ದೇವ್ರು ದೇವ್ರು ಅಂತ ಹೇಳ್ತಾರೆಲ್ಲ ಜನ್ರು....

Friday, April 18, 2008


’ದೇವರಿದ್ದಾನೊ ಇಲ್ಲವೋ’..ಈ ವಿಷಯದ ಮೇಲೆ ಚರ್ಚೆ-ವಾದಗಳು ದೇವರು ಹುಟ್ಟಿದಾಗಿನಿಂದ(!!) ನಡೆಯುತ್ತಲೇ ಇದೆ. ಇದಕ್ಕೆ ಆದಿ-ಅಂತ್ಯವೆಂಬುದು ಇರುವುದಿಲ್ಲ. ಇದಮಿತ್ತಂ ಎಂದು ಹೇಳಲು ಆಗುವುದಿಲ್ಲ, ಹಾಗೆ ಹೇಳಲು ಜನರು ಸಹ ಬಿಡುವುದಿಲ್ಲ!!.. ಎಳೆದಾಡುತ್ತಲೇ ಇರುತ್ತಾರೆ.. ಚರ್ಚೆಗೂ ವಾದಕ್ಕೊ ಬಹಳ ವ್ಯತ್ಯಾಸವಿದೆ, ವಾದಗಳಲ್ಲಿ ನನಗೆ ಆಸಕ್ತಿಯಿಲ್ಲ..

ಮನುಷ್ಯನಿಗೆ ಕಾಣದುದರ ಬಗ್ಗೆ ಯಾವಾಗಲೂ ಹೆಚ್ಚಿನ ಆಸಕ್ತಿ, ಕುತೂಹಲ ಇದ್ದೇ ಇರುತ್ತದೆ, ಅದು ಮಾನವ ಸ್ವಭಾವ, ಹೊಸದನ್ನು ಅನ್ವೇಷಿಸಲು, ಹುಡುಕಲು, ಪಡೆಯಲು ಅನವರತ ಕಾಲ ಶ್ರಮಿಸುತ್ತಲೇ ಇರುತ್ತಾನೆ, ಹಾಗಿರದಿದ್ದರೆ ಇಷ್ಟೆಲ್ಲ ಸಂಶೋಧನೆಗಳು, ಆವಿಷ್ಕಾರಗಳು ಆಗುತ್ತಿರಲಿಲ್ಲ, ಹಾಗಾಗಿ ಈ ವಿಷಯದ ಬಗ್ಗೆ ಚರ್ಚೆ-ವಾದಗಳು ನಡೆಯುತ್ತಲೇ ಇರುತ್ತದೆ....
’ಮರಳಿ ಬಂದವರಿಲ್ಲ, ವರದಿ ತಂದವರಿಲ್ಲ...’
ನೆನ್ನೆ ಶ್ರೀಕಾಂತ ಕೇಳಿದ, ನೀನು ಹುಟ್ಟುವುದಕ್ಕೆ ಮುಂಚೆ ಎಲ್ಲಿದ್ದೆ, ಸತ್ತ ನಂತರ ಎಲ್ಲಿಗೆ ಹೋಗುತ್ತೀಯ...ಎರಡಕ್ಕೂ ನನ್ನ ಉತ್ತರ "ಗೊತ್ತಿಲ್ಲ". ನನಗೆ ತಿಳಿದುಕೊಳ್ಳುವ ಅವಶ್ಯಕತೆಯೂ ಕಾಣಲಿಲ್ಲ.. ಇರುವಷ್ಟು ದಿನ ಹೇಗೆ ಜೀವಿಸಿದೆ ಅನ್ನುವುದಕ್ಕೆ ಮಾತ್ರ ನನ್ನ ಬದುಕು ಸೀಮಿತ, ಆತ್ಮ, ಪ್ರೇತಾತ್ಮ, ಭೂತಾತ್ಮ ಇದಾವುದು ನನಗೆ ಗೊತ್ತಿಲ್ಲ. ಇರುವಷ್ಟು ದಿನ ಹೇಗಿದ್ದೆ, ನನ್ನಿಂದ ಯಾರಿಗೂ ಸಹಾಯ ಆಗದಿದ್ದರೆ ಪರವಾಯಿಲ್ಲ ತೊಂದರೆ ಆಗದಿದ್ದರೆ ಸಾಕು. ಬದುಕು ಬಹಳ ಚಿಕ್ಕದು ಇಂತಹ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಲು, Live the Life to the fullest... ಅದರ ಪ್ರಯತ್ನದಲ್ಲಿರುವೆ, ಕಾಯ-ವಾಚಾ-ಮನಸಾ....


