ಟೀವಿ ವಾಹಿನಿಗಳಲ್ಲಿ ಒಂದು ಕಾರ್ಯಕ್ರಮ ಸ್ವಲ್ಪ ಯಶಸ್ಸು ಗಳಿಸಿದರೆ ಅದನ್ನೇ ಅನುಸರಿಸಿ ಬೇರೆ ವಾಹಿನಿಗಳಲ್ಲಿ ಶುರುವಿಕ್ಕುತ್ತಾರೆ. ಅದಕ್ಕೆ ಉತ್ತಮ ನಿದರ್ಶನ ಈ ಟೀವಿಯಲ್ಲಿ ಪ್ರಸಾರವಾಗುವ "ಎದೆ ತುಂಬಿ ಹಾಡುವೆನು" ಕಾರ್ಯಕ್ರಮ. ಎಂದು ಈ ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳಿಂದ ಹಾಡಿಸಲು ಶುರು ಮಾಡಿದರೋ ಬೇರೆ ವಾಹಿನಿಗಳಲ್ಲೂ ಸಹ ಇದೇ ರೀತಿಯ ಕಾರ್ಯಕ್ರಮಗಳನ್ನು ಶುರು ಮಾಡಿದರು. ಈಗ ಯಾವ ಚಾನೆಲ್ ನೋಡಿದರೂ ಇದೇ ಕಾರ್ಯಕ್ರಮಗಳು. ತೀರ್ಪುಗಾರ ವೈವಿಧ್ಯಮಯ ತೀರ್ಪು, ಮಕ್ಕಳ ಕಾಂಪಿಟೇಶನ್, ಹೆತ್ತವರ ಉದ್ವೇಗ, ಚಪ್ಪಾಳೆ. ಎಲ್ಲವೂ ವಾರಕ್ಕೆ ಒಮ್ಮೆ ಬಂದರೆ ಚೆನ್ನ, ದಿನಾ ಅದೇ ಆಗಿಹೋದರೆ ಬೋರ್ ಹೊಡೆಸುತ್ತದೆ.
ಕಾರ್ಯಕ್ರಮದ ಉದ್ದೇಶ ಒಳ್ಳೆಯದೇ ಇರಬಹುದು, ಬಾಲ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವುದು ನಿಜಕ್ಕೊ ಶ್ಲಾಘನೀಯ. ಎಲ್ಲವೂ ಹಾಡು ಹಾಡುವುದಕ್ಕೆ ಏಕೆ ಕೇಂದ್ರೀಕೃತವಾಗಿದೆ? ಏಕೆ ಇದೇ ವಾಹಿನಿಗಳು ಚಿತ್ರ ಬರೆಯುವುದಕ್ಕೆ, ಕತೆ, ಕವನ ಹೇಳುವುದಕ್ಕೆ, ವೀಣೆ, ತಬಲ, ಕೊಳಲು ಇನ್ನು ಅನೇಕ ಸಂಗೀತ ಸಾಧನಗಳನ್ನು ನುಡಿಸುವುದಕ್ಕೆ, ಏಕಪಾತ್ರಾಭಿನಯ ಮಾಡುವುದಕ್ಕೆ ದೊಡ್ಡ ಮಟ್ಟದಲ್ಲಿ ವೇದಿಕೆ ಏಕೆ ಎರ್ಪಡಿಸಬಾರದು? ಟೀವಿ ವಾಹಿನಿಗಳನ್ನ ನಡೆಸುವವರಿಗೆ ಇದೂ ಕೂಡ ಹೊಳೆಯುವುದಿಲ್ಲವೆ?
ಎಲ್ಲರೂ ಒಂದಕ್ಕೆ ಏಕೆ ಗಂಟು ಬೀಳುತ್ತಾರೆ?
