ಒಂದು ಪೇಜಿನ ಕತೆಗಳು....

Sunday, May 24, 2009

ಪೇಜ್ - 1
ನನ್ನ ಮೊಟ್ಟ ಮೊದಲ ಸಣ್ಣ ಕತೆ ಇದು, ಅದರಲ್ಲೂ ಒಂದೇ ಪೇಜಿರಬೇಕೆಂದು ನಿರ್ಭಂದ ಹಾಕಿಕೊಂಡಿದ್ದೇನೆ. ಇದು ನನ್ನ ಬಾಳಗೆಳತಿ ದಿವ್ಯಾಳಿಗೆ ಅರ್ಪಿತ.

ಮುರಳಿ ರಾತ್ರಿ ಬಹಳ ಹೊತ್ತು ಬಿಕ್ಕಿ ಬಿಕ್ಕಿ ಅತ್ತು ಹಾಗೆ ಮಲಗಿದ್ದ. ಅವನ ಕಣ್ಣೀರಿಗೆ ದಿಂಬು ತೋಯ್ದುಹೋಗಿದ್ದವು. ಕಣ್ಣೆಲ್ಲಾ ಕೆಂಪು. ಮುಂಜಾನೆ ಎದ್ದೊಡನೆಯೇ ಅಮ್ಮನಿಗೆ ಸ್ಪೆಶಲ್ ಕ್ಲಾಸ್ ಇದೆ ಎಂದು ೮ಗಂಟೆಗೆ ಹೊತ್ತಿಗೆ ರೆಡಿ ಆಗಿ ಮನೆ ಇಂದ ಹೊರಬಂದ. ಅಪ್ಪನಿಗೆ ಹೇಳಬೇಕೂ ಅನಿಸಲಿಲ್ಲ. ನೆನ್ನೆ ರಾತ್ರಿ ಆದದ್ದಾದರೂ ಏನು ?

ಮುಂದಿನ ವಾರವೇ ಅವನ ಹುಟ್ಟುಹಬ್ಬವಿತ್ತು, ಅದಕ್ಕಾಗಿ ಬಟ್ಟೆ ಕೊಳ್ಳಲು ಅಕ್ಕನ ಜೊತೆಗೂಡಿದ್ದ, ಅಮ್ಮ ಅಕ್ಕನ ಕೈಗೆ ದುಡ್ಡು ಕೊಟ್ಟು ಸರಿಯಾಗಿ ಖರ್ಚು ಮಾಡಿ, ಒಂದು ಪ್ಯಾಂಟು, ಶರ್ಟು ಅಷ್ಟೇ ಎಂದು ಹೇಳಿ ಕಳುಹಿಸಿದ್ದರು. ಜಯನಗರದ ಅಂಗಡಿಗಳಲ್ಲಿ ಸಾಕಷ್ಟು ಎಡತಾಕಿದರೂ ಮುರಳಿಗೆ ಒಪ್ಪಿಗೆಯಾಗುವಂತಹ ಬಟ್ಟೆಗಳು ಸಿಗಲೇ ಇಲ್ಲ, ನಡೆದು ನಡೆದು ಸುಸ್ತಾಗಿ ಗಣೇಶ ಫ್ರೂಟ್ ಜೂಸ್ ಸೆಂಟರಿಗೆ ಬಂದಾಗ, ಅದರ ಪಕ್ಕದಲ್ಲಿದ್ದ Wrangler ಮಳಿಗೆ ಮೇಲೆ ಕಣ್ಣು ಬಿತ್ತು. ಅಕ್ಕ ಎಷ್ಟೇ ಬೇಡವೆಂದರೂ ಅಕ್ಕನನ್ನೂ ಪೀಡಿಸಿ ಒಂಡು ಕಡು ನೀಲಿ ಬಣ್ಣದ ಜೀನ್ಸ್ ಒಂದನ್ನು ಕೊಂಡೇ ಬಿಟ್ಟ ಮುರಳಿ ಸಾವಿರದೈನೂರು ತೆತ್ತು. ಕೊಂಡದ್ದೇನೋ ಕೊಂಡಾಯಿತು, ಮನೆಯಲ್ಲಿ ಏನೆನ್ನುವರೋ ಎನ್ನುವ ಭಯದಲ್ಲೇ ಮನೆಗೆ ಬಂದರು ಅಕ್ಕ ತಮ್ಮ. "ಅಮ್ಮ Wrangler ಒಳ್ಳೇ ಬ್ರಾಂಡ್ ಅಮ್ಮ,ಈ ಜೀನ್ಸ್ ಇದ್ಯಲ್ಲ, ಇನ್ನು ಮೂರು ವರ್ಷ ಬಾಳಿಕೆ ಬರುತ್ತೆ, ನೋಡು ನಂದು ಬೇರೆ ಪ್ಯಾಂಟ್ಸ್ ಎಲ್ಲಾ ಆಗ್ಲೆ ಹರ್ದೋಗ್ಬಿಟ್ಟಿದೆ" ಎಂದ. ಆದರೂ ಅಮ್ಮ "ನಿನಗೆ ದುಡ್ಡಿನ ಬೆಲೆ ಗೊತ್ತಿಲ್ಲವೋ, ಏನೋ ಕೊಂಡು ತಂದಿದೀಯ, ನಿಮ್ಮಪ್ಪ ಬೈದರೆ ನಂಗೊತ್ತಿಲ್ಲ, ಬರೀ ಪ್ಯಾಂಟ್ ಮಾತ್ರ ತಂದಿದೀಯ, ಶರ್ಟ್ ಕೂಡ ಇಲ್ಲ" ಎಂದು ಸುಮ್ಮನಾದರು. ಮಗಳನ್ನೂ ಸರಿಯಾಗಿ ಮಾತನಾಡಿಸಲಿಲ್ಲ. ಆಮೇಲೆ ಅಡಿಗೆ ಮನೆಗೆ ಬಂದಾಗ.."ನೀನಾದ್ರು ಹೇಳ್ಬಾರ್ದೇನೆ" ಎಂದರು.

