ನನ್ನ ಶತ್ರು.......

Thursday, October 4, 2007

ದಿವ್ಯಾ : ಹೂ! ಶ್ರೀಧರ್ ನನ್ನ ಪಾಡು ನನ್ನ ಶತ್ರುವಿಗೆ ಮಾತ್ರ ಬರ್ಬೇಕು....

ನಾನು : ಹೋ! ನಿಂಗೆ ಶತ್ರುಗಳು ಇದ್ದಾರ??

ದಿವ್ಯಾ : ನನಗೆ ಗೊತ್ತಿರೋ ಮಟ್ಟಿಗೆ ಯಾರು ಇಲ್ಲ..ಇದ್ರೆ ಅವ್ರಿಗೆ ಬರ್ಬೇಕು ಈ ಪಾಡು...

ನಾನು : ನನಗೊಬ್ಬ ಶತ್ರು ಬೇಕು....

ದಿವ್ಯಾ : ನನಗೂ ಕೂಡ!...ಒಳ್ಳೇ ಚಾಕೋಲೇಟ್ ಕೇಳಿದ ಹಾಗೆ ಇಬ್ಬರು ಸಮ್ಮತಿಸಿದೆವು..ಶತ್ರುವಿಗಾಗಿ..ಆ ಕ್ಷಣದಲ್ಲಿ ನನಗೊಬ್ಬ ಶತ್ರು ಬೇಕಾಗಿತ್ತು...ನನ್ನ ಶತ್ರುವಿಗೆ ಇರಬೇಕಾದ ಗುಣಲಕ್ಷಣಗಳನ್ನು ಆಕೆಯ ಮುಂದೆ ವಿವರಿಸುತ್ತಾ ಹೋದೆ..ನಿಮಗೂ ನನ್ನ ಶತ್ರುವಾಗುವ ಅರ್ಹತೆಯಿದ್ದಲ್ಲಿ ಅರ್ಜಿ ಗುಜರಾಯಿಸಬಹುದು...ತುಂಬು ಹೃದಯದ ಸ್ವಾಗತವೀಯುತ್ತೇನೆ..ಅದಕ್ಕಾಗಿ ಈ ಲೇಖನ....


"ಶ್ರೀಧರ್, ಅವನಾ ತುಂಬಾ soft -u, silent -u, innocent -u, ;-).ತುಂಬ helpful!! ಕಣಪ್ಪಾ ಅವನು..."(ಯಾರು ಹೇಳಿದ್ದು??)

"ಮಚ್ಚಿ, ನೀನು ನಂಗೆ ಹೆಲ್ಪ್ ಮಾಡ್ತೀಯ ಅಂದುಕೊಂಡಿದ್ದೆ..ನೀನು ಹಿಂಗಂದ್ಬಿಟ್ರೆ ಹೇಗೆ?? "(ಯಾಕ್ ಅನ್ಬಾರ್ದು??)

"ಶ್ರೀಧರ್, ನಿನ್ನ ನೋಡಿದ್ರೆ ನನ್ನ ತಮ್ಮನ ನೆನಪಾಗುತ್ತದೆ, ಅವನೂ ಸಹ ನಿನ್ನ ಹಾಗೆ silent, soft(ಅದಿಕ್ಕೆ??)

ನನಗೆ ಬದಲಾವಣೆ ಬೇಕಾಗಿದೆ....ಸಾಕಾಗಿದೆ..... ಅದಕ್ಕಾಗಿ ನನಗೊಬ್ಬ ಶತ್ರು ಬೇಕು :-) :-).. ಇಲ್ಲಿಂದಲೇ ಬದಲಾವಣೆ ಶುರುವಾಗಲಿ...ನಾನೂ ಸಹ ಜನರನ್ನು ದ್ವೇಷಿಸಬಲ್ಲೆ ಎಂದು ತೋರಿಸಬೇಕು... ;-) ನನ್ನ ಶತ್ರುವಿಗೆ ಬೇಕಾದ ಗುಣಲಕ್ಷಣಗಳನ್ನು ಕೆಳಗೆ ನಮೂದಿಸಿದ್ದೇನೆ..ನೋಡಿ...

