"ಬ್ರಹ್ಮ..... ಕೇಳಿಸಿಕೋ..ನನ್ನ ಪ್ರಣಾಳಿಕೆಯನ್ನು..ಬಹಳ ಸುಧೀರ್ಘವಾಗಿರುತ್ತದೆ ಎಂದನಿಸುತ್ತಿದೆ ನನಗೆ.."
ರಾಮರಾಜ್ಯವನ್ನು ಕಟ್ಟುವ ಕನಸು ನನ್ನದು...ನೀ ಕೊಡುವ ವರವನ್ನು ಜನೋಪಯೋಗಿ ಕಾರ್ಯಗಳಿಗೆ ಉಪಯೋಗಿಸುವ ಹಂಬಲ ನನ್ನದು..ನಿನ್ನ ಆಶೀರ್ವಾದವಿರಲಿ.... ಎಂದಿನಂತೆ ತಪ್ಪಿದರೆ ಎಚ್ಚರಿಸು ಬ್ರಹ್ಮ...Thanks for the Coffee."
ಬ್ರಹ್ಮ ನಸುನಗುತ್ತಾ..." ಶುರುಮಾಡು ನಿನ್ನ ಪ್ರಣಾಳಿಕೆಯನ್ನು....ಕೇಳುವ ಕಾತರ ನನ್ನದು..."
ಬ್ರಹ್ಮ ವ್ಯಕ್ತಿಯೊಬ್ಬ ಸಮಾಜದಲ್ಲಿ ಗುರುತರವಾದ ಬದಲಾವಣೆಗಳನ್ನು ತರಬೇಕಾದರೆ....ಬುದ್ದಿಶಕ್ತಿ, ಹಣ, ಅಧಿಕಾರವಿರಬೇಕು...ವಿಪರ್ಯಾಸವೆಂದರೆ ನಮ್ಮ ರಾಜ್ಯದ ದೊಡ್ಡ ದೊಡ್ಡ ಸ್ಥಾನಗಳ್ಳಿರುವ ಅಂದರೆ ನಮ್ಮ ಮಂತ್ರಿ ಮಹೋದಯರು ಅನಕ್ಷರಸ್ತರು.. ಹಾ! ಹಾಗೆಂದ ಮಾತ್ರಕ್ಕೆ ಅನಕ್ಷರಸ್ತರೆಲ್ಲರು ಬುದ್ದಿ ಇಲ್ಲದಿರುವರಲ್ಲ....ಆದರೆ ನಮ್ಮ ಮಂತ್ರಿಗಳಿಗೆ ಇನ್ನೊಬ್ಬರನ್ನು ಕುರ್ಚಿಯಿಂದ ಕೆಳಗಿಳಿಸುವ ಹುನ್ನಾರದಲ್ಲೆ ತಮ್ಮೆಲ್ಲ ಬುದ್ದಿಶಕ್ತಿಗಳನ್ನು ವಿನಿಯೊಗಿಸುತ್ತಾರೆ,,,,ಭ್ರಷ್ಟಾಚಾರದಲ್ಲಿ ಕೈಗೂಡಿ ಹಣಗಳಿಸುತ್ತಾರೆ..... ಬರಿ ರೌಡಿ ಶೀಟರ್ಗಳು, ದುರಹಂಕಾರಿಗಳೇ, ಬುದ್ದಿ ಮಂಕು ಬಡಿದಿರುವ ತರಲೆಗಳೆ ತುಂಬಿಕೊಂಡಿದೆ ನಮ್ಮ ಇಂದಿನ ರಾಜ ಕಾರಣ...."
ಬ್ರಹ್ಮ ನಾನು ಯುವಜನತೆ ಯಲ್ಲಿ ಭರವಸೆಯನ್ನು ಹೊಂದಿದ್ದೀನೆ....ಯುವಜನತೆ ಏನು ಬೇಕಾದರು ಮಾಡಬಲ್ಲರು...
ಯಾವುದೇ ಕಾಲೇಜಿನ ತಡೆದು ಕೇಳಿದರೆ "ಏನಪ್ಪಾ...ಎನಾಗಬೇಕೆಂದಿರುವೀ ನೀ..." ಎಂದರೆ...
