ನಾನೇಕೆ ಬರೆಯುತ್ತಿಲ್ಲ!!??...

Wednesday, September 24, 2008


ಎಸ್. ಎಲ್. ಭೈರಪ್ಪನವರ  "ನಾನೇಕೆ ಬರೆಯುತ್ತೇನೆ" ಎಂಬ ಪುಸ್ತಕವನ್ನು ಓದಿ ಮುಗಿಸುವ ಹೊತ್ತಿಗೆ ಇಂತಹುದೊಂದು ಲೇಖನ ಕುಟ್ಟುತ್ತಿದ್ದೇನೆ. ಹೌದು "ನಾನೇಕೆ ಬರೆಯುತ್ತಿಲ್ಲ" ??


ಇದು ನನಗನ್ನಿಸಿದ್ದು ಬ್ಲಾಗ್ ಬರೆಯುವುದು ಬಿಟ್ಟು ಸುಮಾರು ಎರಡು ತಿಂಗಳಾಗುವ ಹೊತ್ತಿಗೆ. ಅರುಣ ಚಾಟ್ ನಲ್ಲಿ ಸಿಕ್ಕಾಗಲೆಲ್ಲ ಪಿಂಗಿ ಪಿಂಗಿ ಪಿಂಗಿ "ಬರ್ಯೋ ಇವತ್ತಾದ್ರು" ಎನ್ನುತ್ತಿದ್ದ, ಶ್ರೀಕಾಂತ್ ನನ್ನ ಹಳೆಯ ಬ್ಲಾಗ್ ಲೇಖನದ ಕೊಂಡಿಗಳನ್ನು ಗೆಳೆಯರಿಗೆ ಕಳಿಸಿ ಬ್ಲಾಗ್ update ಆಗಿದೆ ಎಂದು ಸಾರುತ್ತಿದ್ದ!!. ಲಕ್ಷ್ಮಿ "ಕರ್ಮಕಾಂಡ ಪ್ರಭುಗಳೇ , ಕಂಗ್ಲೀಷ್ ನಲ್ಲಿ ಲೇಖನ ಬರೆದು ಕೊಡಿ ಕನ್ನಡಕ್ಕೆ ತರುವ ಜವಾಬ್ದಾರಿ ನನ್ನದು" ಎನ್ನುತ್ತಿದ್ದರು.. ಎಲ್ಲರ ಮಾತಿಗೂ, ಅಪ್ಪಣೆಗೂ, ಬೆದರಿಕೆಗೂ, ಛೀಮಾರಿಗಳಿಗೂ "ದಿವ್ಯ"ಮೌನ ವಹಿಸಿದ್ದೆ.

 

ಹೊಸ ಕೆಲಸ ಹುಡುಕುವ ಗೋಜಿನಲ್ಲೇ ಇವರುಗಳೆಲ್ಲರ ಬ್ಲಾಗುಗಳನ್ನು ಓದುತ್ತಿದ್ದೆ. ಓದುವುದು ಕಮೆಂಟಿಸುವುದು ಇಷ್ಟಕ್ಕೆ ಸೀಮಿತವಾಗಿತ್ತು ನನ್ನ ಬರವಣಿಗೆ. ಇತ್ತ ಅರುಣ consistent ಆಗಿ ಪರಿಸರಪ್ರೇಮಿ ಮತ್ತು Speaktonature ನಲ್ಲಿ ಯಾವುದೇ ಅಡೆ ತಡೆಯಿಲ್ಲದೆ ಅಂಕಣಗಳು ಹೊರಹೊಮ್ಮುತ್ತಿತ್ತು, ಲಕ್ಷ್ಮಿಯಂತೂ 5-6 ಬ್ಲಾಗುಗಳನ್ನು ನಿಭಾಯಿಸುತ್ತಿದ್ದರು, ವಾರಕ್ಕೆ ಎರಡರಂತೆ ಲೇಖನಗಳು ಬರುತ್ತಿದ್ದವು, ಚಾಟ್ ಗೆ ಸಿಕ್ಕಾಗಲೆಲ್ಲ ಪಿಂಗಿ ಪಿಂಗಿ update ಸರಮಾಲೆ ಹೇಳುತ್ತಿದ್ದರು. ಶ್ರೀಕಾಂತ ಆಗಾಗ್ಗೆ