1) ಅವನನ್ನು ನಾನು ಪ್ರತಿದಿನವೂ ನೋಡಬೇಕು...

2) ಅವನ ಪ್ರತಿ ಚಲನವಲನಗಳ ಮಾಹಿತಿ ನನಗೆ ಸಿಗುವಂತಾಗಿರಬೇಕು..

3) ಅವನು ನನ್ನೆದುರಿಗೆ ನಡೆದು ಹೋಗುತ್ತಿದ್ದರೆ ಮನಸಾರೆ ಬೈಯ್ಯಬೇಕು..

4) ಅವನೇನಾದರು ಸಣ್ಣದೋ ದೊಡ್ಡದೋ ಸಾಧನೆ ಅಂತೇನಾದರು ಮಾಡಿದರೆ ನಾನು ಇತರರೊಂದಿಗೆ " ಅದೇನು ಮಹಾ! ನಾನೂ ಸಹಾ ಮಾಡಬಲ್ಲೆ...ಎನ್ ಅವನೊಬ್ಬನಿಗೆ ನಾ ಆಗೋದು" ಎಂದು ಕೊಚ್ಚಿಕೊಳ್ಳಬೇಕು...

5) ಅವನ ಏಳು ಬೀಳುಗಳಿಗೆ ನಾನು ಜವಾಬ್ದಾರನಾಗಿರಬಾರದು...

6) ಅವನ ದಾರಿಯಲ್ಲಿ ಬಿದ್ದರೆ ಹುಚ್ಚಾಪಟ್ಟೆ ನಗಬೇಕು.... ಕಚಡ ನನ್ಮಗ ಆಯ್ಕೊಂಡ...ಹಹ್ಹಹ್ಹಾ... ಎಂದು

7) ನನ್ನ ಪ್ರತಿ ಏಳಿಗೆಗು ಅವನು ಹೊಟ್ಟೆ ಉರಿದುಕೊಳ್ಳಬೇಕು....

8) ಅವನು ಬರಗೆಟ್ಟು ಹೋಗಿ ನನ್ನ ಬಳಿ ಸಹಾಯ ಕೇಳಲು ಬಂದರೆ "ನನ್ಮಗನೆ ಎದ್ದ್ ಹೋಗೋಲೋ....ಅನ್ನಬೇಕು"..ಆಗ ಅವನ ಪೆಚ್ಚು ಮುಖವನ್ನು ನಾನು ನೋಡಬೇಕು...

9) ನಾನು ಅವನಿಗಿಂತ ಮುಂಚೆ ಸಾಯಬೇಕು..

10) ಮೇಲ್ಕಂಡ 9 ಸೂತ್ರಗಳಂತೆ ಆತನೂ ಸಹ ನನ್ನ ಬಗ್ಗೆ ಇದೇ ಭಾವವನ್ನು ಹೊಂದಿರಬೇಕು....

ಮೇಲೆಲ್ಲಾ ಬರೀ "ಅವನು ಅವನು" ಅಂತ ಸಂಭೋದಿಸಿದ್ದೇನೆ....ಅವಳೂ ಸಹ ಆಗಬಹುದು..ಮಹಿಳಾಮಣಿಗಳಿಗು ಸಹ ಅವಕಾಶವಿದೆ... :-)

ಇಂತಹ ವಿಶೇಷ ಗುಣಗಳೊಂದಿರುವ ವ್ಯಕ್ತಿ ನನಗೆ ದೊರೆಯುತ್ತಾನೋ ಇಲ್ಲವೋ ಗೊತ್ತಿಲ್ಲ.... ಅಂತಹವರು ಸಿಕ್ಕರೆ ಜೀವನ ಮಜಾವಾಗಿರುತ್ತದೆ..

