ಅಭಿಮಾನಿ...

Tuesday, January 29, 2008ನಾನು ಭೈರಪ್ಪನವರ ಎರಡು ಕಾದಂಬರಿಗಳನ್ನು ಮಾತ್ರ ಓದಿದ್ದೇನೆ...’ಆವರಣ’ ಮತ್ತು ’ಸಾಕ್ಷಿ’, ಎರಡೂ ಸಹ ಅನನ್ಯ ಕೃತಿಗಳು. ಅವರು ಇದುವರೆಗೂ ಬರೆದ ಅಷ್ಟೂ ಕಾದಂಬರಿಗಳನ್ನು ಕೊಂಡು ಯಾವುದಾದರೂ ಬೆಟ್ಟದ(ಕೊಡಚಾದ್ರಿ) ತುದಿಯಲ್ಲಿ ಒಂದು ಸಣ್ಣ ಗೂಡು ಮಾಡಿಕೊಂಡು ಓದಬೇಕೆಂದೆನಿಸುತ್ತಿದೆ, ಒಬ್ಬನೇ.

ಅವರ ಕಾದಂಬರಿಗಳ ವಿಮರ್ಶೆಮಾಡಲು ನಾನು ಯೋಗ್ಯನಲ್ಲ, ಅದರ ಯೋಚನೆ ಸಹ ಮಾಡುವುದಿಲ್ಲ(ಶಾಂತಂ ಪಾಪಂ), ಅವರೇ ಹೇಳುವಂತೆ ಅವರ ಪ್ರತಿ ಕಾದಂಬರಿಯಲ್ಲೂ ಯಾವುದಾದರೊಂದರ(ಸತ್ಯದ!!)(ಸತ್ಯದ ವಿವಿಧ ಮಜಲುಗಳು) ಅನ್ವೇಷಣೆ ಇದ್ದೇ ಇದೆ. ಅವರಂತೆಯೇ ನಾನು ಆಗಬೇಕು(ದಯಮಾಡಿ ನಗಬೇಡಿ...please... ನಂಗೊತ್ತು ನೀವು ನಗ್ತಾಇದ್ದೀರ ಅಂತ..hmmmm) ಅನ್ವೇಷಣೆ ನಡೆಸಬೇಕು, ಆ ಅನ್ವೇಷಣೆಯಲ್ಲಿ ಹಲವಾರು ವರ್ಷಗಳನ್ನು ಕಳೆದು, ನಿಂತಲ್ಲಿ ಕುಂತಲ್ಲಿ ಚಿಂತನ ಮಂಥನ ನಡೆಸಿ ಕೂತು ಬರೆಯಬೇಕು, ನಿಂತು ಬರೆಯಬೇಕು. ನನೂ ಸಹ ಸತ್ಯವನ್ನು ತಿಳಿಯಬೇಕು, ಅರಿಯಬೇಕು. ಭೈರಪ್ಪನವರ ಕಾದಂಬರಿಗಳನ್ನು ಅಭ್ಯಸಿಸಬೇಕು. ಅವರನ್ನೊಮ್ಮೆ ನೇರವಾಗಿ ಕಾಣಬೇಕು. ಏನೇನೋ ಆಸೆಗಳು. hmmm
ಅವರ ಅಷ್ಟೂ ಕಾದಂಬರಿಗಳನ್ನು ಕೊಳ್ಳುತ್ತೇನೆ, ಆದಷ್ಟು ಬೇಗ. ಆದರೆ ಬೆಟ್ಟದ ತುದಿಯಲ್ಲಿ ಕುಳಿತು ಅವರ ಕಾದಂಬರಿಗಳನ್ನು ಅಭ್ಯಸಿಸುವ ಪುಣ್ಯ ನನ್ನದಾಗುತ್ತದೋ ಇಲ್ಲವೊ ತಿಳಿದಿಲ್ಲ, ನನ್ನೀ ಆಸೆಗೆ(ಹುಚ್ಚಿಗೆ!!) ನಿಮ್ಮ ಹಾರೈಕೆಯಿರಲಿ.
@ಭೈರಪ್ಪ : ಭೈರಪ್ಪನವರೇ ನಿಮಗೆ ನೀವೇ ಸಾಟಿ, ನಿಮ್ಮ ಸಾಹಿತ್ಯ ಕೃಷಿ ಹೀಗೆ ಸಾಗುತ್ತಿರಲಿ, ನಿರಂತರವಾಗಿ....... ಎಂದೆಂದಿಗೂ ನಂದದ ದೀಪವಾಗಿರಲಿ. ನಿಮಗೆ ನನ್ನ ಭಾವಪೂರ್ಣವಾದ ನಮಸ್ಕಾರ.

7 comments:

ವಿ.ರಾ.ಹೆ. said...

ಗುರುಗಳೇ, ಎರಡು ಪುಸ್ತಕ ಓದಿದ್ದಕ್ಕೇ ಇಷ್ಟು ಅಭಿಮಾನಿ ಆಗಿದಿರಾ ಅಂದ್ರೆ ಎಲ್ಲಾ ಓದಿದ್ರೆ ಏನ್ ಕಥೆನೋ ಏನೋ ! ಭೈರಪ್ಪನವರ ಸಾಹಿತ್ಯದ ಸೆಳೆತವೆ ಅಂತದು. ಕನ್ನಡದ ಒಂದು ಪೀಳಿಗೆಯನ್ನು ಓದೋ ಹುಚ್ಚಿಗೆ ಹತ್ತಿಸಿದ ಖ್ಯಾತಿ ಭೈರಪ್ಪನವರಿಗಿದೆ. ಅವರ ಯಾವ ಪುಸ್ತಕವೂ ಚೆನ್ನಾಗಿಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. ಇವತ್ತಿಗೂ ನಾನು ಯಾರಾದರೂ ಹೊಸಬರು ಯಾವ ಪುಸ್ತಕ ಓದಲಿ ಎಂದು ಕೇಳಿದರೆ ಸಲಹೆ ಕೊಡುವುದು ಭೈರಪ್ಪನವರ ಪುಸ್ತಕಗಳನ್ನ. ಯಾಕೆಂದರೆ ಒಮ್ಮೆ ಅದನ್ನು ಓದಿದವರು ಕನ್ನಡ ಸಾಹಿತ್ಯವನ್ನು ಬಿಟ್ಟು ಹೋಗುವುದಿಲ್ಲ.