ಇವರುಗಳು ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶ ಜನರನ್ನು ತಮ್ಮ ವಾಹಿನಿಯೆಡೆಗೆ ಸೆಳೆಯುವುದೇ ಆಗಿದೆ. ಅದಕ್ಕೆ ಯಶಸ್ಸಿನ ಜಾಡನ್ನೇ ಹಿಡಿಯುತ್ತಾರೆ. ಇನ್ನೂ ಪ್ರವರ್ಧಮಾನಕ್ಕೆ ಬರದ ಹಾಡುಗಾರರೆಲ್ಲರೂ ಆಗಲೇ ಈ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿಬಿಟ್ಟಿದ್ದಾರೆ, ಅವರಿಗೆ ಸಂಗೀತವಾದರೂ ಎಷ್ಟರ ಮಟ್ಟಿಗಿದೆ? ಹಾಡುವ ಮಕ್ಕಳನ್ನು ಅಳೆಯಲು ನಿಜವಾಗಲು ಅವರಿಗೆ ಅರ್ಹತೆ ಇದೆಯೆ? ಸುಮ್ಮನೆ ಸ್ಟಾರ್ ಗಳನ್ನು ತಂದು ಕೂರಿಸಿರುತ್ತಾರೆ. ಈ ಕಾರ್ಯಕ್ರಮಗಳಿಗೆ ಬರುವವರೆಲ್ಲರೂ Celebrityಗಳೇ ಆಗಿರುತ್ತಾರೆ. ಇನ್ನು ತೀರ್ಪು ನೀಡುವ ಸಂಧರ್ಭಗಳಲ್ಲಿ ಎಲ್ಲ ವಾಹಿನಿಗಳಲ್ಲೂ ಒಂದೇ ರೀತಿಯ ಸಂಭಾಷಣೆಗಳು. "ಇಲ್ಲಿ ಯಾರೂ ಸೋತಿಲ್ಲ, ಯಾರೂ ಗೆದ್ದಿಲ್ಲ, ಎಲ್ಲರೂ ಚೆನ್ನಾಗಿಯೇ ಹಾಡಿದ್ದಾರೆ, ನನಗೆ ತೀರ್ಪು ನೀಡುವುದಕ್ಕೆ ನಿಜವಾಗಲೂ ಕಷ್ಟವಾಗುತ್ತಿದೆ" ಎಂದು ಹೇಳುತ್ತಲೆ ಒಬ್ಬರಿಗೆ ಪ್ರಶಸ್ತಿ ನೀಡುತ್ತಾರೆ.
ಇನ್ನು ಕೊನೆ ಸುತ್ತಿನಲ್ಲಿ ಪ್ರಶಸ್ತಿ ಕಳಕೊಂಡ ಮಕ್ಕಳು ಅಳುವುದು ಸಹಜ. ಆದರ ಅವರ ಪೋಷಕರೂ ಸಹ ಅಳುತ್ತಿರುತ್ತಾರೆ. feelings ಅರ್ಥ ವಾಗುತ್ತದೆ ನನಗೆ ಆದರೂ ಹೀಗೆ ಅಳುವ ಮಕ್ಕಳ ಜೊತೆ ಅಳುವುದು ಉಚಿತವೆ? ಬಂದು ಮಕ್ಕಳ ಮೈದಡವಿ ಸಮಾಧಾನ ಮಾಡುವುದು ಬಿಟ್ಟು. ಒಮ್ಮೊಮ್ಮೆ ರೇಗಿ ಹೋಗುತ್ತದೆ ಇವೆಲ್ಲವನ್ನು ನೋಡಿದರೆ. ಚಾನೆಲ್ ಬದಲಾಯಿಸಿಬಿಡುತ್ತೇನೆ.