10ಕ್ಕೆ 10 ಬರಬೇಕೆಂದಿಲ್ಲ....those who will manage to get more than 6 will be eligible to become my enemy.... ಆಗುವಿರಾ??

14 comments:

Samarasa said...

naane ninna shatru agthini adre ondu condition shatru agi pramaana vachana swikarisodakintha munche ondu treat kodisabeku o.knaa

Srikanth - ಶ್ರೀಕಾಂತ said...

"ಕಾಫಿ" ನಿನ್ನ ಶತ್ರು ಸ್ಥಾನಕ್ಕೆ ಅರ್ಜಿ ಹಾಕ್ಬೋದು ಅನ್ಸತ್ತೆ....

Srinivasa Rajan (Aniruddha Bhattaraka) said...

ninage eegiro shatru "Tea"...
inmele irbekaagiro shatru, srikanth heLidahaage, "kaapi"...

oLLe shatru.. :-)

Dynamic Divyaa said...

Sheediiii... iga nan mans madidre nin Post ginthaa dodd comment bari balle ;-)
Nenne harTe hoDdidhanella iLsidyallaaa illi!!!

Sumne nannanE nin shatru maadko andhe.. keLtyaaa maathu...

oLLe kathe nindu.. Shatru bekante! Criteria bere!!! Karmakaanda!!!!!

heheee aadre nin criteria tumbaaaa funny.. Chik makLu 4th 5th std makLu maadOdh ivu!! .....
ಅವನು ಬರಗೆಟ್ಟು ಹೋಗಿ ನನ್ನ ಬಳಿ ಸಹಾಯ ಕೇಳಲು ಬಂದರೆ "ನನ್ಮಗನೆ ಎದ್ದ್ ಹೋಗೋಲೋ....ಅನ್ನಬೇಕು"..ಆಗ ಅವನ ಪೆಚ್ಚು ಮುಖವನ್ನು ನಾನು ನೋಡಬೇಕು...

ಅವನೇನಾದರು ಸಣ್ಣದೋ ದೊಡ್ಡದೋ ಸಾಧನೆ ಅಂತೇನಾದರು ಮಾಡಿದರೆ ನಾನು ಇತರರೊಂದಿಗೆ " ಅದೇನು ಮಹಾ! ನಾನೂ ಸಹಾ ಮಾಡಬಲ್ಲೆ...ಎನ್ ಅವನೊಬ್ಬನಿಗೆ ನಾ ಆಗೋದು" ಎಂದು ಕೊಚ್ಚಿಕೊಳ್ಳಬೇಕು...

ಅವನ ದಾರಿಯಲ್ಲಿ ಬಿದ್ದರೆ ಹುಚ್ಚಾಪಟ್ಟೆ ನಗಬೇಕು.... ಕಚಡ ನನ್ಮಗ ಆಯ್ಕೊಂಡ...ಹಹ್ಹಹ್ಹಾ... ಎಂದು
Hahahaaaha EBINA..
Karmaaa....

Nan friends nannannE bytaare
child-u waste-u grow up antha!! Now i have someone to beat my thinking!!! Avrgella ninna tOrsbeku, nanige 'grow up' annOdu bittbiDtaare!! Hahaaa...
FIRST NEENIRO 3rd Std PASS AAGI 4th Std ge HOGU!!

Anonymous said...

sridhar enappa neenu heegella bramsthiya innu 100lota kaapi kudiyoke yardu kodoru/ sigthara antha kelidre ok eno anbahdagithu
............
but shatru naaaaaaaaaaaa???
but ondalla ondu dina kaapi nimma shatru aabahdu kaadhu nodi!:))))))))))))
kanasallu shatru beku antha yochane nu madbedi mathu antha kanasannu kanabedi!

Sridhar Raju said...