ಹಾಗೆಂದ ಮಾತ್ರಕ್ಕೆ "ದೇವರ" ಬಗ್ಗೆ ತಿರಸ್ಕಾರ ಭಾವ ಇದೆ ಎಂಬುದಲ್ಲ. ನನ್ನ ಗ್ರಹಿಕೆಗೆ, ಬುದ್ದಿಮತ್ತೆಗೆ, ಅನುಭವಕ್ಕೆ ಬಂದುದಷ್ಟು ತಿಳಿದುಕೊಂಡಿದ್ದೇನೆ. ಆ ವಿಷಯದ ಬಗ್ಗೆ ಸದ್ಯಕ್ಕೆ ಅಷ್ಟು ಸಾಕು ಎಂದು full stop(.) ಹಾಕಿ ಸುಮ್ಮನಾಗಿದ್ದೇನೆ, ಅದಕ್ಕೆ ನನಗೆ ಬೇಕೆನಿಸಿದಾಗ comma(,) ಹಾಕಿ ಮುಂದುವರೆಸಿಕೊಳ್ಳುವೆ.

"ದೇವರು" ಎನ್ನುವುದು ಬಹಳ ಸುಂದರವಾದ concept, ಆ concept ನಿಂದ ಮನುಷ್ಯದ ತನ್ನ ದಿನನಿತ್ಯದ ಜಂಜಡಗಳಿಂದ,ಕಷ್ಟಗಳಿಂದ, ತನ್ನ ಗೋಳು ಪರದಾಟಗಳಿಂದ ಸ್ವಲ್ಪ ಮಟ್ಟಿಗಾದರೂ ನೆಮ್ಮದಿಯನ್ನು ಪಡೆಯುತ್ತಾನೆ, ನನ್ನ ಮಟ್ಟಿಗೆ ಅದರ ಸಲುವಾಗೆ "ದೇವರು" ಇರುವುದು. ಕೆಲವು ಸಮಯಗಳಲ್ಲಿ ಮನುಷ್ಯ ತನ್ನ ಕೈಲಾದ ಕೆಲಸವನ್ನು ಮಾಡಿ ಬಸವಳಿದಾಗ ಮುಂದೆ ದಾರಿ ಕಾಣದಾದಾಗ, ತೋಚದಾದಾಗ ಕೈಚೆಲ್ಲಿ ಕೂರುವಾಗ ದೇವರು ನೆರವಿಗೆ ಬರುತ್ತಾನೆ, "ಭಗವಂತಾ ನನ್ನ ರಕ್ಷಿಸಪ್ಪಾ" ಎಂದು ಉದ್ಗರಿಸಿ ಸುಮ್ಮನಾಗುತ್ತಾರೆ, ಹಾಗೆ ದೇವರ ಮೇಲೆ ಭಾರ ಹಾಕಿ ತಮ್ಮ ಕೆಲಸವನ್ನ ಮುಂದುವರೆಸುತ್ತಾರೆ. ಆ ಕ್ಷಣಕ್ಕೆ "ದೇವರು" ಎನ್ನುವ concept ಆತನಿಗೆ releif ಕೊಡುತ್ತದೆ, ಆತನ ಮನಸ್ಸು ಎಷ್ಟೋ ನಿರಾಳವಾಗುತ್ತದೆ. ಕಾರಿನಲ್ಲಿ ಕುಳಿತ ಚಾಲಕ ಬ್ರೇಕ್ brake fail ಆಗಿ control ತಪ್ಪಿದಾಗ ತನ್ನ ಕೈಲಾದುದನ್ನು ಮಾಡಿ "ಭಗವಂತಾ ಕಾಪಾಡಪ್ಪಾ" ಎಂದು ಉದ್ಗರಿಸುತ್ತಾನೆ, ಬದುಕುಳಿದರೆ "ದೇವರು" ರಕ್ಷಿಸಿದ ಎಂದು ಸಂತಸ ಪಡುವನು, ಇಲ್ಲದಿದ್ದರೆ "ಗೊತ್ತಿಲ್ಲ". ಅವನ ಆಯುಷ್ಯ ಮುಗಿದಿತ್ತು ಎಂದಲೋ ಅಥವಾ ಆತನ time ಸರಿಯಾಗಿರಲಿಲ್ಲ ಎಂದಲೋ ಸುಮ್ಮನಾಗುವರು, ಈ ರೀತಿಯ ಮಾತುಗಳೆಲ್ಲ ಅವರವರ ಮನಗಳಿಗೆ ಗೊತ್ತಗದೆ ಇರುವ ಪ್ರಶ್ನೆಗಳಿಗೆ ಕೊಟ್ಟುಕೊಳ್ಳುವ releif ಗಳು, ಸಮಾಧಾನಕರ ಮಾತುಗಳು..ನನ್ನ ಮಟ್ಟಿಗೆ ದೇವರು ಅಷ್ಟೆ, ನನಗೆ ದೇವರು "ಸಕಲ"ನೂ ಅಲ್ಲ "ಕೇವಲ"ನೂ ಅಲ್ಲ...
ಕೆಲವರಿಗೆ "ದೇವರು" ಎಂಬುದು ತಮ್ಮನ್ನು ನಿಯಂತ್ರಿಸಿಕೊಳ್ಳುವುದಕ್ಕೆ ಉಪಯೋಗಿಸಿಕೊಳ್ಳುತ್ತಾರೆ, ಆ ಕೆಟ್ಟ ಕೆಲಸವನ್ನು ಮಾಡಿದರೆ ದೇವರು ನನಗೆ ಶಿಕ್ಷೆ ನೀಡುತ್ತಾನೆಂದು ನೆನೆದು ಸುಮ್ಮನಾಗುತ್ತರೆ, ಅಥವಾ ತಾವು ಮಾಡಿದ ಕೆಲಸಗಳಿಗೆ ಕಷ್ಟ ಅನುಭವಿಸುತ್ತಿದ್ದರೆ "ನಾನು ಮಾಡಿದ ಪಾಪ ಕಾರ್ಯಗಳಿಗೆ ಹೀಗೆ ಆಗಿದೆ" ಎಂದು ಪಶ್ಚಾತಾಪ ಅನುಭವಿಸಿ ಮುಂದೆ ಆ ರೀತಿಯ ಕೆಲಸಗಳಿಗೆ ಕೈಹಾಕದೆ ಸುಮ್ಮನಾಗುತ್ತಾರೆ ...ದೇವಸ್ಥಾನಗಳಿಗೆ ಅಲೆದು ನೆಮ್ಮದಿ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿರುತ್ತಾರೆ.

ದೇವಸ್ಥಾನಗಳಿಗೆ ಕಾಲಿಟ್ಟರೆ ಮನಸ್ಸು ಪ್ರಫುಲ್ಲವಾಗುವುದು, ವೇದಘೋಷಗಳು, ಹಿತವಾಗಿ ಬೀಸುವ ಗಾಳಿ, ಧೂಪದಾರತಿಗಳು, ಘಂಟಾನಾದಗಳು ಇವೆಲ್ಲ ಒಂದು ರೀತಿಯ ನೆಮ್ಮದಿ ಕೊಡುತ್ತದೆ, relax ಆಗುತ್ತಾರೆ. ಎಲ್ಲಾ ದೇವಸ್ಥಾನಗಳು ಈ ರೀತಿಯಿರುವುದಿಲ್ಲ ಬಿಡಿ..ಅದು ಬೇರೆಯ ಸಂಗತಿ..ಅದಕ್ಕೆ ಜನ ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಗಳಿಗೆ ಹೋಗುತ್ತಾರೆ..

