ಪುಟ್ಟ ಪುಟ್ಟ ಆಸೆಗಳೂ....

Wednesday, May 21, 2008

ಬೆಂಗಳೂರು ಈಗ ಬೃಹತ್ ಆಗಿ ಬೆಳೆದಿದೆ..ಬೆಳೆಯುತ್ತಲೇ ಇದೆ, "ಬೃಹತ್ ಬೆಂಗಳೂರು" ಎಂದು ಕರೆದು ಏನೇನೋ ಅಭಿವೃದ್ದಿ!! ಕಾರ್ಯಗಳನ್ನು ಹಮ್ಮಿಕೊಂಡಿದ್ದಾರೆ,ಮಾಡಲಿ, ಅವರಿಗೆ ಜಯವಾಗಲಿ... ಈ ಬೃಹತ್ ಬೆಂಗಳೂರಿನಲ್ಲಿ ನನ್ನದೊಂದಷ್ಟು ಪುಟ್ಟ ಆಸೆಗಳಿವೆ, ನನ್ನ ಜೊತೆಗೂಡುತ್ತೀರಾ ?? ಪಟ್ಟಿ ಹೀಗಿದೆ...

1) ಸದಾ ಜನಭರಿತವಾಗಿರುವ J C ರೋಡಿನಲ್ಲಿ Townhall ಕಡೆ ಇಂದ Lalbagh ಕಡೆಗೆ ಬೈಕಿನಲ್ಲಿ ವೇಗವಾಗಿ ಸಾಗಬೇಕು ರಾತ್ರಿ 10ರ ಸಮಯದಲ್ಲಿ, ಅಲ್ಲಿ ಏಕಮುಖ ಸಂಚಾರ ಇದೆ ಎಂದು ನಿಮಗೆ ಗೊತ್ತಲ್ಲವೆ? ಹಾಗೆ ಒಮ್ಮೆ ವಿರುದ್ದ ದಿಕ್ಕಿನಲ್ಲಿ ಓಡಿಸಿಕೊಂಡು ಹೋಗಬೇಕು..

2) 501,201, ಈ ಸರಣಿಯ ಬಸ್ಸುಗಳನ್ನು ನೋಡಿದರೆ ಏನೋ ಪುಳಕ, ಕಾರಣ ಅದು ring ರೋಡಿನಲ್ಲಿ ಪ್ರದಕ್ಷಿಣೆಹಾಕುತ್ತದೆ, ಒಂದು ಟ್ರಿಪ್ಪಿಗೆ ಏನಿಲ್ಲವೆಂದರೂ 4-5ಗಂಟೆ ಸಮಯ ಹಿಡಿಯುತ್ತದೆ, ಆ ಬಸ್ಸುಗಳಲ್ಲಿ ಕಿಟಕಿಯ ಪಕ್ಕ ಕೂತು ನಗರವನ್ನು ನೋಡಬೇಕು, ಆದರೆ ಹಾಗೆ ಕೂತರೆ ಕಂಡಕ್ಟರ್ ಮಹಾಶಯನ ಬಯ್ಗುಳಕ್ಕೆ ಬಲಿಯಾಗಬೇಕಾಗುತ್ತದೆ ಎಂದು ಅರುಣ ಹೇಳಿದ, ಆದಷ್ಟು ಬೇಗ ಸಮಯ ಮಾಡಿಕೊಂದು ಬನಶಂಕರಿ ಬಸ್ ನಿಲ್ದಾಣಕ್ಕೆ ಪೋಗುವೇನ್!!.. ನನ್ನೀ ಪ್ರಯಾಣದ ಬಗ್ಗೆ ಒಂದು ಲೇಖನವನ್ನು ಬರೆಯಬೇಕು...

3) ರವಿ ಬೆಳಗೆರೆಯವರ "ಪಾಪಿಗಳ ಲೋಕದಲ್ಲಿ" ಒದಿದಾಗಲಿಂದಲೂ ಶ್ರೀರಾಂಪುರದ ಬಗ್ಗೆ ವಿಶೇಷ ಒಲವು, ರೌಡಿಗಳ ತವರು ಎಂದು, ಆ ಏರಿಯಾಕ್ಕೆ ಹೋಗಿ ಒಬ್ಬ ರೌಡಿ ಇನ್ನೊಬ್ಬ ರೌಡಿಯನ್ನು ಅಟ್ಟಾಡಿಸಿಕೊಂಡು ಹೋಗುವುದೋ, ಕತ್ತರಿಸಿ ಹಾಕುವುದೋ, ಅಥವಾ "ಡೀಲ್" ಗಳನ್ನು ರೌಡಿಗಳು ಕುದುರಿಸುವುದನ್ನು ಕಣ್ತುಂಬಿಕೊಳ್ಳಬೇಕು.