[Samarasa] : Sure...ninge swalpa hecchu qualifications irodhu nan shatru aagakke.... adak munche Nagasandre masale puri kodsbidtheeni....bandhbidu..ok.nee :-)

[Srikanth] : che che aagadu "kaapi" by chance haagenaadru haakidru reject maadbidtheeni...

[Gandabherunda]: naan yaavag heLde "tea" nan shatru antha.....??
yes nange oLLe shatru beku... :-)

[Dynamic Divya] : yes harte hodediddanna swalpa iLsiddeeni..ashte...neen nan shatru aagalla...aagalla...aagalla

Sariyaage heLiddaare nin frends nin bagge.."neen child -u"..he he he
Grow up Divya ;-)

[Samanvyana]: sridhar enappa neenu heegella bramsthiya innu 100lota kaapi kudiyoke yardu kodoru/ sigthara antha kelidre ok eno anbahdagithu

melin maathu onchooru artha aaglilla nange....vivarisi pls...

kaapi nan shatru aagalla... :-)
Nan kansu mansu ella eega aa shatru ne tumbkondbittide ;-) en maadodhu???

Dynamic Divyaa said...

"neen nan shatru aagalla...aagalla...aagalla"
movie dialogue aaa... Kivi mele ky iTkondu 'neen nan shatru agalla agalla agalla'!! heeehee..
Oyeeee...
Bekaaa vodhe.. Me no child.. Neene child-u.. Grow up tonic kudi.. begaaa grow up aagtya...

Parisarapremi said...

ಲೋ, ಶತ್ರು ಬೇಕೇನೋ? ಮದುವೆ ಆಗೋ!!

[ಡೈನಮಿಕ್ ದಿವ್ಯಾ]ಗ್ರೋ ಅಪ್ ಆಗಿ ಏನೂ ಸಾಧಿಸೋಕೆ ಆಗಲ್ಲ ಕಣ್ರೀ.. ಮಕ್ಕಳಂತಿದ್ದರೆ ಮನಸ್ಸು ಚೆನ್ನಾಗಿರುತ್ತು. 4th, 5th standard ಮಕ್ಕಳ ಮನಸ್ಸು ನಂಗೆ ಗೊತ್ತು!!

[ಶ್ರೀಕಾಂತ] [ಗಂಡಭೇರುಂಡ] ಕಾಫಿ, ಟೀ ಎಲ್ಲಾ ಶತ್ರು ಏನ್ರೀ???

[ಶ್ರೀಧರ] ಬ್ರಹ್ಮ ಎಲ್ಲೋ??

Praveen Lobo said...

nan blog alli ninge comment hod-dhidheeni nodko...( nan blag alli postgaLa sankhye jaasthi madaNa antha ee planu ;-) )
http://praveenlobo.blogspot.com/

Sridhar Raju said...

[Parisarapremi] : Madve ...avLanna ;-) keLbit heLtheeni..yavaga antha... :-) NannavaLu nannaake...hariyuva nadiyallaaaaaaaa.....

Brahmaage ge dasara holidays raja :-)

[Lobo] : en geechidyo loose lobo..!!

Srikanth - ಶ್ರೀಕಾಂತ said...

