ನಾನು ಬ್ರಹ್ಮ ಮತ್ತು ಮುಖ್ಯಮಂತ್ರಿ - ಭಾಗ 5

Friday, March 7, 2008

Brahma is back... 5 ತಿಂಗಳ ಹಿಂದೆ ಬಂದಿದ್ದ ಬ್ರಹ್ಮನನ್ನು ದಸರೆಯ ರಜೆಗೆಂದು ಕಳಿಸಿದ್ದೆ, ಆಗಲೇ ಸಾಕಷ್ಟು ವರಗಳ ಪಟ್ಟಿ ಇಟ್ಟಿದ್ದೆ, ಇನ್ನಷ್ಟು ಹೇಳುವ ಹಂಬಲದಲ್ಲಿದ್ದೆ, ಸಮಯಾವಕಾಶ ಅಭಾವದಲ್ಲಿದ್ದ ಬ್ರಹ್ಮನನ್ನು ದಸರೆಯ ರಜೆಗಾಗಿ ಕಳುಹಿಸಿಕೊಟ್ಟಿದ್ದೆ, ಇದೀಗ ಮರಳಿ ಬಂದು ನಿನ್ನ ವರಪಟ್ಟಿಯನ್ನು ಮುಗಿಸು ಎಂದು ಕಾಡುತ್ತಿದ್ದಾನೆ, ಇನ್ನಿಲ್ಲದಂತೆ, ನಿನ್ನ ವರಪಟ್ಟಿಯನ್ನು ಮುಗಿಸಿದರೆ ನನಗೆ ವರಮುಕ್ತಿಯಾಗುವುದಯ್ಯ ಎಂದು ಹೇಳಿದುದಕ್ಕಾಗಿ ಮತ್ತೆ ಬ್ರಹ್ಮನ ಸರಣಿಯ ಕೊನೆಯ ಭಾಗವನ್ನು ನಿಮ್ಮ ಮುಂದಿಡುತ್ತಿದೇನೆ, ಓದಿಕೊಳ್ಳಿ...

’ನಾನು, ಬ್ರಹ್ಮ ಮತ್ತು ಮುಖ್ಯಮಂತ್ರಿ’ ಸರಣಿಯನ್ನು ನಾಲ್ಕು ಭಾಗಗಳಲ್ಲಿ ಕುಯ್ದಿದ್ದೆ ;-), ಮಾನವರ ನೆನಪಿನ, ಮೆದುಳಿನ ಕಾರ್ಯಕ್ಷಮತೆಯ ಅರಿವು ನನಗಿರುವುದರಿಂದ, ಒಮ್ಮೆ ಆ ನಾಲ್ಕು ಭಾಗಗಳ ಮೇಲೆ ಒಂದು ಸಿಂಹಾವಲೋಕನ ಮಾಡಿಬಿಡಿ...ಪ್ಲೀಸ್, ಇಲ್ಲವೆಂದರೆ ನಿಮ್ಮ ಲಹರಿಗೆ ತೊಡಕುಂಟಾಗುತ್ತದೆ, ಅದರ ಕೊಂಡಿಗಳು ಹೀಗಿವೆ, ಒಂದು ಧೀರ್ಘವಾದ ನಿಟ್ಟಿಸಿರು ಬಿಟ್ಟು ಓದಲನುವಾಗಿ, ನಿಮಗೆ ಶುಭವಾಗಲಿ.....
ಭಾಗ 1
ಭಾಗ 2
ಭಾಗ 3
ಭಾಗ 4
----------------



ಬ್ರಹ್ಮನ ಮುಂದೆ ನಾನು ಮುಖ್ಯಮಂತ್ರಿಯಾಗುವ ಹಾಗೂ ಆ ಸ್ಥಾನದ ಅಧಿಕಾರದ ವ್ಯಾಪ್ತಿ ವಿಸ್ತರಿಸುವ ಬಗ್ಗೆ ನನಗಿದ್ದ ಕನಸುಗಳನ್ನ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದೆ..

ಬ್ರಹ್ಮ ಬಂದ ಕೂಡಲೆ ಕೈಕುಲುಕಿ "ಎಲ್ಲಾ ಕ್ಷೇಮವೋ?"