ವೈಚಾರಿಕ ಲೇಖನಗಳನ್ನು ಹರಿಯಬಿಡುತ್ತಿದ್ದ ಮತ್ತು ಶ್ರೀನಿವಾಸ ಆಂಗ್ಲಭಾಷೆಯಲ್ಲಿ ಬರೆಯಲು ಶುರುಮಾಡಿದ್ದ. ಅರೆರೆ ನನ್ನ ಗೆಳೆಯರೆಲ್ಲಾ ಬರೆಯುತ್ತಿದ್ದಾರೆ, ಒಂದರ ಮೇಲೊಂದಂತೆ ಒಂದರ ಮೇಲೊಂದಂತೆ. ಏನಾದರಾಗಲಿ ಕುಪ್ಪಳ್ಳಿ ಪ್ರವಾಸ ಕಥನವನ್ನು ಮುಗಿಸಿಯೇ ಬಿಡುವ ಎಂದು ಕೂತು 10ಸಾಲುಗಳಿಂದ 20ಸಾಲಿಗೆ ಏರಿಸಿಬಿಟ್ಟೆ, ಆ ಜೋಷ್ ನಲ್ಲಿ, ಅಷ್ಟೇ ಅದು ಅಲ್ಲಿಗೆ ನಿಂತುಬಿಟ್ಟಿತು, ಅರುಣನಿಗೆ ಹೇಳಿದೆ "ಕುಪ್ಪಳ್ಳಿ ಲೇಖನ ಬರೀತಿದೀನಿ ಕಣೊ" ಎಂದು ಹಲ್ಲುಕಿರಿಯುತ್ತ. ಯಥಾಪ್ರಕಾರ ಬೈದು ಹೂಂಕರಿಸಿ ಸುಮ್ಮನಾದ. ಈ "ಕುಪ್ಪಳ್ಳಿ" ಪ್ರವಾಸ ಕಥನಕ್ಕೆ ಅರುಣನಿಂದ ಕಾಫಿಯಲ್ಲಿ ವಿಷಬೆರಕೆ ಶ್ರೀಕಾಂತನಿಂದ ಕೊಲೆಬೆದರಿಕೆ ಎಲ್ಲವನ್ನು ಎದುರಿಸಿದ್ದೇನೆ, ಏಕೋ ಏನೋ ಅದು ಅದು ಮುಂದೆ ಹೋಗುತ್ತಿಲ್ಲ ಕರ್ಮಕಾಂಡ ಬ್ಲಾಗಿಗೆ ಅಲಂಕರಿಸುವ ಯೋಗ ಎಂದಿದೆಯೋ??

 

ಮತ್ತೆ ಅದೇ ಪ್ರಶ್ನೆಗೆ ಬರೋಣ, ನಾನೇಕೆ ಬರೆಯುತ್ತಿಲ್ಲ?? ಕಾರಣಗಳು ಹಲವಾರು. ಹೊಸಕೆಲಸ ಹುಡುಕುವುದೇ ಮುಖ್ಯವಾಗಿತ್ತು, ಈಗ ಮಾಡುತ್ತಿದ್ದ ಕೆಲಸ ಅನುಕೂಲಕರವಾಗಿರದುದ್ದರ ಪರಿಣಾಮ ಹೊಸತನ್ನು ಹುಡುಕಲೇ ಬೇಕಾದ ಅನಿವಾರ್ಯತೆ ಇತ್ತು. ಅದಕ್ಕಾಗಿ ಸಂದರ್ಶನಗಳಿಗೆ ಅಣಿಯಾಗುತ್ತಲಿದ್ದೆ ಇಷ್ಟು ದಿನವೂ, ಅದಕ್ಕಾಗಿ ಬರವಣಿಯೆಡೆಗೆ ಬರಲಾಗಲಿಲ್ಲ. ಮುಂದಿನ ತಿಂಗಳಿಂದ ಬೇರೆ ಕಂಪೆನಿಗೆ ಹೋಗಲಿದ್ದೇನೆ. ಏಲ್ಲೋ ನಡೆದು ಹೋಗುತ್ತಿರುವಾಗ, ಬೈಕ್ ಓಡಿಸುತ್ತಿರುವಾಗ, ಇನ್ನೇನು ನಿದ್ದೆ ಹತ್ತುತ್ತಿದೆ ಅನ್ನುವಾಗ ಪುಂಖಾನುಪುಂಖವಾಗಿ ಲೇಖನಗಳು ಬಂದಿವೆ, ಎಷ್ಟು ಕೊರೆತ ಎಂದರೆ ಬರೆದುಬಿಡಲೇ ಬೇಕು ಎಂದು ತಡಬಡಿಸಿ ಸಿಸ್ಟಮ್ ಮುಂದೆ ಕೂತ ಕೂಡಲೇ ಎಲ್ಲವೂ ಖಾಲಿ ಖಾಲಿ. ಹೀಗೆಷ್ಟು ಬಾರಿ ಆಗಿದೆಯೋ ಲೆಕ್ಕವಿಟ್ಟಿಲ್ಲ. ಬರೆಯಬೇಕು ಅನಿಸಿದಾಗಲೆಲ್ಲ ಬರೆದುಬಿಟ್ಟಿದ್ದರೆ ಅದರ ಕತೆಯೇ ಬೆರೆಯದಾಗಿರುತ್ತಿತ್ತು, ಸುಮ್ಮನೇ ಶೀರ್ಷಿಕೆಗಳನ್ನು ಹೇಳಿಕೊಂಡು ತಿರುಗಾಡುತ್ತಿದ್ದೆ. ನನ್ನ ಕನ್ನಡ ಕೈಬರಹ ಯಾವುದೇ ಗುಪ್ತಭಾಷೆಗೂ ಕಮ್ಮಿಯಿಲ್ಲದುದ್ದರ ಕಾರಣ ಪೆನ್ನು ಹಿಡಿದು ಪೇಪರಿನ ಮೇಲೆ ಬರೆಯುವ ದುಸ್ಸಾಹಸ ಮಾಡಲಿಲ್ಲ. ಈಗಲೂ ಸಾಕಷ್ಟು ಶೀರ್ಷಿಕೆಗಳು ಹರಿದಾಡುತ್ತಿವೆ. "ನಾನೇಕೆ ಬರೆಯುತ್ತಿಲ್ಲ" ಎಂದು ಮತ್ತೆ ಬರವಣಿಗೆ ಶುರು ಮಾಡಿದ್ದೇನೆ.