ಪರಿಸರಪ್ರೇಮಿ - ನಾನು ಟೀ ಬಗ್ಗೆ ಮಾತೇ ಎತ್ಲಿಲ್ಲ. ಕಾಫಿ ನಾನೂ ಯಾವಾಗ್ಲಾದ್ರೂ ಕುಡೀತೀನಿ. ಆದ್ರೆ ಯಾವುದೂ ಅತಿಯಾದರೆ ಕೆಟ್ಟದೇ. ಶ್ರೀಧರನ ಕಾಫಿ ಹುಚ್ಚು ಯಾವಾಗಲೋ ಅತಿಯಾಗಿತ್ತು. ಪ್ರತಿದಿನ ಹೆಚ್ಚಾಗುತ್ತಿದೆ ಕೂಡ. ಅದಿಕ್ಕೆ ಕಾಫಿ ನ ಅವನ ಶತ್ರು ಸ್ಥಾನದಲ್ಲಿ ಕೂರಿಸಿದೆ. ತಪ್ಪಾ? ನಿಂಗೆ ನಿನ್ನ ಕಾಫಿ ಪಾರ್ಟ್ನರ್ ಇಂಥ ಕಾಮೆಂಟ್ ನೋಡಿ ಎಲ್ಲಿ escape ಆಗೋಗ್ತಾನೋ ಎಂಬ ಚಿಂತೆ ಇದ್ದರೆ ನಿಶ್ಚಿಂತೆಯಿಂದಿರು... ಇಂಥ ಕಾಮೆಂಟ್ ನೋಡಿ ಒಂದೋ ಎರಡೋ ದಿನದಲ್ಲಿ ಕರಗೋ ಹುಚ್ಚಲ್ಲ ಅದು... ಅದು ನನಗೂ ಶ್ರೀನಿವಾಸ್ ಗೂ ಗೊತ್ತು. ಆದರೂ ತಪ್ಪು ಮಾಡುತ್ತಿರುವಾಗ ನೋಡಿಕೊಂಡು ಸುಮ್ಮನಿರಬಾರದು ಎಂದು ಹುಚ್ಚು ಕರಗಿಸುವ ಪ್ರಯತ್ನ ಮಾಡುತ್ತಿದ್ದೇವಷ್ಟೇ. ಅಲ್ವಾ ಶ್ರೀನಿವಾಸ್?

ಶ್ರೀಧರ - ಅದ್ಯಾರೋ "ನನ್ನವಳು" ಅದು ಇದು ಅಂತೆಲ್ಲಾ ಬರ್ಕೊಂಡಿದೀಯಲ್ಲ... ನೋಡು ಆಕೆ ನಿನ್ನ ಶತ್ರು ಸ್ಥಾನಕ್ಕೆ qualify ಆಗ್ತಾರಾ ಅಂತ. ನಿನ್ನ criteria list ಅಲ್ಲಿ ಒಂದು basic criteria ಬಿಟ್ಬಿಟ್ಟಿ - "ಒಂದು ಲೋಟ ಕಾಫಿನೂ ನನಗೆ ಎಂದೂ ಕೊಡಬಾರದು"... ಹ ಹ ಹಾ!!

Parisarapremi said...

[sridhara] jana saavra heLtaare, nee tension togobedvo.. naanideeni...

Sridhar Raju said...

[Srikanth] & [Parisarapremi]:
Oorene andru, neevibru nan kondaru...nan kaapi ondhe nan devaru......... :-)

Parisarapremi said...

[ಶ್ರೀಕಾಂತ್] ನೀನು ಟೀ ಬಗ್ಗೆ ಹೇಳಿದೆ ಅಂತ ನಾನು ಹೇಳಲಿಲ್ಲ ರಾಜ.. ಇದಕ್ಕೆ ಜೋಡಿಪದ ಅಂತಾರೆ. ಕಾಫಿ-ಟೀ, ಮನೆ-ಮಠ, ಊರು-ಕೇರಿ ಹೀಗೆ. ತಿ.ನಂ.ಶ್ರೀ. ಅವರ ಕನ್ನಡ ವ್ಯಾಕರಣ ಪುಸ್ತಕ ಬಹಳ ಸೊಗಸಾಗಿದೆಯಂತೆ, ನಾನು ನೋಡ್ಬೇಕು. ನಿಂಗೂ ಒಂದು ಪ್ರತಿ ಕಳ್ಸ್ಕೊಡ್ತೀನಿ. ಜೋಡಿಪದದ ಬಗ್ಗೆ ಓದಬಹುದು ಏನಂತೀಯ?