"Everything is fine Mr.Brahma"..ಎಂದು ಹೇಳಿ ಮುಗಿಸಿ ಮತ್ತೆ..

"I missed you a lotttttttt..." ಎಂದು ಭಾವಭರಿತವಾಗಿ ಉದ್ಗರಿಸಿದೆ..

ಅದಕ್ಕೆ ಆತ "OK" ಎಂದು "ಮುಂದುವರೆಸು ಇನ್ನ ಪ್ರಣಾಳಿಕೆಯನ್ನು" ಎಂದುಬಿಟ್ಟ..

Hmmm.. "OK" ಪದಬಳಕೆ ತಟ್ಟಬೇಕಾದ ಸ್ಥಳಗಳನ್ನೆಲ್ಲ ತಟ್ಟಿದೆ ಎಂದು ನನ್ನ ಆಶಯಗಳನ್ನ ಮುಂದುವರೆಸಲು ಸನ್ನದ್ಧನಾದೆ..

ಬ್ರಹ್ಮ ನನ್ನ ರಾಜಕೀಯ ಆಶಯಗಳನ್ನೆಲ್ಲ ಅದಾಗಲೇ ನಿನ್ನ ಮುಂದಿಟ್ಟಿಯಾಗಿದೆ, ಮತ್ತೊಮ್ಮೆ clear picture ಬೇಕಾದರೆ ಮತ್ತೊಮ್ಮೆ ಓದಿಕೊಂಡು ಬಿಡು..


"ಹಾಗದರೆ ನಿನ್ನ ವರಪಟ್ಟಿ ಮುಗಿಯಿತೋ" ಎಂದು ಕೇಳಿದ.

"ಇಲ್ಲ ಬ್ರಹ್ಮ ಇನ್ನೂ ಮುಗಿದಿಲ್ಲ, ನಾನು ಬೆಂಗಳೂರಿಗ ನಾದುದರಿಂದ "ನಮ್ಮ ಬೆಂಗಳೂರು" ಬಗ್ಗೆ ಒಂದಷ್ಟು ಬೇಡಿಕೆಗಳು, ಸುಧಾರಣೆಯ ಹಾದಿಯಲ್ಲಿ...


"ಸರಿ..."