"ಡಾಕ್ಟರ್, ಎಂಜಿನಿಯರ್...ಇತ್ಯಾದಿ ಇತ್ಯಾದಿ...ಯಾವೊಬ್ಬನು ನಾನು ರಾಜಕಾರಣಿಯಾಗುವೆ ಎನ್ನುವುದಿಲ್ಲ...ನಾನು ಮಂತ್ರಿಯಾಗುವೆ..ಎನ್ನುವುದಿಲ್ಲ...ನಾನು ಸೈನ್ಯಕ್ಕೆ ಸೇರುತ್ತೇನೆ ಎನ್ನುವುದಿಲ್ಲ...ಎಲ್ಲರು ಅವರವರ ಅನೂಕೂಲಗಳನ್ನೆ ನೋಡಿಕೊಳ್ಳುವವರೆ..."
"ಬ್ರಹ್ಮ....ನಾನು ಅಧಿಕಾರಕ್ಕೆ ಬಂದಕೂಡಲೇ...ಈ ಕೆಳಕಂಡ ಸೂತ್ರಗಳನ್ನು ಅಳವಡಿಸಲು ಇಷ್ಟ ಪಡುತ್ತೇನೆ.."
1)ಯಾವುದೇ ಮಂತ್ರಿಯಾಗುವವನ ವಯಸ್ಸು 30 ದಾಟಿರಬಾರದು.....ಮುಖ್ಯಮಂತ್ರಿಯಾಗುವವನ ವಯಸ್ಸು 35 ದಾಟಿರಬಾರದು..
2)ಮಂತ್ರಿಯಾಗಬಯಸುವವನು ಕನಿಷ್ಟಪಕ್ಷ double graduate ಆಗಿರಬೇಕು..."
3)ಆತ ಪ್ರತಿಭಾವಂತನಾಗಿರಬೇಕು...
4)ರೌಡಿ ಲಿಸ್ಟ್ನಲ್ಲಿರಬಾರದು, ಅವನ ಚಾರಿತ್ರವಂತನಾಗಿರಬೇಕು...
5)ಆ ಕ್ಷೇತ್ರದ ಜನರು ಆತನ ಬಗ್ಗೆ ಒಳ್ಳೆ ಅಭಿಪ್ರಾಯವನ್ನು ಹೊಂದಿರಬೇಕು....
6)ಅವನಿಗೆ ನಾಯಕತ್ವದ ಗುಣಗಳಿರಬೇಕು...
7)ಎಲ್ಲಕಿಂತ ಹೆಚ್ಚಾಗಿ ಆತನಲ್ಲಿ ಜನರಿಗೆ ಒಳ್ಳೆಯದು ಮಾಡುವ ತುಡಿತ, ಹಂಬಲವಿರಬೇಕು...
ವಯಸ್ಸಾದವರನ್ನು Jury ವಿಭಾಗಕ್ಕೆ ಹಾಕಬೇಕು...50 ದಾಟಿದ ಮಂತ್ರಿಗಳೆಲ್ಲ.. ತಮ್ಮ ಅನುಭವಗಳನ್ನು
ಯುವತೆಗೆ ಮಾರ್ಗದರ್ಶನವೀಯುವುದಲ್ಲಿ ವಿನಿಯೋಗಿಸಬೇಕು.. ಅಂದರೆ ಯಾವೊಬ್ಬನು ಮಂತ್ರಿಯಾಗಳು ಇಚ್ಚಿಸುವವನ ವಯಸ್ಸು 50ಕ್ಕೆ ಮೆಲೆ ದಾಟಿರಬಾರದು... ಮಂತ್ರಿಯಾಗಳು ಅರ್ಹತೆಯುಳ್ಳವವನಿಗೆ ಕೇವಲ ಜನಬಲವೊಂದಿದ್ದರೆ ಸಾಲದು...
IAS,IPS ಮಟ್ಟದ ಪರೀಕ್ಷೆಗಳಿರಬೇಕು... ರಾಜಧರ್ಮ, Political, ಕ್ಲಿಷ್ಟ ಪರಿಸ್ಥಿಗಳನ್ನು ಎದುರಿಸುವ
ತಂತ್ರಗಾರಿಕೆಯನ್ನು, ಸ್ಥೈರ್ಯವನ್ನು ಪರೀಕ್ಷಿಸುವಂತಾಗಿರಬೇಕು.... ಪಾರದರ್ಶಕ ವ್ಯವಸ್ಥೆ ನನ್ನ ಗುರಿ....
ಮುಖ್ಯಮಂತ್ರಿಯಾಗುವವನಿಗೆ ಇದೆಲ್ಲಾ ಬದಲಾವಣೆಗಳು ಮಾಡುವ ಅಧಿಕಾರವಿರುತ್ತದೋ ಇಲ್ಲವೋ, ನನಗಂತೂ ಬೇಕು..