 

ನಿಮ್ಮ ಹಾರೈಕೆಯಿರಲಿ. 

13 comments:

ಅಂತರ್ವಾಣಿ said...

ಬರೆಯೋದು ನಿಲ್ಲಿಸಬೇಡ...

ಆಮೇಲೆ, ಕಂಪನಿಯಲ್ಲಿ ಭೇಟಿ ಮಾಡೋಣ.. :)

Parisarapremi said...

ಹೆ ಹೆ ಹ್ಹೆ... ಚೆನ್ನಾಗಿಯೇ ಬರೆದಿದ್ದೀಯ. ಕುಪ್ಪಳಿ ಬಗ್ಗೆ ಬರೀದೇ ಇದ್ರೆ ನಿಜ್ವಾಗ್ಯೂ ಕೊಲೆ ಆಗೋಗ್ತೀಯ. ಬೇಕಾದ್ರೆ ಇನ್ನೊಂದ್ ಸಲ ಕರ್‍ಕೊಂಡ್ ಹೋಗ್ತೀನಿ ಕುಪ್ಪಳಿಗೆ.

Lakshmi Shashidhar Chaitanya said...
This comment has been removed by the author.
Lakshmi Shashidhar Chaitanya said...

ಕರ್ಮಕಾಂಡ ಪ್ರಭುಗಳೇ ! ಅಂತೂ ಕರ್ಮಕಾಂಡ update ಆಯ್ತಲ್ಲ...ಸಂತೋಓಓಓಓಓಷವಾಗೋಯ್ತು ! ಆದ್ರೆ, ಇದಾದ್ಮೇಲೆ atleast ಹದಿನೈದು ದಿನಕ್ಕೊಂದು ಲೇಖನವನ್ನು ಕುಟ್ಟಿ updateಇಸದಿದ್ದರೆ, ಗುರುಗಳು ಮಾಡುವ ನಿಮ್ಮ murder attempt ನಲ್ಲಿ ನನ್ನದೂ participation ಇರುತ್ತದೆ.

Srikanth - ಶ್ರೀಕಾಂತ said...

ಬರೀದೇ ಇದ್ದಿದ್ದನ್ನೇ ಸಮರ್ಥಿಸಿಕೊಳ್ತಿದೀಯೋ ಅಥವಾ ಇಷ್ಟು ದಿನ ಬರೆಯಕ್ಕಾಗಿಲ್ಲ, ಇನ್ಮೇಲೆ ಬರೀತೀನಿ ಅಂತ ಹೇಳ್ತಿದೀಯೋ? ಹೆಂಗೆ ಅರ್ಥ ಮಾಡ್ಕೋಬೇಕು ಇದನ್ನ?