"ಬೆಂಗಳೂರು ಎಗ್ಗಿಲ್ಲದೆ ಬೆಳೆದಿದೆ, ಬೆಳೆಯುತ್ತಲಿದೆ, ಇದಕ್ಕೆ ಕಡಿವಾಣ ಅಗತ್ಯ, ದೇಶದ ಮೂಲೆ ಮೂಲೆಗಳಿಂದ ಜನರು ಈ ಊರಿಗೆ ಧಾವಿಸಿ ಬರುತ್ತಿದ್ದಾರೆ, ಇದಕ್ಕೆಲ್ಲ ಕಾರಣ ಇಲ್ಲಿರುವ ಮಾನವ ಸಂಪನ್ಮೂಲ, ಇಷ್ಟೊಂದು ಸಂಪನ್ಮೂಲ ಇರುವುದಕ್ಕೆ ಕಾರಣ ನಗರದಲ್ಲಿ ಹೆಚ್ಚಿದ ಇಂಜಿನಿಯರಿಂಗ್ ಕಾಲೇಜುಗಳು, ರಾಜಕಾರಣಿಗಳು ತಮ್ಮ ಕಪ್ಪು ಹಣ ಹುದುಗಿಸಿಡಲು ಇಂಜಿನಿಯರಿಂಗ್ ಕಾಲೇಜುಗಳನ್ನು ನಾಯಿಕೊಡೆಗಳಂತೆ ತೆರೆಯುತ್ತ ಹೋದರು, ಇಂದು ನಾವು ಏನೆಲ್ಲಾ traffic ಕಿರಿಕಿರಿ, ಹೆಚ್ಚಿದ ಜನಸಂದಣಿ , ಗಗನ ಮುಟ್ಟಿರುವ ಸೈಟುಗಳ ರೇಟು ಇವೆಲ್ಲದಕ್ಕೂ ಹೊರ ರಾಜ್ಯಗಳಿಂದ ವಲಸೆ ಬಂದಿರುವುದರಿಂದಲೇ ಉಂಟಾಗಿರುವುದು, ಬಂದವರು ಬಂದು ವಿದ್ಯೆ ಕಲಿತು ಹೋಗಿದ್ದರೆ ಚೆನ್ನಾಗಿತ್ತೇನೋ, ಇಲ್ಲೆ ತಳವೂರಿದರು, ಆಸ್ತಿ ಮನೆ ಮಠ ಮಾಡಿಕೊಂಡರು, ಇಷ್ಟೆಲ್ಲ ಸಾಲದೆಂಬಂತೆ ಇಲ್ಲಿನ ಭಾಷೆ, ಜನರನ್ನ ಜರಿದರು, ಜರಿಯುತ್ತಲೇ ಇದ್ದಾರೆ( ಹಾ! ಬಂದವರೆಲ್ಲರೂ ಹೀಗೆ ಅಲ್ಲ, ಆದರ ಬಹಳ ಮಂದಿ ಇದೇ ನಿಲುವನ್ನು ಹೊಂದಿರುವವರು..hmmm) ಇರಬರುವ ಎಲ್ಲ ಇಂಜಿನಿಯರಿಂಗ್ ಕಾಲೇಜುಗಳಿಂದ ವಿಧ್ಯಾರ್ಥಿಗಳನ್ನು ಕೋಳಿ ಎಗರಿಸಿಕೊಂಡು ಹೋಗುವಂತೆ ಎಗರಿಸಿಕೊಂಡು ಕೆಲಸ ಕೊಟ್ಟವರು IT ಕಂಪೆನಿಗಳು, ಇದರಿಂದ ಆರ್ಥಿಕವಾಗಿ ಬೆಂಗಳೂರು ಸುಧಾರಿಸಿರಬಹುದು, ಅದರಿಂದ ಲಾಭವೂ ಇದೆ, ಆದರೆ ಅದಕ್ಕೆ ತೆರುತ್ತಿರುವ ಕಂದಾಯ ಬಹಳವೇ ಆಗಿದೆ. ಎಲ್ಲಾ ಈಟ್ ಕಂಪೆನಿಗಳು ಬೆಂಗಳೂರಿನಲ್ಲಿ ಟಿಕಾಣಿ ಹೂಡಿ, ಎಲ್ಲರಿಗೂ ಇಲ್ಲೇ ಕೆಲಸ ಕೊಟ್ಟರೆ ಜನರು ಹೆಚ್ಚಗುವುದಿಲ್ಲವೇ ?, ಕೆಲಸದ ನೆಪದಲ್ಲಿ ದೂರ ದೂರ ಊರುಗಳಿಂದ ಜನರು ಬಂದರು, ಬೆಂಗಳೂರು ಬೆಳೆಯಿತು, ಜೊತೆ ಜೊತೆಗೆ ಸಮಸ್ಯೆಗಳು ಕೂಡ.. IT ಕಂಪೆನಿಗಳಿಂದ ಲಾಭವಾಗಿರಬಹುದು, ಅದರ ಬಗ್ಗೆ ನಾನು ಚರ್ಚಿಸುವುದಿಲ್ಲ, ಅದರ ಬಗ್ಗೆ ಪುಂಖಾನುಪುಂಖವಾದ ವ್ಯಾಖ್ಯಾನಗಳು, ಊಹಪೋಹಗಳು ಚಾಲ್ತಿಯಲ್ಲಿ ಇದ್ದೇ ಇರುತ್ತವೆ...ಇರಲಿ ಜನರು ಭ್ರಮೆಯಲ್ಲೇ ಇರಲಿ..."


ಬ್ರಹ್ಮ ಕಣ್ಣರಳಿಸಿಕೊಂಡು ನನ್ನನ್ನೇ ನೋಡುತ್ತಲಿದ್ದ....

