ಅದೇ ವೆಂಕ - ಸೀನ - ನೊಣ

Saturday, May 26, 2007

ಸಮಯ ರಾತ್ರಿ ೧೦:೩೦ ಅಥವಾ ೧೦:೪೫... ಎಲ್ಲೇ ಇದ್ದರೂ ಬಂದು ಸಿಸ್ಟೆಮ್ ಶುರುವಿಕ್ಕಿ ಯಾಹೂ! ಧೂತವಾಹಕದಲ್ಲಿ ಲಾಗಿನ್ ಆಗುತ್ತೇನೆ.. ಅದು ನಮ್ಮ ಅಂದರೆ ವೆಂಕ,ಸೀನ,ನೊಣರ ಅಲಿಖಿತ ಒಪ್ಪಂದ... ಯಾರೊಬ್ಬರು ಇಲ್ಲದಿದ್ದರೂ ಮೆಸೆಜ್ ಮಾಡಿ ಬರಮಾಡುತ್ತೇವೆ....

ಅಲ್ಲಿ conference ಶುರು ಮಾಡಿ ಮಾತಾಡಲು ಶುರುಮಾಡಿದರೆ ಲೋಕದ ಪರಿವೆಯೆ ಇರುವುದಿಲ್ಲ... ದಿನವೂ ಮಾತಡಲು ವಿಷಯಗಳು ಅದೆಲ್ಲಿಂದ ಬರುವುದೋ ಆ ಭಗವಂತನಿಗೇ ಗೊತ್ತು..!!

ನಾವು ಶುರು ಮಾಡಿದ conference ನಲ್ಲಿ ಜನರು ಬರುತ್ತಿರುತ್ತಾರೆ..ಹೋಗುತ್ತಿರುತ್ತಾರೆ..but ನಾವ್ಗಳು ಮಾತ್ರ ಬರುವವರಿಗೆ "ಹಾಯ್!" ಹೇಳುತ್ತ ಹೋಗುವವರಿಗೆ "ಬ್ಯೆ ಬ್ಯೆ" ಹೇಳುತ್ತ ಅಲ್ಲೇ ಇರುತ್ತೇವೆ.. ಸುಮಾರು ಪ್ರತಿನಿತ್ಯ ೧ ಗಂಟೆವರೆಗೂ...
ದಿನಂಪ್ರತಿ ನಡೆಯುವ ವಿಷಯಗಳು, ವಿನೋದಮಯ ಪ್ರಸಂಗಗಳು, ಆ ದಿನದ ಅನುಭವಗಳು.. ಒಂದೇ ಎರಡೇ..ನಾವು ಹರಟೆಮಲ್ಲರೇ ಸರಿ...

ಹಾ! ಮರೆತಿದ್ದೆ..ಇಲ್ಲಿ ಪಾತ್ರ ಪರಿಚಯ ಮಾಡುವುದನ್ನೇ ಮರೆತಿದ್ದೆ..

ಮೊದಲಿಗೆ ವೆಂಕ ಅಂದರೆ - ಶ್ರೀಧರ

ಸೀನ ಅಂದರೆ - ಶ್ರೀನಿವಾಸ (ಪ್ರೇಮ ಕವಿ) (ಬಹುಮುಖ ಪ್ರತಿಭೆ).. the list goes on..

ನೊಣ ಅಂದರೆ - ಅರುಣ(ಪರಿಸರಪ್ರೇಮಿ) (ಸಹಜ ಕವಿ)...the list goes on...

ಒಂದಷ್ಟು ದಿನ ಸೀನ ಮತ್ತೆ ನೊಣ voice conference ಮಾಡಲು ಶುರುವಿಕ್ಕಿದರು..... ನನ್ನ headphone ಸರಿ ಇಲ್ಲದುದರ ಕಾರಣ ಇವರಿಗೆ ಪಟಾಕಿ ರೀತಿಯ ಕೇಳಿಸುತ್ತಿತಂತೆ.....ಹೆ ಹೆ ಹೆ... ನಿಲ್ಲಿಸಿಬಿಟ್ಟರು... ನನಗೊಂತರಾ ಖುಷಿಯಾಯಿತು.... ನನಗೆ ಮಾತಡುವುದಕ್ಕಿಂತ type ಮಾಡಿ ನನ್ನ ಭಾವ!! ಗಳನ್ನ ವ್ಯಕ್ತಪಡಿಸುವುದು ಸುಲಭವೆಂದು..

