009

ಸುಮಾರು ಎರಡೂವರೆ ವರ್ಷಗಳ ಹಿಂದಿನ ಒಂದು ಪ್ರವಾಸ ಕಥನವಿದು. 2006ರಲ್ಲಿ "ಕುಪ್ಪಳಿ"ಗೆ RHM ವತಿಯಿಂದ ಹೋಗಿದ್ದೆ. ಅಂದಿನಿಂದ ಇಂದಿನವರೆಗೂ ಅರುಣ ಕೇಳುತ್ತಲೇ ಇದ್ದ. "ಕುಪ್ಪಳಿ ಆರ್ಟಿಕಲ್ ಎಲ್ಲೋ ?" ಎಂದು... ಸರಿ ಸುಮಾರು ಒಂದೂವರೆ ವರ್ಷದಿಂದ ಶ್ರೀಕಾಂತನೂ ಕೂಡ ಅರುಣನ ರಾಗಕ್ಕೆ ತಾಳ ಹಾಕಲನುವಾದ. "ಕುಪ್ಪಳಿ ಆರ್ಟಿಕಲ್ ಬರ್ದಿಲ್ಲಾ ಅಂದ್ರೆ ಕಾಫಿಯಲ್ಲಿ ವಿಷ ಬೆರ್ಸ್ಕೊಟ್ಬಿಡ್ತೀನಿ" ಎಂದು. ಹೆದರಿಸಿ, ಗದರಿಸಿ, ಗಡುವುಗಳನ್ನು ವಿಧಿಸಿ, ಕೊನೆಗೆ ನನ್ನಿಂದಲೇ ಗಡುವುಗಳನ್ನು ಪಡೆದುಕೊಂಡು ಕೊನೆಗೆ ನನ್ನನ್ನು ತದಕುವ ಮಟ್ಟಿಗೆ ಬಂದಿದ್ದರು. ಇವರಿಬ್ಬರ ಗೊಡ್ಡು ಬೆದರಿಕೆಗೆ ಸೆಡ್ಡು ಹೊಡೆದು ನನ್ನ ಪಾಡಿಗೆ ಆರಮಾಗಿ ಇದ್ದುಬಿಟ್ಟೆ, ಅನೇಕ ಬಾರಿ ಪ್ರಯತ್ನ ಪಟ್ಟಿದ್ದೆನಾದರೂ ಏಕೋ ಏನೋ ಕುಪ್ಪಳಿ ಲೇಖನವನ್ನು ಬರೆಯಲು ಸಾಧ್ಯವಾಗಲೇ ಇಲ್ಲ. ಇಂದು ಬರೆಯಲು ಕೂತಿದ್ದೇನೆ, ಬರೆದು ಮುಗಿಸುತ್ತೇನೆಂಬ ಆಶಯದೊಂದಿಗೆ.

ಹಾಗಾಗಿ ಈ ಲೇಖನವನ್ನು ಅರುಣ ಮತ್ತು ಶ್ರೀಕಾಂತನಿಗೆ ಅರ್ಪಿಸುತ್ತಿದ್ದೇನೆ. ಇಂದಿಗೆ ನಾನು "ಕುಪ್ಪಳಿ ಆರ್ಟಿಕಲ್" ಮುಕ್ತ.

ಬ್ಯಾಕ್ ಡ್ರಾಪ್ : ಇಸವಿ 2006ರ ಅಕ್ಟೋಬರ್ ತಿಂಗಳಲ್ಲಿ ಅರುಣ ನ ಜೊತೆ RHM ವತಿಯಿಂದ "ಕುಪ್ಪಳಿ" ಪ್ರವಾಸ ಕೈಗೊಂಡಿದ್ದೆ. ಅದರ ಪ್ರವಾಸ ಲೇಖನವಿದು.