ಅಪ್ಪ ಬಂದ ಕೂಡಲೇ ಟೀಪಾಯಿಯ ಮೇಲೆ ಇದ್ದ ಕವರ್ ಕಣ್ಣಿಗೆ ಬಿತ್ತು. ಏನಿದು ಎಂದು ನೋಡಿದಾಗ ಪ್ಯಾಂಟು. ಅಷ್ಟರಲ್ಲಾಗಲೇ ಮುರಳಿಯ ಎದೆ ಹೊಡೆದುಕೊಳ್ಳುತ್ತಿತ್ತು. ರೂಮಿನ ಬಾಗಿಲ ಬಳಿ ಬಂದು ನಿಂತ, ಏಷ್ಟು ಕೊಟ್ಟೆಯೋ ಎಂದರು, ಐನೂರಕ್ಕಿಂತ ಜಾಸ್ತಿ ಕೊಟ್ಟಿಲ್ಲ ತಾನೇ ಎಂದು ಮರುಪ್ರಶ್ನೆ ಎಸೆದರು. "ಇಲ್ಲಪ್ಪ ಇದು ಬ್ರಾಂಡೆಡ್ ಪ್ಯಾಂಟು, ಮೂರು ವರ್ಷ ಬಾಳಿಕೆ ಬರುತ್ತೆ, ಸಾವಿರ ಕೊಟ್ಟೆ" ಎಂದು ಉಗುಳು ನುಂಗುತ್ತಲೇ ಹೇಳಿದ. ಹೊರಗಿಂದ ಆಗ ತಾನೆ ದಣಿದು ಬಂದಿದ್ದ ಅವರಪ್ಪ ಯಾವ ಮುನ್ಸೂಚನೆಯೂ ಇಲ್ಲದೆಯೇ ಬಯ್ಯಲು ಶುರು ಮಾಡಿದರು. "ಜವಾಬ್ದಾರಿ ಅನ್ನೋದು ನಿಂಗೆ ಸ್ವಲ್ಪಾನಾದ್ರು ಇದ್ಯಾ?? ಏನೋ ಗೊತ್ತು ನಿಂಗೆ ದುಡ್ಡಿನ ಬೆಲೆ? ಲಫಂಗ. ಅಷ್ಟೋಂದ್ ದುಡ್ಡು ಕೊಟ್ಟು ಪ್ಯಾಂಟ್ ಹಾಕ್ಕೊಳ್ಳೊ ಶೋಕಿ ಏನೋ ನಿಂಗೆ? ಹೊರಗಡೆ ಹೋಗಿ ನಾಲ್ಕಾಣೆ ಸಂಪಾದಿಸ್ಕೊಂಡು ಬಾ ನೋಡೋಣ, ಆಗ ಗೊತ್ತಾಗುತ್ತೆ ನಿನ್ ಯೋಗ್ಯತೆ......................"
ಹಾಗೆ ಸುಮಾರು ಅರ್ಧ ತಾಸಿಗಿಂತಲೂ ಹೆಚ್ಚಿಗೆ ಸಾಗಿತು ಬಯ್ಗುಳ, ಅಕ್ಕನಿಗೂ, ಅಮ್ಮನಿಗೂ ಬಯ್ಗುಳದ ಪಾಲಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕಣ್ಣಲ್ಲಿ ನೀರು ತುಂಬಿಕೊಂಡು ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ಬಿಟ್ಟ. ರಾತ್ರಿ ಊಟ ಕೂಡ ಮಾಡಲು ಬರಲಿಲ್ಲ ಮುರಳಿ, ಹಸಿವಾಗಿರಲಿಲ್ಲವೆಂದಲ್ಲ, ಕರೆಯಲು, ಒಲೈಸಲು ಮನೆಯಲ್ಲಿ ಯಾರೊಬ್ಬರು ಬರದಿದ್ದು ಅವನಿಗೆ ಮತ್ತಷ್ಟು ನೋವುಂಟು ಮಾಡಿತ್ತು.

