ಶಿವಾಜಿ - The Boss

Sunday, June 24, 2007




ಬಹುನಿರೀಕ್ಷಿತ ರಜನಿಕಾಂತ್ ಅಭಿನಯದ "ಶಿವಾಜಿ" ಬಿಡುಗಡೆಯಾಗಿದೆ, ಅದೇಕೊ ಏನೋ ಗೊತ್ತಿಲ್ಲ, ಬಹುನಿರೀಕ್ಷಿತ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿಬಿಡುವ ಚಿತ್ರಗಳು ಜನರನ್ನು ಮುಟ್ಟುವುದೆಇಲ್ಲ, ಬಿಡುಗಡೆಗೆ ಮುನ್ನವೆ ಸಾಕಷ್ಟು ಕುತೂಹಲ ಕೆರಳಿಸಿದ್ದ, ತಮಿಳು ಚಿತ್ರರಂಗದ ಘಟಾನುಘಟಿಗಳನ್ನೊಳಗೊಂಡ, 70 ಕೋಟಿ project ನ ಚಿತ್ರ "ಶಿವಾಜಿ", ಇಡೀ ಭಾರತೀಯ ಚಿತ್ರರಂಗ ತಮಿಳುನಾಡಿನೆಡೆಗೆ ಬೆರಗುಗಣ್ಣಿನಿಂದ ನೋಡುತ್ತಲಿತ್ತು... ರಜನೀಕಾಂತ್ ಇಡೀ ಏಷಿಯ ಖಂಡದಲ್ಲೆ ಎರಡನೆಯ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ, ಆತನ ಅಭಿಮಾನಿಗಳು ಪ್ರಪಂಚದ ಉದ್ದಗಲಕ್ಕೂ ಇದ್ದಾರೆ.. ಒಟ್ಟಾರೆ "ರಜನೀಕಾಂತ್" ತಮಿಳು ಚಿತ್ರರಂಗದ ಚುಂಬಕ ಶಕ್ತಿ ಎನ್ನಲಡ್ಡಿಯಿಲ್ಲ...

ಒಟ್ಟಾರೆ ಸಾಕಷ್ಟು ಅಂತೆ ಕಂತೆ ಗಳನ್ನೊಳಗೊಂಡು, ಸಾಕಷ್ಟು ನಿರೀಕ್ಷೆಗಳನ್ನು ಹೊತ್ತು ಪೋಲಿಸ್ ಬಿಗಿ ಬಂದೋಬಸ್ತಿನಲ್ಲಿ ಚಿತ್ರ ಸಾಕಷ್ಟು ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.. ಬಿಡುಗಡೆಗೆ ಮುನ್ನ ಕೆಲವು ದಿನಗಳು ಮುಂಚಿತವಾಗಿ ಪ್ರಮುಖ ಟೀವಿ ವಾಹಿನಿಗಳಲ್ಲಿ ಚಿತ್ರದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಲಿತ್ತು.. "ಬಿಗ್ ಬಿ" ಎಂದೇ ಖ್ಯಾತಿವೆತ್ತ ಅಮಿತಾಭ್ "ಶಿವಾಜಿ" ಚಿತ್ರದಲ್ಲಿ guest appearance ಅಂತೆ... ತೆಲುಗಿನ "ಮೆಗಾಸ್ಟಾರ್" ಎಂದು ಕರೆಯಲ್ಪಡುವ "ಚಿರಂಜೀವಿ" ಕೂಡ ಇದ್ದಾರಂತೆ... ಹೀಗೆ ಸಾಕಷ್ಟು ಪ್ರಚಾರಪಡೆದಿತ್ತು.. ಪಡೆಯುತ್ತಲಿತ್ತು..

