ಕಥೆಗಾರ....

Monday, September 29, 2008


ಇದು ನನ್ನ ತಂಗಿಯ ಅಬ್ಸರ್ವೇಶನ್. ಜೊತೆಗೆ ನನ್ನಗನ್ನಿಸಿದ್ದು ಸೇರಿಸಿ ನಿಮ್ಮ ಮುಂದಿಡುತ್ತಿದ್ದೇನೆ. ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಕಮೆಂಟಿಸಿ..

ಒಂದು ಮಧ್ಯಾನ್ಹ ಹೀಗೆ ಅವಳೊಡನೆ ಚರ್ಚಿಸುತ್ತಿದ್ದೆ, ಕನ್ನಡ ಬರಹಗಾರರ ಬಗ್ಗೆ, ತೇಜಸ್ವಿ ಬಹಳ ಚೆನ್ನಾಗಿ ಬರೀತಾರೆ, ಎಷ್ಟು ಸರಳವಾಗಿ ವಿಷಯ ಮುಟ್ಟಿಸುತ್ತಾರೆ, ಭೈರಪ್ಪನೋರು ಒಂಥರಾ ಸ್ತ್ಯಾಂಡರ್ಡ್, ಸಿಕ್ಕಾಪಟ್ಟೆ ಫಿಲಾಸಪಿ ಓದಿಕೊಂಡಿದ್ದಾರೆ, ಅವರ ಕಾದಂಬರಿಗಳು ಓದಿ ಮುಗಿಸಿದರೆ ಅದೇ ಗುಂಗಿನಲ್ಲಿ ಇರಬೇಕಾಗುತ್ತದೆ ಹಾಗೆ ಹೀಗೆ ಅಂತೆಲ್ಲ.

ತಟ್ಟನೆ ಹೇಳಿದಳು "ನೋಡಣ್ಣ ಈ ಕತೆಗಳು ಕಾದಂಬರಿಗಳು ಬರೆಯುವ ಮಂದಿಯನ್ನು ನೋಡಿದ್ದೇನೆ, ಅವರ್ಯಾರು ಮೂಲತ: ಬೆಂಗಳೂರಿನವರಲ್ಲ, ಅವರಿಗೊಂದು ಮೂಲವೆಂಬುದು ಇರುತ್ತದೆ ಅದು ಹಳ್ಳಿಗಳು. ಬೆಂಗಳೂರಿನ ಮೂಲದವರಿಗೆ ಒಳ್ಳೆ ಕತೆ ಹೆಣೆಯಲು ಆಗುವುದಿಲ್ಲವೆನಿಸುತ್ತದೆ" ಎಂದಳು.ನಾನು ಆದಾದ ಬಳಿಕ ಯೋಚಿಸತೊಡಗಿದೆ, ಬೆಳಗೆರೆ ಬಳ್ಳಾರಿಯವರು, ಭೈರಪ್ಪ ಚನ್ನಪಟ್ಟಣದ ಕಡೆಯವರು, ತೇಜಸ್ವಿ ಮೂಡಿಗೆರೆಯವರು, ಕಾಯ್ಕಿಣಿ ಗೋಕರ್ಣದವರು. ಅರೆರೆ ನನಗೆ ತಿಳಿದವರು ಬೆಂಗಳೂರಿನವರು ಯಾರು ಇಲ್ಲ!! ತಕ್ಷಣ soft soft software ಕತೆಗಳನ್ನು ಬರೆಯುವ ವಸುಧೇಂದ್ರರಿದ್ದಾರಲ್ಲ ಎಂದು ನಿರಾಳವಾಯಿತು. ನಾನು ಅದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕಾರಣ ಅವರ ಕತೆಗಳು ಹೆಚ್ಚು ಇಷ್ಟವಾಗುತ್ತದೆ, ಕಾರಣ ಅದು ನಮಗೆ ಹತ್ತಿರವಾಗಿರುತ್ತದೆ. ಅವರ "ಎಲ್ಲರ ಮನೆ ಕಾರಿಗೂ ನೆಗ್ಗು" ಎಂಬ ಲೇಖನವನ್ನ ಪತ್ರಿಕೆಯಲ್ಲಿ ಓದಿದ್ದೆ. ಇಡೀ ಪತ್ರಿಕೆಯನ್ನ ಜತನವಾಗಿ ಇಂದಿಗೂ ಕಾಪಿಟ್ಟುಕೊಂಡಿದ್ದೇನೆ, ಅಷ್ಟು ನಕ್ಕಿದ್ದೇನೆ. ಒಬ್ಬರಾದರೂ ಸಿಕ್ಕರಲ್ಲ ಎಂದು ಅವರ ಪುಸ್ತಕ ತೆರೆದು ನೋಡಿದರೆ "ಬಳ್ಳಾರಿಯ ಸಂಡೂರಿನಲ್ಲಿ ಜನನ" ನೋಡಿ ನಿರಾಶನಾದೆ. ಉಹೂ ಬೆಂಗಳೂರಿನವರು ಸಿಗಲೇ ಇಲ್ಲ.
ಮತ್ತೆ ಹುಡುಕಿ ಹುಡುಕಿ ಸಾಕಾಯಿತು. ನಿಮಗಾರಾದರು ಗೊತ್ತಿದ್ದರೆ ತಿಳಿಸಿ.

