ಪುಟ್ಟ ಪುಟ್ಟ ಆಸೆಗಳೂ....

Wednesday, May 21, 2008

ಬೆಂಗಳೂರು ಈಗ ಬೃಹತ್ ಆಗಿ ಬೆಳೆದಿದೆ..ಬೆಳೆಯುತ್ತಲೇ ಇದೆ, "ಬೃಹತ್ ಬೆಂಗಳೂರು" ಎಂದು ಕರೆದು ಏನೇನೋ ಅಭಿವೃದ್ದಿ!! ಕಾರ್ಯಗಳನ್ನು ಹಮ್ಮಿಕೊಂಡಿದ್ದಾರೆ,ಮಾಡಲಿ, ಅವರಿಗೆ ಜಯವಾಗಲಿ... ಈ ಬೃಹತ್ ಬೆಂಗಳೂರಿನಲ್ಲಿ ನನ್ನದೊಂದಷ್ಟು ಪುಟ್ಟ ಆಸೆಗಳಿವೆ, ನನ್ನ ಜೊತೆಗೂಡುತ್ತೀರಾ ?? ಪಟ್ಟಿ ಹೀಗಿದೆ...

1) ಸದಾ ಜನಭರಿತವಾಗಿರುವ J C ರೋಡಿನಲ್ಲಿ Townhall ಕಡೆ ಇಂದ Lalbagh ಕಡೆಗೆ ಬೈಕಿನಲ್ಲಿ ವೇಗವಾಗಿ ಸಾಗಬೇಕು ರಾತ್ರಿ 10ರ ಸಮಯದಲ್ಲಿ, ಅಲ್ಲಿ ಏಕಮುಖ ಸಂಚಾರ ಇದೆ ಎಂದು ನಿಮಗೆ ಗೊತ್ತಲ್ಲವೆ? ಹಾಗೆ ಒಮ್ಮೆ ವಿರುದ್ದ ದಿಕ್ಕಿನಲ್ಲಿ ಓಡಿಸಿಕೊಂಡು ಹೋಗಬೇಕು..

2) 501,201, ಈ ಸರಣಿಯ ಬಸ್ಸುಗಳನ್ನು ನೋಡಿದರೆ ಏನೋ ಪುಳಕ, ಕಾರಣ ಅದು ring ರೋಡಿನಲ್ಲಿ ಪ್ರದಕ್ಷಿಣೆಹಾಕುತ್ತದೆ, ಒಂದು ಟ್ರಿಪ್ಪಿಗೆ ಏನಿಲ್ಲವೆಂದರೂ 4-5ಗಂಟೆ ಸಮಯ ಹಿಡಿಯುತ್ತದೆ, ಆ ಬಸ್ಸುಗಳಲ್ಲಿ ಕಿಟಕಿಯ ಪಕ್ಕ ಕೂತು ನಗರವನ್ನು ನೋಡಬೇಕು, ಆದರೆ ಹಾಗೆ ಕೂತರೆ ಕಂಡಕ್ಟರ್ ಮಹಾಶಯನ ಬಯ್ಗುಳಕ್ಕೆ ಬಲಿಯಾಗಬೇಕಾಗುತ್ತದೆ ಎಂದು ಅರುಣ ಹೇಳಿದ, ಆದಷ್ಟು ಬೇಗ ಸಮಯ ಮಾಡಿಕೊಂದು ಬನಶಂಕರಿ ಬಸ್ ನಿಲ್ದಾಣಕ್ಕೆ ಪೋಗುವೇನ್!!.. ನನ್ನೀ ಪ್ರಯಾಣದ ಬಗ್ಗೆ ಒಂದು ಲೇಖನವನ್ನು ಬರೆಯಬೇಕು...

3) ರವಿ ಬೆಳಗೆರೆಯವರ "ಪಾಪಿಗಳ ಲೋಕದಲ್ಲಿ" ಒದಿದಾಗಲಿಂದಲೂ ಶ್ರೀರಾಂಪುರದ ಬಗ್ಗೆ ವಿಶೇಷ ಒಲವು, ರೌಡಿಗಳ ತವರು ಎಂದು, ಆ ಏರಿಯಾಕ್ಕೆ ಹೋಗಿ ಒಬ್ಬ ರೌಡಿ ಇನ್ನೊಬ್ಬ ರೌಡಿಯನ್ನು ಅಟ್ಟಾಡಿಸಿಕೊಂಡು ಹೋಗುವುದೋ, ಕತ್ತರಿಸಿ ಹಾಕುವುದೋ, ಅಥವಾ "ಡೀಲ್" ಗಳನ್ನು ರೌಡಿಗಳು ಕುದುರಿಸುವುದನ್ನು ಕಣ್ತುಂಬಿಕೊಳ್ಳಬೇಕು.



4) ಮೈಸೂರು ರಸ್ತೆಯಲ್ಲಿ 24hrs ತೆರೆದಿರುವ ಕಾಫಿ ಡೆ ಇದೆಯಂತೆ, ಅಲ್ಲಿ ಮಧ್ಯರಾತ್ರಿ 3ರ ಹೊತ್ತಿಗೆ ಹೋಗಿ ಕಾಫಿ ಕುಡಿಯಬೇಕು....

5) N R ಕಾಲೊನಿಯಲ್ಲಿ "ಕಟ್ಟೆ ಬಳಗ" ಎಂಬ ಒಂದು ಜಾಗವಿದೆ, ಮಧ್ಯ ಸಣ್ಣ ಜಾಗ, ಅದರ ಇಕ್ಕೆಲಗಳಲ್ಲಿ ರಸ್ತೆ, ದಟ್ಟ ಮರಗಳ ಆಶ್ರಯವಿದೆ, ಅಲ್ಲಿ ಕೂತು ಆಪ್ತ ಗೆಳೆಯರೊಡನೆ ಹರಟೆ ಹೊಡೆಯಬೇಕು....

ಪುಟ್ಟ ಪುಟ್ಟ ಆಸೆಗಳನ್ನು ಈಡೇರಿಸಿಕೊಳ್ಳುವಲ್ಲಿ ದೊಡ್ಡ ಮಟ್ಟದ ಸಂತೋಷವಿರುತ್ತದೆ, ಪುಟ್ಟ ಪುಟ್ಟ ಆಸೆಗಳೂ...... ಚಿಕ್ಕ ಚಿಕ್ಕ ಆಸೆಗಳೂ.....

ಸದ್ಯಕ್ಕಿಷ್ಟೆ!!! ...