ಜೇಬಿನಲ್ಲಿದ್ದು ಬರೀ ನೂರು ರುಪಾಯಿ. ಪಾಸ್ ಇದ್ದುದರಿಂದ ಕಾಲೇಜಿನ ಬಸ್ ಬಿಟ್ಟು ಮೆಜೆಸ್ಟಿಕ್ ಬಸ್ ಹತ್ತಿಬಿಟ್ಟ. ಮನೆ ಬಿಟ್ಟು ಹೋಗಬೇಕೆಂದು ರಾತ್ರಿಯೇ ನಿರ್ಧರಿಸಿದ್ದ. ನಾನು ದುಡ್ಡು ದುಡಿದೇ ಮನೆಗೆ ಬರುವೆನೆಂದು ಹೊರಟಿದ್ದ. ಅಂತಹ ನೂರಾರು ಪ್ಯಾಂಟುಗಳು ಕೊಳ್ಳಬೇಕು ನಾನು. ಯಾವನೊಬ್ಬನ ಹಂಗು ನನಗೆ ಬೇಡವೆಂಬ ನಿರ್ಧಾರಕ್ಕೆ ಬಂದಿದ್ದ. ಮಧ್ಯ ಸಿರ್ಸಿ ಸರ್ಕಲಿನಲ್ಲಿ ಇಳಿದು ಅಲ್ಲೆ ಗೂಡಂಗಡಿಯಲ್ಲಿ ಕಾಫಿ-ಬನ್ನು ತಿಂದ. ಮನಸಿಗೇನೋ ಉಲ್ಲಾಸ. ಕೈಕಾಲುಗಳಿಗೆಂತಹುದೋ ಉತ್ಸಾಹ. ನಾನಿನ್ನು ಸ್ವತಂತ್ರನಾಗಿಬಿಟ್ಟೆ ಎಂದು. ಎದೆಯುಬ್ಬಿಸಿ ನಡೆಡಾಡಿದ. ನಡೆದೇ ಮಜೆಸ್ಟಿಕ್ ತಲುಪುತ್ತೇನೆಂದು ಅದರೆಡೆಗೆ ದಾಪುಗಾಲು ಹಾಕತೊಡಗಿದ. ಇನ್ನು ಮುಂದೆ ಕಾಲೇಜಿಲ್ಲ, ಮನೆಯಲ್ಲಿ ಓದು ಓದು ಎನ್ನುವ ಕಿರಿ ಇಲ್ಲ, ಅಪ್ಪನ ಗಲಾಟೆ ಇಲ್ಲ. ಸರಿ ಎಲ್ಲಿಗೆ ಹೋಗುವುದು, ಹೆಚ್ಚು ತಡ ಮಾಡದೆ, ಯೋಚಿಸದೆ ಒಂದೇ ಉತ್ತರ ಕೊಟ್ಟಿತು ಮನಸು "ಮುಂಬಯಿ" ಎಂದು. ಅಲ್ಲಿಗೆ ಹೋಗಿ ಎಂತೆಂತಹವರೋ ಏನೇನೇನೋ ಆಗೋಗಿದ್ದಾರೆ, ಶಾರುಕ್ ಖಾನ್ ದಿಲ್ಲಿಯಿಂದ ಬಂದವ, ಈಗ ಹೇಗಾಗಿದ್ದಾನೆ? ಸಮುದ್ರದ ಮುಂದೆ ನಿಂತು ಇಡೀ ಮುಂಬಯಿಯನ್ನು ಆಳುತ್ತೇನೆಂದು ಹೇಳಿದನಂತೆ, ನಾನು ಹಾಗೆಯೇ ಹೇಳಬೇಕು, ಆದಷ್ಟು ಬೇಗ ಮುಂಬಯಿ ಸೇರಬೇಕು. ಅವನಿಗಾಗಿ ಸಮುದ್ರ ಕಾದಿದೆಯೇನೊ ಎಂದು ಚಡಪಡಿಸತೊಡಗಿದ. ನಾನು ಅಲ್ಲಿಗೇ ಹೋಗುತ್ತೇನೆ, ದೊಡ್ಡ ವ್ಯಕ್ತಿಯಾಗಿ ಮತ್ತೆ ಈ ಊರಿಗೆ ಕಾಲಿಡುತ್ತೇನೆ ಎಂದು ಮತ್ತೊಮ್ಮೆ ಧೃಡವಾಗಿ ನಿರ್ಧರಿಸಿದ.

