ಒಂದಷ್ಟು ಸಾಲುಗಳು......

Sunday, July 29, 2007

ನನಗೊಂದಷ್ಟು ಬಹಳ ಬಹಳ :-) ಇಷ್ಟವಾದ ಸಾಲುಗಳನ್ನು ಇಲ್ಲಿ ಬರೆದಿದ್ದೇನೆ..

1)ಟಿ.ಎನ್.ಸೀತಾರಾಮರ "ಮನ್ವಂತರ" ಧಾರವಾಹಿಯ title track ಈ ಸಾಲುಗಳು..

"ಮನಸಿನ ಪುಟಗಳ ನಡುವೆ ನೆನಪಿನ ನವಿಲುಗರಿ
ಕಾರ್ಮುಗಿಲ ಅಂಚಿನಲ್ಲಿ ಭರವಸೆಯ ಹೊನ್ನಝರಿ
ಕಣ್ಣೀರೇ ಕಡಲಾಗಿ ಭಾವಗಳೋ ಬರಡಾಗಿ
ಮನದ ಮಡಿಲ ತುಂಬಾ ನೋವಿನಲೆಯ ಬಿಂಬ.."


ನೆನಪನ್ನು ನವಿಲುಗರಿಗೆ ಹೋಲಿಸಿರುವುದು ನನಗೆ ಬಹಳ ಇಷ್ಟವಾಯಿತು..

2)ಟಿ.ಎನ್.ಸೀತಾರಾಮರ ನಿರ್ದೇಶನ ಚಿತ್ರ "ಮತದಾನ" ದ ಒಂದು ಹಾಡು.

"ನಾಯಿ ತಲಿ ಮ್ಯಾಲಿನ ಬುತ್ತಿ ಸಂಸಾರ
ಇದನರಿತು ಅರಿತೂ ಮಂದಿ ಬಿದ್ದಾರ ಹಿಂದ ಬಿದ್ದಾರ.."

3)"ಪ್ರೇಮದ ಕಾಣಿಕೆ" ಚಿತ್ರದ ಅಣ್ಣಾವ್ರ ಈ ಸೂಪರ್ ಹಾಡು..

"ಬಾನಿಗೊಂದು ಎಲ್ಲೆ ಎಲ್ಲಿದೆ..
ನಿನ್ನಾಸೆಗೆಲ್ಲಿ ಕೊನೆಯಿದೆ.
ಏಕೆ ಕನಸು ಕಾಣುವೆ..
ನಿಧಾನಿಸು ನಿಧಾನಿಸು..

ಆಸೆಯೆಂಬ ಬಿಸಿಲುಕುದುರೆ ಏಕೆ ಎರುವೆ
ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ
ಅವನ ನಿಯಮ ಮೀರಿ ಇಲ್ಲಿ ಎನು ಸಾಗದು
ನಾವು ಎಣಿಸಿದಂತೆ ಎನು ನಡೆಯದು
ವಿಷಾದವಾಗಲಿ ವಿನೋದವಾಗಲಿ ಅದೇನೆ ಆಗಲಿ ಅವನೆ ಕಾರಣ..

ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು
ಬಯಸಿದಾಗ ಕಾಣದಿರಿವ ಎರಡು ಮುಖಗಳು
ಹರುಷವೊಂದೆ ಯಾರಿಗುಂಟು ಹೇಳು ಜಗದಲಿ
ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ
ದುರಾಸೆಯೇತಕೆ ನಿರಾಸೆಯೆತಕೆ ಅದೇನೆ ಬಂದರೂ ಅವನ ಕಾಣಿಕೆ.. "


ಒಹ್!! ಎಂತಹ ಅದ್ಬುತ ಸಾಲುಗಳು.... simple yet so meaningful....

4)"ಹೊಂಬಿಸಿಲು" ಚಿತ್ರದ ಈ ಹಾಡು..