ನನ್ನ ಸ್ನೇಹಿತ ನೊಬ್ಬ ಶತಾಯಗತಾಯ ಮೊದಲವಾರದಲ್ಲೆ ಚಿತ್ರ ನೋಡಬೇಕೆಂದು ತುದಿಗಾಲಲ್ಲಿ ನಿಂತಿದ್ದ.. ನಾನು ಪರಿಪರಿಯಾಗಿ ಹೇಳಿದರೂ ಕೇಳದೆ "ಊರ್ವಶಿ" ಚಿತ್ರಮಂದಿರದ ಬಳಿ ಕರೆತಂದಿದ್ದ... ಅಲ್ಲಿ ಮುಂದಿನ 3 ದಿನಗಳಗೆ ಚಿತ್ರ ಮಂದಿರ housefull ಎಂಬ ಬೋರ್ಡ್ ರಾರಜಿಸುತ್ತಿತ್ತು..ಅದನ್ನು ಲೆಕ್ಕಿಸದೆ ಆತ ಒಳನುಗ್ಗಿದ.. ಅಲ್ಲಿ ಇಲ್ಲಿ ಅಲ್ಲಿ ನಡೆದಾಡುವವರನ್ನು ವಿಚಾರಿಸುತ್ತಿದ್ದ... ಇದ್ಯಾವ ಪರಿಯ ಹುಚ್ಚು ಎಂದು ನಾನು ಒಂದು ಕಡೆ ನಿಂತು ಸುಮ್ಮನೆ ನೋಡುತ್ತಿದ್ದೆ.... ಅಲ್ಲೆ ಸನಿಹದಲ್ಲಿ ಚಿತ್ರದ poster ಅನ್ನು ಕಂಡು.... ನಮ್ಮ ಕನ್ನಡ ಚಿತ್ರರಂಗದ ಯಾವೊಬ್ಬ star ಕೂಡ ಈ ರೀತಿಯ ಜನರಿಗೆ craze ಹುಟ್ಟಿಸಲಿಲ್ಲವಲ್ಲ ಎಂದು ಹಲಬುತ್ತಿದ್ದೆ..ನಮ್ಮದು ಸೀಮಿತ ಮಾರುಕಟ್ಟೆ ಎಂದು ಸುಮ್ಮನಾದೆ..ಅಷ್ಟರಲ್ಲಿ ನನ್ನ ಗೆಳೆಯ ಬಂದು ನನಗೆ ಒಂದು ನಂ. ಸಿಕ್ತು...ನಡಿ ಹೊರಡುವ "try" ಮಾಡ್ತೀನಿ.. ಎಂದು ಮುಖವರಳಿಸಿಕೊಂಡು ಹೇಳಿದ.... ಅಂದು ರಾತ್ರಿ ನನಗೆ ಕರೆ ಮಾಡಿ... "ನನಗೆ ೧೦ ಟಿಕೆಟ್ ಸಿಕ್ಕಿತು..ನೀನು ಬರ್ತಿದ್ಯ ಸುಮ್ನೆ kui kui ಅನ್ನಬೇಡ...ಈ ಭಾನುವಾರ first show ಉರ್ವಶಿ.. ಒಕೆ" ಎಂದು ಪೋನಿಟ್ಟ... ನಾನು ಆತನಿಗೆ ಮುಂಚೆಯೆ ಹೇಳಿದ್ದೆ.. ನನಗೆ ತಮಿಳು ಅಷ್ಟಾಗಿ ಬರುವುದಿಲ್ಲವೆಂದು... ನನಗೆ ಮೊದಲ ವಾರದಲ್ಲೆ ನೋಡಬೇಕೆನ್ನುವ craze ಇಲ್ಲವೆಂದು...ಆದರೂ... ಸಮಯಕ್ಕೆ ಸರಿಯಾಗಿ ಚಿತ್ರಮಂದಿರ ತಲುಪಿ ನನ್ನ ಆಸನದಲ್ಲಿ ಸ್ಥಿತನಾದೆ.. ನನ್ನ ಪಕ್ಕ ಕುಳಿತ ಗೆಳೆಯನಿಗೆ ಹೇಳಿದೆ..." ಲೊ ನನಗೆ ಅಷ್ಟಾಗಿ ತಮಿಳು ಅರ್ಥವಾಗುದಿಲ್ಲ.. ನೀನೇ ಹೇಳಬೇಕು..ಒಕೆ " ಎಂದೆ..ಆತ ತನ್ನ ಗೋಣನಲ್ಲಾಡಿಸಿದ...