ಇನ್ನು ಮಂತ್ರಿಗಳನ್ನು ಆರಿಸುವ ಜನತೆ...ಮತದಾನ ಮಾಡುವ ಮಹಾಜನಗಳು....ಮತದಾನಕ್ಕೊಂದು ಒಂದಷ್ಟು ಕಟ್ಟಳೆಗಳನ್ನು ವಿಧಿಸುತ್ತೇನೆ... ನಾವು ಹಲವಾರು ಬಾರಿ ವೃತ್ತಪತ್ರಿಕೆಗಳಲ್ಲಿ ನೋಡುತ್ತಿರುತ್ತೇವೆ.. ಕೇವಲ ಶೇಕಡ.. 45% 65% ಮತದಾನವೆಂದು..... ಮುಂದೆ ಹೀಗೆ ಆಗಬಾರದು...ಕನಿಷ್ಟ ಪಕ್ಷ 9೦% ಇರಬೇಕು...ವಿಪರ್ಯಾಸವೆಂದರೆ ಹಳ್ಳಿಗಳಲ್ಲಿ ದುಡ್ಡಿಗೆ ಮತವನ್ನು ಮಾರಿಕೊಂಡುಬಿಟ್ಟಿರುತ್ತಾರೆ..ಹಳ್ಳಿ ಮುಗ್ದರಿಗೆ ಅವರ ಮತವು ಎಷ್ಟು ಮೌಲ್ಯವುಳ್ಳದ್ದು ಎಂದು... ಇನ್ನೊಂದು ಅಂಶವೆಂದರೆ ಇದರಲ್ಲಿ ಹೆಚ್ಚಾಗಿ ಯುವಕರು ಯುವತಿಯರು ಪಾಳ್ಗೊಳ್ಳದಿರುವುದು.....ಇದೊಂದು ವಿಪರ್ಯಾಸವೇ ಸರಿ... ಎಲ್ಲ ಯುವಜನತೆ ಪಾಳ್ಗೊಳ್ಳಲೇಬೇಕೆಂಬ ಕಟ್ಟಳೆ ವಿಧಿಸುತ್ತೇನೆ... ಇನ್ನೊಂದು ವಿಚಾರವೆಂದರೆ ಮತದಾನಕ್ಕಿಂತ ಮುಂಚೆ ಆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ತಿಗಳ ಪೂರ್ವಾಪರವನ್ನು ತಿಳಿಕೊಂಡಿರುವಂತಾಗಿರಬೇಕು..ಇದಕ್ಕಾಗಿ ಆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ತಿಗಳು ತಮ್ಮ ಕಲ್ಯಾಣಗುಣಗಳನ್ನು ಮುಂಚೆಯೇ ಜನರ ಮುಂದೆ ವಿವರಿಸಬೇಕಾಗಿರತ್ತದೆ..... ಇದೆಲ್ಲ ಕಡ್ಡಾಯವಾಗಿ ಪಾಲಿಸುವಂತೆ ಆದೇಶವನ್ನು ಹೊರಡಿಸುತ್ತೇನೆ...ಆರಂಭದಲ್ಲಿ ಕಷ್ಟವಾಗಬಹುದು..... ಆದರೆ ಅಸಾಧ್ಯವಂತು ಅಲ್ಲ.... ದೇಶದ ಅಭಿವೃದ್ದಿಯ ಕನಸು ಇದು...ಆಗಲೇಬೇಕು... ಆಬ್ದುಲ್ ಕಲಾಂ ಹೇಳುವಂತೆ ನಾವು 2020 ಹೊತ್ತಿಗೆ ಖಂಡಿತಾ ಅಭಿವೃದ್ದಿಹೊಂದಿದ ದೇಶವಾಗಿರುತ್ತದೆ ಎನ್ನುವ ಭರವಸೆ ನನ್ನದು.....
ಇನ್ನು ಪಕ್ಷಗಳ ವಿಚಾರ....ನಮ್ಮ ದೇಶದಲ್ಲಿ ಕಾಲಿಗೊಂದು ಕೊಸರಿಗೊಂದು ಎನ್ನುವಂತೆ ರಾಜಕೀಯ ಪಕ್ಷಗಳಿವೆ...