"ನೀರ ಬಿಟ್ಟು ನೆಲದ ಮೇಲೆ ದೊಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಸಾಗದು.
ನಿನ್ನ ಬಿಟ್ಟು ನನ್ನ ನನ್ನ ಬಿಟ್ಟು ನಿನ್ನ ಜೀವನಾ ಸಾಗದು

ಲೋಕದಲ್ಲಿ ಗಂಡು ಹೆಣ್ಣಿಗಾಸರೆ
ಆದರಿಲ್ಲಿ ನಾನು ನಿನ್ನ ಕೈಸೆರೆ
ಕೂಡಿ ನಲಿವ ಆಸೆ ಮನದಿ ಕಾಡಿದೆ
ಹಿತವು ಎಲ್ಲಿ ನಾವು ಬೇರೆ ಆದರೆ.."



5) "ಬಂಧನ" ಚಿತ್ರದ ಈ ಸಾಲುಗಳು.

"ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ
ಸಿಂಧೂರ ಬಿಂದು ನಗಲಮ್ಮ ಎಂದು
ಎಂದೆಂದು ಇರಲಮ್ಮ ಈ ದಿವ್ಯ ಬಂಧ

ತುಟಿ ಮೇಲೆ ಬಂದಂತ ಮಾತೊಂದೆ ಒಂದು
ಎದೆಯಲ್ಲಿ ಉಳಿದದ್ದು ಮುನ್ನೂರ ಒಂದು.."

ವಿಷ್ಣುವರ್ಧನ್ ರವರ ಅಭಿನಯ ಈ ಹಾಡಿನಲ್ಲಿ ಅಮೋಘ..

6)"ಮುಂಗಾರು ಮಳೆ" ಚಿತ್ರದ ಈ ಸಾಲುಗಳು..

"ಅನಿಸುತಿದೆ ಯಾಕೊ ಇಂದು
ನೀನೇನೆ ನನ್ನವಳೆಂದು
ಮಾಯದ ಲೋಕದಿಂದ
ನನಗಾಗಿ ಬಂದವಳೆಂದು
ಅಹಾ ಎಂತ ಮಧುರ ಯಾತನೆ
ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೆ..

ತುಟಿಗಳ ಹೂವಲಿ ಆದದ ಮಾತಿನ ಸಿಹಿ ಇದೆ
ಮನಸಿನ ಪುಟದಲಿ ಕೇವಲ ನಿನ್ನದೆ ಸಹಿ ಇದೆ
ಹಣೆಯಲಿ ಬರೆಯದ ನಿನ್ನ ಹೆಸರ ಹೃದಯದಿ ನಾನೆ ಕೊರೆದಿರುವೆ
ನಿನಗುಂಟೆ ಇದರ ಕಲ್ಪನೆ.

ನನ್ನ ಹೆಸರ ಕೂಗೆ ಒಮ್ಮೆ ಹಾಗೆ ಸುಮ್ಮನೇ..."

7)"ಅಮೃತಧಾರೆ" ಚಿತ್ರದ ಈ ಮೂರು ಸಾಲುಗಳು

" ನೀ ಅಮೃತಧಾರೆ ಕೋಟಿ ಜನುಮ ಜೊತೆಗಾತಿ
ನೀ ಅಮೃತಧಾರೆ ಇಹಕು ಪರಕು ಸಂಗಾತಿ
ನೀ ಇಲ್ಲವಾದರೆ ನಾ ಹೇಗೆ ಬಾಳಲಿ.."

