ಉಪಹಾರ ಕೇಂದ್ರದ ಮಸಾಲೆ ದೋಸೆ

Saturday, May 19, 2007

ನಾನು ನ್ಯಾಷನಲ್ ಹೈಸ್ಕೂಲಿನ ವಿದ್ಯಾರ್ಥಿ, ಶನಿವಾರ ಬಂತೆಂದರೆ ನನಗೊಂತರ ಖುಷಿ.. ಅಂದು ಉಪಹಾರ ಕೇಂದ್ರದ ಮಸಾಲೆ ದೋಸೆ ಯನ್ನು ಮೆಲ್ಲಬಹುದು ಎಂದು.. ಶನಿವಾರದಂದು ನಮಗೆ ತರಗತಿಗಳು 7:30 ಗೆಲ್ಲ ಶುರುವಾಗಿಬಿಡುತಿತ್ತು..
ಬೆಳ್ಳಂಬೆಳಗ್ಗೇನೆ ಎದ್ದು ಅಮ್ಮನ ಬಳಿ 10ರೂಪಾಯಿಇಸಿದುಕೊಳ್ಳುತ್ತಿದ್ದೆ... ಶನಿವಾರದಂದು 5 periodಗಳು ಇರುತ್ತಿದ್ದವು.. ಮೊದಲು 3 periods ಅಮೆಲೆ ಮಿಕ್ಕವು.. 10ಗಂಟೆಗೆ ತಿಂಡಿಗೆಂದು ಬಿಡುತ್ತಿದ್ದರು.. ಆಗ ನಮ್ಮದೊಂದು ಗುಂಪು ಇತ್ತು.. ಬಿಟ್ಟೊಡನೆಯೆ ನಾನು,ರಂಜನ್,ಪವನ್,ಸುಧನ್ವ,ಶ್ರೀರಾಮ್,ಸಂದೀಪ್,ನಿರಂಜನ್,ಜಯಂತ್.. ಉಪಹಾರ ಕೇಂದ್ರದೆಡೆಗೆ ಧಾವಿಸುತ್ತಿದ್ದೆವು.. ಬೇಗ ಹೋದರೆ ಬೇಗ ತಿಂದು ವಾಪಸು ಬರಬಹುದು ಎಂದು.... ಬಹಳ ಸಾರಿ ನಾವು ಹೋಗುವ ಹೊತ್ತಿಗೆ rush ಆಗಿಬಿಡುತಿತ್ತು..ಅಲ್ಲೆ ಜೈನ್ ಕಾಲೇಜ್ ಸಹ ಇದೆ... ಅವರೊಂದಷ್ಟು ಜನ ಸೇರಿಬಿಡುತ್ತಿದ್ದರು..

ಆ ಕಾಲೇಜಿನ ಮಂದಿಯನ್ನು ಕಂಡರೆ ನಮಗೊಂದು ರೀತಿಯ ದಿಗಿಲು ಹಾಗೆ ಅಸಡ್ಡೆಯು ಸಹ ಇತ್ತು.ಕಾರಣ ಅವರ ಥಳುಕು ಬಳುಕು ವೇಷಗಳು... ಹಾಗು ಅವರಾಡುತ್ತಿದ್ದ ಮಾತುಗಳು.. ಅವರ tussa pussa ಆಂಗ್ಲ ಭಾಷೆಯನ್ನು ಕೇಳಿ ನನಗಂತು ಒಮ್ಮೊಮ್ಮೆ ದಿಗಿಲಾಗುತ್ತಿತ್ತು...

