ವೈರುಧ್ಯ - ವೈವಿಧ್ಯ

Sunday, November 18, 2007


ಜೀವನ ಯಾರಿಗೆ ತಾನೆ ವೈವಿಧ್ಯ ಪೂರ್ಣವಾಗಿ ಇರಬೇಕೆಂದು ಅನ್ನಿಸುವುದಿಲ್ಲ..ದಿನವೂ ಮಾಡಿದ್ದನ್ನೇ ಮಾಡುತ್ತಿದ್ದರೆ ಬೋರ್ ಆಗುತ್ತದೆ...ನನಗೆ ವೈವಿಧ್ಯತೆಯು ಬೇಕು ವೈರುಧ್ಯವೂ ಬೇಕು...ನನ್ನ ಒಂದು ಸಣ್ಣ ಪಟ್ಟಿ..ಹಾಗೆ ಒಮ್ಮೆ ಕಣ್ಣಾಡಿಸಿಬಿಡಿ..ವೈವಿಧ್ಯತೆ - ವೈರುಧ್ಯತೆ ಇದ್ದರೆ ಜೀವನ ಮಜವಾಗಿರುತ್ತದೆ ಎಂಬುದು ಖಚಿತ...

1) ಒಂದು ದಿನ ಕಲಾಸಿಪಾಳ್ಯದಲ್ಲಿ ಕೂಲಿ ಕೆಲಸ ಮಾಡಬೇಕು....ತಳ್ಳು ಗಾಡಿಯಲ್ಲಿ ಮೂಟೆಗಳನ್ನು ಹಾಕಿಕೊಂಡು ಆ ಜನಭರಿತ ಗಲ್ಲಿಗಳಲ್ಲಿ ಆ ಗಾಡಿಯನ್ನು ಎಳೆದಾಡುತ್ತಿರಬೇಕು....ದಿನದ ಕೂಲಿ ತೆಗೆದು ಕೊಂಡು ರಾತ್ರಿ ಹೊತ್ತಿಗೆ ಅಲ್ಲೆ ಸಿಕ್ಕಿದ್ದನ್ನು ತಿಂದು ಲೈಟಾಗಿ ಸಾರಾಯಿ ಕುಡಿದು ಅಲ್ಲೆ fly over ಕೆಳಗೆ ಮಲಗಬೇಕು...

ಅದರ ಮರುದಿನವೇ ಲೀಲಾ - ಪ್ಯಾಲೇಸಿನಲ್ಲಿ ಬೆಳಗಿನ ಕಾಫಿ ಕುಡಿದು swimming pool ಪಕ್ಕ ಅಂಗಾತ ಮಲಗಿರಬೇಕು...ನನ್ನ ದಿನವೆಲ್ಲ ಲೀಲಾ - ಪ್ಯಾಲೆಸಿನಲ್ಲಿ ವಿಧ ವಿಧವಾದ just chill ಆಗುವಂತಹ ಕೆಲಸಗಳಲ್ಲಿ ತೊಡಗಿಕೊಂಡಿರಬೇಕು.

2)ಒಂದು ಇಳಿಸಂಜೆಯ ಹೊತ್ತಿನಲ್ಲಿ ಲಾಲ್ ಬಾಗ್ ಕೆರೆದಂಡೆಯಲ್ಲಿ ನನ್ನವಳೊಂದಿಗೆ ;-) "ಚೀ ಕಳ್ಳ...ಎಂದು ಕೆನ್ನೆ ಗಿಲ್ಲಿಸಿಕೊಳ್ಳಬೇಕು..." ಅದರ ಮರುದಿನವೇ ಅದೇ ಕೆರೆದಂಡೆಯಲ್ಲಿ ಅದೇ ನನ್ನವಳೊಂದಿಗೆ "ಚೀ ಕಳ್ ನನ್ ಮಗನೆ...ಎಂದು ಆಕೆಯಿಂದ ಕಪಾಳಮೋಕ್ಷ ಆಗಬೇಕು.."