8)"ನವತಾರೆ" ಚಿತ್ರದ ಹಂಸಲೇಖರ ಸಂಗೀತ-ಸಾಹಿತ್ಯ ವಿರುವ ಸೊಗಸಾದ ಸಾಲುಗಳು

"ನೀರಿನಂತೆ ನಿರ್ಮಲ
ಹೂವಿನಂತೆ ಕೋಮಲ
ಮಂಜಿನಂತೆ ಶೀತಲ
ಹಾಡಿನಂತ ಹಂಬಲ
ಬಾನಿನಂತೆ ನಿಶ್ಚಲ

ಎಳೆಯ ಬಿಸಿಲಲಿ ಮಳೆಯ ಹನಿಯಲಿ ಪ್ರೇಮ
ಎದೆಯ ಗೂಡಲಿ ಮದುರ ನೆನಪಲಿ ಪ್ರೇಮ
ಪ್ರೇಮ ಅಳಿಯದು ಪ್ರೇಮ ಮರೆಯದು ಎಂದು ಭೂಮಿಯಲಿ
ಭೂಮಿ ತಿರುಗಲು ಜೀವ ಉಳಿಯಲು ಪ್ರೇಮ ನೆಲೆಸಿರಲಿ.."

9) ಸಿ.ಅಶ್ವತ್ ರವರ ಕಂಠಸಿರಿಯ ಈ ಸಾಲುಗಳು

"ನನ್ನವಳು ಈ ನನ್ನಾಕೆ
ಹರಿಯುವ ನದಿಯಲ್ಲ ಸರಿವ ಸರಿತೆಯಲ್ಲ
ಇವಳೊಂದು ಪುಟ್ಟ ಕೊಳ
ನನ್ನ ಬಾಳಿನ ಜೀವ ಜಲ..."

10)"ಯುಗಪುರುಷ" ಚಿತ್ರದ ಸಾಲುಗಳು...

"ಯಾವುದೋ ಈ ಬೊಂಬೆ ಯಾವುದೋ
ಊರ್ವಶಿಯ ಕುಲವೊ ಮೇನಕೆಯ ಚೆಲುವೊ
ಯಾವುದೋ ಈ ಅಂದ ಯಾವುದೋ
ಬೇಲೂರಿನ ಶಿಲೆಯೊ ಶಾಂತಲೆಯ ಕಲೆಯೊ
ಕಾಳಿದಾಸನ ಪ್ರೇಮಗೀತೆಯೊ ಕಾಳಿದಾಸನ ಪ್ರೇಮಗೀತೆಯೊ

ನೀನ್ಯಾರೊ ತಿಳಿಯದಿದ್ದರೂ ನನಗೇನೇ ರಾಧೆ..
ಕಲ್ಲಾಗಿ ನಾನು ನಿಂತರೂ ಕರಗಿ ನೀರಾಧೆ.. ಏಕಾದೆ..
ಈ ಹಾಡು ನಿನ್ನದಾದರೂ ರಾಗ ನಾನಾದೆ
ಯಾರೇನೇ ಹೇಳದಿದ್ದರು ನನಗೆ ಜೊತೆಯಾದೆ..ಹೇಗಾದೆ "


ತಕ್ಷಣಕ್ಕೆ ಹೊಳೆದಿದ್ದು ಇಲ್ಲಿ ದಾಖಲಿಸಿರುವೆ.... ಇನ್ನು ಸಾಕಷ್ಟಿವೆ..ಮುಂದೆ ಬರೆಯುತ್ತೇನೆ... ನನಗೆ ಇಷ್ಟವಾದದ್ದು ನಿಮಗೂ ಇಷ್ಟವಾದಲ್ಲಿ ಒಂಡೆರಡು ಸಾಲು ಬರೆಯಿರಿ.... :-) ನಮಸ್ಕಾರ.. ಶುಭ ದಿನ ನಿಮ್ಮದಾಗಲಿ..

11 comments:

Parisarapremi said...

ಎರಡು ಸಾಲು ಬರೆಯಬೇಕೇ?? ಯಪ್ಪಾ..

