ಗೊಂದಲಮಯ "ಉಭಯಕುಶಲೋಪರಿ"...

Monday, May 7, 2007

ಇದೊಂದು ಗೊಂದಲ...ಬಹಳ ವರ್ಷಗಳಿಂದ ಕಾಡುತ್ತಿರುವ ಗೊಂದಲವಿದು... ನಿಮ್ಮ ಬಳಿ ಹಂಚಿಕೊಳ್ಳುವ ಉದ್ದೇಶದಿಂದ ನನ್ನೀ ಲೇಖನ..... ಯಾರದರು ಪರಿಚಯಸ್ಥರು ಎದುರು ಸಿಕ್ಕಾಗ ಅಥವ ಯಾವುದಾದರು ಕಾರ್ಯಕ್ರಮಗಳಿಗೆ ಹೋದಾಗ ಸಂಭಾಷಣೆಯನ್ನು ಹೇಗೆ ಶುರುಮಾಡುವೆದೆಂದು??... ಅದಕ್ಕೆ "ಉಭಯಕುಶಲೋಪರಿ" ಎಂದು ಹೆಸರು...

ಸಾಮನ್ಯವಾಗಿ ನಾನು ಹೆಚ್ಚು ಮದುವೆ-ಮುಂಜಿ ಕಾರ್ಯಕ್ರಮಗಳಿಗೆ ಹೋಗುವುದಿಲ್ಲ..... ಹೋದರೂ ಯಾವುದಾದರು ಮೂಲೆಯೊಂದರಲ್ಲಿ ಕುಳಿತಿರುತ್ತೇನೆ.... ಕರ್ಮಕ್ಕೆ ನಮ್ಮ ಸಮುದಾಯದಲ್ಲಿ ನನ್ನ ವಯೋಮಾನದವರು ಕಮ್ಮಿ... ಎಲ್ಲಾ ಕಾರ್ಯಕ್ರಮಗಳಲ್ಲೂ ಅವರು ಸಿಗುವುದಿಲ್ಲ... ಸಿಕ್ಕರೆ ಅವರೊಂದಿಗೆ ಅಂಡಲೆಯಬಹುದು...ಇಲ್ಲವಾದರೆ ಯಾವುದಾದರೊಂದು ಮೂಲೆಯಲ್ಲಿ ಒಂಟಿ ಪಿಶಾಚಿಯ ಹಾಗೆ ಬಿದ್ದಿರುತ್ತೇನೆ.... :-( ಎಷ್ಟೊ ಸಲ ತೀರ ಹತ್ತಿರದ ಸಂಬಂಧಿಗಳ "ನಾಮಕರಣಕ್ಕೆ" ಹೋಗಿರುತ್ತೇನೆ.. ಮತ್ತೆ ಯಾವಗಲಾದರೊಮ್ಮೆ ಮತ್ತೆ ಅದೇ ಮನೆಗೆ ಹೋದಾಗ..ಆ ಮಗು ಬೆಳೆದು ದೊಡ್ಡದಾಗಿರುತ್ತದೆ,ಅಲ್ಲೇ ಆಟವಾಡುತ್ತಿರುತ್ತದೆ,ಯಾರ ಮಗುವೆಂದೆ ತಿಳಿಯುವುದಿಲ್ಲ... ಹೆಸರು ಕೂಡ ನೆನಪಿರುವುದಿಲ್ಲ..ಅದೊಂದು ಫಜೀತಿ...

ಮದುವೆಗಳಿಗೆ ಹೋದಾಗ...ಯಾರಾದರು ಹಿರಿಯರು ಎದುರು ಸಿಕ್ಕಾಗ.."ಚೆನ್ನಾಗಿದ್ದೀರ??"...ಹೀಗೆ ಕೇಳುವುದು ವಾಡಿಕೆ..ಅಲ್ಲವೆ..?? ನನಗೇಕೊ ಹಾಗೆ ಕೇಳಲು ಮನಸೇ ಬರುವುದಿಲ್ಲ.. ಕೇಳಿದರೂ...ಅದೊಂದು ಸಿದ್ದ ಉತ್ತರವಿರುತ್ತದೆ..
"ಚೆನ್ನಾಗಿದ್ದೀನಿ..ನೀನು"??..ಅದಕ್ಕೆ ನಾನು ಕೂಡ."ಚೆನ್ನಾಗಿದ್ದೀನಿ" ಎನ್ನುತ್ತೇನೆ... ಇದ್ಯಾವ ಪರಿಯ ಸಂಭಾಷಣೆ...??? ನನಗಂತೂ ಅರ್ಥವಾಗುವುದಿಲ್ಲ....