ಪಟ್ಟಣಗಳಲ್ಲಿ ದೊಡ್ಡ ದೊಡ್ಡ ಶಹರಗಳಲ್ಲಿ ಹುಟ್ಟಿ ಬೆಳೆದವರಿಗೆ ಕತೆಗಳು ಏಕೆ ಹುಟ್ಟುವುದಿಲ್ಲವೋ ನಾ ಕಾಣೆ. ನಾನು ಹಲವಾರು ಪ್ರಯತ್ನಿಸಿದ್ದೇನೆ, ಸಣ್ಣ ಕತೆಗಳು ಬರೆಯಲು. ರಭಸವಾಗಿ ಬೈಕ್ ಓಡಿಸುವಾಗ ಯಾವುದೋ ತಿರುವಿನಲ್ಲೋ ಸಿಗ್ನಲಿನಲ್ಲೋ ಕತೆ ಹುಟ್ಟಿಕೊಂಡಿರುತ್ತದೆ. ಲೋಕದ ಚಿಂತೆ ಮರೆತು ಕತೆಗೆ ರೆಕ್ಕೆ ಪುಕ್ಕ ಕಟ್ಟಲು ಕೂತಿದ್ದೇನೆ. ಬೈಕ್ ಪಾಡಿಗೆ ರಭಸವಾಗಿ ಹೋಗುತ್ತಿರುತ್ತದೆ ಕತೆಯ ಓಘ ಕೂಡ ಅದೇ ರಭಸದಲ್ಲಿ ಬೆಳೆಯುತ್ತಿರುತ್ತದೆ. "ಒಂದು ಮುಂಜಾವಿನಲ್ಲಿ ಆತ ಹಳ್ಳಿಯಿಂದ ಹೊರಟ, ಮನೆಯಲ್ಲಿ ಇನ್ನು ಇರಲಾಗುವುದಿಲ್ಲವೆಂದು ನಿರ್ಧರಿಸಿದ, ಮನೆಯ ಕಿರುಕುಳ ಸಾಕೆಂದು .........." ಹೀಗೆ ಹಲವು ಸಾಲುಗಳು. ಮತ್ತೆ ಕತೆ ಆರಂಭಿಸಲು ಯಾವುದೋ ಹಳ್ಳಿ ಹೆಸರನ್ನು ತಡಕಾಡುತ್ತಿರುತ್ತೇನೆ. ಜೀವಮಾನದಲ್ಲೇ ಒಂದು ಹಳ್ಳಿಯನ್ನೂ ಸರಿಯಾಗಿ ನೋಡದ, ಅಲ್ಲಿನ ಪರಿಸರ ತಿಳಿಯದ ನಾನು ಕತೆ ಹೇಗೆ ಬರೆಯಲು ಸಾಧ್ಯ?M G road ಶುರುವಾಗುವ ಹೊತ್ತಿಗೆ ಶುರುವಾಗುವ ಕತೆ Corporation ಬಳಿ ಬರುವುದರೊಳಗಾಗಿ ರೆಕ್ಕೆ ಪುಕ್ಕ ಸರಿಯಾಗಿ ಅಂಟಿಕೊಳ್ಳದೆ ಕತೆ ಸತ್ತಿರುತ್ತದೆ, ಬೈಕ್ ನ ವೇಗವೂ ಕಮ್ಮಿಯಾಗಿರುತ್ತದೆ. ಕತೆ ಬರೆಯಲು ಮನಸಿನ್ನೂ ಮಾಗಿಲ್ಲವೆಂದು ಸುಮ್ಮನಾಗುತ್ತೇನೆ. ತೇಜಸ್ವಿಯವರ "ಚಿದಂಬರ ರಹಸ್ಯ" ಓದಿ ಅದರಲ್ಲಿ ಬರುವ ಲಂಟಾನದ ಜಿಗ್ಗು ತಿಳಿಯಲು ನಾನು ಪಟ್ಟ ಹರಸಾಹಸ ಅರುಣನಿಗೆ ಮಾತ್ರ ಗೊತ್ತು. ರಂಗಶಂಕರದಲ್ಲಿ ನಾಟಕವನ್ನು ಏರ್ಪಡಿಸಿದಾಗ ನಾನು ಕಾಯುತ್ತಲಿದ್ದು ಲಂಟಾನದ ಜಿಗ್ಗು ನೋಡಲೆಂದೆ. ಮುಳ್ಳಯ್ಯನಗಿರಿ ಚಾರಣದಲ್ಲಿ ಅರುಣ ತೋರಿಸಿದ್ದ "ಇದೇ ಕಣೊ ಲಂಟಾನದ ಜಿಗ್ಗು" ಎಂದು..ಇನ್ನು ಸಮಾಧಾನವಾಗಿಲ್ಲ. ತೇಜಸ್ವಿಯರ ಕತೆಗಳ ಪಾತ್ರಗಳೇ ತಿಳಿಯಲು ಇಷ್ಟು ಒದ್ದಾಡಿದರೆ ನಾನು ಹೇಗೆ ತಾನೆ ಕತೆ ಬರೆಯಬಲ್ಲೆನು?