ಶುಕ್ರವಾರ ರಾತ್ರಿ 9:30ಹೊತ್ತಿಗೆ ಕೇಯೆಸ್ಸಾರ್ಟೀಸಿ ಬಸ್ ನಿಲ್ದಾಣದಲ್ಲಿರಲು ಅರುಣ ಹೇಳಿದ್ದ. ಸಮಯಕ್ಕೆ ಸರಿಯಾಗಿ ನಿಲ್ದಾಣದಲ್ಲಿದ್ದೆ. ತದನಂತರ ಒಬ್ಬೊಬ್ಬರಾಗಿ ನಿಲ್ದಾಣಕ್ಕೆ ಬಂದರು. ನಾವೆಲ್ಲ ಒಟ್ಟಿಗೆ 10 ಜನರಿದ್ದೆವು.(ಅರುಣ, ನಾನು, ವಿಜಯಾ ಅಕ್ಕ, ಅನ್ನಪೂರ್ಣ, ಡೀನ್, ಗೋವಿಂದರಾಜ್, ಮಿಥುನ್, ಮತ್ತೆ ನಾಲ್ವರು ನಾರ್ತಿಗಳು). ಅರುಣನ ಹೊರತಾಗಿ ಬೇರೆಯವರು ಯಾರೆಂದರೆ ಯಾರ ಪರಿಚಯವೂ ಇರಲಿಲ್ಲ.

ಮುಂಜಾವು 6ರ ಹೊತ್ತಿಗೆ ತೀರ್ಥಹಳ್ಳಿಯಲ್ಲಿ ಕಾಫಿ ಗೆ ಇಳಿಸಿದ್ದಿರ ನೆನಪು. ಅಲ್ಲಿ ಕಾಫಿ ಕುಡಿದು ಸುಮಾರು ಏಳರ ಹೊತ್ತಿಗೆ ಕುಪ್ಪಳಿ ತಲುಪಿದೆವು. ಮೊಟ್ಟ ಮೊದಲ ಬಾರಿಗೆ ಅಂತಹ ಸ್ಥಳವೊಂದನ್ನು ನೋಡಿದ್ದೆ. ಸುತ್ತೆಲ್ಲಾ ಬೆಟ್ಟಗಳು, ಅದರ ಮಧ್ಯೆ ಪುಟ್ಟ ಊರು. ಕುಪ್ಪಳಿಗೆ ಬಸ್ ನಿಲ್ದಾಣವೆಂಬುದೇ ಇಲ್ಲ !! ಬಸ್ ಸೀದಾ ನಿಮ್ಮನ್ನು "ಕುವೆಂಪು" ಮನೆವರೆಗೂ ಕರೆದು ಕೊಂಡು ಹೋಗಿ ಬಿಡುತ್ತದೆ. ಇತರೆ ಊರುಗಳಲ್ಲಿರುವಂತೆ ಜನಜಂಗುಳಿ ಇಲ್ಲ, ಆಮೇಲೆ ತಿಳಿಯಿತು, ಹಿಂದೆ ಇಡೀ ಊರಿಗೆ ಕುವೆಂಪು ಅವರದೊಬ್ಬರದೇ ಮನೆ ಇತ್ತು.ಅವರ ಆಸ್ಥಿ, ಜಮೀನು, ವಾಟ್ ಎವೆರ್ ಇಡೀ ಊರಾಗಿತ್ತು. ಇಂದಿಗೆ ಇಡೀ ಹಳ್ಳಿಯ ಒಡೆಯರಾಗಿರುವ ಪರಂಪರೆ ಮುಗಿದಿದೆ ಎನಿಸುತ್ತದೆ. ಬಸ್ ನಿಲ್ಲಿಸಿದ ಜಾಗದಲ್ಲಿ ಒಂದು ಹೋಟೆಲು, ಇಡೀ ಊರಿಗೆ (ಊರು ಅನ್ನುವ ಬದಲು ಹಳ್ಳಿ ಪದವೇ ಸೂಕ್ತವೆನಿಸುತ್ತೆ) ಅಲ್ಲ ಹಳ್ಳಿಗೆ ಅದೊಂದೇ ಹೋಟೆಲು. ಅದರ ಪಕ್ಕಕ್ಕೆ ಹೊರಳಿದರೆ ಕುವೆಂಪು ರವರ ಭವ್ಯ ದಿವ್ಯವಾದ ಮನೆ.