ಬರೀ ಇಂತಹ ಕಾರ್ಯಕ್ರಮಗಳನ್ನೇ ಮಾಡುವ ಬದಲು Discovery, National Geographic, Animal Planet, History ಚಾನೆಲ್ ನಲ್ಲಿ ಬರುವ ಕೆಲವು ಒಳ್ಳೆಯ ಕಾರ್ಯಕ್ರಮಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಪ್ರಸಾರ ಮಾಡಬಾರದೇಕೆ?? ಇನ್ನಾದರೂ ಪ್ರಮುಖ ವಾಹಿನಿಗಳು ಒಂದೇ ತೆರನಾದ ಕಾರ್ಯಕ್ರಮಗಳಿಗೆ ಜೋತು ಬೀಳದೆ ಬೇರೆಡೆಗೆ ಗಮನ ನೀಡಿದರೆ ಒಳಿತು.
"ಪಾಡವಾ ತೀಯಗಾ ಕಮ್ಮನಿ ಒಕ ಪಾಟ..."
ಉತ್ತಿ ಬಿತ್ತಿದ್ದು
8 months ago
9 comments:
ಒಪ್ಪಿದೆ. ನೀನೇ ಏಕೆ ಒಂದು ಟಿ.ವಿ. ಚಾನಲ್ ಶುರು ಮಾಡಿ ನಿನ್ನ ಸಲಹೆ-ಸಿದ್ಧಾಂತಗಳನ್ನೆಲ್ಲಾ ಅನುಷ್ಠಾನಕ್ಕೆ ತರಬಾರದು?
"ಪಾಡವಾ ತೀಯಗಾ ಕಮ್ಮನಿ ಒಕ ಪಾಟ..." ಎಂದರೇನು?
ಶ್ರೀಕಾಂತರ ಪ್ರಶ್ನೆ ಡಿಟೋ ( ಆ ಲೈನಿನ ಅರ್ಥವೇನು ಅನ್ನೋದು)
ನಿಮ್ಮ ಬ್ಲಾಗ್ ನಲ್ಲಿ ಸೀರಿಯಸ್ ಆರ್ಟಿಕಲ್ ನೋಡಿ ಸ್ವಲ್ಪ ಆಶ್ಚರ್ಯ ಆಯ್ತು. but ಸಖತ್ತಾಗಿದೆ. points ಬಲಿಷ್ಟವಾಗಿವೆ.
ನೀವು ಹೇಳಿದಮ್ತೆ ಮಕ್ಕಳ ಇತರ ಪ್ರತಿಭೆಗಳನ್ನು ಪ್ರೋತ್ಸಾಹಿಸಲೂ ಒಂದು ಕಾರ್ಯಕ್ರಮವಿದ್ದರೆ ನಿಜವಾಗಿಯೂ ಚೆನ್ನ.
ನಿಮ್ ಮನೆ ಟಿ.ವಿ.ಗೆ ರಿಮೋಟ್ ಕೊಟ್ಟಿಲ್ವೇನೋ? ಚೇಂಜ್ ಮಾಡೋ ಚಾನೆಲ್‍ನ.
ade problem alva ... change maaddre ella channel nalloo ade thara pgm bartiruttalla karmakke!!!!
[ವಿಜಯಾ] ನಮ್ ಮನೆ ರಿಮೋಟ್ ಅಲ್ಲಿ "ಆಫ್" ಮಾಡೋ ಸೌಲಭ್ಯ ಇದೆ.