ನನಗೆ ನಿರ್ಮಲ ಇಷ್ಟವಾಗಲಿಲ್ಲ. ಮುಂಗಾರು ಮಳೆ, ಅಮೃತಧಾರೆ ಕೇವಲ ಓಕೆ ಎನಿಸಿತು. ಅಣ್ಣೋರ್ ಹಾಡು ಕ್ಲಾಸಿಕ್! ಮಿಕ್ಕಿದ್ದೆಲ್ಲಾ ಸೊಗಸಾಗಿದೆ. ನನ್ನ ಅನಿಸಿಕೆ ಇಷ್ಟೇ!

ಇಲ್ಲಿ ನಿನ್ ಫೋಟೋ ಯಾಕಪ್ಪಾ?? ;-)

Sridhar Raju said...

he he he...forceful aagi comment haakskonde henge ;-)... ninge nirmala ishta aagalla bidu ;-)...

nanna favourite haadgaLallva..adke swalpa chamak aagirli antha nan photo haakiddini ;-) soooper pose allva... :-)

Samarasa said...

ondhashtu salugulu annodu title adre elliro hadugalalli 3 hadugaladu lyrics chennagide olidedella music chennagide ashte

Sridhar Raju said...

[Rashmi]: Nimma commentgaLige dhanyavaadha... :-) heege commentisuttiri ;-)

Anonymous said...

ಸಾಕ ೨ ಸಾಲು????
ನೀವು ನಿಮ್ಮ ಅಭಿರುಚಿಯನ್ನು ಚೆನ್ನಾಗಿ ಜೋಡಿಸಿ,ಆರಿಸಿಕೊಂಡು ಬರೆದಿದ್ದಿರಾ.
1)ಟಿ.ಎನ್.ಸೀತಾರಾಮರ "ಮನ್ವಂತರ" ಧಾರವಾಹಿಯ title track ಈ ಸಾಲುಗಳು..

"ಮನಸಿನ ಪುಟಗಳ ನಡುವೆ ನೆನಪಿನ ನವಿಲುಗರಿ
ಕಾರ್ಮುಗಿಲ ಅಂಚಿನಲ್ಲಿ ಭರವಸೆಯ ಹೊನ್ನಝರಿ
ಕಣ್ಣೀರೇ ಕಡಲಾಗಿ ಭಾವಗಳೋ ಬರಡಾಗಿ
ಮನದ ಮಡಿಲ ತುಂಬಾ ನೋವಿನಲೆಯ ಬಿಂಬ.."

ಈ ಮೇಲಿನ ಸಾಲುಗಳಲ್ಲಿ ಮನಸಿನ ಅಂಗಳಕ್ಕೆ ಮನಕ್ಕೆ ಮುದನೀಡುವ ನವಿರೇಳಿಸುವ ನವಿಲುಗರಿಯ ಹೋಲಿಕೆ ನಿಜವಾಗಿಯು ಅರ್ಥಪೂರ್ಣ.

೨)ಮತದಾನ ಒಳ್ಳೆಯ ಚಿತ್ರ..

೩)ಬಾನಿಗೆ ಸರಿಸಮಾನವೇ ಇಲ್ಲವೆಂದು ಅನೇಕ ಕವಿಗಳು ವಿಷ್ಲೇಶಿಸಿದ್ದಾರೆ .ಹಾಗೆ ಮಾನವನ ಆಸೆಯು ಸಹ ಆದರೆ ಹೆಣ್ಣಿನ ಆಸೆಗಳಂತು ಮುಗಿಲೆತ್ತರಕ್ಕಿರುತ್ತದೆ ಮುಗಿಲಿಗೆ ಕೊನೆಯೇ ಇಲ್ಲ.

೪) ಹೊಂಬಿಸಿಲು ಸಾಹಿತ್ಯ ತುಂಬ ಚೆನ್ನಾಗಿದೆ.
೫)"ಬಂಧನ" ಚಿತ್ರದ ಈ ಸಾಲುಗಳು.
its my love u are my love.....(this is how it starts)
"ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ
ಸಿಂಧೂರ ಬಿಂದು ನಗಲಮ್ಮ ಎಂದು
ಎಂದೆಂದು ಇರಲಮ್ಮ ಈ ದಿವ್ಯ ಬಂಧ...