ಕುವೆಂಪು ರವ ಮನೆಯ ಬಗ್ಗೆ ಹೇಳಲೇಬೇಕು. ಸುತ್ತಲೂ ಹಸಿರು ತುಂಬಿದ ಪರ್ವತಗಳ ನಡುವೆ ಇರುವ ಈ ಮನೆಗೆ ಅದ್ಭುತವಾಗಿ ಕಾಣುತ್ತದೆ. ಕುಪ್ಪಳಿಯಿಂದ ಮರಳಿ ಬೆಂಗಳೂರಿಗೆ ಬಂದಾಗಲೂ ಅದೇ ಮನೆ ನನ್ನ ನೆನಪಿನಲ್ಲಿ ಬಳ ಕಾಲ ಉಳಿದಿತ್ತು. ಬಹಳ ದಿನಗಳ ಕಾಲ ಅದು ನನ್ನ ಕಂಪ್ಯೂಟರಿನ ಡೆಸ್ಕ್ ಟಾಪ್ ವಾಲ್ ಪೇಪರ್ ಆಗಿತ್ತು. ಅದರ ನಂತರ ಸಾಕಷ್ಟು ವೈಭವೋಪೇತ ಮನೆಗಳನ್ನು ನೋಡಿದ್ದೀನಾದಾರೂ ಕುವೆಂಪು ಮನೆಗೆ ಕುವೆಂಪು ಮನೆಯೇ ಸಾಟಿ. ಇಂದ್ರನ ಅಮರಾವತಿ ನಗರದಲ್ಲೂ ಇಂತಹ ಮನೆ ಸಿಗಲಾರದು ಎಂದರೆ ಉತ್ಪ್ರೇಕ್ಷೆ ಆಗಲಾರದು. ಒಮ್ಮೆ ನೋಡಿ ಬನ್ನಿ.
ಕುವೆಂಪು ಮನೆಯಿಂದ ಅನತಿ ದೂರದಲ್ಲಿದ್ದ ನಾವು ತಂಗಿದ್ದೆವು. ಸ್ನಾನಾದಿ ಕಾರ್ಯಾಗಳನ್ನು ಮುಗಿಸಿ ತಿಂಡಿ ತಿಂದು ಅಂದಿಗೆ ನನ್ನ ಎರಡನೇ ಟ್ರೆಕ್ಕಿಗೆ ಹೊರಟೆ. ನಮಗೊಬ್ಬ ಗೈಡ್ ಸಿಕ್ಕಿದ್ದರು. ಅವರ ಹಿಂದೆ ಹೊರಟೆವು. ಮತ್ತೆ ಕುವೆಂಪು ಮನೆ ಮುಂದೆ ಬಂದು ಅಲ್ಲಿಂದ ಹೊರಟೆವು. ಅಲ್ಲಿಂದ ಸುಮಾರು 3-4ಗಂಟೆಗಳ ಕಾಲ ಟ್ರೆಕ್ ಮಾಡಿದುದರ ನೆನಪು. ಅಲ್ಲೇ ಸುತ್ತಲಿದ್ದ ಬೆಟ್ಟವನು ಹತ್ತಿದೆವು. ಮೊಟ್ಟ ಮೊದಲ ಬಾರಿಗೆ 'ಜಿಗಣೆ' ಯಿಂದ ಕಚ್ಚಿಸಿಕೊಂಡಿದ್ದೆ. ಅಲ್ಲಲ್ಲಿ ಮಧ್ಯ ಕೂತು ಅದನ್ನು ತೆಗೆಯುವುದೇ ಕೆಲಸವಾಗಿತ್ತು. ಕಚ್ಚಿದಾಗ ಏನೂ ಅನ್ನಿಸದಿದ್ದು ಅದನ್ನು ಕಿತ್ತೊಗೆದ ಮೇಲೆ ಅದರ ಇಫೆಕ್ಟ್ ಇರುತ್ತಿತ್ತು. ಶೂ ಸಾಕ್ಸ್ ಎಲ್ಲ ರಕ್ತ ಮಯ.