ಈ ಪಕ್ಷಗಳ ಸದ್ಯದ ಕೆಲಸವೆಂದರೆ ಅಧಿಕಾರದಲ್ಲಿರುವವರನ್ನು ಕೆಳಗಿಳಿಸುವುದು...ವಿರೋಧಪಕ್ಷವೆಂದರೆ ಅದರ ಕೆಲಸವೆಂದರೆ ಕುರ್ಚಿಯಲ್ಲಿರುವವರನ್ನು ಕೆಳಗಿಳಿಸುವುದು...ಇಲ್ಲಸಲ್ಲದ ಆರೊಪಗಳನ್ನು ಮಾಡಿಕೊಂಡು...
ನಾನು ಅಧಿಕಾರಕ್ಕೆ ಬಂದ ಕೂಡಲೆ ಎರಡು ಪಕ್ಷಗಳ ಹೊರತಾಗಿ ಬೇರೆಲ್ಲ ಪಕ್ಷಗಳನ್ನು ನಿರ್ನಾಮಮಾಡಲು ಆದೇಶ ಹೊರಡಿಸುತ್ತೇನೆ.... ಒಂದು ಆಡಳಿತ ಪಕ್ಷ ಇನ್ನೊಂದು ವಿರೋಧ ಪಕ್ಷ ....ಬೇರಾವ ಪಕ್ಷವು ಅಸ್ಥಿತ್ವದಲ್ಲಿರಬಾರದು...ಮಂತ್ರಿಗಳಾದವರು ಆಡಳಿತಪಕ್ಷದಲ್ಲಿರಬೇಕು ಅಥವಾ ವಿರೋಧಪಕ್ಷದಲ್ಲಿರಬೇಕು...
ನಾನು ಮಧ್ಯ ತಡೆದು..."ಬ್ರಹ್ಮ ಏನು ತುಂಬಾ silent ಆಗಿದ್ದೀಯ... ಎನನ್ನಿಸುತ್ತಿದೆ ನಿನಗೆ"..
"ನಾನು ಹುಚ್ಚನಿಗೆ ವರ ನೀಡುತ್ತಿದ್ದೀನೆ ಎಂದನಿಸುತ್ತಿದೆ ನನಗೆ..ಇಷ್ಟೊಂದು ಬದಲಾವಣೆಗಳು ಸಾಧ್ಯವೆ ಮಗೂ..ನಿನ್ನ ಕನಸು ಬಹಳ ದೊಡ್ಡದಿದೆ...ಆದರೆ ಒಂದಂತೂ ಹೆಳಬಲ್ಲೆ ನಾನು ದಾಸ್ ಗುಪ್ತನ ಮೇಲೆ ವಿಜಯವನ್ನು ಸಾಧಿಸಬಹುದು....ನಿನ್ನ ಪ್ರಣಾಳಿಕೆ ಮುಗಿಯಿತೋ..." ಎಂದ..
"ಇಲ್ಲ ಬ್ರಹ್ಮ..ಕನಸುಗಳು ಬೆಟ್ಟದಷ್ಟಿವೆ....ಇದಕ್ಕೆ ನನಗೆ ನಿನ್ನ ವರ ಬೇಕೇ ಬೇಕು...ಹೇಗಿದ್ದರೂ ನೀನೆ ಹುಡುಕಿಕೊಂಡು ಬಂದಿರುವೆ...ಇದನ್ನು ವೃಥಾ ವ್ಯರ್ಥ ಮಾಡಲು ನನಗಿಷ್ಟವಿಲ್ಲ...ಇದಕ್ಕೆ ನನಗೆ ಅಪಾರ ಹಣ
ಮತ್ತು ಇಷ್ಟು ಬದಲಾವಣೆಗಳನ್ನು ಸಾಧ್ಯವಾಗಿಸುವ ಅಧಿಕಾರ ಬೇಕು..., ಕೊಡುವೆಯಾ??"
ಬ್ರಹ್ಮ...."ಖಂಡಿತವಾಗಿ...ಬೇಗ ಮುಗಿಸು ನಿನ್ನ ಪ್ರಣಾಳಿಕೆಯನ್ನು.....ಬಹಳ ಹೊತ್ತಾಯಿತು ನಾನು ಬಂದು..."
ಬ್ರಹ್ಮ ಎಲ್ಲಿಂದ ಬಂದ...ಮತ್ತೆ ಎಲ್ಲಿಗೆ ಹೋಗುವ...ನಾನು ಎಲ್ಲಿದ್ದೇನೆ....ಎನ್ನುವ ಭಾವ ಮತ್ತೆ ಕಾಡತೊಡಗಿತು...