ನಿನ್ನ ಆಸೆಯ ಪೂರೈಕೆಗೆ ನಂದೊಂದು ಹಾರೈಕೆ.
ಆದಷ್ಟು ಬೇಗ ಶುರು ಹಚ್ಕೋಳಿ.

Srikanth - ಶ್ರೀಕಾಂತ said...

ondu kaadambari ready iTko. sadhyadalle yaavaagaadru koDachadri ge hogaNa...

Parisarapremi said...

ಹ ಹ್ಹ ಹ್ಹಾ... ಮಜ ಅಂದ್ರೆ, "ಯಾವುದಾದರೂ ಬೆಟ್ಟ" ಅಂದ್ಬಿಟ್ಟು ಬ್ರ್ಯಾಕೆಟ್ ಅಲ್ಲಿ ಕೊಡಚಾದ್ರಿ ಅಂತ ಬೇರೆ ಹೇಳ್ತೀಯಲ್ಲೋ... :-)

Anonymous said...

ree karmakaanda avre bari eraDu pustake odhine istu dodda abhimAni aagiddira eMdu thilidu nangu kushi aagthide naanu byrappanavara 'sAkshi','Avarana'grihabanga' ashte odhirodhu .nanage avaru ellA barahagArarigintha vibbina anisthu .

But karmakaaanda ondu prashne nimge adenri neevu yAvaglu ellavannu bettada thudiyalle kuthu keLbeku,odhbeku anthiralla ee sali kodachAdri hodaga ondu kelsa maadi ondu kavithe baryoke shuru achkolli nodona baruthO ilvo. :D :-)

Lakshmi Shashidhar Chaitanya said...

ನಾನು ಭೈರಪ್ಪನವರ ವಂಶವೃಕ್ಷ ಮತ್ತು ದಾಟು ಓದಿದ್ದೇನೆ. ಅವೆರಡು ಸಹಾ ಅತ್ಯದ್ಭುತ ಕೃತಿಗಳು. ಕೊಡಚಾದ್ರಿಗೆ ಹೋಗುವ ಐಡಿಯಾ ಹಿಂದೆ " ಕೊಲ್ಲೂರ ಮೂಕಾಂಬೆ ನಿಮಗೆ special ಅನುಗ್ರಹ ಮಾಡಿ ತಮ್ಮನ್ನು ಭೈರಪ್ಪನವರ ಸಮಕ್ಕೆ ನಿಲ್ಲಿಸಲಿ " ಅನ್ನುವ ಉದ್ದೇಶ ಇದೆಯೇ ? ;-) ಹು.... ತಪಸ್ಸು ಮಾಡಕ್ಕೆ ಸರಿಯಾದ ಜಾಗ !! ;-)[ಯಾವುದಾದರೂ ಒಂದರ ದರ ಬಗ್ಗೆ/ದೇವರ ಬಗ್ಗೆ/ಯಾರಾದರೊಬ್ಬರ ಬಗ್ಗೆ !!] ;-)

ಮುಂದಿನ ಕಾರ್ಯ/ಓದು/ತಪಸ್ಸಿಗೆ All the best !

Sridhar Raju said...

@vikas hegde: ella voke gurugaLe yaak??? :-/

nimma haaraikege thanks -u... :-)

@srikanth: yaav kaadambari ready itkoLLi...??

@parisarapremi: hoon kodachaadri anthaane heLtheeni.. :-)

@samnvayana: beTTada tudilidroo samudrada taLadallidroo nange kavana baryakke barallaareeeee....kavangaLna baryakke yaavattoo try maadbaardhu, adaagadhe barbeku.. :-) beTTada tudi yaakendre alli shanthi ;-) iratte...

@lakshmi: ಕೊಲ್ಲೂರ ಮೂಕಾಂಬೆ ನಿಮಗೆ special ಅನುಗ್ರಹ ಮಾಡಿ ತಮ್ಮನ್ನು ಭೈರಪ್ಪನವರ ಸಮಕ್ಕೆ ನಿಲ್ಲಿಸಲಿ " ಅನ್ನುವ ಉದ್ದೇಶ ಇದೆಯೇ ? ;-)
idanna uddesha annalla nan paalige duruddesha...bhairappanavara sama.NO NO NO NO NO NO NO NO NO NO NO..........

ಪೂರ್ಣ ವಿ-ರಾಮ said...

ನಿಮ್ಮ ಅಭಿಮಾನಕ್ಕೆ ಹ್ಯಾಟ್ಸ್‌ಆಫ್‌. ಬೈರಪ್ಪನವರ ಬರಹವೇ ಹಾಗೆ. ಓದಿದ ಪ್ರತಿಯೊಬ್ಬನನ್ನೂ ತನ್ನ ತೋಳ್ಬಲಗಳಲ್ಲಿ ಬಂಧಿಸಿಟ್ಟುಕೊಂಡುಬಿಡುತ್ತದೆ.

ಸಾಧ್ಯವಾದರೆ ಮಂದ್ರ ಓದಿ.....


ಥ್ಯಾಂಕ್ಯೂ