ಚಾರಣ ಮುಗಿಸಿ ಬರುವ ವೇಳೆಗೆ ಸಂಜೆಯಾಗಿತ್ತು. ಮುಂದಿನ ಕಾರ್ಯಕ್ರಮವೇ ಕುವೆಂಪು ಮನೆ ದರುಶನ. ಮನೆ ಹೊರಗಡೆಯಿಂದ ನೋಡಿದಮೇಲಂತೂ ಆಗಲೇ ಒಳಗೆ ನೋಡಬೇಕೇಂಬ ಉತ್ಸಾಹ ನೂರ್ಮಡಿಗೊಂಡಿತ್ತು. ಹೆಚ್ಚು ಹೆಚ್ಚು ಪದಗಳು ನನಗೆ ಸಿಗುತ್ತಿಲ್ಲ ಮನೆಯನ್ನು ಬಣ್ಣಿಸಲು, ಇಲ್ಲವಾದರೆ ಆ ಮನೆಗೆ ನನ್ನ ಪದಗಳದ್ದೇ ಅಭಿಷೇಕ. ಕುವೆಂಪು ಉಪಯೋಗಿಸುತ್ತಿದ್ದ ವಸ್ತುಗಳನ್ನು ಎಲ್ಲ ಜೋಪಾನವಾಗಿ ಇಟ್ಟಿದ್ದಾರೆ, ಮನೆಯಾ ತುಂಬಾ ಮರಗೆಲಸ. ಇಂತಹ ಮನೆಗಳಿಗೆ "ಚೌಕಿ" ಮನೆಯೆಂದು ಕರೆಯುತ್ತಾರೇನೋ. ಜೋರಾಗಿ ಮಳೆ ಬರುತ್ತಿದ್ದರೆ ಅಲ್ಲಿ ಕೂತು ಮನೆಯವರೆಲ್ಲ ಅಥವಾ ಗೆಳೆಯರೊಡನೆ ಮಾತನಾಡುವ ಮಜವೇ ಬೇರೆ. ಅಡುಗೆ ಮನೆಯಲ್ಲಿ ಕುವೆಂಪುರವ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯ ಸಾಲುಗಳನ್ನು ಅಂಟಿಸಿದುದ್ದು ಆಕರ್ಶಿಸಿತು. ಮನೆ ಎರಡು ಅಂತಸ್ತಿನಾಗಿದ್ದು ಮೊದಲನೇ ಮಹಡಿಯಲ್ಲಿ ಸ್ಟಡೀ ರೂಮಿತ್ತು. ಎಲ್ಲಕ್ಕಿಂತ ಇದು ನನಗೆ ಹೆಚ್ಚು ಇಷ್ಟವಾಯಿತು. ಕುವೆಂಪು ಅಲ್ಲಿ ಕೂತು ಎಷ್ಟು ಬರೆದರೋ?? ಎಷ್ಟು ಓದಿದರೊ?? ಅವೆಲ್ಲಕ್ಕೊ ಅಲ್ಲಿನ ಗೋಡೆಗಳೇ ಸಾಕ್ಷಿ. ಎರಡನೆ ಮಹಡಿಯಲ್ಲಿ ಕುವೆಂಪುರವರ ಹಸ್ತಪ್ರತಿಗಳನ್ನೊಳಗೊಂಡ ಪುಸ್ತಕಗಳನ್ನು ಇಟ್ಟಿದ್ದಾರೆ, ಮತ್ತೆ ಮನೆಯುದ್ದಕ್ಕೂ ಅನೇಕಾನೇಕ ಫೋಟೋಗಳಿಟ್ಟಿದ್ದರೆ. ಅಂದಿಗೆ ನಾನು ಇನ್ನೂ ತೇಜಸ್ವಿಯವರ ಯಾವುದೇ ಬರಹಗಳನ್ನು ಓದಿರಲಿಲ್ಲ !!