ಎಲ್ಲರು 10ರೂಪಾಯಿಗಳನ್ನು ತಂದಿರುತ್ತಿದ್ದರು... ಅದನ್ನು ಒಬ್ಬನ ಕೈಗೆ ಕೊಟ್ಟು... "ಹೋಗು.. token ತಗೊ" ಎಂದುಬಿಡುತ್ತಿದ್ದೆವು... ಆ rush ನಲ್ಲಿ ನುಗ್ಗಿ ಟೋಕನ್ ಸಂಪಾದಿಸುವುದೆ ಒಂದು ಸಾಹಸ.. ಮಗದೊಬ್ಬನನ್ನು ಕಳಿಸಿ "ಹೋಗು order ಕೊಡು" ಎನ್ನುವುದು... ಆ ದೋಸೆ ಮಾಡುವವನನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದೆವು.. ಅಹಾ ಆತ ದೋಸೆಯನ್ನು ಹುಯ್ಯುವುದೇನು....ತುಪ್ಪ! ಸುರಿಯುವುದೇನು.... ಕೆಂಪು ಚಟ್ನಿಯನ್ನು ಅದಕ್ಕೆ ಸವರಿ... ಆಲೂಗಡ್ಡೆ ಪಲ್ಯವನ್ನು ಎತ್ತಿ ದೋಸೆಯ ಮದ್ಯಕ್ಕೆ ಒಗೆದು..ದೋಸೆ ಯನ್ನು ಸುತ್ತಿಕೊಡುತ್ತಿದ್ದ ರೀತಿ.. ಚಮತ್ಕಾರವೆ ಸರಿ..
ಗರಿಗರಿ ಮಸಾಲೆ ದೋಸೆ ready...

ನಮ್ಮ ಮನೆಗಳಲ್ಲಿ ಹೀಗೇಕೆ ಮಾಡುವುದಿಲ್ಲವೆಂದು..ಹಾಗು ಇಲ್ಲಿನ ಬರುವಷ್ಟು ವಾಸನೆ ಏಕೆ ಬರುವುದಿಲ್ಲವೆಂದು ಹಲವಾರು ಬಾರಿ ಯೋಚಿಸುತ್ತಿದ್ದೆ..


ಅಷ್ಟರೊಳಗೆ ಮಿಕ್ಕವರು ಸ್ಥಳ ಹಿಡಿದು ಕೊಳ್ಳುತ್ತಿದ್ದರು... ಹೋಗಿ ನಿಂತು ಎಲ್ಲರೊಡನೆ ಹರಟುತ್ತ ತಿನ್ನುವ ಮಜವೆ ಬೇರೆ..

ಎಲ್ಲರನ್ನು ರೇಗಿಸುತ್ತ.."ಲೊ ಎಷ್ಟೊತ್ ಮಾಡ್ತ್ಯ ತಿನ್ನಕ್ಕೆ..ತಿನ್ನೋ ಬೇಗ....ಸಾಕು ಅವ್ಳನ್ನ ನೋಡಿದ್ದು...ತಿನ್ನು"..

ಹೀಗೆ ತಿಂದು ಮುಗಿಸಿ....ಕೈತೊಳೆದು ಬರುತ್ತಿದ್ದೆವು..ನಾನಂತು ಸರಿಯಾಗಿ ಕೈತೊಳೆಯಿತ್ತಿರಲಿಲ್ಲ..ಕಾರಣ ದೋಸೆಯ ವಾಸನೆ ಮತ್ತೆ ಮತ್ತೆ ಮೂಸಿ ಮೂಸಿ ಆನಂದಿಸಿವುದಾಗಿತ್ತು..ಹೆ ಹೆ ಹೆ....

ಅದರ ವಾಸನೆ ಇರುವವರೆಗು ಮೂಸುವುದು.... ಆಗ ಉಪಹಾರ ಕೇಂದ್ರದಲ್ಲಿ ದೋಸೆಗೆ 9/- ರೂ ಇತ್ತು..ಮಿಕ್ಕ ಒಂದು ರೂಪಾಯ್ನಲ್ಲಿ "bambaiya" ತಿನ್ನುವುದು... ಮತ್ತೆ ಎಲ್ಲರು 1 ರೂಪಾಯಿ ಕೂಡಿಸಿ ಕೊಳ್ಳುವುದು.. ಕೆಲವರು ಅದು ಕೆಟ್ಟದು ಎಂದು.. "ಗುಟ್ಕ" ತರದ್ದು...ಅದಕ್ಕೆಲ್ಲ ದಾಸರಾಅಗಬಾರದು ಎಂದು..ತಿನ್ನುತ್ತಿರಲಿಲ್ಲ... ನಾವುಗಳು 2 packet ಕೊಂಡು ತಿಂದು....ಅಲ್ಲಿಂದ ಕಾಲ್ತೆಗೆಯುತ್ತಿದ್ದೆವು....ತರಗತಿಗೆ... ಮುಂದಿನ ಶನಿವಾರ ಮತ್ತದೇ ಕಾರ್ಯಕ್ರಮ...

