EXCUSE ME

Saturday, April 28, 2007

ಸನ್ನಿವೇಶ ೧: ಬಸ್ಸಿನಲ್ಲಿ ವಿಪರೀತ ನೂಕುನುಗ್ಗಲು ಇವನಿಗೆ ತನ್ನ ನಿಲ್ದಾಣ ಹತ್ತಿರವಾಗುತಿತ್ತು..ಆತ ಬಸ್ಸಿನ ಮಧ್ಯದಲ್ಲಿದ್ದ........
ಹಾಗಾಗಿ ಎಲ್ಲರನ್ನು ದೂಡಿ ದೂಡಿ ಬಸ್ಸಿನ ಹಿಂಬದಿಗೆ ತೆವಳುತ್ತ ಸಾಗುತ್ತಿದ್ದ....ಜನರನ್ನು ಸರಿಸಲು ಆತ ಉಪಯೋಗಿಸುತ್ತಿದ್ದ ಶಬ್ದ.. "excuse me "..."excuse me"...

ಸನ್ನಿವೇಶ ೨: ಅಡ್ಡಲಾಗಿ ೪ ಜನ ಹರಟುತ್ತಿರುತ್ತಾರೆ...ಒಬ್ಬ ಅವರು ನಿಂತಿರುವ ಜಾಗದ ಮೂಲಕ ಹಾದು ಹೋಗಬೇಕು...ಹತ್ತಿರ ಹೋಗಿ ಆತ ಉಸುರುತ್ತಾನೆ.."excuse me".. ಅವರು ದಾರಿ ಬಿಡುತ್ತಾರೆ...

ಸನ್ನಿವೇಶ ೩: class ಗೆ ೫ ನಿಮಿಷ ಮುಂಚೆ ಅಧ್ಯಾಪಕರು ತರಗತಿಲಿರುತ್ತಾರೆ. (ಹಾ!...ನಿಗದಿತ ವೇಳೆಗಿಂತ ಮುಂಚೆ ತರಗತಿ ತೆಗೆದುಕೊಳ್ಳುವುವರನ್ನು ನಾನು ನೋಡಿದ್ದೇನೆ..ಅನುಭವಿಸಿದ್ದೇನೆ).. :-)
ಓಬ್ಬ ಹುಡುಗ/ಹುಡುಗಿ ಒಡೋಡಿ ಬಾಗಿಲ ಬಳಿ ಬಂದು ಹೇಳುತ್ತಾನೆ........."excuse me".........


ಈ ಮೇಲ್ಕಂಡ ೩ ಸನ್ನಿವೇಶಗಳಲ್ಲಿ "excuse me" ಅಂದರೆ "ನನ್ನನು ಕ್ಷಮಿಸಿ" ಪದಬಳಕೆ ಸಾಮನ್ಯವಾಗಿ ಮಾಡುತ್ತಾರೆ... ಅದರ ಅವಶ್ಯಕತೆ ಇಲ್ಲವೆಂದು ನನ್ನ ಅಭಿಪ್ರಾಯ.. ಹಾ!..ಎಲ್ಲರೂ "excuse me" ಯೆಂದೆ ಸಂಬೋಧಿಸುವುದಿಲ್ಲ.... ಬಳಸುವ ಕೆಲ ಮಂದಿ ಗೆ ಮಾತ್ರ ನಾನು ಹೇಳಬಯಸುವುದು..


ಬಸ್ಸಿನಲ್ಲಿ footboard ಕಡೆಗೆ ಬರಲು .."ನನ್ನನ್ನು ಕ್ಷಮಿಸಿ".. ಎಕೆ ಉಪಯೋಗಿಸಬೇಕು..ಅಂಥ ಅಪರಾಧಾವಾದರೂಆತ ಎನು ಮಾಡಿರುತ್ತಾನೆ!!
ತನ್ನ ನಿಲ್ದಾಣದಲ್ಲಿ ಇಳಿಯುವುದು ಆತನ ತಪ್ಪೆ..?? "ಸ್ವಲ್ಪ ದಾರಿ ಬಿಡಿ ಸಾರ್" ಎಂದು ಸಂಬೋಧಿಸಬಹುದಲ್ಲವೆ??

ಈಲ್ಲಿ ಸುಮ್ಮ ಸುಮ್ಮನೆ "ನನ್ನನ್ನು ಕ್ಷಮಿಸಿ ಕ್ಷಮಿಸಿ" ಅಂತ ಎಕೆ ಹೊಡ್ಕೋಬೇಕು ಅಂತ.....??