ಅಲ್ಲ ಅವರು ಚೆನ್ನಾಗಿದ್ದರೆಷ್ಟು ಬಿಟ್ಟರೆಷ್ಟು??..... ಅವರು ಚೆನ್ನಾಗಿದ್ದರೆ ನಾವೇನೊ ಸಂತೋಷ ಪಡುವಹಾಗೆ...ಇಲ್ಲವಾದರೆ ನಾವೇನು ಮರುಗುತ್ತೆವೆಯೆ?? ಇಲ್ಲ... ಸುಮ್ಮನೆ ಬೂಟಾಟಿಕೆ ಮಾತುಗಳವು ಎಂದು ನನ್ನ ಅಭಿಪ್ರಾಯ... ತೀರ ಹತ್ತಿರವಾದವರ ಬಳಿ ಈ ರೀತಿಯ ಪ್ರಶ್ನೆಗಳು ಕೇಳುವುದರಲ್ಲಿ ಅರ್ಥವಿದೆ...

ನಮ್ಮ ತಾಯಿ ನನಗೆ ಆಗಾಗ ಬಯ್ಯುತಿರುತ್ತಾರೆ....ಮನೆಗೆ ಬಂದ ಅತಿಥಿಗಳನ್ನು ಸರಿಯಾಗಿ ವಿಚಾರಿಸುವುದಿಲ್ಲವೆಂದು..
ಯಾರೊ ಮದುವೆಗೊ ಮತ್ಯಾವುದಕ್ಕೊ ಕರೆಯಲು ಬಂದಿರುತ್ತಾರೆ...ಅವರನ್ನು ಹೋಗಿ ಕೇಳಳೆ..."ನೀವು ಚೆನ್ನಾಗಿದ್ದೀರ" ಎಂದು..

ನಮ್ಮ ದೊಡ್ಡಮ್ಮ ಒಮ್ಮೆ ನನ್ನ ತಾಯಿಯ ಬಳಿ ಹೇಳಿದ್ದರಂತೆ..." ನಿನ್ನ ಮಗ... ನಾನು ಮನೆಗೆ ಬಂದರೆ.... ಹೇಗಿದ್ದೀರ?? ಅಂತ ಕೂಡ ವಿಚಾರಿಸುವುದಿಲ್ಲ ಎಂದು..... ಅದೇನು ಅಂತ ಬೆಳೆಸಿದ್ದೀರೊ ನಿಮ್ಮ ಮಕ್ಕಳನ್ನ"!!!

ಅಲ್ಲ ನಮ್ಮ ದೊಡ್ಡಮ್ಮನ ಪರಿಸ್ಥಿತಿ ನನಗೆ ಗೊತ್ತು..ಅವರಿಗೆ ಮಧುಮೇಹ ಇದೆ..ಮೇಲಾಗಿ ಮಂಡಿಚಿಪ್ಪಿನ ಶಸ್ತ್ರಚಿಕಿತ್ಸೆ ಬೇರೆ ಮಾಡಬೇಕಿದೆ... ಎಲ್ಲದಕ್ಕಿಂತ ಹೆಚ್ಚಾಗಿ ಅವರಿಗೆ ವಯಸ್ಸಾಗಿದೆ... ಅವರ ಬಳಿ ಹೋಗಿ ಕೇಳಲೆ
"ದೊಡ್ಡಮ್ಮ ನೀವು ಚೆನ್ನಾಗಿದ್ದೀರ??" ಎಂದು....

ನನ್ನ ಬುದ್ದಿ ತಿಳಿದೆ ನನ್ನ ತಂಗಿ ನನ್ನನ್ನು ಛೇಡಿಸುತ್ತಿರುತ್ತಾಳೆ..ಯಾವುದಾದರು ಕಾರ್ಯಗಳಿಗೆ ಹೋದರೆ..
"ಆ ಮಗುವಿನ ಹೆಸರೇನು?? ಹೇಳು ನೋಡುವ??..."