ನಮಗೆ ಕಾಣದ ಶಕ್ತಿಯೊಂದು ನಮ್ಮ ಮೇಲೆ ಸದಾ ಇದೆ, ನಮ್ಮನ್ನು ನಿಯಂತ್ರಿಸುತ್ತದೆ, ಆ ಶಕ್ತಿಗೆ ನಾನು "ದೇವರು" ಎನ್ನುತ್ತೇನೆ, ಅದಕ್ಕೆ ಜನರು ಅವರಿಗೆ ಬೇಕಾದ ರೀತಿಯಲ್ಲಿ ಆ ಶಕ್ತಿಯನ್ನು ಆರಾಧಿಸುತ್ತಾರೆ, ಅದಕ್ಕೆಂದೇ ಹಲವು ಮತಗಳು, ಕುಲಗಳು, ಹಲವು ವೇಷಗಳು, ಇದಕ್ಕೆ ಪುಷ್ಟಿ ಕೊಡುವ ಉಕ್ತಿ.."ದೇವನೊಬ್ಬ ನಾಮ ಹಲವು..."

ಮನುಷ್ಯ ಸಮಾಜದಲ್ಲಿ ಬಾಳಿ-ಬದುಕಲು ಹಲವು ರೀತಿಯ protocol ಗಳನ್ನು ಅಳವಡಿಸಿಕೊಂಡಿದ್ದಾನೆ... ನಗರಗಳಲ್ಲಿ ಒಡಾಡಲು ಗಾಡಿಗಳು ಹೇಗೆ ಎಡಬದಿಯಲ್ಲಿ ಮಾತ್ರ ಚಲಿಸಬೇಕು, ಸಿಗ್ನಲ್ ಪಾಲನೆ ಮಾಡಬೇಕು ಅಂತಿದೆಯೋ , ಇವೆಲ್ಲದುದರ ಉದ್ದೇಶ ಇಷ್ಟೆ, ಆರಮಾದಾಯಕ ಸಂಚಾರ. ಹಾಗೆ "ದೇವರು" ಸಹ ಹೀಗೆ ಒಂದು ರೀತಿಯ protocol.. ನಮಗೆ ತೊಂದರೆಯಾದಾಗ, ಸಂಕಟಗಳ ಸುಳಿಯಲ್ಲಿ ಸಿಲುಕಿದಾಗ, ಹತಾಶರಾದಾಗ "ದೇವರು" ಎಂದು ಬೊಬ್ಬೆ ಹೊಡೆಯುತ್ತೇವೆ, ಸಂತಸದ ಸಮಯದಲ್ಲಿ ದೇವರ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ.. ಸಾಮನ್ಯ ಮನುಷ್ಯರು ಮಾಡುವುದು ಇಷ್ಟೆ..."ಸಂಕಟ ಬಂದಾಗ ವೆಂಕಟರಮಣ...". ದಿನ ನಿತ್ಯ ಜೀವನದಲ್ಲಿ ಹಲವಾರು ಆಚರಣೆಗಳನ್ನು ಅಳವಡಿಸಿಕೊಂಡಿರುತ್ತಾರೆ ಜನರು, ಅವೆಲ್ಲಾ ಕೇವಲ ಅವರವರ ನೆಮ್ಮದಿಗೆ ಅಷ್ಟೆ. ದಿನ ನಿತ್ಯ ಪ್ರಾರ್ಥನೆ ಮಾಡುವುದು, ದೇವರಿಗೆ ಕೈಮುಗಿಯುವುದು, ದಂಡ ಬೀಳುವುದು ಹೀಗೆ. ಕೆಲವರು ಚಿಕ್ಕಂದಿನಿಂದ ರೂಡಿಸಿಕೊಂಡು ಬಂದಿರುತ್ತಾರೆ ಹಾಗೆ ಮುಂದುವರೆಸಿಕೊಂಡು ಹೋಗುತ್ತಾರೆ. ಆರಾಮದಾಯಕ ಜೀವನ.