3) ಒಂದು ದಿನ ಇಪ್ಪತ್ತನಾಲ್ಕು ಗಂಟೆಗಳೂ ಪ್ರಪಂಚದ ಅರಿವಿಲ್ಲದೇ ನನಗಿಷ್ಟವಾದ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು.... ಹಾಗೆ ಇಪ್ಪತ್ತನಾಲ್ಕು ಗಂಟೆಗಳೂ ಮೈಮೇಲೆ ಅರಿವಿಲ್ಲದೆಯೇ ನಿದ್ರಾಲೋಲ ನಾಗಬೇಕು..ಕುಂಬಕರ್ಣನ ಅಪರಾವತಾರ ನಾಗಬೇಕು...

4)ನನ್ನ ಜನರಿಂದ, ಇತರರಿಂದ ಹಾಡಿ ಹೊಗಳಿಸಿಕೊಳ್ಳಬೇಕು.....ಮತ್ತೊಂದು ದಿನ ಅದೇ ಜನಗಳ ಬಳಿ ಮೂರು ಜನ್ಮಕ್ಕಾಗುವಷ್ಟು ಕುಳಿತು ಉಗಿಸಿಕೊಳ್ಳಬೇಕು...ವಾಚಮಗೋಚರವಾಗಿ..

5)ಬೈಕನ್ನೇರಿ ಕರಾವಳಿಯ ಉದ್ದಕ್ಕೂ ಓಡಿಸಿಕೊಂಡು ಹೋಗಬೇಕು...ಗೊತ್ತು ಗುರಿಯಿಲ್ಲದೆಯೇ..ದಿನಗಳ ಪರಿವಿಲ್ಲದೆಯೇ...ಮತ್ತೊಂದು ದಿನ ಬೈಕನ್ನು kick start ಮಾಡಲು ಸಹಾ ಶಕ್ತಿಯಿರಬಾರದು...

6)ಮನೆಯವರಿಂದ..."ಅಹಾ ಹೆತ್ತರೆ ಇಂತಹ ಮಗನನ್ನು ಹೆರಬೇಕು.... ಕುಲತಿಲಕ ಇವನು " ಎಂದು ಒಂದು ದಿನ ಅನ್ನಿಸಿಕೊಂಡರೆ...ಮತ್ತೊಂದು ದಿನ ಅವರಿಂದಲೇ "ಯಾಕಾದರೂ ಹುಟ್ಟಿದನೋ....ಕುಲಕ್ಕೇ ಕಳಂಕ, ಹುಟ್ಟದಿದ್ದರೇ ಚೆನ್ನಾಗಿತ್ತೇನೋ ಇವನು" ಎಂದು ಕೇಳಬೇಕು..

7)ಜೇಬು ತುಂಬ ದುಡ್ಡು ಇಟ್ಟುಕೊಂಡು ಬೇಕಾದ ರೀತಿಯಲ್ಲಿ ಖರ್ಚು ಮಾಡಬೇಕು...ನೀರಿಗಿಂತ ಕೇವಲವಾಗಿ...
ಮತ್ತೊಂದು ದಿನ ಬಿಡಿಗಾಸು ಸಹಾ ನನ್ನ ಬಳಿಯಿರಬಾರದು...ಬೀದಿಗೆ ಬಿದ್ದಿರಬೇಕು...

8) ಇನ್ನೇನು ಪ್ರಾಣವೇ ಹೋಗಿಬಿಡುತ್ತದೇನೊ ಎಂಬಂತೆ ಒಂದು ಹಾಸ್ಪಿಟಲ್ ನಲ್ಲಿ ಮಲಗಿರಬೇಕು..ಅದರ ಮರುದಿನವೇ foot ball ಆಡುತ್ತಿರಬೇಕು..

9)ನನ್ನ ಜೀವನ settle ಆಯಿತೆನ್ನುವ ಭಾವ ನನ್ನನ್ನ ಆವರಿಸಬೇಕು ಒಂದು ದಿನ...ಮತ್ತೊಂದು ದಿನ.. ಮುಂದೆ ಜೀವನ ಹೇಗೆ ನಡೆಯುತ್ತದೆ ಎಂದು ಕಳವಳ ಪಡುತ್ತಿರಬೇಕು...ದಿಕ್ಕುಗಾಣದೆ ಒಬ್ಬನೇ ಒಂದು ಮೂಲೆಯಲ್ಲಿ ಕಾಲು ಕೊಸರಿಕೊಂಡು ಕುಳಿತು ಗಾಢ ಕತ್ತಲಿರುವ ಕೋಣೆಯಲ್ಲಿ ದೀರ್ಘವಾಗಿ ಯೋಚಿಸುತ್ತಿರಬೇಕು..