ಚಿತ್ರ ಶುರುವಾಯಿತು...ಬೆಳ್ಳಿತೆರೆಯ ಮೇಲೆ "ಸೂಪರ್ ಸ್ಟಾರ್" ರಜನಿ ಎಂದು ಬಂದ ಕೂಡಲೆ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು... ನನ್ನ ರೋಮಗಳು ಸೆಟೆದು ನಿಂತವು.... ಮೈಯಲೆಲ್ಲ ಮಿಂಚಿನ ಸಂಚಾರ.. ಅಬ್ಬಬ್ಬಾ..ಎಂದು ಸುಮ್ಮನಾದೆ.... ಚಿತ್ರದ ಒಟ್ಟೂ ಕತೆ ಇಷ್ಟು.. ಅಮೆರಿಕೆಯಲ್ಲಿ software architect ಆಗಿರುವ ಶಿವಾಜಿ ಭಾರತಕ್ಕೆ ಬಂದು ತನ್ನ ಹೆಸರಿನಲ್ಲಿ ಉನ್ನತ ಶಿಕ್ಷಣ ಸಂಸ್ಥೆಯನ್ನು ಆರಂಭಿಸುವ ಆಸೆಯನ್ನು ವ್ಯಕ್ತಪಡಿಸುತ್ತಾನೆ..ಅದನ್ನು ಆರಂಭಿಸಲು ಹೊರಡಿ ಸಾಕಷ್ಟು ರಾಜಕೀಯ ಕುಯುಕ್ತಿಗಳಿಗೆ ಒಳಗಾಗಿ ಲಂಚದ ವಿಶ್ವರೂಪ ಕಂಡು ಕಂಗೆಟ್ಟು ಒಂದು ಹಂತದಲ್ಲಿ ಬರಿಗೈ ಭಿಕಾರಿಯಾಗುತ್ತಾನೆ.. ತದನಂತರ ಕೇವಲ ಒಂದು ರೂಪಾಯಿನಿಂದ ಮತ್ತೆ ಕಳೆದುಕೊಂಡ ಹಣವನ್ನೆಲ್ಲ ಪಡೆದು ಸಮಾಜದ ದುರುಳರಿಂದ "black money" ಯನ್ನು ವಿನಿಯೋಗಿಸಿ ತನ್ನ ಶಿಕ್ಷಣ ಸಂಸ್ಥೆಗಳನ್ನು ಪೂರ್ಣಗೊಳಿಸುತ್ತಾನೆ.. ಈ ಚಿತ್ರದ ನಿರ್ದೇಶಕ "ಅನ್ನಿಯನ್" ಖ್ಯಾತಿಯ ಶಂಕರ್... ಅದು ಗಲ್ಲಾಪೆಟ್ಟಿಗೆಯಲ್ಲಿ ಸಾಕಷ್ಟು ಹಣವನ್ನು ದೋಚಿದ ಯಶಸ್ವಿ ಚಿತ್ರ... ಹಾಗಾಗಿ ಸಾಕಷ್ಟು ಭರವಸೆಗಳಿತ್ತು.. ನನಗೆ ಕಂಡ ಹಾಗೆ ಚಿತ್ರದುದ್ದಕ್ಕು ಸರಿಯಾದ ಕಥಾ ಚೌಕಾಟ್ಟೇ ಇಲ್ಲ... "ಲಂಚ" ದಂತಹ ಘನ ಗಂಭೀರ ವಿಷಯವನ್ನು ಹೇಗೆ ಬಗ್ಗುಬಡಿಯುವುದೆಂದು ರಜನಿನ ಮೂಲಕ ಸರಿಯಾಗಿ ಕಟ್ಟುವುದೇ ಇಲ್ಲ... ಪ್ರತಿ frame ನಲ್ಲು ರಜನಿ ಮೆರೆಯುತ್ತಾರೆ..

ರಜನಿಯ image ಗೆ ಕಟ್ಟುಬಿದ್ದು ಸಾಕಷ್ಟು ಅನಾವಶ್ಯಕ ಎಳೆಗಳನ್ನು ಮಧ್ಯ ಬೆಸೆಯಲಾಗಿದೆ... ಹಾಗೆ ನೋಡಿದರೆ ಪ್ರತಿ ರಜನಿ ಚಿತ್ರದಲ್ಲಿ ರಜನಿಯ ಸಾಕಷ್ಟು punch ಡೈಲಾಗ್ಸ್ ಇರುತ್ತದೆ... ಈ ಚಿತ್ರದಲ್ಲಿ ಒಂದು ಡೈಲಾಗ್ ಬಿಟ್ಟರೆ ಹಾಸ್ಯನಟ ವಿವೇಕ್ ಹೆಚ್ಚು ಮಿಂಚುತ್ತಾರೆ...ತನ್ನ ಡೈಲಾಗ್ಸ್ ಇಂದ ಹಾಗು timings ಇಂದ...ಒಂದುಕಾಲದಲ್ಲಿ ತೆಲುಗಿನ ನಾಯಕನಟನಾಗಿದ್ದ "ಸುಮನ್" ಇದರಲ್ಲಿ ಖಳನಾಯಕ... ಅದ್ಭುತವಾಗಿ ನಟಿಸಿದ್ದಾರೆ... ರಜನಿ ಅಭಿನಯದ ವಿಷಯದಲ್ಲಿ ಎರಡು ಮಾತಿಲ್ಲ... ನೋಡಿದರೆ ಆತನಿಗೆ 57 ವಯಸ್ಸಾಗಿದೆಯೆಂದು ಅನಿಸುವುದೆ ಇಲ್ಲ.. ಪ್ರತಿ frame ನಲ್ಲಿ ಮಿಂಚುತ್ತಾರೆ.. ಹಾಗು ಜನರನ್ನು ರಂಜಿಸಲು ಸಾಕಷ್ಟು ಪ್ರಯತ್ನ ಪಡುತ್ತಾರೆ...!!!!