ಕನ್ನಡದಲ್ಲಿ ಆರುನೂರಕ್ಕೂ ಹೆಚ್ಚು ಬ್ಲಾಗುಗಳಿದೆ. ಅದರಲ್ಲಿ ಬೆಂಗಳೂರಿನವರೆಂದರೆ ಎಂದರೆ ಒಂದಂಕಿಯಲ್ಲಿ ಎಣಿಸಿಬಿಡಬಹುದು. ಎಲ್ಲರಿಗೂ ಬೇರೆಯ ಮೂಲವೊಂದಿರುತ್ತದೆ. ಅದಕ್ಕಾಗಿ ಕತೆಗಳು ಹುಟ್ಟುತ್ತವೆ ಎನಿಸುತ್ತಿದೆ ನನಗೆ. ಒಂದಷ್ಟು ಹಳ್ಳಿಗಳು, ಬೆಟ್ಟಗಳು, ಊರು ಕೇರಿ ಸುತ್ತಿ ಬಂದರೆ ಕತೆಗಳನ್ನ ಬರೆಯಬಹುದೇನೊ? ಬರೆದರೆ ಖಂಡಿತಾ ನಿಮ್ಮ ಮುಂದಿಡುತ್ತೇನೆ.

ವಿ.ಸೂ : ಇಲ್ಲಿ ಬೆಂಗಳೂರಿನವರು ಏಕೆ ಕತೆ ಬರೆಯಲಾಗುತ್ತಿಲ್ಲ ಎಂಬುದನ್ನ ತಿಳಿಯಲು ಯತ್ನಿಸಿರುವದರ ಬಗ್ಗೆ ಬರೆದಿದ್ದೇನಷ್ಟೆ, ಬೇರೆ ಊರಿನವರ ಬಗ್ಗೆ ಜೆಲಸಿ ಇದೆಯೆಂದು ಅಪ್ಪಿ ತಪ್ಪಿಯೂ ಕೂಡ ಭಾವಿಸಬೇಡಿ. ಜೈ ಕರ್ನಾಟಕ.

19 comments:

ವಿ.ರಾ.ಹೆ. said...