10) ಒಂದು ದಿನವಿಡೀ ನನ್ನ ಆತ್ಮೀಯ ಗೆಳೆಯರೊಡನೆ ಕಾಲ ಕಳೆಯಬೇಕು.ಇಪ್ಪತ್ತನಾಲ್ಕು ಗಂಟೆಗಳೂ ಎಗ್ಗಿಲ್ಲದೆ ಹೊತ್ತಿಲ್ಲದೆ.. ಗೊತ್ತಿಲ್ಲದೆ...ಮತ್ತೊಂದು ದಿನ ನನ್ನ ಬದ್ದ ವೈರಿಗಳೊಡನೆ ಒಂದು ದಿನವಿಡೀ ಕಳೆಯಬೇಕು...ಆ ರೀತಿಯ ಪರಿಸ್ಥಿತಿ ಬಂದೊದಗಬೇಕು..

11)ಜ್ಯೋತಿಷಿಗಳಿಂದ "ಹೋಗಯ್ಯ ನೀನು 80+ ವರ್ಷ ಬದುಕುತ್ತೀಯ"..ಎಂದು ಅನ್ನಿಸಿಕೊಂಡು ಜ್ಯೋತಿಷಾಲಯದಿಂದ ಹೊರಬರುತ್ತಲೇ..ಹೃದಯಾಘಾತವಾಗಿ ಅಲ್ಲೆ ಕುಸಿದು ಬಿದ್ದು ಕೊನೆಯುಸಿರೆಳೆಯಬೇಕು.. :-)


12)ಸತ್ತಾಗ ನಾಲ್ಕು ಜನರು ಕಣ್ಣೀರಿಟ್ಟರೆ ಇನ್ನೊಂದು ಕಡೆ ನಾಲ್ಕು ಜನ ಖುಶಿಯಿಂದ ಸಂತಸ ಪಡಬೇಕು...

ಸದ್ಯಕ್ಕೆ ನನ್ನ ಪಟ್ಟಿ ಇಷ್ಟೆ...ಇನ್ನು ಬೇಕಾದಷ್ಟಿವೆ..ಬರೆಯುತ್ತಾ ಹೋದರೆ ಮೊದಲಿರುವುದಿಲ್ಲ ಕೊನೆಯಿರುವುದಿಲ್ಲ..
ನಿಮ್ಮ ಜೀವನ ವೈವಿಧ್ಯ ಪೂರ್ಣವಾಗಿರಲಿ....

15 comments:

Parisarapremi said...

ಲೋ.. ಉಪೇಂದ್ರನ ಸಿನೆಮಾ ನೋಡೋದ್ ಬಿಡೋ.. ಅದಕ್ಕೆ ನೀನು ಹೀಗೆಲ್ಲಾ ಯೋಚ್ನೆ ಮಾಡೋದು!! ಕಪಾಳ ಮೋಕ್ಷ ಆಗ್ಬೇಕಾ ಲಾಲ್ ಬಾಗ್ ಅಲ್ಲಿ?? ಹ ಹ್ಹ ಹ್ಹಾ... ಆದ್ರೂ ನಿಮ್ದು ತುಂಬ ಉದ್ದ - ಲಿಸ್ಟು....

Srinivasa Rajan (Aniruddha Bhattaraka) said...

uuuuuuuuuhahahahahaha.... :)) :))