ಎಲ್ಲರನ್ನು ನಗಿಸುತ್ತ..ಕೆಲವೊಮ್ಮೆ ಛೇಡಿಸುತ್ತಾ, ಅರುಣನ/ಶ್ರೀನಿವಾಸನ lecture/ಹಾಡು ಗಳನ್ನ ಕೇಳುತ್ತ...
ವಿಚಾರ ವಿನಿಮಯಮಾಡಿಕೊಳ್ಳುತ್ತ ನಡೆಸುವ ಹರಟೆಯ ಮಜವೆ ಬೇರೆ ಬಿಡಿ..!!

ಹೀಗೆ ನಮ್ಮ conference ಸಾಧ್ಯವಾದಷ್ಟು ದಿನಗಳ ಕಾಲ ನಡೆಯಲಿ ಎಂದು ಆಶಿಸುತ್ತ ನನ್ನೀ ಲೇಖನವನ್ನ ಮುಗಿಸುತ್ತೇನೆ... ಈ ಸ್ನೇಹ ಸದಾ ಕಾಲ ಹೀಗೆ ಇರಲಿ...

ಹೀಗೆ ಕೆಳಕೊಟ್ಟ ಕೊಂಡಿಗಳನ್ನ ಹಾಗೆ ಓದಿಬಿಡಿ...ಚೆನ್ನಾಗಿವೆ
http://gandabherunda.blogspot.com/2007/05/blog-post_26.html

http://speaktonature.blogspot.com/2007/05/blog-post_25.html

ಅಂದ ಹಾಗೆ ನಿಮಗಾರಿಗಾದರು ನಮ್ಮ ಹರಟೆಯಲ್ಲಿ ಪಾಲ್ಗೊಳ್ಳುವ ಆಸಕ್ತಿಯಿದ್ದಲ್ಲಿ ೧೦:೩೦ ಗೆ ಧೂತವಾಹಕದಲ್ಲಿ ಲಾಗಿನ್ ಆಗ್ಬಿಡಿ..ಸಿಗೋಣ ಅಲ್ಲಿ... ಬರ್ತೀರಾ ತಾನೆ??????

5 comments:

Parisarapremi said...

ಅಲಿಖಿತ ಒಪ್ಪಂದ - ಚೆನ್ನಾಗಿದೆ!

"ಸಹಜ ಕವಿ" ಅಂದರೆ??

Srinivasa Rajan (Aniruddha Bhattaraka) said...

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು, ವೆಂಕ... :) :)

ಬಹಳ ಚೆನ್ನಾಗಿದೆ ನೀನು ಬರ್ದಿರೋದು...

Sridhar Raju said...

[seena]:dhanyavaadagaLu saar!!...

[noNa]:sahaja kavi andre sahajavaagi bareyoru antha..ashte.. :-)

Anonymous said...

ಹೋ ಹೊ ಸಕ್ಕತ್ ಖುಷಿ ಆಗ್ತಾಯಿದೆ ನಾವು ಮೂರು ಜನ ಇದ್ದಿವಿ ಹೀಗೆ ಮಾಡೋರು ಆದರೆ ದಿನ ನಿಮ್ಮತರ ಟೈಮ್ ಕೀಪ್ ಅಪ್ ಮಾಡೋಕೆ ಅಗ್ತಾ ಇಲ್ಲ ನಮ್ಮ ಕೈಲಿ ರವಿ,ಲಿಲ್ಲಿ,ಪುಟ್ಟಿ ಅಂತ ಹೆಸರುಗಳು

ಅಬ್ಬ ನಿಮ್ಮ ಒಪ್ಪಂದ ಕೊನೆಯ ಉಸಿರು ಇರುವವರೆಗು ಮುಂದುವರಿಯಲಿ ಎಂದು ಆಶಿಸುತ್ತೇನೆ...........

Sridhar Raju said...

nimme anisikege dhanyavaadhagaLu...
:-)