ಕರ್ಮಕಾಂಡ, ಒಳ್ಳೆ ಅಬ್ಸರ್ವೇಷನ್ನು. ನಾನೂ ಒಮ್ಮೆ ಇದನ್ನೇ ಯೋಚಿಸಿದ್ದೆ. ಕಥೆ ಮುಂತಾದ ಬರಹಗಳು ಬರುವುದು ಅನುಭವದಿಂದ ಮತ್ತು ಅದನ್ನು ಅಭಿವ್ಯಕ್ತಿಗೊಳಿಸುವ ಸಾಮರ್ಥ್ಯದಿಂದಂತೆ. ಬೆಂಗಳೂರಿನಲ್ಲಿನ ’ಬೇರೆ’ಯದೇ ರೀತಿಯ ಜೀವನದಿಂದಾಗಿ ಆ ಬರೆಯುವಿಕೆಗೆ ಮನಸು ತೆರೆದುಕೊಳ್ಳುವುದೇ ಇಲ್ಲ. ತೆರೆದುಕೊಂಡರೂ ಅದನ್ನು ಅಭಿವ್ಯಕ್ತಿಗೊಳಿಸುವ ಭಾಷೆಯ ಮೇಲಿನ ಹಿಡಿತ ಬೆಂಗಳೂರಿಗರಿರುವುದಿಲ್ಲವೇನೋ! ಉದಾಹರಣೆಗೆ ಸಿಟಿ ಮಧ್ಯದಲ್ಲಿರುವ ಸ್ಮಶಾನವನ್ನು ಹುಟ್ಟಿದಾಗಿಲಿಂದ ಕಂಡವರಿಗೆ ’ಭೀಕರ ಸ್ಮಶಾನ ಮೌನ’ ಎಂದರೆ ಹೇಗಿರುತ್ತದೆ ಎಂಬ ಕಲ್ಪನೆ ಬರುವುದಾದರೂ ಹೇಗೆ ಅಲ್ಲವೆ! ಅವರ ಇಂಗ್ಲೀಷ್ ಶಿಕ್ಷಣದಿಂದಾಗಿ ಕನ್ನಡದಲ್ಲಂತೂ ಬರೆಯುವುದು ಬಹುತೇಕರಿಗೆ ಸಾಧ್ಯವಿಲ್ಲ.


ಆದ್ರೂ ನೀವ್ಯಾಕೆ ನಗರದ ಬದುಕಿಗೆ ಸಂಬಂಧಪಟ್ಟಂತಹ ಕಥಾ ವಸ್ತುಗಳನ್ನೇ ಇಟ್ಟುಕೊಂಡು ಕತೆ, ಬರಹ ಬರೆಯಲು ಪ್ರಯತ್ನಿಸಬಾರದು. ಕತೆ ಎಂದರೆ ಖಂಡಿತ ಹಳ್ಳಿಯದೇ, ಸೋಗೆ ಮನೆಯದೇ, ಬಾಳೆ ತೋಟದ್ದೇ ಆಗಬೇಕೂಂತ ಇಲ್ಲವಲ್ಲ!

Parisarapremi said...

ಮಂಕೇ..

ಡಿವಿಜಿ ಎಲ್ಲಿಯವರು? ಕೆ.ವಿ.ಅಯ್ಯರ್ ಎಲ್ಲಿಯವರು?? ಕೈಲಾಸಂ ಎಲ್ಲಿಯವರು??? ಜಿ.ಪಿ.ರಾಜರತ್ನಂ ಎಲ್ಲಿಯವರು???? ನೀನು ಎಲ್ಲಿಯವನು??????

ಕಥೆಗಾರರು ಬೆಂಗಳೂರಿನಲ್ಲೂ ಇದ್ದರು, ಇದ್ದಾರೆ, ಇರುತ್ತಾರೆ!!

ಇಷ್ಟೆಲ್ಲಾ ಯಾಕೆ, ಸಣ್ಣ ಕಥೆಗಳ ಜನಕ ಎಂದೇ ಖ್ಯಾತರಾಗಿದ್ದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಹುಟ್ಟಿದ್ದು ಕೋಲಾರದ ಬಳಿಯ ಮಾಸ್ತಿಯಷ್ಟೆ, ಆದರೆ ಅವರ ಜೀವನವೆಲ್ಲಾ ಬಸವನಗುಡಿಯಲ್ಲೇ ಕಳೆದರು, ಕಥೆ ಬರೆಯುತ್ತ!!

ನಿನ್ನ ಯೋಚನೆ ಸರಿ ಇಲ್ಲ. ನೀನು ಹೋಪ್‍ಲೆಸ್.

Srikanth - ಶ್ರೀಕಾಂತ said...

bengLuralli huTdorge kathe bariyakke aagalla antalla... eechege kathe bariyakkaagde iro ashtu yaavano paradeshiya seve maaDodralli busy aagbiDtidaare ashte...