ನಾಯಕಿ ಶ್ರೇಯ ಗೆ ನಟನೆಗೆ ಹೆಚ್ಚು ಅವಕಾಶವಿಲ್ಲ... ಆಕೆಯ ಸ್ನಿಗ್ಧ ಸೌಂದರ್ಯವನ್ನು ಬರುವ ಪ್ರತಿ ಹಾಡಿನಲ್ಲು ಬಿಚ್ಚಿ ತೋರಿಸುತ್ತಾರೆ!!!!....ಕಲಾತ್ಮಕತೆ ಮೆರೆದಿದ್ದಾರೆ!!! ... ಚಿತ್ರದ ಪ್ರತಿ ಹಾಡಿನ ಸೆಟ್ ಗಳಂತು ಅದ್ಬುತ..ಸಾಕಷ್ಟು ಹಣ ವ್ಯಯಿಸಿದ್ದಾರೆ..ಹಾಡುಗಳ ಚಿತ್ರೀಕರಣಕ್ಕೆ... ಹಾಗೆ ರಜನಿ ತನ್ನ ವಿಭಿನ್ನ getup ಗಳಲ್ಲಿ ಮಿಂಚುತ್ತಾರೆ... ತೆರೆಯ ಮೆಲೆ ನಾಯಕರು ಸಿಗರೆಟ್ ಹಚ್ಚಿ ವಿರಾಜಿಸಬಾರದೆಂಬ ಕಟ್ಟಳೆಯಿದೆ... ಅದಕ್ಕಾಗಿ ರಜನಿ bubble gum ವಿಭಿನ್ನವಾಗಿ ಬಾಯಿಗೆ ಹಾಕಿಕೊಳ್ಳುತ್ತಾರೆ...ಹಾಗು ಒಂದು ರೂಪಾಯಿ coin ನ soooooper ಆಗಿ ತಿರುಗಿಸಿ ಜೇಬಿಗಿಳಿಸುತ್ತಾರೆ.... ಹಲವು serious ಆದ scene ದ್ರುಶ್ಯಗಳಿಗೆ ವಿನೋದದ ಲೇಪ ನೀಡಿ ಹಾಸ್ಯಾಸ್ಪದ ವಾಗಿ ಮಾಡಿಬಿಡುತ್ತಾರೆ ನಿರ್ದೇಶಕ ಮಹಾಪ್ರಭುಗಳು.. ಮೊದಲೆ ಗುಲ್ಲೆಬ್ಬಿಸಿದಂತೆ ಚಿತ್ರದಲ್ಲಿ ಅಮಿತಾಭ್ ಕೂಡ ಬರುವುದಿಲ್ಲ..ಚಿರಂಜೀವಿ ಯು ಸಹ..ನಾನು ಕಡೆಯತನಕ ಕಾದೆ..ಎಲ್ಲಿ ಬರುವರೊ ಎಂದು.... ಒಟ್ಟಾರೆಯಾಗಿ ಹೇಳಿದರೆ ಈ ಚಿತ್ರ ಹಿಂದಿನ ರಜನಿಯ ಚಿತ್ರಗಳಂತೆ ರಂಜಿಸಲು ವಿಫಲವಾಗುತ್ತೆ.... ನಾನು ರಜನಿಯ ಪಕ್ಕಾ ಅಭಿಮಾನಿಯು ಅಲ್ಲ ಹಾಗು ಆತನ ದ್ವೇಷಿಯು ಅಲ್ಲ... ಒಬ್ಬ ಶ್ರೀಸಾಮನ್ಯ ಪ್ರೇಕ್ಷಕನಾಗಿ ಕುಳಿತು ಚಿತ್ರವನ್ನು ಪರಾಂಬರಿಸಿದ್ದೇನೆ.. ಹಾಗೆ ನೋಡಿದರೆ ರಜನಿ ಅಭಿನಯದ "ಪಡೆಯಪ್ಪ" ಚಿತ್ರದ ಅಭಿಮಾನಿ ನಾನು...ಆ ಚಿತ್ರವನ್ನು ಅದೆಷ್ಟು ಸಲ ನೋಡಿದ್ದೀನೊ.. ಲೆಕ್ಕವಿಟ್ಟವರ್ಯಾರು... ಹಾಗೆ "ಬಾಷ" ಚಿತ್ರ.... ನಾನು ಕೇಳುವ ಪ್ರಶ್ನೆಯೆಂದರೆ ರಜನಿಯಂತಹ ನಟನಿಗೆ ಒಂದು ಸರಿಯಾದ ಕಥಾಚೌಕಟ್ಟಿರುವ ಚಿತ್ರಕತೆ ಬರೆಯಲು ಆಗಲಿಲ್ಲವೆ???... ರೆಹಮಾನ್ ಸಂಗೀತ ದೇವರಿಗೆ ಪ್ರೀತಿ...ಆತನ ಸರಕು ಮುಗಿದಂತೆ ತೋರಿಬರುತ್ತದೆ... ಒಂದೆ ಒಂದು ಹಾಡು ಕೂಡ ಮನದಲ್ಲಿ ಚಿತ್ರಮಂದಿರದ ಹೊರಗಡೆ ಬಂದ ಮೇಲೆ ಉಳಿಯುವುದಿಲ್ಲ... ಏಕೆ ಹೀಗೆ?? ನನಗೆನ್ನಿಸುವ ಪ್ರಕಾರ ಒಬ್ಬ ಪ್ರಖ್ಯಾತ ನಟನ image ಗೆ ಸರಿಯಾದ ಚಿತ್ರಕತೆ ಕಟ್ಟಿಕೊಡುವುದರಲ್ಲಿ ಶಂಕರ್ ಸೋತಿದ್ದಾರೆ.. ಚಿತ್ರದ ಸಂಗೀತವು ಪ್ರತಿಒಂದು ಚಿತ್ರವನ್ನು promote ಮಾಡಲು ಒಂದು ಪ್ರಬಲವಾದ ಅಂಶ.... ಆ ವಲಯದಲ್ಲೂ ಕೂಡ ಸೋತಿದೆ ಎಂದೆ ಅನ್ನಬಹುದು...