ಹಾಗೆ ಇದರಂತೆಯೇ ಜ್ಯೋತಿಷ್ಯದ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ನಾನು ಹುಟ್ಟಿದಾಗಲೇ ನಾನು ಎಂದು ಸಾಯುವುದು, ನಾನು ಹೇಗೆ ಇರುವುದು, ಯಾವಾಗ ತೊಂದರೆಯಾಗುವುದು ಎಂದೆಲ್ಲ ಗೊತ್ತಾಗಿಬಿಟ್ಟರೆ, ನನ್ನ ಹಣೆಬರಹವನ್ನು ಬರೆದು ಕಳಿಸಿದರೆ "ನನ್ನದು" ಅಂತ ಏನಿರುತ್ತದೆ ಈ ಪ್ರಪಂಚದಲ್ಲಿ. ನನ್ನ ಅಸ್ಥಿತ್ವಕ್ಕೆ ಬೆಲೆಯೇ ಇರುವುದಿಲ್ಲ...ಯಾರೋ ಬರೆದಂತೆ ನಡೆವುದಾದರೆ ನಾ ಮಾಡುವುದೇನಿದೆ ಇಲ್ಲಿ??? ಹಾಗೆ ನಾ ಅಂದುಕೊಳ್ಳುವಂತೆ ಎಲ್ಲವೂ ಎಲ್ಲ ಕಾಲದಲ್ಲಿಯೂ ಆಗುವುದಿಲ್ಲ, ಆಗ ಇದ್ದೆ ಇದ್ದಾನಲ್ಲ ನನ್ನ ನೆಮ್ಮದಿಯ ದೇವರು... ನನ್ನ ಕೈಲಾದುದನ್ನು ಮಾಡಿದ್ದೇನೆ, ಇನ್ನು ನಿನಗೆ ಬಿಟ್ಟದ್ದು ಎಂದು ನಿರಾಳನಾಗುತ್ತೇನೆ.

ಎಲ್ಲವನ್ನು ನಾನೇ ಮಾಡುತ್ತೇನೆ, ಎಲ್ಲವೂ ನನ್ನ ಮೇಲೆ ನಿಂತಿದೆ, ನಾನು ನಡೆದಂತೆ ಆಗುತ್ತದೆ ಎಂದರೆ ಜೀವನವನ್ನು ನಿಭಾಯಿಸುವುದು ಕಷ್ಟ, ಬಹಳ ಹೊರೆ ಬೀಳುತ್ತದೆ. ಎಲ್ಲದಕ್ಕೂ ನನ್ನಲ್ಲೇ ಉತ್ತರ ಕಂಡುಕೊಳ್ಳಬೇಕಾಗುತ್ತದೆ..ಒಳ್ಳೆಯವನಾಗಿ ಇರುವುದು ಮತ್ತು ಒಳ್ಳೆಯದನ್ನು ಮಾಡುವುದು ಇಷ್ಟೆ ನನ್ನ ಕೆಲಸ..ಅದಕ್ಕಾಗಿ ನನ್ನ ದೇವರು...

ನನಗೆ ತಿಳಿದಿರುವಷ್ಟು ದೇವರನ್ನು ಅರ್ಥೈಸಿಕೊಂಡಿದ್ದೇನೆ, ನನಗಿಷ್ಟು ಸಾಕು. ಸದ್ಯಕ್ಕೆ ಇಷ್ಟು ಸಾಕು....

ನಿಮಗೆ ದೇವರು ಒಳ್ಳೇದು ಮಾಡಲಿ.... :-)

(ವಿ.ಸೂ : ಈ ನನ್ನ ದೇವರ ನಿಲುವಿನ ಬಗ್ಗೆ ವಾದಗಳು-ಚರ್ಚೆಗಳು ಅನಾವಶ್ಯಕ...not interested)

13 comments:

Srikanth - ಶ್ರೀಕಾಂತ said...

ಶ್ರೀನಿವಾಸನ ಕಮೆಂಟು:

ನಂಬದಿರ್ದನು ತಂದೆ, ನಂಬಿದನು ಪ್ರಹ್ಲಾದ,
ನಂಬಿಯುಂ ನಂಬದಿರುವಿಬ್ಬಂದಿ ನೀನು!
ಕಂಬದಿನೊ, ಬಿಂಬದಿನೊ ಮೋಕ್ಷವವರಿಂಗಾಯ್ತು;
ಸಿಂಬಳದಿ ನೊಣ ನೀನು! ಮಂಕುತಿಮ್ಮ...