ಏನೇನೋ ಆಸೆಗಳು.. ಆಹಾ!!! ಇದರಂತೆ ಇರೋ ನನ್ನ ಆಸೆಯನ್ನ ಹೇಳ್ಬೇಕು ಅನ್ನಿಸ್ತಿದೆ.. :D

ಇರೋದು ಒಂದೇ ಐಟಮ್ ನನ್ ಲಿಸ್ಟಲ್ಲಿ.. ಅದು ಹೀಗೆ:
ಯೋಗಾಭ್ಯಾಸದಲ್ಲಿ ತೊಡಗಿ, ಕಗ್ಗಗಳನ್ನ ಚಿಂತನೆ ಮಾಡ್ತಾ ಮಾಡ್ತಾ, ಮನಸ್ಸು ಪೂರ್ತ ಅದರಲ್ಲೇ ನಿಲ್ಲುವಂತೆ ಮಾಡಬೇಕು... ಕಡೆಗೆ ಒಂದು ದಿನ ಆ ಕಗ್ಗಗಳ ಯೋಚನೆಯನ್ನೂ ಮೀರಿ ಚಿರಶಾಂತಿ-ಆನಂದಾವಸ್ಥೆಯನ್ನು ಹೊಂದಬೇಕು... The Trans/Blissful state (ಸಮಾಧಿ ಸ್ಥಿತಿ) ಅಂತಾರಲ್ಲ.. ಹಾಗೆ :D

Anonymous said...

Super aagidhe maga.. ಕಲಾಸಿಪಾಳ್ಯದಲ್ಲಿ ಸಾರಾಯಿ ಕುಡಿದು bardhirothara idhe... ;) Cheers!!!!!!!!!

Radha..

Samarasa said...

nangu ondhu Aase ide aden gottha ninge ondhina poorthi coffee kudisbeku neenu saku saku.... annodhanna nodabeku.mattondina neenu coffee beku beku.. andhru ondh tottu coffee sigadeiro hage madbeku.
anyway super agi bardidiya ALL THE BEST

Anonymous said...

ಅಬ್ಬಾ ಏನಿದು ಶ್ರೀಧರ್ ಸಾಕಾ ಈ ಇಷ್ಟು ದೊಡ್ಡ ಲಿಸ್ಟ್ ಆಸೆಗಳು ಹಾ?
ಜೀವನದಲ್ಲಿ ವೈವಿಧ್ಯತೆ ಇರಬೇಕು ನಿಜ ವೈರುಧ್ಯನೂ ಇರಬೇಕು ಆದರೆ ಹೆಚ್ಚಾಗಿರಬಾರದು ಯಾಕೆಂದರೆ "ಆಸೆ ದುಖಃಕ್ಕೆ ಮೂಲ"


ಎಲ್ಲಾ ಪಾಯಿಂಟ್ಸ್ ಸೂಪರ್ ಆಗಿದೆ ಆದರೆ ಒಂದೆರಡು ಪಾಯಿಂಟ್ಸ್ ಹೀಗೆ ಇದ್ದರೆ ಹೇಗೆ ಅಂತ
ಒಂದು ದಿನ ಕಲಾಸಿಪಾಳ್ಯದಲ್ಲಿ ಕೂಲಿ ಕೆಲಸ ಮಾಡಬೇಕು....ತಳ್ಳು ಗಾಡಿಯಲ್ಲಿ ಮೂಟೆಗಳನ್ನು ಹಾಕಿಕೊಂಡು ಆ ಜನಭರಿತ ಗಲ್ಲಿಗಳಲ್ಲಿ ಆ ಗಾಡಿಯನ್ನು ಎಳೆದಾಡುತ್ತಿರಬೇಕು....ದಿನದ ಕೂಲಿ ತೆಗೆದು ಕೊಂಡು ರಾತ್ರಿ ಒಂದು ಹಿಡಿ ಅಕ್ಕಿ ಕೊಂಡುಕೊಂಡು ಹೋಗಿ ಅದರಲ್ಲಿ ಗಂಜಿ ಮಾಡ್ಕೋಂಡು ಕುಡಿದು ಗುಡಿಸಲಿನಲ್ಲಿ ಮಲಗಿದರೆ ಚೆನ್ನಾಗಿರುತ್ತೆ.(ಇದು ನನ್ನ ಅನಿಸಿಕೆ )

ಆಯ್ಯೋ ಕಪಾಳ ಮೋಕ್ಷ ಮಾಡಿಸಿಕೊಳ್ಳಕ್ಕೆ ಲಾಲ್ ಬಾಗ್ ಅ????ಅದ್ಯಾಕೆ ಲಾಲ್ ಬಾಗ್ ಯೇ ಆಗಬೇಕು?