ಅದೇ ಗುಂಗಿನಿಂದ ಹೊರಬಂದು ಮನಸೋಯಿಚ್ಚೆ ಅನೇಕ ಫೋಟೋಗಳನ್ನು ಕ್ಲಿಕ್ಕಿಸಿದೆ. ತದನಂತರ ಕವಿಶೈಲದೆಡೆಗೆ ನಡೆದೆವು. ಕುವೆಂಪು ಮನೆಯಿಂದ ಮೇಲೆ ಹೊರಟು ಒಂದು ಕಿ.ಮೀ ಹಾದಿ ಸವೆಸಿದರೆ ಕವಿಶೈಲ ಸಿಗುತ್ತದೆ. ಕುವೆಂಪು ತೀರಿಕೊಂಡ ನಂತರ ತೇಜಸ್ವಿಯವರು ಇಟಾಲಿಯನ್ ವಾಸ್ತುವಿನಲ್ಲಿ ಅಲ್ಲಿ ಕೆಲಸ ಮಾಡಿಸಿದ್ದಂತೆ. ದೊಡ್ಡ ದೊಡ್ಡ ಕಲ್ಲುಗಳನ್ನು ನಿಲ್ಲಿಸಿದ್ದಾರೆ. ಅಲ್ಲೇ ಕುವೆಂಪು ರವರ ಸಮಾಧಿಯಿದೆ. ಅದರ ಸುತ್ತಮುತ್ತಲ್ಲೂ ನಿತ್ಯ ಹರಿದ್ವರ್ಣ ಕಾಡುಗಳು. ಎತ್ತಲಿಂದ ಎತ್ತ ನೋಡಿದರೂ ಹಸಿರೋ ಹಸಿರು.ಕುವೆಂಪೂರವರಿಗೆ ತುಂಬಾ ಇಷ್ಟವಾದ ಜಾಗವಂತೆ ಕವಿಶೈಲ. ಅವರ ಎಷ್ಟು ಬರಗಳಿಗೆ ಸ್ಪೂರ್ತಿಯೋ??
ಸೂರ್ಯನಿಗೆ ಬೀಳ್ಕೊಡುವುದಕ್ಕಾಗಿ ಅಲ್ಲೇ ಕವಿಶೈಲದ ಕಲ್ಲು ಬಂಡೆಗಳ ಮೇಲೆ ಮಲಗಿದೆವು. ಕತ್ತಲು ಕವಿಯುವುದರ ಒಳಗೆ ಗೂಡು ಸೇರಿಕೊಂಡೆವು.
ಮತ್ತೆ ಬೆಳಿಗ್ಗೆ ಸೂರ್ಯೋದಯಕ್ಕೆ ಹೋಗೋಣವೆಂದು ಅರುಣ ಹೇಳಿದ್ದ. ಅದಕ್ಕಾಗಿ ಬೇಗ ಎದ್ದು ಕವಿಶೈಲದ ಕಡೆಗೆ ಹೊರಟೆವು. ನಾವು ಸ್ವಲ್ಪ ಬೇಗ ಬಂದೆವು ಅನಿಸುತ್ತದೆ. ಸುತ್ತಲಿನ ಪರಿಸರ ನನಗೆ ನಿದ್ದೆಗೆ ಪ್ರ್‍ಏರೇಪಿಸಿತು. ನಿಸರ್ಗದ ತೆಕ್ಕೆಯಲ್ಲಿ ಸೊಂಪಾದ ನಿದ್ದೆ ತೆಗೆದೆ. ಇದರಿಂದ ಸೂರ್ಯನಿಗೆ ವೆಲ್ ಕಮ್ ಮಾಡಲಾಗಲಿಲ್ಲ. ಮತ್ತೆ ಕೆಳಗಿಳಿದು ಬಂದು ಮುಂದಿನ ಕಾರ್ಯಕ್ರಮಕ್ಕೆ ಅಣಿಯಾದೆ. ಅಂದು ಅರುಣ ನಮ್ಮೆಲ್ಲರನ್ನೂ 'ಹಿರೆಕೊಡುಗೆ' ಗೆ ಕರೆದೊಯ್ದ. ಕುಪ್ಪಳಿಯಿಂದ ಹೊರಬಂದು ಮೈನ್ ರೋಡಿನಲ್ಲಿ ಸ್ವಲ್ಪ ದೂರ ನಡೆದು 'ಹಿರೆಕೊಡುಗೆ' ಎಂದು ಫಲಕ ಹಾಕಿದ ದಿಕ್ಕಿನೆಡೆಗೆ ಸಾಗಿದೆವು. ಹಿಂದಿನ ದಿನ ಮಾಡಿದ್ದ ಚಾರಣಕ್ಕಿಂತ ಈ ಪ್ರದೇಶ ಕಡಿದಾಗಿತ್ತು, ಇಷ್ಟವಾಯಿತು ಕೂಡ. ಮಿತಭಾಷಿಯಾಗಿದ್ದರಿಂದ ಯಾರೊಡನೆಯೂ ಹೆಚ್ಚು ಬೆರೆಯದೆ ಸುತ್ತಲಿನ ನಿಸರ್ಗವನ್ನು ಸವಿಯುತ್ತಾ ನಡೆದೆ. ಊಟವನ್ನು ಒಂದು ಪಾಳು ಬಿದ್ದ ದೇವಸ್ಥಾನದಲ್ಲಿ ಮಾಡಿದ ನೆನಪು. ಊಟ ಮುಗಿಸಿ ಎಲ್ಲರೂ ನಮ್ಮ ನಮ್ಮ ಫೀಡ್ ಬ್ಯಾಕನ್ನು ಕೊಟ್ಟೆವು ಚಾರಣದ ಬಗ್ಗೆ. ಅದೊಂದೇ ಬಾರಿ ಅನಿಸುತ್ತೆ ಎಲ್ಲರೊಡನೆ ನಾನು ಮಾತನಾಡಿದ್ದು.