ಒಲವೆಂಬ ಲತೆಯು ತಂದಂತ ಹುವ್ವು
ಮುಡಿಯೇರಿ ನಲಿವು ಮುಡಿಜಾರೇ ನೋವು
ಕೈಗೂಡಿದಾಗ ಕಂಡಂತ ಕನಸು
ಅದೃಷ್ಟದಾಟ ತಂದಂತ ಸೊಗಸು
ಪ್ರೀತಿ ನಗುತಿರಲಿ ಬಾಳು ಬೆಳಗಿರಲಿ
ನಿನೆಂದು ಇರಬೇಕು ಸಂತೋಷದಿಂದ..

ತುಟಿ ಮೇಲೆ ಬಂದಂತ ಮಾತೊಂದೆ ಒಂದು
ಎದೆಯಲ್ಲಿ ಉಳಿದಿದ್ದು ಮುನ್ನೂರ ಒಂದು.."
ಮೂರುಗಂಟಲ್ಲಿ ಈ ಬಾಳನಂಟು
ಕೇಳಿ ಪಡೆದಾಗ ಸಂತೋಷವುಂಟು
ನಿನ್ನ ಹರುಷದಲಿ ನನ್ನ ಉಸಿರಿರಲಿ
ನನ್ನೆಲ್ಲ ಹಾರೈಕೆ ಈ ಹಾಡಿನಿಂದ...

ವಿಷ್ಣುವರ್ಧನರವರ ಅಭಿನಯ ಮತ್ತು ಅಭಿನಯದಲ್ಲಿ ತೋರುವ ತ್ಯಾಗ ತುಂಬಾ ಮನಮುಟ್ಟುವಂತದು ಈ ಹಾಡಿನಲ್ಲಿ ಅಮೋಘ..

೬))"ಅಮೃತಧಾರೆ" ಚಿತ್ರದ ಈ ಮೂರು ಸಾಲುಗಳು

" ನೀ ಅಮೃತಧಾರೆ ಕೋಟಿ ಜನುಮ ಜೊತೆಗಾತಿ
ನೀ ಅಮೃತಧಾರೆ ಇಹಕು ಪರಕು ಸಂಗಾತಿ
ನೀ ಇಲ್ಲವಾದರೆ ನಾ ಹೇಗೆ ಬಾಳಲಿ.."
ಅಮೃತಧಾರೆ ಒಂದು ಅಪರೂಪವಾದ ಚಿತ್ರ ಅದರಲ್ಲಿ ಪ್ರತಿಯೊಂದು ಪದವು ಒಲವಿನಿಂದ ಕೂಡಿದೆ.

ಇನ್ನು ಕೊನೆಯದಾಗಿ

"ನನ್ನವಳು ಈ ನನ್ನಾಕೆ
ಹರಿಯುವ ನದಿಯಲ್ಲ ಸರಿವ ಸರಿತೆಯಲ್ಲ
ಇವಳೊಂದು ಪುಟ್ಟ ಕೊಳ
ನನ್ನ ಬಾಳಿನ ಜೀವ ಜಲ..."

ಇದು ತುಂಬ ಸಿಂಪಲ್ಆದರು ಅದರಲ್ಲಿ ಅಡಗಿರುವ ಭಾವ ಆಗಾಧವಾಗಿದೆ.

Srinivasa Rajan (Aniruddha Bhattaraka) said...