ಇನ್ನೇನು ಪ್ರಾಣವೇ ಹೋಗಿಬಿಡುತ್ತದೇನೊ ಎಂಬಂತೆ ಒಂದು ಹಾಸ್ಪಿಟಲ್ ನಲ್ಲಿ ಮಲಗಿರಬೇಕು ಇದರ ಜೊತೆಗೆ ಪುಡ್ ಪೈಪ್ ನಲ್ಲಿ 24hrs ಕಾಫಿ ಹಾಕ್ತಾಇದ್ದರೆ ಹೇಗೆ?ಇನ್ನೂ ಸೂಪರ್ ಆಗಿರುತ್ತೆ:)))))))

ಎಲ್ಲಾ ಇಷ್ಟಾರ್ಥಗಳು ಸಿದ್ದಿಯಾಗಲಿ .

Srikanth - ಶ್ರೀಕಾಂತ said...

ಲೋ ಶ್ರೀಧರ, ನಿಂಗೇನೋ ಬಂತು ರೋಗ? ಭಗವಂತ ನಿನ್ನ ಚೆನ್ನಾಗಿಟ್ಟು ತಪ್ಪು ಮಾಡ್ಬಿಟ್ಟ ಅನ್ಸತ್ತೆ.

ಸಾರಾಯಿ ಕುಡಿದು ಫ್ಲೈಓವರ್ ಕೆಳಗೆ ಮಲಗಬೇಕಂತೆ, ಒಬ್ಬಳಿಂದಲೇ ಕೆನ್ನೆಗೆ ಗಿಲ್ಲಿಸಿಕೊಂಡು ಮತ್ತೊಂದು ದಿನ ಹೊಡೆಸಿಕೊಳ್ಳಬೇಕಂತೆ - ಅದೂ ಲಾಲ್ಬಾಗ್ ಕೆರೆ ದಂಡೆಲಿ... ಏನು ಅಸ್ತವ್ಯಸ್ತಾವಸ್ಥೆಯೋ ನಿನ್ನ ಮನಸ್ಸಿನದು?

ಅರುಣ - ಉಪೇಂದ್ರನ ಸಿನಿಮಾ ನೋಡ್ತಾನಾ ಇವನು?? ತಲೆ ಕೆಟ್ಟಿರೋದ್ರಲ್ಲಿ ಆಶ್ಚರ್ಯ ಏನಿಲ್ಲ ಬಿಡು!! ಇದನ್ನ ಅವತ್ತು ಬ್ಯೂಗಲ್ ರಾಕ್ ಪಾರ್ಕಲ್ಲೇ ಹೇಳಿದ್ರೆ ಅಲ್ಲೇ ಕಪಾಳ ಮೋಕ್ಷ ಮಾಡಿಸ್ತಿದ್ವಿ ಅಲ್ವಾ?

ಗಂಡಭೇರುಂಡ - ಪಟ್ಟಿ ಚಿಕ್ಕದಾದರೂ ಬೇಡಿಕೆಗಳು ಬಲು ಗಟ್ಟಿ. ಎಸ್ಪೆಶಲೀ ಕೊನೆಯ ಬಯಕೆ! ಭಗವಂತ ನಿನಿಷ್ಟಾರ್ಥ ಪೂರೈಸಲಿ!!

ರಾಧಾ - ಶ್ರೀಧರನ ಜೊತೆ ಸೇರಿ ಸೇರಿ ನಿಮಗೂ ತಲೆ ಕೆಟ್ಟಿದೆ. ಸೂಪರ್ ಆಗಿದ್ಯಂತೆ... ಕರ್ಮ!! ಅವನ ಬರವಣಿಗೆಯ ಭಾಷೆ ಚೆನ್ನಾಗಿದೆ ಆದ್ರೆ ಅವನ ತಲೆ ಮಾತ್ರ ಕುಲಗೆಟ್ಟೋಗಿದೆ. (ಶ್ರೀಧರ - ಇನ್ನೆಷ್ಟು ಜನರ ತಲೆ ಕೆಡ್ಸಿದೀಯೋ ಹೀಗೇ, ಹೋಲ್ಸೇಲ್ ಆಗಿ???)

ಸಮರಸ - ಸೂಪರ್ ಅಂತೆ... ಕರ್ಮ!! ನಿಮ್ಮ ಆಸೆಯ ಪೂರ್ವಾರ್ಧ ನಡೆಯಬಹುದೇನೋ... ಆದರೆ ಉತ್ತರಾರ್ಧ... ನಂಗೇನೋ ಡೌಟು!