4) ಮೈಸೂರು ರಸ್ತೆಯಲ್ಲಿ 24hrs ತೆರೆದಿರುವ ಕಾಫಿ ಡೆ ಇದೆಯಂತೆ, ಅಲ್ಲಿ ಮಧ್ಯರಾತ್ರಿ 3ರ ಹೊತ್ತಿಗೆ ಹೋಗಿ ಕಾಫಿ ಕುಡಿಯಬೇಕು....

5) N R ಕಾಲೊನಿಯಲ್ಲಿ "ಕಟ್ಟೆ ಬಳಗ" ಎಂಬ ಒಂದು ಜಾಗವಿದೆ, ಮಧ್ಯ ಸಣ್ಣ ಜಾಗ, ಅದರ ಇಕ್ಕೆಲಗಳಲ್ಲಿ ರಸ್ತೆ, ದಟ್ಟ ಮರಗಳ ಆಶ್ರಯವಿದೆ, ಅಲ್ಲಿ ಕೂತು ಆಪ್ತ ಗೆಳೆಯರೊಡನೆ ಹರಟೆ ಹೊಡೆಯಬೇಕು....

ಪುಟ್ಟ ಪುಟ್ಟ ಆಸೆಗಳನ್ನು ಈಡೇರಿಸಿಕೊಳ್ಳುವಲ್ಲಿ ದೊಡ್ಡ ಮಟ್ಟದ ಸಂತೋಷವಿರುತ್ತದೆ, ಪುಟ್ಟ ಪುಟ್ಟ ಆಸೆಗಳೂ...... ಚಿಕ್ಕ ಚಿಕ್ಕ ಆಸೆಗಳೂ.....

ಸದ್ಯಕ್ಕಿಷ್ಟೆ!!! ...

18 comments:

Anonymous said...

"ಒಬ್ಬ ರೌಡಿ ಇನ್ನೊಬ್ಬ ರೌಡಿಯನ್ನು ಅಟ್ಟಾಡಿಸಿಕೊಂಡು ಹೋಗುವುದೋ, ಕತ್ತರಿಸಿ ಹಾಕುವುದೋ"
ಗುರೂ, ಇವೆಲ್ಲ ಚಿಕ್ಕ ಚಿಕ್ಕ ಆಸೆಗಳಾ? ;)

Srikanth - ಶ್ರೀಕಾಂತ said...

ಆಸೆ ೧ - ಯಾರಾದ್ರು ರಾಜಕೀಯ ಧುರೀಣರ ಮಗಳನ್ನು ಮದುವೆಯಾಗಿದ್ದರೆ ಒಂದು "ಇಲ್ಲೀಗಲ್ ಚಾನ್ಸ್" ಇತ್ತೇನೋ... ರಿವರ್ಸ್ ಓಡಿಸೋದು, ಪೋಲೀಸ್ ಮಾಮ ಹಿಡಿದಾಗ "ನಾನು ಯಾರ ಅಳಿಯ ಗೊತ್ತೇನ್ರೀ?" ಅನ್ನೋದು!

ಆಸೆ ೨ - ೫೦೧ ಅಥವಾ ೨೦೧ ಬಸ್ಸಿಗೆ ನಿರ್ವಾಹಕನಾಗಿ ಕೆಲಸ ಹುಡುಕು. ದಿನಾ ಊರೆಲ್ಲಾ ಸುತ್ತಬಹುದು ನೋಡು. ಅದೂ ಖರ್ಚಿಲ್ಲದೇ!

ಆಸೆ ೩ - ಹುಷಾರಪ್ಪ!! ಆಮೇಲೆ ನಿನ್ನ ಕೈಕಾಲುಗಳೇ ಚಿತ್ರಾನ್ನ ಆಗಿಬಿಟ್ಟಾವು, ಜೋಕೇ!

ಆಸೆ ೪ - ಕರ್ಮ! ಅವನು ಕೊಡೋ ಕಪ್ಪೆಸೀನ-ಗಿಪ್ಪೆಸೀನಗಳಿಗಿಂತ ಬೊಂಬಾಟಾಗಿರೋ ಕಾಫಿ ಮನೇಲೇ ಮಾಡ್ಕೊಂಡು ಕುಡಿಯೋ!

ಆಸೆ ೫ - ಈ ಆಸೆ ಬಹಳ ಸುಲಭವಾಗಿ ನೆರವೇರಬಹುದಾದರೂ ಇದ್ಯಾಕೋ 'ಸಿಲ್ಲಿ' ಆಸೆ ಅನ್ಸ್ತಿದೆ.

Parisarapremi said...

mysore road kaapi kudyOke yaavaag hogoNa pa??