ನಾನು ಇನ್ನೂ ಮುಂದುವರೆದು..."ಬ್ರಹ್ಮ ಇದಕ್ಕೆಲ್ಲ ನನಗೆ ತೋಚಿದ ಪರಿಹಾರ ನೀಡುತ್ತೇನೆ, ಇದಕ್ಕೆ ಕೂದ ಅಧಿಕಾರ ಬೇಕು, ನಿನ್ನ ಆಶೀರ್ವಾದವೂ ಕೂಡ..."

"ಅದು ಯಾವಗಲೂ ಇರುತ್ತದೆ ಮಗೂ... ಮುಂದುವರೆಸು.."

ನನ್ನ ಪಟ್ಟಿ ಹೀಗಿದೆ...
1) ನಗರದಲ್ಲಿ ಇರುವ 120+ ಕಾಲೇಜುಗಳಲ್ಲಿ ಒಂದಷ್ಟಕ್ಕೆ ಬಾಗಿಲು ಜಡಿಯಬೇಕು, 40 ಕಾಲೇಜುಗಳಿಗೆ ಮಾತ್ರ ಅವಕಾಶ ನೀಡುತ್ತೇನೆ.
2) ಮಿಕ್ಕ ಕಾಲೇಜುಗಳನ್ನು ರಾಜ್ಯಾದ್ಯಂತ ಸರಿಯಾಗಿ ವಿಂಗಡನೆಯಾಗುವಂತೆ ನಾನು ನೋಡಿಕೊಳ್ಳುತ್ತೇನೆ.
3) ಇಂಜಿನಿಯರಿಂಗ್ ಒಂದೇ ಅಲ್ಲದೇ ಇತರೆ ಎಲ್ಲಾ ವಿಭಾಗಗಳಿಗೂ ಸಮಾನ ಪ್ರಾಮುಖ್ಯತೆ ಸಿಗುವಂತೆ ಮಾಡುತ್ತೇನೆ, ಅದಕ್ಕೆ ರೂಪುರೇಶೆಯನ್ನು ಸಿದ್ದಪಡಿಸುವೆ.
4) ನಗರದ ಒಳಗೆ ಇರುವ ಹಲವಾರು IT ಕಂಪೆನಿಗಳನ್ನು ನಗರದ ಆಚೆಗೆ ಉಚ್ಚಾಟಿಸುತ್ತೇನೆ, ಊರ ಸುತ್ತಲೂ IT park ಗಳನ್ನು ನಿರ್ಮಿಸಲನುವಾಗುವಂತೆ ನೋಡಿಕೊಳ್ಳುತ್ತೇನೆ.. ಇದರಿಂದ ನಗರದ ಒಳಗೆ traffic ಒತ್ತಡ ಸ್ವಲ್ಪ ಮಟ್ಟಿಗಾದರೂ ಕಮ್ಮಿಯಾಗುತ್ತದೆ
5) ಹೊರ ರಾಜ್ಯ ವಿದ್ಯಾರ್ಥಿಗಳಿಗೆ ಇನ್ನು ನಮ್ಮ ರಾಜ್ಯದಲ್ಲಿ ಇಂಜಿನಿಯರಿಂಗ್ ಸೀಟುಗಳು ದೊರೆಯದಂತೆ ಮಾಡುತ್ತೇನೆ..!!
6) "ಕನ್ನಡ" ಭಾಷೆಯನ್ನು ಹೆಚ್ಚು ವ್ಯಾಪಕವಾಗಿ ಉಪಯೋಗಿಸುವಂತೆ ಆದೇಶ ಹೊರಡಿಸುತ್ತೇನೆ, ಉಲ್ಲಂಘಿಸಿದರು ದಂಡನೆಗೆ ಅರ್ಹರು...!!


ಹೀಗೆ ಪಟ್ಟಿ ಸಾಗುತ್ತಲೇ ಇರುತ್ತದೆ ಬ್ರಹ್ಮ, ನನ್ನ ಕಳಕಳಿ ನಿನಗೆ ಅರ್ಥವಾಯಿತಲ್ಲವೆ?, ನನಗೆ ಇದನ್ನೆಲ್ಲವ ಮಾಡುವ ಅಧಿಕಾರ ಬೇಕು, ಹಣ ಬೇಕು, ನಾನು ಇದನೆಲ್ಲವನ್ನು ಹಣ, ಅಧಿಕಾರ, ಒಂದಷ್ಟು ಸಮಚಿತ್ತರೊಡನೊಡಗೂಡಿ ಸಾಧಿಸುವೆ..ಏನೆನ್ನುವಿ ಬ್ರಹ್ಮ??