ಪುಷ್ಪ - ಆಸೆ ದುಃಖಕ್ಕೆ ಮೂಲ. ನಿಜ. ಆದರೆ ದುಃಖ ಬೇಕೆಂದೇ ಆಸೆಯಾದರೆ? ಅದು ಕರ್ಮಕಾಂಡದ ಪರಮಾವಧಿ! ಫುಡ್ ಪೈಪಲ್ಲಿ ಕಾಫಿ ಹಾಕ್ತೀರಾ? ಹಾಕಿ ಹಾಕಿ.. :-))

ಇಂಥ ಇಷ್ಟಾರ್ಥಗಳೆಲ್ಲಾ ಸಿದ್ಧಿಯಾಗ್ತಿರೋದಕ್ಕೇ ಹೀಗೆಲ್ಲಾ ಬರ್ದಿರೋದು.

Anonymous said...

@ ಶ್ರೀಕಾಂತ್ -> ಶ್ರೀಧರ್ ಗೆ ಭಗವಂತ ಚೆನ್ನಾಗಿಟ್ಟು ತಪ್ಪು ಮಾಡ್ಬಿಟ್ಟ ಅಲ್ಲ ಎಂಥೆಂತಾ ಆಸೆಗಳು ಮೂಡೋಹಾಗೆ ಬುದ್ಧಿ ಕೊಟ್ಟು ತಪ್ಪುಮಾಡ್ಬಿಟ್ಟ ಅನ್ಸುತ್ತೆನಂಗೆ.
ದುಖ:ಬೇಕೆಂದು ಯಾರು ಆಸೆಪಡೊಲ್ಲ ಆದರೆ ಅ ಆಸೆಯಿಂದ ದುಖಃ ಆದರೆ ಅದು ಕರ್ಮ ಮತ್ತು ವಿಧಿಯ ಪರಮಾವದಿನೇ ನಿಜ.

Sridhar Raju said...

@parisarapremi: Uppigitha ruchi bere illa...oppikondodru daddaralla.... :-) yesss nam list swalpa doDDade... ;-)

srinivasa: : nin aase chennagidhe...iShTaartha siddirasthu.... :-)

Radha: : Cheers!!!

Samarasa: Nin aase sogasaagidhe...first part nadskodtheeni....next part doubt -u ;-)

Samanvyana : Nimma kaapi food pipe concept chennagidhe :-) bhale bhale.... lalbagh ondu nimitta maatra...sankey tank kooda aagatte :-d.... nange gudisiligintha beedhi li biddirodhe iShTa.... :-D..hmmmm..
nimma koneya haaraikege dhanyavaadagaLu

Srikantha: : hmmmm ninna comment -u sooper -u.....
nan article gu nin comment gu tumba thaaLe aagutte...vaividhya vaagide vairudhyavu kooDide..bhale bhale.... nange devru chennagittirodakke ee thara yochnegaLu barodhu...neenu upendra bagge maatadbeda....arunage heLida maatanne ningu heLak ista padtheeni..haage adanne spashTapadisthaa iddeeeni....

ha ha ha...nin class -u ellargu soooper aagide...i like it..i like it.... :-) Thanks for ur super duper comment -u....

Anonymous said...

karma karma bedhili biddirodha ????
otnalli sridhar ninge nemmadiyaagi,simple jeevana ishtane agolla antha gothaagthide

Anonymous said...

@Srikanth: Sridhar jothe seri nan thale keTTidhya?? please hegella inondsala heLbedi .. naanu chikavLidhaagindhane nan thale sari illa.. ;)

Dynamic Divyaa said...

uuuuuuuuuhahahahahahaahaaa guuuudd!! Raymond! vaividhyate li poorNate!!
gud thinking man! "different aagirbeku man" annOdanna justify maaDtya!
tummmmba saNN paTTi aagOythu idu, u paTTi!! :-D
hEgiddru dodddddddd copy cat neenu... innu kelvu add maaDteeni bidu naanu!
nanna poorNa sammati ninge.. ondu precious vote-u ninge (ninna 6th point na second part ond bittu)...!! :-)

Extremes irbeku life alli.. illandre majjjaa illaa!! adE raaga adE haaDu.. waste tara irutte...!
innu kelvu points add aagutta noDu..