ಇನ್ನು ಕೆಲವರು ಸೀನಿದ ನಂತರ "excuse me" ಅಂತ ಮೆಲ್ಲಗೆ ಉಸುರುತ್ತಾರೆ.. ಎನು ಸೀನೋದು ತಪ್ಪೆ??.... ಸೀನ್ಲಿ...ಅದಕ್ಕೆ "excuse me" ಅಂತ ಬೇರೆ..!!! ಅವರು ಹೇಳುವುದು ಯಾವನೊಬ್ಬನಿಗೂ ಕೇಳಿಸಿವುದಿಲ್ಲ...ಹತ್ತಿರದಲ್ಲಿ ಕುಳಿತಿರುವವನೊಬ್ಬನಿಗೆ ಬಿಟ್ಟು.....

ಹಲವು ಸಮಯದಲ್ಲಿ ನಾವು ಕೆಲ ಅಂಗ್ಲ ಪದಗಳ ಭಾವ(!!) ತಿಳಿಯದೆ ಉಪಯೋಗಿಸುತ್ತಿರುತ್ತೇವೆ....ಉದಾಹರಣೆಗೆ.. "sorry".."thanks" ಹೀಗೆ....

ಮಾಡಿದ್ದು ಎಂತಹ ದೊಡ್ಡ ತಪ್ಪಾದರೂ..ಅಥವಾ ಯಾವನೂಬ್ಬನಿಗು hurt ಮಾಡಿದರೂ ಸರ್ವೇಸಾಮನ್ಯವಾದ ಪದ "sorry" ..ಅಥವಾ ಸಣ್ಣಪುಟ್ಟ ಸಹಾಯಗಳಿಗೆ "thanks"

ಈಚೆಗೆ ಇದರ ಸಾಲಿಗೆ ಸೇರುತ್ತಿರುವ ಮತ್ತೊಂದು..ಪದವೆ "excuse me"..

ಸನ್ನಿವೇಶಕ್ಕೆ ತಕ್ಕಂತೆ ಪದಬಳಕೆ ಮಾಡುವುದು ಸೂಕ್ತವಲ್ಲವೆ... :-)

ಎನಂತೀರಿ?????????

ಕರ್ಮಕಾಂಡದ ಕರ್ಮಪುರಾಣ

ಕರ್ಮಕಾಂಡದ ಹೆಸರಿನ ಹಿಂದೆ.. ಸ್ವಲ್ಪ ಭಿನ್ನವಾಗಿರಲಿ.... ಕೇಳಿದಾಕ್ಷಣ..."ಎನಪ್ಪಾ.. ಎಂಥ ಹೆಸರು"... ಅಂತಿರಲಿ ಎಂದು ನಾನು ಈ ಹೆಸರಿಡಲಿಲ್ಲ...

ಅದೊಂದು ರಾತ್ರಿ ಹೀಗೆ ಅರುಣನ ಜೊತೆ ಹರಟುತ್ತಿದ್ದಾಗ....ಅವನ ಬ್ಲಾಗ್ ಒದುತ್ತಿದ್ದೆ... ಓದಿದನಂತರ comment ಹಾಕೋಣವೆಂದು...ಹೋದೆ.... ನನ್ನದೇ ಆದ ಬ್ಲಾಗ್ ಒಂದಿತ್ತು.... ಕರ್ಮಕ್ಕೆ ಅದರ password ಮರೆತಿದ್ದೆ...

ಹೊಸದೊಂದು ಬ್ಲಾಗ್ create ಮಾಡೋಣವೆಂದು ಹೊರಟೆ.. ಸಾಕಷ್ಟು...usernames ಕೊಟ್ಟರೂ...ಹಾಳಾದ್ದು.."username already exists" ಎಂದು ಬರುತ್ತಿತ್ತು.... ಕೊನೆಗೆ..ಬೇಸೆತ್ತು....ಹಾಳಾಗಿಹೋಗಲಿ ಎಂದು..."ಕರ್ಮಕಾಂಡ" ಎಂದು type ಮಾಡಿದೆ...... ನನ್ನ ಆಶ್ಚರ್ಯಕ್ಕೆ ಆ ಹೆಸರನ್ನು ಸ್ವೀಕರಿಸಿತು...

ಅದರ ಫಲಶ್ರುತಿಯೆ...... http://karmakaanda.blogspot.com/