ಬ್ರಹ್ಮ ನನ್ನನ್ನೇ ದಿಟ್ಟಿಸುತ್ತಿದ್ದ, ನನಗೂ ಒಂದೇ ಸಮನೇ ಭಾಷಣ ಬಿಗಿದು ದಣಿವಾಗಿತ್ತು.

ಮೌನ ಮುರಿದು ಬ್ರಹ್ಮ.."ನಿನ್ನ ಜನಪರ ಕಾಳಜಿ ನನಗೆ ಹಿಡಿಸಿತು, ಆದರೆ ಇದೆಲ್ಲವನ್ನು ನಿನ್ನೊಬ್ಬನಿಂದಲೆ ಸಾಧಿಸಲು ಸಾಧ್ಯವೇ??"

"ನನ್ನಿಂದಲಾದರೂ ಶುರುವಾಗಲಿ ಬ್ರಹ್ಮ, ಒಳ್ಳೇ ಕೆಲಸ ಎಂದಿಗೂ ಮುಂದುವರೆಯುತ್ತದೆ..."

"ಹಿಂದೆ ಯಾರೂ ಸಹ ಈ ಪರಿಯ ವರವನ್ನು ಕೇಳಿರಲಿಲ್ಲ, ಮುಂದೆಯು ಕೇಳುವುದಿಲ್ಲವೆಂದೆನಿಸುತ್ತೆ, ನ ಭೂತೋ ನ ಭವಿಷ್ಯತಿ, ಇದೋ ನಿನಗೆ ವರವೀಯುತ್ತಿದ್ದೇನೆ, ನೀನೆಂದುಕೊಂಡಿರುವ ಈ ಏಲ್ಲಾ ಕನಸುಗಳು ಕೈಗೂಡಲಿ, ಅದಕ್ಕೆ ಬೇಕಾದ ಹಣ, ಅಧಿಕಾರವನ್ನು ನಾನು ನಿನಗೆ ನೀಡುತ್ತಿದ್ದೇನೆ, ಇಂದಿನಿಂದ ನೀನು ಈ ರಾಜ್ಯದ ಮುಖ್ಯಮಂತ್ರಿ....ಮುಖ್ಯಮಂತ್ರಿ..." ಎಂದು ನನ್ನ ತಲೆ ಮೇಲೆ ತನ್ನ ಹಸ್ತವನ್ನಿಟ್ಟು ಉದ್ಗರಿಸಿದ...

ಮೈರೋಮಗಳೆಲ್ಲ ಸೆಟೆದು ನಿಂತು, ನರನಾಡಿಗಳಲ್ಲಿ ಮಿಂಚಿನ ಸಂಚಾರವುಂಟಾಗಿತ್ತು, ಒಂದು ತೆರನಾದ ಭಾವ ನನ್ನಲ್ಲಿ ಉಂಟಾಗಿತ್ತು, ಶಬ್ಧಾತೀತ ಭಾವ!! ಮಾಡಿಕೊಂಡ ರೂಪುರೇಷೆಗಳೆಲ್ಲ ಸಾಧಿಸುವಷ್ಟು ಶಕ್ತಿ ನನ್ನಲ್ಲಿ ಉಂಟಾಗಿತ್ತು ಬ್ರಹ್ಮನ ಸ್ಪರ್ಶಮಾತ್ರದಿಂದ...ಅದೇ ಭಾವದಲ್ಲಿ ಒಂದತ್ತು ನಿಮಿಷಗಳು ಕಳೆದೆ ಎಂದೆನಿಸುತ್ತೆ...




ನನಗೆ ನಾನು ಅಂದುಕೊಳ್ಳುತ್ತಲ್ಲಿದ್ದೆ..."ನಾನೀಗ ಮುಖ್ಯಮಂತ್ರಿ..ರಾಜ್ಯವನ್ನಾಳುವ ಮುಖ್ಯಮಂತ್ರಿ..."