13) ond dina exam alli chiTki tara bardu bisaaki out-of-out scene-u.. next dinad paper kashTanO easynO antaanuu gottagde irO ashT hopeless scene-u.. horag bandu "lO aaykoLod gyaaaaarenti magaa.." anbeku..!

14) ond sali nam mukha na kannadili noDkonDu waaahhh waaaahhh en sundara mOre anta kannadige mutt kodbeku... innond sala yaavaaglaadruu kannadi noDi thuuuu idu ond face cut-aaa annbeku!!

15) ond dina highly qualified professionals aagi merdaaDadu.. adE raatri wastegaL tara tight aagi tooraaDadu... ... ... do nenpu aa imaginationnu.. :))
same2same...

16) ond sali danagaLna meysbeku ppppaaapppaaaaaa ankondu.. karugaL jotey aaTa aaDbeku open field alli.. avu baala ethkonD ODtavallaa.. soooooooooper adu!!
adra next dina Biocon alli R&D head aagi kelsa maaDbeku!

17)haLLimane beLigge ole hacchiddu hoge vaasne savidu bari kaalalli gaddEli tirugaaDbeku... madhyaana full sust aagi bandu sooooper ole li maaDiddu oota maaDbeku hasi eeruLLi jotey!! aaahaaaa!!
Innond dina 5* alli bekaaaa bitti tindu pose kottu barbeku!

heege eshTond hoLeeta ide.. amele nan commentu nin article kinta doDDDDdaagutte.. hey aduu kooda ondu vaividhyate alwaaa?? :-D


@Samarasa ::
hahahahaaha sooooooooper tirgubaaNa!!


@Srikanth ::
"ಭಗವಂತ ನಿನ್ನ ಚೆನ್ನಾಗಿಟ್ಟು ತಪ್ಪು ಮಾಡ್ಬಿಟ್ಟ ಅನ್ಸತ್ತೆ." --- NO NO NO NOOO!!!
ninge sammata illappaaa.. nan precious vote-u ---> no vote for u :-D
bhagavanta chennagi iTTidaane anta summne iddbiDO badlu, aa chennagilde irO situations bagge yochne maaDO kelsa tumba kammi jana maaDOdu!!
ellla stitigaLa balla veeraru aagbeku!!!
vaividhyate irbeku!! :-)
sooooooooooper classs!! classssaagi class togondidya!! :-)nanguuuu ond class plz... kalsteeni naane :-D

Sridhar Raju said...

@samnvayana: yesss..nange jeevna simple aagirbaardhu...jeevna eshT complicate aagirbeko ashToo complicate aagirbeku..illandre majja iralla....but naav jeevanavanna nodo reeethi simple aagirbeku....hope you understood..

@radha: ninge thale sari illa anta opkondyalla...good...keep it up...self appraisal -u is the besht appraisall -u....

@dynamic divya:nin copy cat pada baLake ge nan sammathi illa...goobay neenu...nan thoughts ge nan views ge sammathisidakke thanks -u...nin list -u chennagidhe......eshTe aadroo copy cat neenu -u ;-)....he he he..hey toooraadoke yavaga hogoNa?? am very much eager to tooradu i say ;-)nin comment nalli vaividhyate idhe....adhe nangu bekiddidddu...
Jai karnaataka maathe... :-)

Dynamic Divyaa said...

@Sridhara ::
"nin copy cat pada baLake ge nan sammathi illa..." --- neen sammata koDbeku anta yaaaaaaaaaaaaaaaaaaaaavan keLda.. :)) neen sammata koDlilla andru satya badlaagolla tiLko dumbbbb!!
COPYCAT COPYCAT neenu!!!!

tooraDakka...? :-D heheheeeee
im as eager as u r... bega accessories ready maaDu.. adrallu vaividhyate irli... from kachda local saaraai to sooooper brand... brand gaLaguuu ugdu toooraaDana..
jai andbiDana... sheeghramEva toooraaD praaptirastu!!!! :-D
lalalallllllaaaaaalalalaaaaaaa lalalalalaaaaaaaa ...

Parisarapremi said...

[ಶ್ರೀಧರ] ಒದ್ ಓಡ್ಸೋ ಇವಳನ್ನ.. ಶುದ್ಧ ತರಲೆ!!

Dynamic Divyaa said...

@Parisarapremi ::
NO

NO

NO!!!!