ಮನೆ ಬಿಟ್ಟವರೆಲ್ಲರ ಇತಿಹಾಸ ಜೀಕುತ್ತಾ ನಡೆಯುತ್ತಿದ್ದ. ನಮ್ಮ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್ ಕೂಡ ಮನೆ ಬಿಟ್ಟವರ್‍ಏ. ಭಾರತ ರತ್ನ ಭೀಮ್ ಸೇನ್ ಜೋಶಿಯವರೂ ಕೂಡ ಸಂಗೀತ ಕಲಿಯಲೆಂದು ಹದಿನಾಲ್ಕನೆಯ ವಯಸ್ಸಿನಲ್ಲಿ ಮನೆ ಬಿಟ್ಟರಂತೆ, ಹಾಗೆ ನೋಡಿದರೆ ನನಗೆ ಆಗಲೇ ಇಪ್ಪತ್ತು ವರ್ಷವಾಗಿದೆ, ಬಹಳ ಲೇಟ್ ಮಾಡಿದೆ ಎಂದು ಅನಿಸಿತು ಮುರಳಿಗೆ. ಅವರೆಲ್ಲರಂತೆ ದೊಡ್ಡ ವ್ಯಕ್ತಿಯಾಗಬೇಕೆಂದು ದಾರಿಯುದ್ದಕ್ಕೊ ಹಗಲುಗನಸು ಕಾಣುತ್ತ ಬಂದ. ಇರುವುದು ನೂರೇ ರುಪಾಯಿ ಹೇಗೆ ತಲುಪುವುದು ಮುಂಬಯಿಯನ್ನು. ರೈಲು ಹತ್ತಿ ಟಿ.ಟಿ. ಬರುವ ವೇಳೆಗೆ ಟಾಯ್ಲೆಟ್ಟಿನಲ್ಲಿ ಕೂತು ಬಿಡುವ ತಂತ್ರ ಹೂಡಿದ. ರಾತ್ರಿ ಸರಿಯಾಗಿ ನಿದ್ದೆ ಇಲ್ಲದುದರ ಕಾರಣ ನಡೆದು ನಡೆದು ಸುಸ್ತಾದ. ಅಷ್ಟರಲ್ಲಿ ಕಾರ್ಪೊರೇಶನ್ ಬಳಿ ಒಂದು ಪಾರ್ಕು ಕಂಡ. ಒಳಗೆ ಹೋಗಿ ಒಂದು ಮರದ ನೆರಳಿನಲ್ಲಿ ಹಾಗೆ ನೆಲಕ್ಕೆ ಒರಗಿಕೊಂಡ. ಸೊಂಪಾದ ನಿದ್ರೆಗೆ ಜಾರಿದ. ಕೆಂಪೇಗೌಡ ರಸ್ತೆಯಲ್ಲಿ ಕೆಟ್ಟದಾಗಿ ಹಾರ್ನ್ ಮಾಡುತ್ತ ಮೆಲ್ಲಗೆ ತೆವಳುತ್ತಿದ್ದ ವಾಹನಗಳು ಮುರಳಿಯ ನಿದ್ರೆಗೆ ಭಂಗ ತರಲಿಲ್ಲ.