-----(ಮುಗಿದಿಲ್ಲ)
ಉತ್ತಿ ಬಿತ್ತಿದ್ದು
8 months ago
9 comments:
otnalli vayassaadavara viruddha enO scheme haakidiya.. hmmm... by the way, brahmange eshtu vayassO eno paapa!! avanu president of the universe aagilva??
ಶ್ರೀಧರ, ಇಡೀ ಪ್ರಪಂಚದ ಆಡಳಿತ ಮಾಡುತ್ತಿರುವ ಬ್ರಹ್ಮನಿಗೇ ಆಡಳಿತ ಹೇಳಿಕೊಡುತ್ತಿದ್ದೀಯಾ? ಹ ಹ ಹ... ವಯಸ್ಸಾದವರ ಮೇಲೆ ಗೂಬೆ ಕೂರಿಸುವುದು ನನಗೇನೋ ನ್ಯಾಯ ಎಂದು ತೋರುತ್ತಿಲ್ಲ.
ಸಶೇಷ ಎಂದು ಬರೆಯುವ ಬದಲು ಮುಗಿದಿಲ್ಲ ಎಂದು ಬರೆದಿದ್ದೀಯ... ಯಾವಾಗ್ಲೋ ಮುಗ್ಸೋದು?
ho kaapi word irolla ankondre illu kaapi kaapi:))))))))))))))
nimma mathu bramha na conditions enu sarige illa adenu age restrictions?? nanna anisikeya prakara age mukya agode illa.
raajyavanna Aaluva samarthya ,thadekachithhathe.dedication,determination beku.
ishtella idaddare 24varshadavaru mantriyaadaru enu agolla.
"WORK IS WORSHIP" antha nambiruvavaru irabeku rajayakiyadalli .
Aadare iga bahu hecchu paalu rajakaranigaLa mantra" MAKING MONEY IS MY MAIN PRIORITY"ankonde rajakiya serthiddare idu avarge adrushtavAasdare raajyada janagalige duradrusta. inatha rajakanigalnnu vote haaki gelisi adhikarake baruva haage madiddu.......
sridhar bagha 1,2,3 gintha nalakkane bagha was quite good and intresting it was worth writing
so now eagerly waiting for next part .:):)
[samanvayana] bhaaga 20 nodri innu interesting aagi irutte.. ;-)
[Parisarapremi]: No scheme nothing...avara anubhavannu kiriyarige dhaareyerali antha nanna abhipraaaya... Brahman ge no vaysu...muppilllada mahaapurusha!!
[Srikanth]: Yes bhramage ge heLkodtha iddeeni..administration ;-)
No kaage-goobe koorsing on elders.....I give all the respect to them....aadru aadaLitada chukkaNi hidyodhu nangyaako sari baralla...yuvakru bennelubaagi hiriyariddare oLitu antha nanna abhipraaya :-) Next episode will be the last one...
[Samanvaya]: Neev heLodh correct 24ne varshakkke neevu heLid dedication, determination ella barbekagalla...est janakke barutte...yaar kodthaare adhikaara 24 ne vayassige.... Age criteria alla aadre elders na salahaa samithiyallirsuvudu sooktha antha naanu....avr maargadarshanadalli raajyaadaLitha nadeeli...enantheeri p'latha??
[Parisarapremi]: Lo...20 episode scene illa...chill maaadi....next episode athi sheegradalli barutte..kinly wait maadi...
hmmm.... ನಾನು ಶ್ರೀಧರ ಹೇಳೋದನ್ನ ಒಪ್ತೀನಿ.. ಬಹಳ ಒಳ್ಳೆಯ point ಅದು... ಕಿರಿಯರು ಕಾರ್ಯಶೀಲರಾಗಲಿ.. ಅಂದ ಮಾತ್ರಕ್ಕೆ ಹಿರಿಯರು ಸುಮ್ಮನೆ ಇರಲಿ ಅಂತ ಅಲ್ಲ, ಅವರೇ ಕಿರಿಯರಿಗೆ ಮಾರ್ಗದರ್ಶಕರು... ಅವರ ಮಾರ್ಗದರ್ಶನ-ಅನುಭವಗಳಿಲ್ಲದೆ ಹೋದರೆ ಏನೇನೋ ಆಗಿಹೋಗುತ್ತೆ..