"ಅಲ್ಲಿ ಒಡಾಡುತ್ತಿದ್ದಾರಲ್ಲ ಅವರು ಯಾರು?" ಹೀಗೆ....

ಅವಳಿಗೆ ತಮಾಷೆ... ನನಗೆ ಸಂಕಟ...

ಅದಕ್ಕೆ ಈನಡುವೆ.. ಬೇರೆ ರೀತಿಯ ಪ್ರಶ್ನೆಗಳನ್ನ ಕೇಳುತ್ತೇನೆ...

"ಎನಪ್ಪಾ ಏನು ಸಮಾಚಾರ?"

"ನಿಮ್ಮ ಕೆಲಸ ಹೇಗೆ ನಡೆಯುತ್ತಿದೆ?"...

"ದೊಡ್ಡಮ್ಮ ನಿಮ್ಮ ಆರೋಗ್ಯ ಹೇಗಿದೆ"? ;-) ಹೀಗೆ....

ಎನಾದರೊಂದು ಮಾತಾಡಲೆಬೇಕಲ್ಲವೆ..ಅದಕ್ಕೆ ಹೀಗೆ...

ಈ ಪ್ರಶ್ನೆಗಳ ಸಾಲಿಗೆ ನಿಮ್ಮ ಸಲಹೆಗಳೇನಾದರು ಇವೆಯೆ??..ಇದ್ದರೆ ಹೇಳಿ.. ಖಂಡಿತ ಸೇರಿಸಿಕೊಳ್ಳುವೆ...

2 comments:

Parisarapremi said...

ಇವೆ ಸಲಹೆಗಳು.. ಈ ಕೆಳಕಂಡ ಪ್ರೆಶ್ನೆಗಳನ್ನು ಕೇಳಿ.. ಅವರು ತಮ್ಮ ಬದುಕಿನಲ್ಲೇ ನಿಮ್ಮ ತಂಟೆಗೆ ಬರಲಾರರು..

"ಅಜ್ಜಿ, ಈ ನಡುವೆ ನನ್ನ ಆರೋಗ್ಯ ಕೆಟ್ಟಿದೆ.. ಆದರೂ ನಿಮಗೇ ಮೊದಲು ಅವಕಾಶ ಮಾಡ್ಕೊಡ್ಬೇಕು ಅನ್ನೋದು ಸಂಪ್ರದಾಯ.. ಮತ್ತೆ ಸಿಗ್ತೀನಿ.."

"ದೊಡ್ಡಮ್ಮ, ನೀವು ಚೆನ್ನಾಗಿರೋ ಥರ ಕಾಣ್ಸ್ತಿದೀರ, ಏನು ಸಮಾಚಾರ??"

"ಹಲೋ ಅಂಕಲ್, ಮಳೆ ಬಂತಾ? ನೆಂದ್ರಾ? ಖುಷಿ ಪಟ್ರಾ? ಜ್ವರವೇ ಬರ್ಲಿಲ್ವಾ??"

"ನಂಗೆ ಕಜ್ಜಿ.. ಇನ್ನೂ ವಾಸಿ ಆಗಿಲ್ಲ.. ನೀವು ಹೇಗಿದ್ದೀರ??"

ಆಲ್ ದಿ ಬೆಸ್ಟ್ ಶ್ರೀಧರ!!

Anonymous said...

abba nange ee karanakke baiskond saakgihogidhe
eno ondu reethi uncomfortableness feel aaguthe nange ee samarambagaLige hogoke A gaddaLa ella ondu churu ishta agolla but hesarugaLella nenapiruthe
Adare edurige siguva ellarannu chenngiddira antha keLo avshyakathe ilde idru ammana othHayakke manidhu obbranno ibbranno keLthini ashte

inna manege bandorjothe kushalopari vichAra amma room ge bandhu aache bandhu ellarna maathdsu andre sumne horage bandhu smile maadi ond 10 min kuthkothini ashte appa-ammana mAthige thappalAgadhe

Adre ellaru elle hOgli nannanne yaake keLthare antha mathra gothilla avrugaLa jothe naanu mAthe aadirolla aadru estondu concern thorsthare nange idella mujugara aaguthe

so enadru solution idre neene kodappa