ಅಮ್ಮ ಭೋರಿಟ್ಟು ಅಳುತ್ತಿದ್ದಳು ,ಮಾತು ಮಾತಿಗೂ ಎದೆಯೊಡೆದುಕೊಳ್ಳುತ್ತಿದ್ದಳು. ಸರಿಯಾಗಿ ಮನೆಯವರೆಲ್ಲ ಊಟ, ನಿದ್ರೆ ಮಾಡಿ ಒಂದು ವಾರದ ಮೇಲಾಗಿತ್ತು. ಮುರಳಿಯ ಪತ್ತೆಯೇ ಆಗಿರಲಿಲ್ಲ. ಎಲ್ಲಿ ಹೋದ ?, ಏನಾದ ? ಯಾರೊಬ್ಬರಿಗೂ ಸುಳಿವಿರಲಿಲ್ಲ. ಅವರ ಸ್ನೇಹಿತರನ್ನು ಸಂಪರ್ಕಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಅದಾಗಲೇ ದಿನಪತ್ರಿಕೆಗಳಲ್ಲಿ , ನ್ಯೂಸ್ ನಲ್ಲಿ ಕಾಣೆಯಾಗಿದ್ದನೆಂದು ಪ್ರಕಟಣೆ ಕೊಟ್ಟಿದ್ದರೂ ಸಹ..ಉಹೂ ಏನೂ ಪ್ರಯೋಜನವಾಗಿರಲಿಲ್ಲ. ಅವರಪ್ಪನಿಗೆ ದಿಕ್ಕೇ ತೋಚದಂತಾಗಿತ್ತು. ಕೊನೆಯ ಪ್ರಯತ್ನವೆಂಬಂತೆ ದೇಶದ ಪ್ರಮುಖ ನಗರಗಳಲ್ಲಿ ಪ್ರಕಟಣೆ ಹೊರಡಿಸಿದ್ದರು, ಅದೂ ದಿನಪತ್ರಿಕೆಯ ಫ್ರಂಟ್ ಪೇಜಿನಲ್ಲಿ. ಮುಂಬೈ ಪೋಲಿಸರು ಒಂದು ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುತ್ತಿದ ಮುರಳಿಯನ್ನು ಹಿಡಿದು ಬೆಂಗಳೂರಿಗೆ ಕರೆತಂದರು. ಮನೆಗೆ ಕಾಲಿರಿಸಿದ ಕೂಡಲೆ ಅಮ್ಮ ಒಡಿಬಂದು ಅವನನ್ನು ತಬ್ಬಿಕೊಂಡು "ಎಲ್ಲಿ ಹೋಗ್ಬಿಟ್ಟಿದ್ದೆ ಕಂದಾ, ಯಾಕ್ ಹಿಂಗ್ ಮಾಡ್ದೆ? ಏನ್ ಕಮ್ಮಿ ಮಾಡಿದ್ವಿ ನಿಂಗಿಲ್ಲಿ, ನಿನ್ ಬಿಟ್ಟು ನಾನ್ ಬದುಕಿರ್ತೀನೇನೊ? ಒಂದಾದಮೇಲೊಂದು ಪ್ರಶ್ನೆ ಕೇಳುತ್ತಲೇ ಅವನನ್ನು ಜಗ್ಗಾಡುತ್ತಿದ್ದರು.

ಧಿಗ್ಗನೆ ಎದ್ದು ಕುಳಿತ ಮುರಳಿ. ಕಣ್ಣೆಲ್ಲಾ ಮಂಜು ಮಂಜು. ಸೂರ್ಯ ಅದಾಗಲೇ ತನ್ನ ದಿನಗೆಲಸವನ್ನು ಮುಗಿಸಿ ಮನೆ ಸೇರಿದ್ದ. ಕೆಂಪೇಗೌಡ ರಸ್ತೆಯಲ್ಲಿ ವಾಹನಗಳು ಗಿಜುಗುಡುತ್ತಲೇ ಇದ್ದವು. ಅಲ್ಲೇ ಎದುರಿಗೆ ಇದ್ದ ಹೋಟೆಲಿನಲ್ಲಿ ಇಡ್ಲಿ, ವಡೆ ತಿಂದು ಕಾಫಿ ಕುಡಿಯಲು ಶುರು ಮಾಡಿದ. ಬಿದ್ದ ಕನಸಿನಿಂದ ಇನ್ನೂ ಚೇತರಿಸಿಕೊಂಡಿರಲಿಲ್ಲ, ಸಮಯ ನೋಡಿಕೊಂಡ, ಆಗಲೇ ರಾತ್ರಿ ಎಂಟು ಗಂಟೆಯಾಗಿದೆ. ಅಮ್ಮ ಗಾಭರಿ ಆಗಿರುತ್ತಾಳೆ, ಇಷ್ಟೊತ್ತಿಗೆ ಎಷ್ಟು ಬಾರಿ ಅತ್ತಳೊ? ಅಕ್ಕ ಪಾಪ ಅವಳು ತಾನೆ ಏನು ಮಾಡಿಯಾಳು, ಅಮ್ಮನನ್ನು ಸಂತೈಸುತ್ತಿರಬಹುದು , ಅಪ್ಪ ಆಗಲೇ 'ಸಂಜೆವಾಣಿ' ಪತ್ರಿಕೆಗೆ ಹೊರಟಿರಬಹುದು ನನ್ನದೊಂದು ಫೋಟೊ ತೆಗೆದುಕೊಂಡು. ದೂರದರ್ಶನದಲ್ಲೊಮ್ಮೆ " ಹೆಸರು ಮುರಳಿ ,ಗೋದಿ ಬಣ್ಣ, ಕೋಲು ಮುಖ, ವಯಸ್ಸು ಇಪ್ಪತ್ತು, ಜಯನಗರದ ನಿವಾಸಿಯಾದ ಇವನು ಇಂದು ಸಂಜೆಯಿಂದ ಕಾಣುತ್ತಿಲ್ಲ" ಎಂಬ ಪ್ರಕಟಣೆ ಹೊರಬಿದ್ದಿರಬಹುದು. ಯಾಕೋ ಹೋಟೆಲಿನಲ್ಲಿದ್ದ ಜನರೆಲ್ಲ ತನ್ನನ್ನೇ ನೋಡುತ್ತಿದ್ದಾರೆನಿಸಿತು.