Srinivasa Rajan (Aniruddha Bhattaraka) said...

hmmm.. "naaneke bareyuttilla" aaytu, "naaneke kathe bareyuttilla" aaytu (title ade aldidru, saara ade)..

next in line irodu yavdu?

ಅಂತರ್ವಾಣಿ said...

ರಾಜು,
ಜಾಗ ಮುಖ್ಯವಲ್ಲ. ಆಸಕ್ತಿ ಮುಖ್ಯ. ಎಲ್ಲಾ ಊರಿನವರೂ ಸಹ ಕಥೆ ಬರೆಯಬಹುದು.

Dynamic Divyaa said...

abhipraaya na mukthavaagi commentisbekaa....

hegO kaNNige bid biDutte... :-D U seeee...

'madhyaana' (ಮಧ್ಯಾನ್ಹ ) illi,
'na' ge 'ha' ottu koDodaa, illa 'ha' ge 'na' ottu koDbekaa....
bengLoor baravaNige.. :-D don't byyi....

Ene aadru naanu ninge support!!
bengLoor alle huTTi baaLi baduktaa irOrge ashT chenaag baryak baralla annOdu observationnu!
kaaraNa ene irli - kobbu, time illa, talent illa, oLa noTa illa, tOrike.. etc etc..
jaagada prabhaava!

idukke 'behaviourial psychology' anbodaa?! maaye man maaye!!!
haaganta baryak aagadE illa antalla man!!!

mankE... DonkE.... pinkE.......

Srikanth - ಶ್ರೀಕಾಂತ said...

ಡೈನಮಿಕ್ - "ಇನ್ನೊಬ್ಬರ ತಟ್ಟೇಲಿ ಬಿದ್ದಿರೋ ಜಿರಳೆ ನೋಡೋದು ಬಿಟ್ಟು ನಿನ್ನ ತಟ್ಟೇಲಿ ಬಿದ್ದಿರೋ ಹೆಗ್ಗಣ ನೋಡು" ಅಂತ ಗಾದೆ ಇದೆ.

Parisarapremi said...

@ಡೈನಮಿಕ್: ನಿನ್ ತಟ್ಟೇಲಿ ಹೆಗ್ಗಣ ಬಿದ್ದಿದೆ. ಕೊಳೆತು ನಾರುತ್ತಾ ಇದೆ. ಅದನ್ನು ನೋಡು. ಶ್ರೀಧರನ ತಟ್ಟೇಲಿ ಜಿರಲೆ ಮಾತ್ರ ಬಿದ್ದಿದೆ, ಅಪ್ಪಚ್ಚಿಯಾಗಿ. ;-)

Sushrutha Dodderi said...

ಮೊನ್ನೆ ಮೇಫ್ಲವರಲ್ಲೂ ಈ ವಿಷಯ ಬಂತು.. ಪ್ರತಿಭಾ ನಂದಕುಮಾರ್ ಅಂದ್ರು, ತಾನಂತೂ ಬೆಂಗಳೂರಲ್ಲೇ ಹುಟ್ಟಿದವಳು, ಇಲ್ಲೇ ಬೆಳೆದವಳು, ಇಲ್ಲೇ ಸಾಯುವವಳು. ಅದ್ಕೇ ತಾನು ಏನೇ ಬರೆದ್ರೂ ಅದ್ರಲ್ಲಿ ನಗರದ ಚಿತ್ರಗಳೇ ತುಂಬಿರ್ತವೆ; ಹಳ್ಳಿಮನೆ, ನದೀನೀರು, ಚಿಮಣಿ ದೀಪ, ಜನಪದ ಸೊಗಡು, ಇತ್ಯಾದಿ ಇರಲ್ಲ.. ಆದ್ರೆ ತಾನು ನಗರ ಜೀವನದ ಕತೆಗಳನ್ನ ಬರೆದು ಪತ್ರಿಕೆಗಳಿಗೆ ಕಳಿಸಿದ್ರೆ ಅವ್ರು ಅದನ್ನ ಅಕ್ಸೆಪ್ಟೇ ಮಾಡ್ಕೊಳಲ್ಲ.. ಅದ್ರಲ್ಲಿ ಕಾವ್ಯ ಇಲ್ಲ; ಜನಪದ ಇಲ್ಲ; ಸಂಸ್ಕೃತಿ ಇಲ್ಲ ಅಂತಾರೆ.. ಏನ್ ಮಾಡೋದು -ಅಂತ.