Srikanth - ಶ್ರೀಕಾಂತ said...

ಕಾ ತೇ ಕಾಂತಾ? ಕಸ್ತೇ ಪುತ್ರಃ?
ಸಂಸಾರೋಯಮತೀವ ವಿಚಿತ್ರಃ!
ಕಸ್ಯ ತ್ವಂ? ಕಃ? ಕುತ ಆಯಾತಃ?
ತತ್ ತ್ವಂ ಚಿಂತಯ ತದಿಹ ಭ್ರಾತಃ!

ಇದರ ಅರ್ಥ ಬೇಕಾದರೆ ಕೆಳಗಿನ ಲಿಂಕಲ್ಲಿ ಇದೆ.
http://sanskritdocuments.org/all_pdf/bhajagovindam.pdf

ಹಾಗೇ ಇನ್ನೂ ಬೇಕಾದಷ್ಟು ಶ್ಲೋಕಗಳಿವೆ. ಒಂದೊಂದು ಶ್ಲೋಕವನ್ನೂ ನಿನಗೆ ಅನ್ವಯಿಸಿಕೊಂಡು ಓದು. ನಿನಗೆ ಶುಭವಾಗಲಿ.

Samarasa said...

devara bagge heloke innu saakshtide idu kadime aiyuthu adru idu chennagide

Lakshmi Shashidhar Chaitanya said...

devarannu "iShTu" arthamaaDkonDiddeeni...iShtu saaku . (nijvaaglu ??? ) hmmm......sikk sikkaapaTTe alpatruptaru neevu.

neeventhavaru gotta karmakaaMDa prabhugaLe...."nange devara mele nambike illa" aMta heLkoMDu, maat maatigU, sriraama ! srikrishnaa...eeshwara...annoru !!!nange "devra" charche bagge interest e illa..."devaru" iddaanO ilvo..."devrne" kELbeku..."devara" against nillOduMTe..."devraaNe" sadhya illa amta "devara" bage yOchne ne maaDde iroru....alva ?

aadre....idoMDu nenpirli...

"
ಕಾಮಂ ಕ್ರೋಧಮ್ ಲೋಭಂ ಮೋಹಮ್
ತ್ಯಕ್ತ್ವಾ ಆತ್ಮಾನಮ್ ಭಾವಯ ಕೋಹಮ್ |
ಆತ್ಮಜ್ಞಾನ ವಿಹೀನಾ ಮೂಢಾಃ
ತೇ ಪಚ್ಯಂತೆ ನರಕ ನಿಗೂಢಾಃ ||

ಅರ್ಥ ಬೇಕಾದ್ರೆ....ಶ್ರೀಕಾಂತ್ ಕಳ್ಸಿರೋ ಲಿಂಕ್ ಗೆ
" ದೇವರೇ " ಅಂದುಕೊಂಡು ಕ್ಲಿಕ್ಕಿಸಿ !!

Sridhar Raju said...

@srinivasa: oLLe kagga..

@srikantha: artha nodide, ponder over the truths -a? adra mele ponder aago avashyakate nange kaaNtilla...

@samarasa: devra bagge heLakke yaavattidru mugyalla..

@lakshmi: nanna vi.soo nu meeri thaavu commentisiddeera..hmmm

devara vishyadali naanu "alpatrupta"naagirakke iShTa padtheeeni.... nanage nimma reetiya hecchina jignaaseyilla, adu bekaagilla.....

naanetahavanu antha nanage chennag gottu....ee bhaagada comment kooda vi.soo nege meeridde...hmmm irli...


neev typisiro shlokaana "bhagavantha" antha ignore maadidhe....

Srikanth - ಶ್ರೀಕಾಂತ said...

@sridhara: ಸರಿ

Parisarapremi said...

ಓ ದೇವರೇ (ದೇವರೆಂಬುವನಿದ್ದರೆ),
ಇವನ ಆತ್ಮವನ್ನು (ಆತ್ಮವೆಂಬುದಿದ್ದರೆ)
ರಕ್ಷಿಸು (ಬಲವಿದ್ದರೆ)..