ಅಲ್ಲಿಂದ ನೇರವಾಗಿ ಮನೆಗೆ ಹೋಗುವ ಬಸ್ಸನ್ನೇರಿದ. ದಾರಿಯುದ್ದಕ್ಕೊ ತಾನು ಕೆಟ್ಟ ನಿರ್ಧಾರ ಮಾಡಿದೆ. ಇಲ್ಲೇ ಈಸಬೇಕು, ಇಲ್ಲೇ ಜಯಿಸಬೇಕು ಎಂದು ದಾಸರನ್ನು ನೆನೆದ. ಮನೆಗೆ ತಾನೊಬ್ಬನೇ ಗಂಡು ಹುಡುಗ, ನಾನು ಹೀಗ ಬೇಜವಾಬ್ದಾರಿಯಿಂದ ಹೊರಟು ಬಿಟ್ಟರೆ ನಾಳೆ ಅಕ್ಕನಿಗೆ ಮದುವೆ ಮಾಡಿಸುವವರು ಯಾರು? ಜನರೆಲ್ಲ ಅಪ್ಪ ಅಮ್ಮ ನ ಬಗ್ಗೆ ಏನೆಲ್ಲಾ ಮಾತನಾಡುತ್ತಾರೆ? ಅವನ ಮನಸಿಗೆ ಬಂದ ಪ್ರಶ್ನೆಗಳಿಗೆ ಅವನೇ ಉತ್ತರ ಕಂಡುಕೊಳ್ಳಲು ವಿಫಲನಾದ.

ಬಸ್ ಇಳಿದು ಮನೆ ಗಲ್ಲಿಗೆ ಕಾಲಿಡುತ್ತಲೇ ಬೆವರಲಾರಂಭಿಸಿದ, ಎಲ್ಲರೂ ಇವನನ್ನೇ ನೋಡುತ್ತಿದ್ದಾರೆನಿಸಿತು. ಯಾರೋ ಇವನೆಡೆಗೆ ಕೈತೋರಿಸಿದ ಹಾಗಾಯಿತು, ತಿರುಗಿ ನೋಡುವ ಧೈರ್ಯ ಆಗಲಿಲ್ಲ. ಮನೆಯ ಮೆಟ್ಟಿಲೇರತೊಡಗಿದ, ಅಮ್ಮ ನನ್ನನ್ನು ನೋಡಿದ ಕೂಡಲೇ ಅಪ್ಪಿಕೊಂಡು ಅಳುತ್ತಾಳೆ, ಅವಳನ್ನು ಸಮಾಧಾನ ಪಡಿಸುವುದು ಹೇಗೆ ?, ಅಪ್ಪ ಇನ್ನು ಮೇಲೆ ನಿನಗೆ ಬಯ್ಯುವುದಿಲ್ಲವೋ ಎಂದು ಹೇಳುತ್ತಾರೆ ಎನ್ನುವ ಹೊತ್ತಿಗೆ ಮನೆ ಬಾಗಿಲ ಬಳಿ ಬಂದ. ಕರೆಗಂಟೆ ಒತ್ತುವ ಒಳಗಾಗಿ ಬಾಗಿಲು ತೆರೆದುಕೊಂಡಿತು, ಅಪ್ಪ ಎದುರಿಗೆ ಬಂದು "ಲಫಂಗ, ಮನೆಗೆ ಎಷ್ಟೊತ್ ಗೆ ಬರೋದು, ಎಲ್ಲಿ ತಿರುಗಾಡೋಕೆ ಹೋಗಿದ್ದೆ ?, ಸ್ವಲ್ಪ ಕೂಡ ಜವಾಬ್ದಾರಿ ಇಲ್ಲ ನಿಂಗೆ, ನಿಂಗ್ಯಾವತ್ತಿಗೆ ಬುದ್ದಿ ಬರತ್ತೋ ನಾ ಬೇರೆ ಕಾಣೆ..." ಎನ್ನುತ್ತಲೇ ಅವರು ಎಂದಿನ ಪ್ರವರ ಮುಂದುವರೆಸಿದರು. ಹಾಲಿನವರೆಗೂ ಬಂದು ಅಮ್ಮನಿಗಾಗಿ ಅಡುಗೆ ಮನೆಯೆಡೆಗೆ ಬಗ್ಗಿ ನೋಡಿದ, ಅಮ್ಮ ಚಪಾತಿ ಲಟ್ಟಿಸುತ್ತಿದ್ದಳು.