ನಾನಂತು ಕಾಯುತ್ತಿದ್ದೆ...ಎಂದು ಶನಿವಾರ ಬರುವುದೊ..ಎಂದು ಮಸಾಲೆ ದೋಸೆ ತಿನ್ನುವುದೊ..ಎಂದು... ನನಗೆ ಆಗ ಹೆಚ್ಚಾಗಿ ಹಣ ಸಿಗುತ್ತಿರಲಿಲ್ಲ...
ಪ್ರತಿ ದಿನವು ಹೀಗೆ ಹೊರಗಡೆ ತಿನ್ನುವುದಾಗಿದ್ದರೆ ಎಷ್ಟು ಚೆನ್ನಾಗಿರುವುದೆಂದು ಭಾವಿಸಿಕೊಳ್ಳುತ್ತಿದ್ದೆ.. ಹೀಗೆ ಬೇಕಾದಾಗಲೆಲ್ಲ ಹೊರಗಡೆ ಹೋಗಿ ತಿನ್ನಲು... 10 ರೂಪಯಿಗಳನ್ನು ಖರ್ಚು ಮಾಡಲು ಹಿಂದು ಮುಂದೆ ನೋಡುತ್ತಲಿದ್ದೆ... ಶನಿವಾರ ನನಗೆ ಆ 10ರೂಪಾಯಿ ಸಿಗುತ್ತಿದ್ದುರ ಕಾರಣ ತರಗತಿಗಳು ಬೇಗ ಶುರುವಾಗುವುದರಿಂದ.. ನಮ್ಮ ತಾಯಿಗೆ ತಿಂಡಿ ತಯಾರಿಸಲು ಸಾಧ್ಯವಿರುತ್ತಿರಲಿಲ್ಲ..ಹಾಗಾಗಿ ಹೊರಗಡೆ ತಿಂದುಕೊ ಎಂದು..10 ರೂಪಾಯಿ ಕೊಡುತ್ತಿದ್ದರು...

ಇಂದು ಖರ್ಚು ಮಾಡುವ ಚೈತೈನ್ಯ ಇದೆ..10 ರೂಪಯಿಗಳಿಗೆಲ್ಲ ಲೆಕ್ಕ ಇಡುವುದಿಲ್ಲ... ಹೊರಗಡೆ ಹೋದರೆ ಹಣ ಖರ್ಚು ಮಾಡಲು ಹಿಂದು ಮುಂದು ನೋಡುವುದಿಲ್ಲ.. ತಿಂಗಳ ಕೊನೆಗೆ ಒಂದಷ್ಟು ಐದಂಕೆಯ ಸಂಬಳ ನನ್ನ ಖಾತೆಗೆ ಜಮೆ ಆಗುತ್ತದೆ... ಆದರೆ ೧೦ ರೂಪಯಿಗಳನ್ನು ಜತನವಾಗಿ ಕಾಪಿಟ್ಟುಕೊಂಡು ಬಂದು ತಿನ್ನುತ್ತಿದ್ದ ರೀತಿಗೂ. ಅದರಲ್ಲಿ ನನಗೆ ಸಿಗುತ್ತಿದ್ದ ಸುಖಕ್ಕೂ.. ಇಂದು ಕೆಲ ನೂರುಗಳು..ಜೇಬಿನಲ್ಲಿ ಇದ್ದರೂ ಅದನ್ನು ಯಥೇಚ್ಚವಾಗಿ ಖರ್ಚು ಮಾಡಿದರೂ
ಅಂದಿನ ೧೦ರೂಪಯಿಗಳನ್ನ ಖರ್ಚು ಮಾಡಿ ಉಂಟಾಗುತ್ತಿದ್ದ ಸಂತೋಷ ಇಂದು ನನ್ನಲಾಗುವುದಿಲ್ಲ..

ಇಂದು ಪ್ರತಿದಿನ ಹೋಗಿ ತಿನ್ನುವ ಸಾಮರ್ಥ್ಯವಿದ್ದರೂ.. ಅಂದಿನಷ್ಟು ಕಾತರತೆ,ಉತ್ಸುಕತೆ, ಇಂದು ನನ್ನಲ್ಲಿಲ್ಲ..
ಕಾರಣ ಗೊತ್ತಿಲ್ಲ ಎಂದಷ್ಟೆ ಹೇಳಬಹುದು...