actually ಇಲ್ಲಿ ಹೇಳಿರುವಂಥ ಸ್ವಸ್ಥ ಆಡಳಿತ ವ್ಯವಸ್ಥೆಗೆ ಸ್ಪಷ್ಟ ಉದಾಹರಣೆ ನಮ್ಮ ಮಹಾಭಾರತದಲ್ಲೇ ಇಲ್ಲವೆ? ಯುವಕರಿಗೆ ದುಡಿಯುವ ಶಕ್ತಿ ಇರುತ್ತೆ.. ಮುದಿಯ-ಮುತ್ಸದ್ದಿಗಳಿಗೆ ಆ 'ಉತ್ಸಾಹಿ' ಯುವಕರ ಮೂಲಕ ದೇಶವನ್ನು ಸಮರ್ಥವಾಗಿ ಮುನ್ನಡೆಸುವ ಯುಕ್ತಿ-ಅನುಭವಗಳಿರುತ್ತವೆ.. ಇವೆರಡೂ ಸೇರಿದ್ರೆ ತಾನೆ ಆಡಳಿತ ಸುಧಾರಿಸೋದು? ಅದಕ್ಕೇ ಅಲ್ವೆ ಡಿ.ವಿ.ಜಿ. ಹೇಳಿರೋದು?-
ಹೊಸಚಿಗುರು-ಹಳೆಬೇರು ಕೂಡಿರಲು ಮರಸೊಬಗು
ಹೊಸಯುಕ್ತಿ-ಹಳೆತತ್ತ್ವದೊಡಗೂಡೆ ಧರ್ಮ!
ಋಷಿವಾಕ್ಯದೊಡನೆ ವಿಜ್ಞಾನ-ಕಲೆ ಮೇಳವಿಸೆ
ಜಸವು ಜನಜೀವನಕೆ - ಮಂಕುತಿಮ್ಮ....
ಒಟ್ಟಾರೆ ಬಹಳ ಚೆನ್ನಾಗಿತ್ತು, ಈ post ಓದಿದ್ದು.. ಬೇಗ ಮುಂದಿನ ಭಾಗ ಹಾಕೋ... ಶ್ರೀಧರ... :)
:) Haasya mishritha sheeriousness!!
Brahmanguuu piteeel-aa?!!
A wonderful thinking and mast "DREAM" (i know u'l understand y dream is highlighted, hehee)!!!
Nan kashta paTTu constitution exam paas maadidhu 7th sem alli!!
Inki-pinki-ponki maadi choosing d answer! Alak niranjan objective type!!
I am Completely outstanding ('standing out' antha Odhko) in politics matter!
Adre khanDisteeni (before i start off my kettttt bygaLaas, shaapas, and rage!) raajakarNi gaLna!!
My fullllll support ninge avrna dammm ansOke!
Direct aag kELbidu Brahmanna, egiro kachda politicians na damm annsii nan criteria based hosa young talented energetic honest patriotic janranna nEmaka maadu anta... all this supported by hiriya oLLeya muthsaddhiyaru!!
Ninna ella sootragaLu soooooper mast fantastic!!
ಆಬ್ದುಲ್ ಕಲಾಂ ಹೇಳುವಂತೆ ನಾವು 2020 ಹೊತ್ತಿಗೆ ಖಂಡಿತಾ ಅಭಿವೃದ್ದಿಹೊಂದಿದ ದೇಶವಾಗಿರುತ್ತದೆ
2020 yaake... 2010 ge aagiruthe aa criteria satisfy aadre!!!!!
:) :) :)
Next episode alli Brahma escape-aaa...
nam raajya change kinta munche ondh change aaguthe brahman lOkadalli!!! Alli ondh 'IceThunder' open madkoLtaane!! ;) hahaa.. asht kaapi kuDsidyaaa man avnge paapa!!
[Gandabherunda]: Neen opkondid nodi nange santosha aaythu :-) haLe beru..hosa chiguru moodidare mara sobagu ;-) Class.....oLLe kagga...yes sir....ivatte haakbidtheeni...next part...
[Dynamic Divya]:he he he yes piteeel -u.....nanna KANSU, DREAM bagge neenu aadkobekagilla...edd hogu ;-)....hmmm neen heLdange byaad politicians na dishum dishum damaar anstheeni.....
Ice thunder in brahma loka ge no comments... am shocked!!!!! ;-)
Hegidhru nam rajyadhalli Politicians CM post-ge kithaDthidharalla, neene hogi CM post-ge Ninthko.. Ninn blog oodhi, Brahma melindha ninge vara kotidhane ansuththe.. So only Kumarswamy n Yediyurappa kachading..
-Gagana :-)
Post a Comment