ದಿಂಬು ತನಗಾಗಿ ಕಾದಿದೆ ಎಂದು ರೂಮಿನೆಡೆಗೆ ನಡೆದ.

ಒಂದೇ ಪೇಜೆಂದು ನಿರ್ಭಂದ ಹಾಕಿಕೊಂಡಿದ್ದರೂ ಹೇಗೊ ನನ್ನ ಅಂಕೆ ಮೀರಿ ಕತೆ ಬೆಳೆದು ಬಿಡ್ತು. ಆದ್ರೂ "ಒಂದು ಪೇಜಿನ ಕತೆಗಳು" ಟೈಟಲು ಇಷ್ಟ ಆಗಿರುವುದರಿಂದ ಇದನ್ನ ಹಾಗೆ ಉಳಿಸಿಕೊಳ್ಳುತ್ತೇನೆ, ಮುಂದಿನ ಸಾರಿ ಒಂದೇ ಪೇಜು ಬರೆಯುವುನೆಂಬ ಆಶಯದೊಂದಿಗೆ..

12 comments:

Srikanth - ಶ್ರೀಕಾಂತ said...

ಹೊಸ ಪ್ರಯತ್ನದ ಆರಂಭ ಚೆನ್ನಾಗಿ ಮಾಡಿದ್ದೀಯ. ಹೀಗೇ ಮುಂದುವರೆಸು.

Lakshmi Shashidhar Chaitanya said...

sakhattaagide. heege baravanigeyannu continue maadatakkaddu. illaandre....gottalla...

ಅಂತರ್ವಾಣಿ said...

ರಾಜು,
ನಾನು ಅವತ್ತು ಹೇಳಿದ್ದಕ್ಕೆ ಈ ರೀತಿ ಬರೆದೆಯಾ?

ಏನೇ ಇರಲಿ, ನನಗೂ ಟೈಟಲ್ ಇಷ್ಟ ಆಯಿತು :)
ಒಂದು ಪೇಜು ಇರುತ್ತೆ ಅಂತ ಓದೋಕೆ ಶುರು ಮಾಡಿದೆ. ಆಮೇಲೆ ಪರವಾಗಿಲ್ಲ ಓದ ಬಹುದು ಅನಿಸಿತ್ತು. ಚೆನ್ನಾಗಿದೆ.
ಮುಂದಿನ ಸಲ ಸ್ವಲ್ಪ ಚಿಕ್ಕದಾಗಿ ಬರೆದು ನಿನ್ನ ಮಾತು ಉಳಿಸಿಕೋ... ಇಲ್ಲದೇ ಇದ್ದರೆ ಕಾಫಿಗೆ ಸಿಕ್ಕಾಗ ಬರೆದಿರೋದು ಹೇಳು.

Vijaya said...

hey ... super ... mundvarsu, odokke chennagittu.

Parisarapremi said...

ಹೆ ಹ್ಹೆ, ಅದಕ್ಕೇ ಹೇಳೋದು "ಹೋಮ್ ಸ್ವೀಟ್ ಹೋಮ್" ಎಂದು!!

ಚೆನ್ನಾಗಿ ಬರೀತೀಯಲ್ಲೋ ಕಥೇನ! ಬೆಂಗಳೂರಿಗರು ಕಥೆಗಾರರಾಗುವುದಿಲ್ಲ ಎಂದು ನೀನೇ ಎತ್ತಿದ ಆಕ್ಷೇಪಕ್ಕೆ ನೀನೇ ಕಳಂಕವಾಗಿದ್ದೀಯ.

Unknown said...

