ಸೈಕೊ....

Sunday, September 14, 2008

ಚಿತ್ರ ಬಿಡುಗಡೆಯಾಗಬೇಕಿದೆ, ಅಪಾರ ನಿರೀಕ್ಷೆ ಹೊತ್ತಿದ್ದೇನೆ ಚಿತ್ರದ ಬಗ್ಗೆ, ಜಯಂತ್ ಕಾಯ್ಕಿಣಿ ಯುಗಳಗೀತೆಗಳ ರಚನಾಕಾರರಾಗಿ ಹೊರಹುಮ್ಮುತ್ತಿದ್ದಾರೆ.

ನನಗೆ ಬಹಳ ಇಷ್ಟವಾದ ಹಾಡೊಂದನ್ನು ನಿಮ್ಮ ಮುಂದಿರಿಸಿದ್ದೇನೆ. ಗುನುಗಿಕೊಳ್ಳಿ....

 

ಬೆಳದಿಂಗಳಂತೆ ಮಿನು ಮಿನುಗುತ ಬೆಳಕಾಗಿ ಬಂದಿರಲು ನೀನು

ಅನುರಾಗದಲ್ಲಿ ಹೊಳೆ ಹೊಳೆಯುತ ನಸು ನಾಚಿ ನಿಂದಿರಲು ನೀನು

ಮರುಳಾದೆ ದಿವ್ಯಸಖಿ ನಿನಗೆ ಪ್ರಣಾಮ, ಅಪರೂಪ ರೂಪಸಿಯೇ ನಿನಗೆ ಪ್ರಣಾಮ

 

ತಂಗಾಳಿಯಂತೆ ಸುಳಿ ಸುಳಿಯುತ ಆವರಿಸಿಕೊಂಡಿರಲು ನೀನು

ಕುಡಿನೋಟದಲ್ಲೆ ನುಲಿ ನುಲಿಯುತ ನೀವರಿಸಿನಿಂದಿರಲು ನೀನು

ಮನಸೋತೆ ಮೋಹಿತನೆ ನಿನಗೆ ಪ್ರಣಾಮ, ಹಿತವಾದ ಸ್ನೇಹಿತನೆ ನಿನಗೆ ಪ್ರಣಾಮ

 

ಕನಸಲ್ಲು ಹುಚ್ಚನಂತೆ ನಿನಗಾಗಿ ಓಡುವೆ, ಮೈಮರೆತು ಸಂತೆಯಲ್ಲೂ ನಿನ್ನನ್ನೆ ಕೂಗುವೆ

ಒರಗಿರಲು ನಿನ್ನ ಮಡಿಲಲಿ

ಕಾಗದದ ದೋಣಿಯಲ್ಲಿ ಕಡಲನ್ನು ದಾಟುವೆ, ಗಂಧರ್ವ ಸೀಮೆಯಲ್ಲಿ ಉಯ್ಯಾಲೆ ಜೀಕುವೆ

ನೀನಿರಲು ನನ್ನಾ ಕತೆಯಲಿ

 

ನಾನಿರುವೆ ನಿನ್ನಾ ಜೊತೆಯಲಿ

 

ಬೆಳದಿಂಗಳಂತೆ ಮಿನು ಮಿನುಗುತ ||

 

 

ಕಣ್ತುಂಬ ನಿನ್ನ ಅಂದ ಸವಿಯುತ್ತಾ ಕೂಡಲೇ, ಕಂಡಿದ್ದು ನಿಜವೇ ಅಂತ ಮುತ್ತಿಟ್ಟು ನೋಡಲೇ

ನೀನಿರಲು ನನ್ನಾ ತೊಳಲಿ

ನಾನೆಂದು ನೋಡದಂತ ಬೆಳಕೊಂದು ಮೂಡಿದೆ ನಿನಗಷ್ಟೆ ಕೇಳುವಂತೆ ಮನಸಿಂದು ಹಾಡಿದೆ

ಕೈಯಿರಲು ನಿನ್ನಾ ಕೈಯಲಿ

 

ನಾನಿರುವೆ ನಿನ್ನಾ ಬಾಳಲಿ

 

ಬೆಳದಿಂಗಳಂತೆ ಮಿನು ಮಿನುಗುತ ||

 

 

6 comments:

Srikanth - ಶ್ರೀಕಾಂತ said...

Ctrl + C ಮತ್ತು Ctrl + V ಇರೋ ವರ್ಗು ನೀನು ಉದ್ಧಾರ ಅಗಲ್ಲ ಬಿಡು. 'ಕರ್ಮಕಾಂಡ' ಅಂತ ಬ್ಲಾಗಿಗೆ ಸರಿಯಾಗೇ ಹೆಸರಿಟ್ಟಿದ್ದೀಯ... ಹೋಪ್ಲೆಸ್ ಫೆಲ್ಲೋ...

Parisarapremi said...

ha ha ha ha ha ha ha ha ha ha...

Ramesh BV (ಉನ್ಮುಖಿ) said...

ಹಾಡು ಹೇಗಿರಬಹ್ದು ನೋಡೋಣಾಂತ ಕೇಳ್ದೆ..
..ಹಾಡು ಚೆನ್ನಾಗಿದೆ..
ಥಾಂಕ್ಸ್ ಕಣ್ರೀ ಶ್ರೀಧರ್

http://www.kannadaaudio.com/Songs/Moviewise/P/Psycho/Beladingalante.ram

Lakshmi Shashidhar Chaitanya said...

ಛೆ !

Srinivasa Rajan (Aniruddha Bhattaraka) said...

idakkenanta comment maaDbeko gottilla kaNappa.. goodh boy neenu :-) majjaaa maaDu

ಶ್ರೀನಿಧಿ.ಡಿ.ಎಸ್ said...

shreekanta comment supperro supparru:)