ಪ್ರತಿಭಾರಂಥವರಿಗೇ ಹೀಗಾದ್ರೆ ಇನ್ನು ಹೊಸ ಬರಹಗಾರರು ಬೆಂಗಳೂರಿನ ಕತೆಗಳನ್ನ ಬರೆದ್ರೆ ಗತಿ ಏನು?!

ವಿ.ರಾ.ಹೆ. said...

ಪರಿಸರ ಪ್ರೇಮಿಗಳೇ, ಡಿ.ವಿ.ಜಿ, ಅಯ್ಯರ್, ಕೈಲಾಸಂ, ರಾಜರತ್ನಂ ಕಾಲದ ಬೆಂಗಳೂರು ಬೇರೆ, ಕರ್ಮಕಾಂಡ ಶ್ರೀಧರನ ಕಾಲದ ಬೆಂಗಳೂರು ಬೇರೆ. ಅಲ್ವಾ? ಆಗಿನ ಕಾಲದಲ್ಲಿ ಬೆಂಗಳೂರು ಅಂದ್ರೆ ಬೇರೆ ಊರುಗಳಿಗಿಂತ ಬೇರೆಯೇ ತರನಾಗಿ ಅಥವಾ ಇಲ್ಲಿನ ಬದುಕು ಬೇರೆ ಕಡೆಗಳಿಗಿಂತ ಭಾರೀ ವ್ಯತ್ಯಾಸದಿಂದ ಏನೂ ಇರಲಿಲ್ಲ. ಆವಾಗ ಡಿ.ವಿ.ಜಿ ಕಗ್ಗ ಬರೆದರು, ಆದರೆ ಈಗಿನ ಬೆಂಗಳೂರಿನ ಮಕ್ಕಳಿಗೆ ಕಗ್ಗ ಅಂದ್ರೆ ಕೆ.ಜಿಗೆಷ್ಟು ಅಂತಾರೆ. ಅದೇ ಊರು,ಆದೇ ಬೆಂಗಳೂರು ಆದ್ರೆ ವ್ಯತ್ಯಾಸ ಗಮನಿಸಿದ್ರಾ? :)

Sridhar Raju said...

@vikas hegde : aa abhivyakthi saamarthya antha heeLtheeralla adu nagaradallirorge kammi irutte..

nagara badukie sambhandisida kathe baryakke khanditha try maadtheeni :-)

@parisarapremi : elliyavru antha hange neene comment haakbekittu..ivrella bengLur nalli huttilla ansutte..
ellelindalo amele bengLur serkondirbeku....
naanu saryaage yochne maadtideeni...am not hopeless :-)

@srikanth :en maadodu udara nimitta...

@srinivasa : next inline yaavdo nangu gottilla?? aadre srinivasa yaake netge comment maadtilla??

@antarvaaNi : aasakti khandita idhe..aadre aagalla shankar..

@dynamic : benglur nallirorge kathe baryakke aagalla anthalla..
aadroo sareehogalla... :-)

goodh oLLe tapp kand hidididya..i appreciate it..ninge nan blog ooduvaaaga saamaajika jaagruthi ide..adunna naanu mechtheeni.... ;-)

@sushrutha : devree gathi...

Srikanth - ಶ್ರೀಕಾಂತ said...

udara-nimitta ella kaaladavarigoo idddide... baayge bandiddella heLbeDa



"ninge nan blog ooduvaaaga saamaajika jaagruthi ide..adunna naanu mechtheeni..."

en saamaajika jaagruti?

Somashekar said...
This comment has been removed by the author.
Parisarapremi said...

[ವಿಕಾಸ್] ಸರಿಯಾಗ್ ಹೇಳ್ದ್ರಿ ನೋಡಿ.. ಅದಕ್ಕೆ ಕಾರಣ, ಬಹುಶಃ ಬೆಂಗಳೂರಿನ ಜನ ದೇಶ ಬಿಟ್ಟು ಹೋಗ್ತಿರೋದು, ಮತ್ತು ಅವರ ಜಾಗಕ್ಕೆ ಬೆಂಗಳೂರೇತರರು (ಕೆಟ್ಟ ಪದ ಪ್ರಯೋಗ) ಬಂದಿರುವುದು. ಅಷ್ಟೆ.