6 comments:

Srinivasa Rajan (Aniruddha Bhattaraka) said...

super sridhara.. nanna school dinagaLella nenapige bandvu.. ninage upaahaara kendrada dose heegaadre nanna anubhavakke bandiddu "Vivek Darshini"ya bisi bisi idli, chutney.. :) aaah..

enthaa dinagaLavu...mareyaagi hOdavu...

Sridhar Raju said...

howdhu...bombaaat dinagaLavu...
matte baralla :-(
matte high school ge hogakke naan ready.. ;-) admission kodtheeni anthaadre...he he he

Parisarapremi said...

ಮನೆಯಲ್ಲಿ ಯಾಕೆ ಆ ರುಚಿ ಸಿಗಲ್ಲ? ಯಾಕೆಂದರೆ, ಮನೆಯಲ್ಲಿ ಒಳ್ಳೇ ಆಹಾರ ಸಿಗುತ್ತೆ. ಹೋಟೆಲ್ ಅಲ್ಲಿ ತಿನ್ನೋದು, ಒಳ್ಳೇದಲ್ಲಾ ಮಗು.. ;-)

ಜೈನ್ ಕಾಲೇಜಿನ ಸುಂದರಿಯರನ್ನು ನೋಡುತ್ತಾ ಮಸಾಲೆ ದೋಸೆ ತಿನ್ನುವ ಮಜವೇ ಬೇರೆ ಅನ್ನು!! ;-)
ಹೈಸ್ಕೂಲಿನಲ್ಲಿದ್ದಾಗಲೇ ಕಾಲೇಜು ಹುಡುಗೀರತ್ತ ಕಣ್ಣು ಹಾಯಿಸಿದ್ದೆಯೇನು??

Sridhar Raju said...

naan kaaNN haayisthirlilla...nan kelvu frens avagle swalpa munduvardidru.. ;-)... naanu mugdha naaagi alli nadeyuva vidyamaanagaLannu nanna manahpataladalli sumne dhaakhalisikoLLuttidde ashte... :-)

samnvaya2 said...

ಅಬ್ಬ ನನಗೆ ನನ್ನ ಕಾಲೇಜು ದಿನಗಳು ನೆನೆಪಿಗೆ ಬರುತ್ತಿದೆ.
ನಾನು ಜೈನ್ ಕಾಲೇಜಿನಲ್ಲೇ ಓದಿದ್ದರೂ ಯಾವಾಗ ೨:೩೦ pm ಆಗುತ್ತೊ ಅಂತ ಕಾಯ್ತಿದ್ದೆ ಉಪಹಾರ ಕೇಂದ್ರಕ್ಕೆ ಹೋಗಿ ರೈಸ್ ಬಾತ್ ತಿನ್ನೋಕೆ.. ನಮ್ಮ ಕಾಲೇಜು ಹುಡುಗರ ಮತ್ತು ಹುಡುಗಿರ ಮಾತು ಕೇಳ್ತಾ ಇದ್ದರೆ ನನಗೆ ಅಸಹ್ಯ ಆಗ್ತಿತ್ತು.
ಆದರೆ ಒಂದು ಬೇಸರ ಶ್ರೀದರ್ ಅಣ್ಣ , ಜೈನ್ ಕಾಲೇಜು ಹುಡುಗಿಯರ ವೇಷ-ಭಾಷೆ,ಮಾತು-ನುಡಿ ನೋಡಿ ಅಸಹ್ಯ ಅನ್ನಬಾರದಿತ್ತು ನೀವು,ಅದು ನಮ್ಮಂತವರಿಗೆ ಬೇಸರ ತರುತ್ತೆ........

ಒಟ್ಟಿನಲ್ಲಿ ಶಾಲ -ಕಾಲೇಜು ದಿನಗಳು ಮರಯಲಸಾಧ್ಯವಾದ ಸುಧಿನಗಳು.........

Sridhar Raju said...

hmmm..naanu asahyya endu ellu heLilla..aa vayassinalli nanguntaada vyakthisahaja bhaavanegaLannu vyakthapadisiddeene ashte.....
ella kadegaLallu oLLeyavaru kettavaru idde iruttaare... moreover "oLLethana" embuvudhu subjective.....
nimage besaravaagiddalli ee aNNanannu kshamisi :-)