Srinivasa Rajan (Aniruddha Bhattaraka) said...

sari.

Sridhar Raju said...

creteam : Yes sir adu nandondu puTaaNi aase ;-)

srikantha : ಈ ಆಸೆ ಬಹಳ ಸುಲಭವಾಗಿ ನೆರವೇರಬಹುದಾದರೂ ಇದ್ಯಾಕೋ 'ಸಿಲ್ಲಿ' ಆಸೆ ಅನ್ಸ್ತಿದೆ.
silli lalli silli lalli silli silli wowww wowwwwww wowwwwwww...

parisarapremi : yeppudaina sare......

srinivasa : vokayyyyyyy......

Lakshmi Shashidhar Chaitanya said...

ishtaartha siddhirastu :)

Annapoorna Daithota said...

moorne point ondu bittu mikkiddakkella naanoo jothegoodthini :D

Vijaya said...

JC road one way aagokke munche alli bike odsilva? superraagirodu ... naanu prasanna aruna triples bere hogideevi :-) :-)

pustakagalanna hushaaragi choose maadappa ... aamele yaavadaadru terrorist book odi, inneno sanna putta aase hutkondeetu !!!

Btw ... mysore road ge naanoo barteeni ... naanu nanna vrata murdu coffee kudyodu shuru maadideeni!!

Srikanth - ಶ್ರೀಕಾಂತ said...

next post please...

ಜಾತ್ರೆ said...

Dear blogger,

On the occasion of 8th year celebration of Kannada saahithya.

com we are arranging one day seminar at Christ college.

As seats are limited interested participants are requested to

register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada



Please do come and forward the same to your like minded friends
-kannadasaahithya.com balaga

Srinivasa Rajan (Aniruddha Bhattaraka) said...

oLLe aase! :) irli.. aa rowdism aase biTTu mikkavella chennagive.. avakke nandoo ondu saath... :P

Parisarapremi said...

ellO? update maadtini naaLe andyallO...

Dynamic Divyaa said...

puTTa puTTa aasegaLu anta paTTi na puTTadaagi heLi finis maaDidyaa..
naanu mundhvarsteeni... :-D

puTpuT tarle illa andree nin puT paTTi waste aagutte.. ;-)

1)J C ರೋಡಿನಲ್ಲಿ ಒಮ್ಮೆ ವಿರುದ್ದ ದಿಕ್ಕಿನಲ್ಲಿ ಓಡಿಸಿಕೊಂಡು ಹೋಗಬೇಕು..
--> hehee.. aa viruddha dikknalli police uncle bandu ninna nilsbeku, nin hatra purse irbaardu manele biT hogirbeku!
uuuhaahaaa.. :-D eeeeeeeee anta hallu kireebeku nin usual style alli..
duDDilla (card-u illa) anta ninge madhya road alli baski hoDsbeku...
\:D/ \:D/ \:D/


2) ಆದಷ್ಟು ಬೇಗ ಸಮಯ ಮಾಡಿಕೊಂದು ಬನಶಂಕರಿ ಬಸ್ ನಿಲ್ದಾಣಕ್ಕೆ ಪೋಗುವೇನ್
--> conductor uncle ge nin vishya gottagi ticket-e koDbaardu... "round hoDeebekaaa magane, baa illi elriguuu ticket koDu.." anta 201/501 conductor maaDtaare ond dinakke.. ಪ್ರದಕ್ಷಿಣೆ haakbodu..
;-) ;-) lEkhana baree aavaaga!!!


3) Sreeraampurakke hogoNa baa.. alli nan gang ide, naane Don alli.. naan deal maaDode noDbodu..

4) 3 GhanTe raatrili enu, yaavaag bekaadru kaapi/tea ge JAI!!
And X( this is a reminder ::
long long ago, sooo long ago naavu ond pact ge opkonDidvi..
kuDdu madhyaraatri elriguu bydu tooraaDo pact-u! nenpidyO? yaavaaga adu???

5) haraTe kaTTe ge ond muddu smile.. :-)


aameleeeee... nin "puTTa puTTa aasegaLu" dara sashEsha nan blog alli ;-)
doddddddddddd paTTi maaDuve \:D/

heLbitre meshtru bytaare.. :-D
"bareee modlu!" anta grrrrr antaare... :-D aaaadru parvaagilla.. \:D/

Srikanth - ಶ್ರೀಕಾಂತ said...

Where is your next post???

Parisarapremi said...