ನಿಮ್ಮ ಆರ್ಟಿಕಲ್ ವಿಷಯ ನನಗೆ ತುಂಬಾ ಮೆಚ್ಚುಗೆ ಆಯ್ತು. ಮಕ್ಕಳಲ್ಲಿನ ಪ್ರತಿಭೆಯನ್ನ ಗುರುತಿಸಲು ಇಂತಹ ಕಾರ್ಯಕ್ರಮಗಳು ಮೂಡಿಬರುತ್ತಿರುವುದು ಸಂತೋಷದ ವಿಷಯನೇ ಆದರೂ ಈಗೀಗ ಇದೆಲ್ಲಾ ಅತಿರೇಖದತ್ತ ಸಾಗ್ತಿರೋದು ದುಃಖದ ಸಂಗತಿಯಾಗಿದೆ ನನಗೆ.... ನೀವು ಇಲ್ಲಿ ಪ್ರಸ್ತಾಪಿಸಿರೋ ಹಾಗೆ ಮೊದಲು ಈಟಿವಿಯಲ್ಲಿ"ಎದೆ ತುಂಬಿ ಹಾಡುವೆನು "ಶುರು ಆಯ್ತು .ಆನಂತರ ಜಿಕನ್ನಡ ಹುಹ್..ಹುಹ್... ಈಗ ಉದಯವಾಹಿನಿಯಲ್ಲೂ ಶುರುಮಾಡಿದ್ದಾರೆ ಅದು ಒಂದೇ ಸಮಯದಲ್ಲಿ..ಮಕ್ಕಳ ಪ್ರತಿಭೆಯನ್ನ ಹೊರತರುವುದರೊಂದಿಗೆ ಅವ್ರುಗಳು ಸಿಕ್ಕ್ ಸಿಕ್ಕಾಪಟ್ಟೆ ದುಡ್ಡು ಮಾಡ್ಕೊಂಡಿದ್ದಾರೆ...
ಹೇಗೆ ಈ ರೀತಿ ಕಾರ್ಯಕ್ರಮಗಳನ್ನ ನಡೆಸ್ಕೊಂಡು ಹೋಗ್ತಿದ್ದಾರೋ ಅದೇ ರೀತಿ ಮಕ್ಕಳ "GnAna "ಭಂಡಾರವನ್ನ ಹೆಚ್ಚಿಸಿಕೊಳ್ಳುವ ಕಾರ್ಯಕ್ರಮಗಳನ್ನೇಕೆ ಹೊರತರುತಿಲ್ಲ?...
ತುಂಬಾ ದಿನಗಳ ನಂತರ ನಿಮ್ಮ ಬ್ಲಾಗಿನಲ್ಲಿ ಇಂತಹ ಒಂದು ವಿಷಯವನ್ನು ಬ್ಲಾಗಿಸಿರೋದನ್ನ ಓದಿ ಖುಷಿ ಆಗಿದೆ.ಹೀಗೆ ಸಾಗಲಿ ನಿಮ್ಮ ಬರಹ..ಇನ್ನು ಹೆಚ್ಚೆಚ್ಚು ಬರೆಯುವಂತಾಗಲಿ ಎಂದು ಹಾರೈಸುತ್ತೇನೆ.
next post??
#*R$*%(&
ಭ್ರಮಾಧೀನೋ ಹ್ಯಸ್ಮಿನ್ ಲೋಕಃ
ಭ್ರಮಾಸು ಭ್ರಮತೇ ಮನಃ
ಬ್ರಹ್ಮ ಏವೈಕ ಹಿ ಸತ್ಯಂ
ಭ್ರಮಾಖಿಲೋಽಪಿ ತದ್ವಿನಾ
ತದ್ಬ್ರಹ್ಮಾ ಗುಣದೂರೋಸ್ತಿ
ತಂ ಜ್ಞಾತುಂ ಕುರು ಯತ್ನಂ ತ್ವಂ
ತಜ್ಜ್ಞಾನಂ ಪ್ರಾಪ್ನೋಸಿ ಯದಾ
ತ್ವಂ ಬ್ರಹ್ಮ ನಿರ್ಗುಣೋ ತದಾ
ಏತದೇವ ಹಿ ಮಜ್ಜ್ಞಾನೇ
ಆಚಾರ್ಯಶಂಕರಮತಃ
ಭ್ರಮಾಂ ಬ್ರಹ್ಮಾರ್ಪಣಂ ಕೃತ್ವಾ
ಬ್ರಹ್ಮೋ ಭವತು ಶ್ರೀಧರ
Post a Comment