ಚೆನ್ನಾಗಿದೇರೀ, ನೀವು ಬರೆದಿರುವ ಕಥೆ. ನಾನೂ ಹೀಗೇ ನಮ್ಮನೇಲಿ ಬೈದಾಡಿದರೆ ಮನೆ ಬಿಟ್ಟು ಹೋಗುಟ್ತೇನೆ ಎಂದು ಎಲ್ಲರಿಗೂ ಹೆದರಿಸುತ್ತಿದ್ದೆ. ನನ್ನ ಮದುವೆಯಾದಮೇಲೆ ಒಂದು ದಿನ ಮನೆ ಬಿಟ್ತು ಹೋಗುತ್ತೇನೆ ಎಂದು ಹೊರಟೇ ಬಿಟ್ಟಿದ್ದೆ. ನನ್ನ ಅಜ್ಜಿ ಬೊಂಬ್ಡಾ ಹೊಡೆಯೋಕೆ ಶುರು ಮಾಡಿದ್ರಂತೆ. ಆಮೇಲೆ ನನ್ ಶ್ರೀಮತಿ ಅವರು ಹೇಳಿದ್ರಂತೆ ಅವರಿಗೆ ತಾಕತ್ ಇಲ್ಲ ಹಾಗೆಲ್ಲಾ ಹೋಗೋಕೆ, ಮನೇಗೆ ಬಂದೇ ಬರ್ತಾರೆ ಅಂತ. ಅವರು ಹೇಳಿದ ಹಾಗೆ ನಾನು ವಾಪಸ್ಸು ಬಂದೆ. ಆಮೇಲೆ ನನ್ನನ್ನು ಹೆಣ್ಣಿಗ ಅಂದರು. ಹ, ಹ, ಹ.

Suma said...

Vaapas manege bandiddakke iga s/w engineer aagidira alWaaa?? hogli yesthu Wrangler Jeans tagodri iga?? Hehehe... very nice... nangu nannu appa amma jote jagla aadtidda dinagalu nenapaadvu... Heehe munduvareyali e nimma kathegalu.. dhanyavadagalu...

ಜಲನಯನ said...

ರಾಜು, ನಿಮ್ಮ ಗೂಡಿಗೆ ಮೊದಲ ಭೇಟಿ...
ಕಥೆ ಒಮ್ದು ಪುಟಕ್ಕೆ..ಎಂದಿರಿ..ಆದರೆ ಅದು ಎಷ್ಟು ಇತ್ತು ಎನ್ನುವುದು ಗೊತ್ತಾಗಲಿಲ್ಲ ಕಡೆಯ ಸಾಲುಗಳ ನಿಮ್ಮ ಮಾತು ನೋಡಿ..ಅನ್ಸಿದ್ದು...ನಿಜ ಏನು ಅಂತ...ಆದರೆ ..ಅಡ್ಡಿಯಿಲ್ಲ..ಓದಿಸಿಕೊಂಡು ಹೋಗುವ ಕಥೆಗೆ ಪುಟದ ಕಟ್ಟುಪಾಡು ಬೇಕಿಲ್ಲ...ಮನೆಯಿಂದ ಓಡಿಹೋಗುವುದು....(ನಿಜಕ್ಕೂ ಎಷ್ಟು ಜನ ವಸ್ತುತಃ ಓಡುತ್ತಾರೆ..??? ಹಹಹಹ್) ಕಾಮನ್.
ಚನ್ನಾಗಿದೆ ..ಮುಂದುವರೆಸಿ...

Anonymous said...

loved las vegas? toast the all at [url=http://www.casinolasvegass.com]casino[/url] las vegas at www.casinolasvegass.com with onto 75 swell unstinting [url=http://www.casinolasvegass.com]online casino[/url] games like slots, roulette, baccarat, craps and more and allure a crushing in legitimate banknotes with our $400 untied of commission bonus.
we guard unvaried recognizable b wealthier games then the in ruins online [url=http://www.place-a-bet.net/]casino[/url] www.place-a-bet.net!

Anonymous said...

steve on singles [url=http://loveepicentre.com/]dating game questions[/url] dating and personals http://loveepicentre.com/ carrie underwood dating

Anonymous said...

mahuang diet pills online [url=http://usadrugstoretoday.com/products/benicar.htm]benicar[/url] atf raids airplane smuggling drugs cuyama river http://usadrugstoretoday.com/products/desyrel.htm cleansing liquid diet http://usadrugstoretoday.com/products/imuran.htm
medical school at warrie head belize [url=http://usadrugstoretoday.com/products/metformin.htm]metformin[/url] disposal units found in a medical facility [url=http://usadrugstoretoday.com/products/grifulvin-v.htm]minnesota care health insurance[/url]

Anonymous said...

adult attention deficit disorder coral springs [url=http://usadrugstoretoday.com/categories/ipnoterapia.htm]ipnoterapia[/url] flash light for finding blood http://usadrugstoretoday.com/categories/colesterol.htm generalized anxiety disorder narrative http://usadrugstoretoday.com/products/phosphatidylserine.htm
dissociative identity disorder and stigma [url=http://usadrugstoretoday.com/products/zestril.htm]zestril[/url] medical classes online [url=http://usadrugstoretoday.com/products/digoxin.htm]miami dental bonding[/url]