ಡೈನಮಿಕ್,

ನಿನ್ನ ಅನಿಸಿಕೆಯ ಸರೋವರದೊಳಗೆ ಮಿಂದು ಮತ್ಸ್ಯಾವತಾರವನ್ನು ಕರುಣಿಸುವ ಶ್ರೀಧರನ ಮುಂದಿನ ಬರಹವನ್ನರಸಿದ ನಮ್ಮಂಥ ಅಭಿಮಾನಿಗಳಾಣತಿಯ ಮೇರೆಗೆ ಅವನಿಗೇನಾದರೂ ಬರೆಯಲು ಸೂಚಿಸುವುದನ್ನು ಬಿಟ್ಟು ಒಂದೊಂದೇ ಅಂಶವನ್ನು ತೆಗೆದುಕೊಂಡು ವಿಮರ್ಶಾರೂಪದಲ್ಲಿ ಹೊಗಳಿಕೆಯ ಶಿಖರವನ್ನೇರಿಸಿ ಮೈಮರೆತಿರುವುದು ಕೊಂಚವೂ ಉಚಿತವಲ್ಲವೆಂದು ಹೇಳಲು ನಾನು ಬಯಸುತ್ತೇನೆ.

ಮಂಡೂಕದಂತಿರಬಾರದೆಂಬ ಉಪದೇಶವನ್ನು ನನ್ನಿಂದಲೂ ಹಾಗೂ ಶ್ರೀಕಾಂತನಿಂದಲೂ ಕೆಲ ದಿನಗಳ ಮುಂಚೆಯೇ ಸ್ವೀಕರಿಸಿದ ನೀನು ಮಾಂಡೂಕೋಪನಿಷತ್ತಿನಂತೆ ಇಲ್ಲಿ, ಈ ಬ್ಲಾಗೆಂಬ ಕೂಪದಲ್ಲಿ ಮುಳುಗೇಳುತ ಮುಳುಗಿ ಸಂಪೂರ್ಣ ಒದ್ದೆಯಾಗಿದ್ದೀಯ. ಒರೆಸಿಕೋ.

Dynamic Divyaa said...

@Sridhara ::
hehee na heLid tharane anknDid tharane my meshtru bydidaare!!
\:D/ \:D/
ningenO soochane koDbekante...
togo SOOOOCHANE bega catch... ni drop maaDidre ningu sarovaradalli vodde maaDtaare meshtruu.. bega catch..


@Parisarapremi ::
neeve orisi... kaNterisi...
adu nim kelsa.. \:D/ nandeniddruu aaaTa oooTa.. paaTa nim kelsa!!
\:D/ \:D/

Srikanth - ಶ್ರೀಕಾಂತ said...

ಶ್ರೀಧರ - ನೀನು ಮಹಾಸೋಮಾರಿ ಕಣೋ. ಪದ್ಮನಾಭನಗರ, ಇಂದಿರಾನಗರ, ಕೋರಮಂಗಲ, ಮಲ್ಲೇಶ್ವರಗಳ ಬೀದಿ-ಬೀದಿ ಸುತ್ತಕ್ಕೆ ಬರತ್ತೆ ಅಷ್ಟೇ. ಬ್ಲಾಗಲ್ಲಿ ಒಂದು ಚಾರಣಕಥನ ಬರಿಯೋ ಅಂದ್ರೆ ಆಗಲ್ಲ ಅಲ್ವಾ?

ಈ ಸುಭಾಷಿತ ನಿನಗೆ ಅಂಗಲೇ ಯಾರೋ ಮಾಡಿರೋದು. ಯಾರನ್ನಾದರೂ ಕೇಳಿ ಅರ್ಥ ಮಾಡಿಕೊ.

ಆಲಸ್ಯಂ ಹಿ ಮನುಷ್ಯಾಣಾಂ ಶರೀರಸ್ಥೋ ಮಹಾನ್ ರಿಪುಃ
ನಾಸ್ತುದ್ಯಮ ಸಮೋ ಬಂಧುಃ ಕುರ್ವಾಣೋ ನಾವಸೀದತಿ

Anonymous said...

ಹೋ ಹೊ ನಿಮ್ಮೆಲ್ಲಾ ಆಸೆಗಳು ಆದಷ್ಟು ಬೇಗ ಈಡೇರಲಿ ಅಂತ ಹೇಳೋದು ಬಿಟ್ಟು ಇನ್ನೇನ್ ಹೇಳಬೇಕೋ ನನಗೆ ತೋಚ್ತಿಲ್ಲ.
ಈ ಆಸೆಗಳೆಲ್ಲಾ ಪುಟ್ಟ ಪುಟ್ಟದಾ??????????

ಮತ್ತೆ ಪ್ಲೀಸ್ ನಿಮ್ಮ ದೊಡ್ಡ ದೊಡ್ಡ ಆಸೆಗಳ ಪಟ್ಟಿ ಮಾಡ್ರಿ ಇಲ್ಲಿ!