ಮರಳಿ ಬಂದು ಮತ್ತೆ ಕುವೆಂಪು ಮನೆಗೆ ಹೋಗಿ 'ಕಾನೂರು ಸುಬ್ಬಮ್ಮ ಹೆಗ್ಗಡತಿ' ಕಾದಂಬರಿಯನ್ನು ಕೊಂಡೆ. ಕುಪ್ಪಳಿ ನೆನಪಿಗೆ. ಮತ್ತೆ ಕುಪ್ಪಳಿಗೆ ಒಂದೂವರೆವರ್ಷ ಹಿಂದೆ ನಮ್ಮ 'ಹರಟೆ-ಕಟ್ಟೆ' ಗುಂಪಿನೊಡನೆ ಹೋಗಿದ್ದೆ. ವಿಕಾಸದ ಹಾದಿಯಲ್ಲಿದ್ದ ನಾನು ಎರಡನೆ ಬಾರಿ ಹೋದಾಗ ಗೆಳೆಯರೊಡನೆ ಹೆಚ್ಚು ನಲಿದೆ. ಎರಡನೆ ಬಾರಿ ನಾವು ತೀರ್ಥಹಳ್ಳಿಯ ಶ್ರೇಯಸ್ ಮನೆಯಿಂದ ಹೊರಟಿದ್ದಿದ್ದು. ಕವಿಶೈಲವನ್ನೂ, ಕುವೆಂಪು ಮನೆಯನ್ನು ನೋಡಿ ಮರಳಿ ತೀರ್ಥಹಳ್ಳಿಗೆ ಹೋಗುವಾಗ ಬಸ್ ಗೆ ಕಾಯುತ್ತ ರೋಡಿನಲ್ಲಿ ಓಡಾಡುತ್ತಿದ ವಾಹನಗಳನ್ನು ದೂರದಿಂದ ಗುರುತಿಸುವ ಆಟವನ್ನು ನೆನೆಸಿಕೊಂಡರೆ ಖುಶಿ ಆಗುತ್ತದೆ. ಆ ಕತ್ತಲಿನ ರಸ್ತೆಯಲ್ಲಿ ಆಕಾಶ ನೋಡಿದರೆ ನಕ್ಷತ್ರಗಳ ಚಿತ್ತಾರ. ಕಾಣದ ಕೈಗಳಿಂದ ಮಾಡಿದ ಕುಸುರಿ ಕೆಲಸ. ಎಂಥಾ ದಿನಗಳವು?? ಇದನ್ನು ನೋಡಿಯೇ ಶ್ರೀನಿವಾಸ 'ಚಿತ್ರಚಾಪ'ದ ಕವನ ಬರೆದನೆನಿಸುತ್ತದೆ. 'ಅಣ್ಣನ ನೆನಪು' ಮತ್ತೊಮ್ಮೆ ಓದಿಕೊಂಡು ತೇಜಸ್ವಿಯವರ ನೆನಪುಗಳನ್ನು ಜೀಕಿಕೊಂಡು ಮತ್ತೊಮ್ಮೆ ಕುಪ್ಪಳಿಗೆ ಹೋಗಬೇಕೆನಿಸುತ್ತದೆ.