ತಲೆ ನೇವರಿಸುತ್ತ ಬ್ರಹ್ಮ ಕೇಳಿದ.."ಮಗೂ ಇದುವರೆಗೂ ನಿನಗೆ ಅಂತ ಏನು ಕೇಳಿಕೊಳ್ಳಲಿಲ್ಲವಲ್ಲ, ಏನಾದರೂ ಕೇಳು"

"ನನಗೆ ಕೇಳಬೇಕೆಂದೆನಿಸಲ್ಲಿಲ್ಲ ಬ್ರಹ್ಮ..." ಹಾಕಿರುವ ಯೋಜನಾಪಟ್ಟಿಗಳನ್ನು ಪೂರೈಸುವ ಶಕ್ತಿ ಕೊಡು ಸಾಕು ನನಗೆ".

"ಶಕ್ತಿಯೆಲ್ಲವನ್ನು ಕೊಟ್ಟಾಯಿತು, ವಯುಕ್ತಿಕವಾಗಿ ನೀನು ಏನೊಂದನ್ನೂ ಕೇಳಲಿಲ್ಲವಲ್ಲ, ಏನಾದರೂ ಇದ್ದರೆ ಕೇಳು, ಇದು ನನ್ನ ಆದೇಶ.." ಎಂದು ನನ್ನ ಮೇಲೆ ಹುಸಿಕೋಪವನ್ನು ಹೊರಸೂಸಿದ..

"ಸರಿ ಹಾಗಿದ್ದಲ್ಲಿ, ನನ್ನವರನ್ನೆಲ್ಲಾ ಚೆನ್ನಾಗಿಡು..." ಎಂದೆ..

"ಮುಂದೆ" ಎಂದ ಬ್ರಹ್ಮ..

ಮತ್ತೆ ಮತ್ತೆ ಯೋಚಿಸಿದೆ, ಮನದಾಳದಲ್ಲಿ ಒಂದು ಆಸೆ ಕೂತಿತ್ತು, ನನ್ನ ವಯುಕ್ತಿಕ ಕನಸಾಗಿತ್ತು ಅದು, ಅದಕ್ಕೆ ನೀರೆರೆದು ಪಾಲಿಸಿ ಪೋಷಿಸಿ ಜತನವಾಗಿ ಕಾಪಿಟ್ಟುಕೊಂಡು ಬಂದಿದ್ದೆ, ಈ ಗಡಿಬಿಡಿಯಲ್ಲಿ ಮರೆತಿದ್ದೆ, ಕೇಳೋಣವೆಂದೆನಿಸಿತು, ಒಂದು ರೀತಿಯ ಅಳುಕಿತ್ತು,ರಾಜನ ಮುಂದೆ ಬದನೆಕಾಯಿ ಕೇಳಿದ ಹಾಗಿರುತ್ತದೆ ಎಂದು.

ಗಂಟಲು ಸರಿ ಮಾಡಿಕೊಂಡು "ಬ್ರಹ್ಮಾ.................." ಎಂದೆ..

"ಏನು ಮಗೂ, ಏನದು ನಿಸ್ಸಂಕೋಚವಾಗಿ ಕೇಳುವವನಂತಾಗು...."

"ಅ...ಅದು...ನನಗೆ.." ಎಂದು ತಡವರಿಸುತ್ತಿದ್ದೆ...

ಅಷ್ಟರಲ್ಲಿ.....

ನನ್ನ ಮೊಬೈಲು ರಿಂಗುಣಿಸುತ್ತಿತ್ತು, ಮುಸುಕು ಹಾಕಿ ಮಲಗಿದ್ದ ನಾನು ಧಡಾರನೆ ಎದ್ದು ನೋಡಿದೆ, ಸಮಯ ಅದಾಗಲೇ ಬೆಳಿಗ್ಗೆ 5:45 ಆಗಿತ್ತು, ನನ್ನನ್ನು ಆಫೀಸಿಗೆ ಹೊತ್ತುಕೊಂಡು ಹೋಗಲು ಬಂದಿದ್ದ ನನಗಾಗಿ ಕಾದು ಕುಳಿತಿದ್ದ ಕ್ಯಾಬ್ ಡ್ರೈವರ್ ನ ಕರೆಯಾಗಿತ್ತು ಅದು...