[ಶ್ರೀಧರ] ನೀನು ಯಾವಾಗ್ಲೂ ಹೀಗೇನೋ, ಅಥ್ವಾ ಬ್ಲಾಗ್ ಬರೆಯುವಾಗ ಮಾತ್ರ ಹೀಗೋ?

Sree said...

ಹಳ್ಳಿ, ಕಾಡು, ನದಿ, ಹೊಲ ಗದ್ದೆ ಇಲ್ಲದೇ ಬರಿಯೋದು ಒಳ್ಳೇ ಸಾಹಿತ್ಯ ಅಲ್ಲವೇನೋ ಅಂತ ನಮ್ಮ ತಲೆಯಲ್ಲೂ ಎಲ್ಲೋ ಸ್ವಲ್ಪ ಡೌಟು ಬರ್ತಿರತ್ತೇನೋ, ನನಗಂತೂ ಬರುತ್ತೆ, ಅದು ತಪ್ಪು ಅಂತ ಗೊತ್ತಿದ್ರೂ! ಜಯಂತ್ ಸಾರ್ ಕಾರವಾರ-ಅಂಕೋಲೆಗಳನ್ನೆಲ್ಲ ಬಿಟ್ಟು ಮುಂಬೈ ಬದುಕಿನ ಬಗ್ಗೆಯೇ ಬರೆದಾಗ್ಲೂ ಆ ನಗರಜೀವನದ ಏಕತಾನತೆಯಲ್ಲೇ ಎಂಥ ಚೆಂದದ ಹಾಡುಗಳು ಕೇಳುತ್ವಲ್ಲ? ಇಲ್ಲಿಯ ಬದುಕಿನಲ್ಲಿ ಬರಹಕ್ಕೊದಗೋ ವಸ್ತು ಇಲ್ಲ ಅನ್ನೋದು ಹಾಗಿದ್ರೆ ಸುಳ್ಳು ಅಲ್ವಾ...
ಇನ್ನು ಅರುಣ್ ಕೊಟ್ಟಿರೋ ಲಿಸ್ಟು ಅಂದಿನ ಬೆಂಗಳೂರಿನದ್ದು ಅಂದುಕೊಂಡ್ರೆ,(ನಿಮ್ಮ ಲಿಸ್ಟಿನಲ್ಲಿರೋದೂ ತೇಜಸ್ವಿ, ಭೈರಪ್ಪ...) ಈಗಿನ ಬೆಂಗಳೂರಿಗರಲ್ಲಿ ಕಥೆ ಹುಟ್ಟೋದಿಲ್ಲ ಅನ್ನೋದೂ ಸರಿಯಲ್ಲ ಅಂತ ನನಗನ್ನಿಸುತ್ತೆ. ಭಾಷೆ ಚೆನ್ನಾಗಿ ಬರೋವ್ರು ಕಮ್ಮಿ - ಅದು ಒಪ್ಪೋ ವಿಷ್ಯ. ಭಾಷೆ ಒಂದೇ ಯಾಕೆ, ಯಾವುದೇ ಕಲೆಗೂ ಇಲ್ಲಿ ಪುರುಸೊತ್ತು ಕಮ್ಮಿ. ಹಾಗೆ ಅಭಿರುಚಿ ಬೆಳೆಸಿಕೊಳ್ಳೋಕೂ ನಾವು ಪ್ರವಾಹದ ವಿರುದ್ಧವೇ ಈಜುತ್ತಿರಬೇಕಾಗುತ್ತೆ... ಆದ್ರೆ ಭಾಷೆ, ಅಭಿರುಚಿ ಇದ್ದೂ ಬೆಂಗಳೂರಿಗನಾ/ಳಾದ ಮಾತ್ರಕ್ಕೆ ಕಥೆ ಬರಿಯೋಕೆ ಆಗಲ್ಲ ಅನ್ನೋಕೆ ಮಾತ್ರ ಕಾರಣಗಳಿಲ್ಲ ಅನ್ನಿಸುತ್ತೆ...
ಆದ್ರೆ ಪ್ರತಿಭಾ ಅವ್ರು ಹೇಳಿದ್ದನ್ನ ಸುಶ್ರುತ ಇಲ್ಲಿ ಹೇಳಿರೋ ಹಾಗೆ ಸಾಹಿತ್ಯ ವಲಯದಲ್ಲಿ ಇಲ್ಲಿನ ಅಭಿವ್ಯಕ್ತಿಯ ಬಗ್ಗೆ(ವಿಷಯ, ಶೈಲಿ, ಭಾಷೆ...) ಸ್ವಲ್ಪ ಅಸಹನೆಯೇ ಇದ್ಯಾ ಅಂತ ನನಗನ್ನಿಸುತ್ತೆ...