7 comments:

Dynamic Divyaa said...

bombaat!!

ಇಂದಿಗೆ ನಾನು "ಕುಪ್ಪಳಿ ಆರ್ಟಿಕಲ್" ಮುಕ್ತ.
heheheh idu chanaagide!

not a bad memory nindu.. erDuu vare varsha aadru neat memory iTTkonDiya.. adakke kaaraNa ninge banda 'dhamki'gaLaa?? ;-)

If I disagree with the 'dhamkis', aa sundara mane matte prakruthi soundarya maryakke koDalla!

aa haLLi mane li beLLambeLigge olege soude haaki baro dhooma ULTIMATE!! hanDe snaana, chaLi li bisi neer snaanaa waah waaah!!!
olEli maaDiro tea....
chilipili chilipili hakkigaLu esp gubbacchigaLu... ellellllllllluuu hasiru tangaaLi, and lazy surya......
iddikkinta bere sukha naa??

Lakshmi Shashidhar Chaitanya said...

karmakaanda paavanavaaytu.

Srinivasa Rajan (Aniruddha Bhattaraka) said...

ಅಂತೂ ಸಾಲಮುಕ್ತನಾಗಿಹೋದೆ ಅಂತ ಹೇಳು.. ;-)

ಒಳ್ಳೆ ಕುಪ್ಪಳ್ಳಿ ಪ್ರವಾಸ.. ಅದೇನೇ ಇರಲಿ, ಕೊನೆಗೆ ನನ್ನ ಕವನದ ಬಗ್ಗೆ ಮಾತಾಡಿದ್ಯಲ್ಲ... ಅದಕ್ಕೋಸ್ಕರವಾಗಿ ಇದು ಒಳ್ಳೇ ಪೋಸ್ಟು ಅಂತ ಹೇಳೋಕ್ಕೆ ಇಷ್ಟಪಡ್ತೀನಿ :P

ಒಳ್ಳೇ ಮೆಮೋರಿ..

@Dyno:: "ಇದಕ್ಕಿಂತ ಬೇರೆ ಸುಖ ನ?"
ಹ್ಞೂಂ ಮತ್ತೆ... ಎಲ್ಲ ಹೇಳಿ, 'ಧ್ಯಾನ' ಮಾಡೋದನ್ನೇ ಹೇಳಲಿಲ್ಲ ಅಂದ್ರೆ ಅದ್ರಲ್ಲೇನು ಸುಖ? ಅಂಥಾ ಜಾಗದಲ್ಲಿ ಧ್ಯಾನ ಮಾಡಬೇಕು.. ಅದು "ಸುಖ"..

Srikanth - ಶ್ರೀಕಾಂತ said...

ಚೆನ್ನಾಗಿ ಬರೆದಿದ್ದೀಯೋ. ಆದರೆ ಕುವೆಂಪು ಅವರಿಗೆ ಕವಿಶೈಲದಿಂದ ಬರ ಬಂತು ಅಂತ ಹೇಳ್ತೀಯ... ಯಾಕೋ ನಂಬಕ್ಕಾಗಲ್ಲ ["ಕುವೆಂಪೂರವರಿಗೆ ತುಂಬಾ ಇಷ್ಟವಾದ ಜಾಗವಂತೆ ಕವಿಶೈಲ. ಅವರ ಎಷ್ಟು ಬರಗಳಿಗೆ ಸ್ಪೂರ್ತಿಯೋ??"]

ಅಸಲು ಬಂತು. ಬಡ್ಡಿ ಎಲ್ಲಿ?