ಎದ್ದೆನೋ ಬಿದ್ದೆನೋ ಎಂದು ಕೆಳಗೋಡಿದೆ, ಮಧ್ಯ ಮಧ್ಯ ಕಣ್ಣುಜ್ಜಿ ನೋಡಿಕೊಳ್ಳುತ್ತಿದ್ದೆ, ಬ್ರಹ್ಮ ನಿದ್ದಾನೋ ಇಲ್ಲವೋ ಎಂದು, ಬ್ರಹ್ಮನೂ ಇಲ್ಲ ಯಾವನೂ ಇಲ್ಲ..ಅದಾಗಲೆ 5 ಬಾರಿ missed calls ಕೊಟ್ಟಿದ ಡ್ರೈವರನಿಗೆ 10ನಿಮಿಷದಲ್ಲಿ ಬರುವುದಾಗಿ ತಿಳಿಸಿ ಸ್ನಾನಾದಿಕಾರ್ಯಗಳಿಗೋಸ್ಕರ ಕರ್ಮಭೂಮಿಯೆಡೆಗೆ ನುಗ್ಗಿದೆ....


-(ಮುಗಿಯಿತು)

11 comments:

Srikanth - ಶ್ರೀಕಾಂತ said...

"ಚ್ಲೆಅರ್ ಪಿಚ್ತುರೆ" andre? karmakaanda!!

"ಕನ್ನಡ" ಭಾಷೆಯನ್ನು ಹೆಚ್ಚು ವ್ಯಾಪಕವಾಗಿ ಉಪಯೋಗಿಸುವಂತೆ ಆದೇಶ ಹೊರಡಿಸುತ್ತೇನೆ - bhEsh!

mukhyamantri paTTa koTTidddikke ITC cab hatti foreign daNi ge kelsa maaDakke horTya? che! vara koTTa brahmanige badalaagi sikkiddu chombu!!!

adEno ninna vaiyyuktika aase?

Parisarapremi said...

ಲೋ, ನನಗೆ ಗೊತ್ತಿತ್ತೋ ಇದೆಲ್ಲಾ ಕನ್ಸು ಅಂತ!!

ಬ್ರಹ್ಮನೂ ಓಕೆ ಅನ್ನೋದು ಸಕ್ಕತ್ತಾಗಿದೆ.. :-)

Srikanth - ಶ್ರೀಕಾಂತ said...

arun - "ಚ್ಲೆಅರ್ ಪಿಚ್ತುರೆ" andre? artha aayta? 'karaDatana' thara innondu pada irbeku alvaa?

Lakshmi Shashidhar Chaitanya said...

ಕರ್ಮಕಾಂಡ ಪ್ರಭುಗಳೇ....ನಿಮ್ಮ ಕನಸ್ಸಿನ ಕಲ್ಪನಾ ಶಕ್ತಿ ಮತ್ತು ಯೋಚನಾಲಹರಿ ನಿಜಕ್ಕು ಸೂಪರ್ !! ನೀವು ಚುನಾವಣೆಗೆ ನಿಲ್ಲಿ...ಕಾಫಿಯಾಣೆ...ನಾನೇ ಮೊದಲು queue ನಲ್ಲಿ ನಿಂತು ಮತ ಚಲಾಯಿಸುತ್ತೇನೆ.

"ಕನ್ನಡ" ಭಾಷೆಯನ್ನು ಹೆಚ್ಚು ವ್ಯಾಪಕವಾಗಿ ಉಪಯೋಗಿಸುವಂತೆ ಆದೇಶ ಹೊರಡಿಸುತ್ತೇನೆ .

ಧನ್ಯಳು ಭುವನೇಶ್ವರಿ ತಾಯಿ !!