ಚಿತ್ರ ಸಾಕಷ್ಟು ಹಣ ಗಳಿಸಬಹುದು..ಹಾಕಿದ ದುಡ್ಡೆಲ್ಲ ಇದಾಗಲೆ ಮರಳಿ ಬಂದಿರಬಹುದು...ಆದರೆ ಒಟ್ಟಾರೆಯಾಗಿ ರಜನಿ ಮತ್ತೊಮ್ಮೆ ತಮ್ಮ ಅಭಿಮಾನಿಗಳನ್ನು ನಿರಾಶೆಗೊಳಿಸಿದ್ದಾರೆ... ರಜನಿಯ ಅಭಿಮಾನಿಗಳಗಿದ್ದಲ್ಲಿ ಅಥವಾ ಚಿತ್ರದಲ್ಲಿ ಏನಿರಬಹುದೆಂಬ ಕೂತೂಹಲವಿರುವವರು ಒಮ್ಮೆ ನೋಡಬಹುದು..

ಒಮ್ಮೆ ನೋಡಿ ಚಿತ್ರಮಂದಿರದ ಹೊರಗಡೆ ಬಂದು ಸುಲಭವಾಗಿ ಮರೆಯಬಹುದಂತಾದ ಚಿತ್ರ "ಶಿವಾಜಿ"...

5 comments:

Srikanth - ಶ್ರೀಕಾಂತ said...

ಬರವಣಿಗೆ ಸೊಗಸಾಗಿದೆ...

ನಂಗೆ ತಮಿಳು ಅರ್ಥವಾಗುವುದೂ ಅಷ್ಟಕ್ಕಷ್ಟೇ! ನಾನು ಶಿವಾಜಿ ನೋಡ್ತೀನೋ ಇಲ್ವೋ ಗೊತ್ತಿಲ್ಲ...

Sridhar Raju said...

dhanyavaadhagaLu....
in 2-3 thingLalli TV le haakthaare..SUN TV li ;-) avaga nodi.... :-)

Parisarapremi said...

ಮಾಡಕ್ ಕೆಲ್ಸ ಇಲ್ವಾ?

Sridhar Raju said...

en kelsa??????

Unknown said...

ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳಿಗೆಗೆ ಬದ್ಧವಾದ ಬನವಾಸಿ ಬಳಗದ ಹೊಸ ಬ್ಲಾಗಿಗೊಮ್ಮೆ ಭೇಟಿಕೊಡಿ. ವಿಳಾಸ:
http://enguru.blogspot.com