Parisarapremi said...

ಬ್ಲಾಗ್ ಅಲ್ಲಿ ಬರ್ದು ಚರ್ಚೆ ಮಾಡೋಕೆ ಇಷ್ಟ ಇಲ್ಲ ಅನ್ನೋದು ನ್ಯಾಯ ಅಲ್ಲ.. ಆ ವಿ.ಸೂ. ಸಾಲನ್ನು ಎಲ್ಲರೂ ignore ಮಾಡಬೇಕಾಗಿ ವಿನಂತಿ.

ಎಷ್ಟು ಒಳ್ಳೇ ವಿಷಯದ ಬಗ್ಗೆ ಬರೆದಿದ್ದೀಯ. ನಿನ್ನ ನಿಲುವನ್ನು ನೀನು ಸಮರ್ಥಿಸಿಕೊಳ್ಳಬೇಕು ಕಣೋ.. ಚರ್ಚೆಯಲ್ಲಿ ಆಸಕ್ತಿಯಿಲ್ಲ ಅಂತ disclaimer ಹಾಕೋದಲ್ಲ..

ಸೊಗಸಾದ ನಿಲುವುಗಳಿವೆ. ಆದರೆ ಅಲ್ಲಲ್ಲಿ ನನ್ನ ಕಮೆಂಟಿನಂತೆ ಗೊಂದಲಗಳಿವೆ. ನೇರ ನಿಲುವಿನಿಂದ ಕೂಡಿರಲಿ ಅಂಕಣಗಳು. ಮತ್ತೆ ಈ ಪೋಸ್ಟು ನನಗೆ ಯಾಕೋ incomplete ಅನ್ಸ್ತು. ಇನ್ನೂ ಬರೆಯಬಹುದಿತ್ತು.

ಮುಂದಿನ ಪೋಸ್ಟ್ ಅಲ್ಲಿ ಇನ್ನಷ್ಟು ನೇರವಾಗಿರಲಿ.. ಗೊಂದಲದಿಂದ ಮುಕ್ತವಾಗಿರಲಿ!!

Parisarapremi said...

@ಲಕ್ಷ್ಮೀ: "ಅಯ್ಯೋ ರಾಮ, ಅಯ್ಯೋ ಕೃಷ್ಣ..." ಎಂಬ ಉದ್ಗಾರಕ್ಕೂ ದೇವರ ಮೇಲಿನ ನಂಬಿಕೆಗೂ ಯಾವ ತೃಣದ ಸಂಬಂಧವೂ ಇಲ್ಲ. ಅಯ್ಯೋ ದೇವರೇ ಕಾಪಾಡಪ್ಪಾ... ದೇವರು ನಿಮಗೆ ಒಳ್ಳೇದು ಮಾಡಲಿ... ಅಂತ ಹೇಳೋರೂ ಕೂಡ ದೇವರನ್ನು ನಂಬಬೇಕೆಂದಿಲ್ಲ. ಆ ಮಾತುಗಳು ಕೇವಲ ಅಭ್ಯಾಸದಿಂದ ಬರುವುದಷ್ಟೆ.

ಪೆಟ್ಟಾದ ತಕ್ಷಣ "ಅಪ್ಪಾ..." ಎಂದು ಕಿರುಚುವವನು, ನಿಜಕ್ಕೂ ಅಪ್ಪನನ್ನು ನೆನೆಸಿಕೊಳ್ಳಲೇ ಬೇಕೆಂದಿಲ್ಲ. ಅದು mechanical ಆಗಿ ಬರುವಂಥದ್ದು..

Sridhar Raju said...

@parisarapremi: :-) :-) :-) nanna nilvuina bagge gondala illa ....aadre presentation innu chennag maadbodittu... innu examples kodbodittu.... innaShTu neravaagi prakharavaagi bareebodittu.. Charche yalli vaadagaLu irbeku aadre charche full vaadhagaLe tumbkobaardu... :-)

Srikanth - ಶ್ರೀಕಾಂತ said...