ಆದ್ರೂ...ಭ್ರಹ್ಮನೊಂದಿಗೆ ಸಂವಾದವಾದಮೇಲೆ ನೀವು ಕೆಂಡ ಕಾರಿದ್ದ IT ಕಂಪನಿಗೆ ಹೊರಟಿದ್ದು ಸ್ವಲ್ಪ ಬೇಜಾರಾಯ್ತು. Direct ಆಗಿ ಕುಮಾರ ಪಾರ್ಕ್ ಗೆ ಕಾಲಿಟ್ಟಿದ್ದರೆ ಕರತಾಡನ ಮಾಡುತ್ತಿದ್ದೆನೇನೊ ! ;-)

ಪೂರ್ಣ ವಿ-ರಾಮ said...

ನೀನೂ ಸಾಕು, ನಿನ್ನ ಬ್ರಹ್ಮದೇವನೂ ಸಾಕು ಮಾರಾಯ....


ಏನೇ ಆದ್ರೂ ಅಲ್ಲೊಂದು ಥ್ರಿಲ್ ಇತ್ತು....

ವೆರ್ರಿ ನೈಸ್ ಸ್ಟೋರಿ !


ಭಾಗಗಳು ಮತ್ತೆ ಬರುತಿರಲಿ...

Parisarapremi said...

ನಿಂಗೆ ಇದನ್ನು ನೆನಪು ಮಾಡಬೇಕೆಂದು ಈ ಕಮೆಂಟು.

ನಮಸ್ತೇ ಶ್ರೀಧರ್ ಅವರೇ ,

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಅರುಣ್

Srinivasa Rajan (Aniruddha Bhattaraka) said...

hmmm.. sari

Dynamic Divyaa said...

aahaaa.. "expect the unexpected" ankonDu, expected end haakbiTyaaaa.... wastefellow..

serials style aagoytu...!
niroopaNe nice.. :-)
brahmange innond salpa tale tinbodittu... avnige adikke 3 tale, neen tinli antaane exclusive aagi haagide..!!
salpa tale tindu heege kansu maaDiddu chooru disappointment!


hehehee... as usual tarle hoLeetide...
idea koDlaaa??
aa kansu kooda ond kansu anta choke koTTu matte baryak shuru maaDu, brahmanna matte karkond baa... :-D
"neevella idu kansu anta nambidre... [-( NO NO..." anta heLi matte kori brahman tale na...
help bekaadre nan hatra bandu sharaNaagu... bejjjjjjaaaan ideas koDuve.. :-D

Srikanth - ಶ್ರೀಕಾಂತ said...

ಹೌದು ಕಣೊ ಶ್ರೀಧರ! ಡೈನಮಿಕ್ ಹೇಳೋ ಐಡಿಯಾ ಕೇಳಿ ಅದರಂತೆ ಬರಿ... 'ಚಂದಮಾಮ' ಅಥವಾ 'ಬಾಲಮಿತ್ರ'ದಲ್ಲಿ ಹಾಕಬೋದು ನಿನ್ನ ಕಥೆಯನ್ನ! ನೋಡು!!

Sridhar Raju said...

@srikantha: adEno ninna vaiyyuktika aase?..vayuktika aase vayuktika kaNo:-)

@parisarapremi: ninge gottittu antha nange gottirlilla...

@lakshmi: Vote haaki amele istraaaaaang kaapi kodstheeeni...
ಕುಮಾರ ಪಾರ್ಕ್ ಗೆ ಕಾಲಿಟ್ಟಿದ್ದರೆ ಕರತಾಡನ ಮಾಡುತ್ತಿದ್ದೆನೇನೊ ! ;-) neevu karataadana maadtheera andre allige kaalidalla...

@poorna viraama: Thanks -u...

@srinivasa: Vokayyyyyy

@dynamic :sometime u see dynamic "expect the expected" ....

brahmange eegle thale tindidakke zandu baam kodshuuuuu antha hinde biddidaane.... saaku kordiddu...

baa ninge koritheeeni :-)

@srikantha: Mr.Srikanth i will seriously consider your suggesstion...Thanks a ton!!!

Anonymous said...

karmakaanda.blogspot.com is very informative. The article is very professionally written. I enjoy reading karmakaanda.blogspot.com every day.
cash advance loans
payday advance