"ದಿವ್ಯ"ಮೌನ ಅಂದ್ಯಲ್ಲ. ಸರಿಯಾಗೇ ಹೇಳಿದೀಯ. ನಿನಗೇ ಗೊತ್ತಿಲ್ಲದೇ ಸತ್ಯ ಬರೆದುಬಿಟ್ಟಿದ್ದೀಯ ಪಾಪ! 'ದಿವ್ಯಮೌನ' (ಸರಿಯಾಗಿ 'ದಿವ್ಯಾಮೌನ' ಆಗಬೇಕಾಗಿತ್ತೇನೋ...) ಎಂಬ ಸಮಾಸಪದವನ್ನು ತೃತೀಯಾ ತತ್ಪುರುಷ ಸಮಾಸದಲ್ಲಿ ಬಿಡಿಸಿಕೊ. ನಾನು ಏನು ಹೇಳ್ತಿದೀನಿ ಅಂತ ಅರ್ಥ ಆಗತ್ತೆ.

""ನಾನೇಕೆ ಬರೆಯುತ್ತಿಲ್ಲ" ಎಂದು ಮತ್ತೆ ಬರವಣಿಗೆ ಶುರು ಮಾಡಿದ್ದೇನೆ. ನಿಮ್ಮ ಹಾರೈಕೆಯಿರಲಿ" ಅಂತೀಯ. ನಮ್ಮ ಹಾರೈಕೆ ಏನೋ ಇದ್ದೇ ಇರತ್ತೆ. ಆದರೆ ನೀನು ಬರೆದರೆ ಮಾತ್ರ ನಮ್ಮ ಹಾರೈಕೆಯ ಆರೈಕೆ. ಇಲ್ಲದಿದ್ದರೆ ಹಾರೈಸುವ ಬದಲು ನಿನ್ನನ್ನು ಹಾರಿಸಬೇಕಾಗುತ್ತದೆ.

Srinivasa Rajan (Aniruddha Bhattaraka) said...

idanna noDi nange innondu sheershike hoLeetide.. "naanEke sridharanna odeyuttilla" anta :P

srikanth heLdhaage kaaraNa sariyaage koTTidya.. 'divya' mauna ante..

Parisarapremi said...

ಸಮಾಸ ಬೇರೆ!!

Srinivasa Rajan (Aniruddha Bhattaraka) said...

howdu, keLebeku ankonDidde.. martbiTTe..

ಅರುಣ ಚಾಟ್ ನಲ್ಲಿ ಸಿಕ್ಕಾಗಲೆಲ್ಲ ಪಿಂಗಿ ಪಿಂಗಿ ಪಿಂಗಿ "ಬರ್ಯೋ ಇವತ್ತಾದ್ರು" ಎನ್ನುತ್ತಿದ್ದ,

idralli "ಪಿಂಗಿ ಪಿಂಗಿ ಪಿಂಗಿ" andreno? :-/

Sridhar Raju said...

@antarvaaNi : nilsalla...
allige bandre khanditavaagi bheti aagoNa..eno whitefield antidaare :-(

@parisarapremi : bareethideeni kaNo kuppaLi bagge..

@lakshmi : santhosha aaytha?? treat kodsi haagadre.. :-)
murder maadakke nimge baralla bidri..

@srikantha : avararabhaavakke takkanthe...
naayi baala donku :-)

@srinivasa : neen yaake nange vadeethilla andre doddor mele andre nan mele :-D bhaya bhakti idhe antha...goodh boy :-)
english nalli "ping" word keLillva..adruddu kannada version -u... "pingi"... :-D :-D

Srikanth - ಶ್ರೀಕಾಂತ said...

"naayi baala donku :-)"

ನಿನ್ನ ಬಾಲ?

Lakshmi Shashidhar Chaitanya said...

naanankonde GB heege comment maaDTaare anta...nanna analysis correct. naane nanna bennu taTTkotidini.

karmakaanda prabhugaLe, nange murder maadakke baralla anta sumne challenge maaDbeDi. naan yenu anta yaargu gottilla...

Sridhar Raju said...

@srikanth : avaravara bhaavakke biTTiddu

@lakshmi : neevu GB analysis expert -u ri...
nange murder maadakke baralla anta sumne challenge maaDbeDi. naan yenu anta yaargu gottilla...

yaargu gottilla andre nangen gottirutte....

Lakshmi Shashidhar Chaitanya said...

spashTikaraNa:

naanu baree GB analysis expert alla...ellarnu analyse maaDi aaghogide aagle ;-)

opkondra ? opkondra nimgenu gottilla anta ? goodh...idu jaanara lakshana :P