ಅರುಣ:

ವಿ.ಸು. ಹಾಕಿಬಿಟ್ಟರೆ ಎಲ್ಲರೂ ಸುಮ್ಮನಿದ್ದುಬಿಡುತ್ತೇವೆ ಎಂದುಕೊಂಡಿದ್ದಾನೆ ಶ್ರೀಧರ. ಇರೋ ವಿಚಾರ ಅಂದರೆ, ಲಕ್ಷ್ಮೀ ಬ್ಲಾಗಲ್ಲಿ ಬಹಳಷ್ಟು ಚರ್ಚೆ ನಡೆಯುತ್ತಿದ್ದು, ಅದು ಇನ್ನೂ ಮುಗಿದಿಲ್ಲ. ಅಲ್ಲಿಯ ಚರ್ಚೆ ಇದಕ್ಕಿಂತ ಉನ್ನತ ಹಂತದಲ್ಲಿದೆ. ಆದು ಮುಗಿದಮೇಲೆ ಸ್ವಲ್ಪ ಕೆಳಗಿನ ಹಂತಕ್ಕಿಳಿದು ಈ ಬ್ಲಾಗಲ್ಲಿ ಚರ್ಚೆ ಶುರು ಮಾಡಬೇಕು. ನಿಜ ಹೇಳಬೇಕೆಂದರೆ ಶ್ರೀನಿವಾಸನಿಗೂ ಶ್ರೀಧರನ ಜೊತೆ ಚರ್ಚಿಸುವ ಉತ್ಸಾಹ ಇದೆ. ಬ್ಲಾಗಲ್ಲಿ ಮಾಡದಿದ್ದರೆ ಮುಖಾಮುಖಿ ಚರ್ಚೆ ಮಾಡೋದು. "ಸಿಂಬಳದಲ್ಲಿರುವ ನೊಣ"ದಂತೆ ಅಲ್ಲೂ ಇಲ್ಲ ಇಲ್ಲೂ ಇಲ್ಲ ಎನ್ನುವಂಥ ಒಂದು ತತ್ವವನ್ನು ಬರೆದು ಚರ್ಚೆಗೆ ತಯಾರಿಲ್ಲ ಎಂದುಬಿಟ್ಟರೆ ಅದು ಬೇಜವಾಬ್ದಾರಿ ಅನ್ನಿಸಿಕೊಳ್ಳತ್ತೆ. ಏನಂತೀಯ?

"ಆ ವಿ.ಸೂ. ಸಾಲನ್ನು ಎಲ್ಲರೂ ignore ಮಾಡಬೇಕಾಗಿ ವಿನಂತಿ"

ಈ ಸಾಲನ್ನು ನೋಡಿದರೆ ನಗು ಬರತ್ತೆ ನಂಗೆ! ಶ್ರೀಧರನ ಬ್ಲಾಗಿನಲ್ಲಿ ಕಮೆಂಟುಗಳ ಮೂಲಕ ಸೆಂಚುರಿ ಹೊಡೆದೋರು ನಾವು! ಈ "ವಿ.ಸು." ನೋಡಿಕೊಂಡು ಸುಮ್ಮನಿರ್ತೀವಾ? ಶ್ರೀಧರನ ಬ್ಲಾಗಲ್ಲಿ "ವಿ.ಸು." ಎಂದು ಬರೆದರೆ ನಾವು ಅದನ್ನ ಅರ್ಥ ಮಾಡಿಕೊಳ್ಳೋದು "ವಿಸರ್ಜಿಸಬೇಕಾದ ಸೂಚನೆ" ಅಂತ!

Sridhar Raju said...

@srikantha: ಆದು ಮುಗಿದಮೇಲೆ ಸ್ವಲ್ಪ ಕೆಳಗಿನ ಹಂತಕ್ಕಿಳಿದು ಈ ಬ್ಲಾಗಲ್ಲಿ ಚರ್ಚೆ ಶುರು ಮಾಡಬೇಕು....

ee ಮುಗಿದಮೇಲೆ word nodi thumbaa nagu nange.... :-) :-) :-) :-)

Srikanth - ಶ್ರೀಕಾಂತ said...

@sridhara - ಸರಿ

[ಶ್ರೀನಿವಾಸನ ಪರವಾಗಿ]