Anonymous said...

ಎನೋಪ ನೀವು ಬೆಂಗಳೂರನ್ನ ಜರಿತಿದ್ದೀರಿ ಅನ್ನಿಸುತ್ತೆ..;) ಯಾರು ಎಲ್ಲಿ ಹುಟ್ಟಿ ಬೆಳದಿದ್ದರೂ..ಬೆಂಗಳೂರಿನ ಮಾಯೆಯಿಂದ ತಪ್ಪಿಸಿಕೊಳ್ಳೋಕೆ ಆಗೋದಿಲ್ಲ ಅಲ್ಲವ;).ಹುಟ್ಟಿದ್ದು ಎಲ್ಲೇ ಅದರೂ ನಮಗೆ ಹುಚ್ಚು ಹಿಡಿಸಿದಂತೆ ಬರೆದಿದ್ದು ಹೆಚ್ಚು ಬೆಂಗಳೂರಿನಲ್ಲೆ ಅಲ್ಲವ?

Parisarapremi said...

ಹೌದು. ಸೋಮ ಅವರು ಹೇಳುವುದನ್ನು ಗಮನಿಸಿದರೆ, ಈ ಲೇಖಕರು ಬೆಂಗಳೂರಿನ ಅನ್ನದ ಋಣಿಯಾದರೂ ಬೆಂಗಳೂರಿನ ಬಗ್ಗೆ "ತಾತ್ಸಾರ"ದ ಮಾತುಗಳನ್ನಾಡಿ, ಪರದೇಶವ್ಯಾಮೋಹವನ್ನು ಮೆರೆಸುತ್ತಿದ್ದಾರೆಂದು ನಿರೂಪಣೆಯಾಗುತ್ತೆ. ಜೊತೆಗೆ, ಕೋಮುಗಲಭೆಗೂ ಈಡು ಮಾಡುವಂತಹ ಇಂಥಾ ಲೇಖನಗಳನ್ನು ಹೆಚ್ಚು ಹೆಚ್ಚು ಬರೆಯುವ ಶ್ರೀಧರ ಅವರು ಸಾಮಾಜಿಕ ಕಳಕಳಿಯುಳ್ಳ ಇನ್ನೊಂದು ಹೊಸ ಲೇಖನವನ್ನು ಬರೆಯಬೇಕೆಂದು ಆಜ್ಞಾಪಿಸುತ್ತೇನೆ.

ಏನಾದ್ರೂ ಮಾಡ್ಕೊಂಡ್ ಸಾಯಿ, ಮಗನೇ.. ;-)

Srikanth - ಶ್ರೀಕಾಂತ said...

ಲೋ ಶ್ರೀಧರ, ಬೆಂಗಳೂರಿನವರು ಕಥೆ ಬರಿಯಕ್ಕಾಗಲ್ಲ ಅಂತೆಲ್ಲಾ ರೈಲು ಬಿಟ್ಟಿದ್ದು ಸಾಕು. ಮೊದಲು ಒಂದು ಕಥೆ ಬರಿ. ವಿಷಯ ಗೊತ್ತಾಗಲ್ವೋ ಅಂತ ಹೇಳ್ತೀಯ ಅಂತ ಗೊತ್ತು. ಅದಿಕ್ಕೆ ನಾನೇ ವಿಷಯವನ್ನೂ ಹೇಳಿಬಿಡುತ್ತೀನಿ.

"ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ ಬೀಡಿ ಕಟ್ಟುವ ಕೆಲಸ" - ಇದು ನಿನಗೆ

"ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ ಸೀಗೆ ಪುಡಿ ಕಟ್ಟುವ ಕೆಲಸ" - ಇದು ಯಾರಿಗೆ ಅಂತ ನಿಂಗೂ ಗೊತ್ತು, ನಂಗೂ ಗೊತ್ತು.

ವಿಷಯ ಹೇಳಿದೀನಿ. ಇನ್ನು ಬರೀತೀಯೋ ಬಿಡ್ತೀಯೋ ಗೊತ್ತಿಲ್ಲ. ನೀನುಂಟು! ನಿನ್ನ ಕರ್ಮ ಉಂಟು!

Parisarapremi said...

Next post please..