Parisarapremi said...

"ಕುವೆಂಪು ರವ ಮನೆಯ ಬಗ್ಗೆ ಹೇಳಲೇಬೇಕು."

ಎಂಥದ್ದೋ ಅದು 'ರವ' ಮನೆ ಅಂದ್ರೆ? ರವ ವಡಾ ಅಂತಾರಲ್ಲ ಆ ಥರಾನಾ?

ಅಂತೂ ಕುಪ್ಪಳಿ ಲೇಖನ ಬರೆದು "ಶೋತೃ" ವರ್ಗದವರಿಗೆ ನಿಟ್ಟುಸಿರು ಬಿಡುವಂತೆ ಮಾಡಿದ್ದೀಯೆ. ಗುಡ್.

ಚೆನ್ನಾಗಿ, ಸುದೀರ್ಘವಾಗಿ ಬರೆದಿದ್ದೀಯೆ.

ಒಳ್ಳೇ ಫಾರಂ ಅಲ್ಲಿದ್ದೀಯೆ ಕೂಡ. ಬರೀತಲೇ ಇರು.. ನಿಲ್ಲಿಸಬೇಡ.

[ಡೈನಮಿಕ್] ಗುಬ್ಬಚ್ಚಿಗಳಂತೆ! ಕಾಗೆಯೇನು ಪಾಪ ಮಾಡಿತ್ತು ಪಾಪ? ಚಿಲಿಪಿಲಿ ಹಕ್ಕಿಗಳಿಗೆ ಮಾತ್ರವೇ 'ಸುಖದ' ಸ್ಥಾನವು ಯಾವ ನ್ಯಾಯ? ಕಾ ಕಾ ಹಕ್ಕಿಗೂ ಕೋಡಬೇಕು. ನೀನು ಮನುಸ್ಮೃತಿಯ ಅನುಯಾಯಿ ಎಂಬುದು ಈ ಧೋರಣೆಯ ಕಮೆಂಟಿನಿಂದ ತಿಳಿದುಬರುತ್ತೆ.

[ಶ್ರೀನಿವಾಸ] ಒಳ್ಳೇ ಧ್ಯಾನ. ನಿನಗಾಯ್ತು ಧ್ಯಾನದಿಂ ಸೊಗಂ, ಡೈನೋಗಾಯ್ತು ಗುಬ್ಬಿರವದಿಂ ಸೊಗಂ, ಅಂತೆ ಶ್ರೀಧರನಿಗಾಯ್ತು ಕಾಫಿಯಿಂ ಚಿರಸೊಗಂ!! ಅವರವರ ಮನಕಾಯಗಳಿಗನುಗುಣಮಲ್ತೆ ಮತ್ತೇನೂ ಅಲ್ತುಮ್ ಸೊಗಂ!!

[ಶ್ರೀಕಾಂತ] 'ಬರ'ದ ಗುರುತು ಚೆನ್ನಾಗಿ ಹಿಡಿದಿದ್ದೀಯ. ಐ ಲಾಯ್ಕ್ ಈಟ್...

Dynamic Divyaa said...

@Sridhar :
neenu appiiii tappi kooDa spelling 'tappu' maaDo hange illa! irorella two tale eagles-u alias ganDabherunDas-u
erD kaNNE ashT choooopu innuu ivrgella naalk naalk kaNNus!!
paT anta khanD hiDbiDtaare!!
:-D

@GanDabherunDa :
neevu alli 'dhyaana' maaDi 'sukha' paDi, naavella nimmanna noDi sukha paDteevi! kaapi tea kuDkonD beTTagaLna noDkonD suttaaaDkonDu.... :-)

@Parisarapremi :
oLLe dhOraNe...
kaagakka gubbakka elllaaa included-u....
naan keLovaaga, kaaka summnittu.. baree gubbacchi kichi kichiii pich picchi chilipiliii antidvuuu...
u gotchaa?????

Vijaya said...

alli hogi nidde maaddya? naanu avattu beligge dormitory nalle nidde maadde :-) . Alli navilu nodokke antha alwa ella hogiddu? yaako nenpu masukaagide nange.