:) ನಿನ್ನ ಹಾಡುಗಳ ಪಟ್ಟಿ ಬಹಳ ಚೆನ್ನಾಗಿದೆ. ಅನೇಕವು ನನಗೂ ಇಷ್ಟವಾದುವೇ! ನನಗೆ ಹಿಡಿಸಿದ ಇನ್ನೂ ಕೆಲವು ಹಾಡುಗಳು ಇಂತಿವೆ:

೧) 'ಮಿಂಚು' ಧಾರಾವಾಹಿಯ ಶೀರ್ಷಿಕೆ ಗೀತೆಯ ಸಾಲು-

"ಸೋಲಿನಲ್ಲೂ ಎಲ್ಲ ಮೀರಿ ಮಿಂಚಿ ನಿಂತೆಯ?
ಬೆಳಕಿನಲ್ಲೂ ದೂರ ನಿಂತು ನೆರಳ ಕಂಡೆಯ?"

೨) 'ಜೀವನದಿ' ಚಿತ್ರದ ಹಾಡು-

"ಕನ್ನಡ ನಾಡಿನ ಜೀವನದಿ ಕಾವೇರಿ.. ಓ ಜೀವನದಿ ಕಾವೇರಿ...
ಅಂದವ ನೀಡುವ ದೇವನದಿ ಈ ಒಯ್ಯಾರಿ.. ಓ ದೇವನದಿ, ಒಯ್ಯಾರಿ..."

೩) 'ಮಹಾಕ್ಷತ್ರಿಯ' ಚಿತ್ರದ ಹಾಡು-

"ಈ ಭೂಮಿ ಬಣ್ಣದ ಬುಗುರಿ, ನೀನಿದರ ಚಾಟಿ ಕಣೋ..."
...........
"ನಿಂತಾಗ ಬುಗುರಿಯ ಆಟ, ಎಲ್ಲಾರು ಒಂದೇ ಓಟ.. ಕಾಲ ಕ್ಷಣಿಕ ಕಣೋ..."

೪) 'ಹೊಂಬಿಸಿಲು' ಚಿತ್ರದಿಂದ-

"ಹೂವಿಂದ ಹೂವಿಗೆ ಹಾರುವ ದುಂಬಿ, ಏನನು ಹಾಡುತಿಹೆ? ನೀ ಏನನು ಹಾಡುತಿಹೆ?
ಹೂವಿನ ಕೋಮಲ ಭಾವನೆ ಕೆಣಕಿ ಏತಕೆ ಕಾಡುತಿಹೆ ನೀ?.."

೫) ಬೇಂದ್ರೆಯವರ ಕವನ, ಅಶ್ವತ್ಥರ ಕಂಠಸಿರಿ-

"ನೀ ಹಿಂಗ ನೋಡಬ್ಯಾಡ ನನ್ನ... ನೀ ಹಿಂಗ ನೋಡಿದರ ನನ್ನ, ತಿರುಗಿ ನಾ ಹ್ಯಾಂಗ ನೋಡಲಿ ನಿನ್ನ?.."

೬) ದಾಸರ ರಚನೆ-

"ಮನೋ-ವಾಕ್-ಕಾಯದಿಂದ ಮಾಡಿದ ಕರ್ಮವನೆಲ್ಲ,
ದಾನವಾಂತಕ, ನಿನಗೆ ಧಾರೆ ಎರೆದೆ...
ಏನು ಮಾಡಿದರೇನು? ಪ್ರಾಣ ನಿನ್ನದು ಸ್ವಾಮಿ!
ಶ್ರೀನಾಥ ಪುರಂದರ ವಿಠ್ಠಲ ದಾಸನ ಮೇಲೆ ಇನ್ನೂ ದಯ ಬಾರದೆ?..."

೭) ಡಾ||ಕೆ.ಎಸ್.ನಿಸಾರ್ ಅಹ್ಮದ್ ಅವರ ರಚನೆ-

"ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ,
ಸಹ್ಯಾದ್ರಿಯ ಲೋಹದಲಿರ ಉತ್ತುಂಗದ ನಿಲುಕಿನಲ್ಲಿ,
ನಿತ್ಯ ಹರಿದ್ವರ್ಣವನದ ತೇಗ-ಗಂಧ ತರುಗಳಲ್ಲಿ
ನಿತ್ಯೋತ್ಸವ, ತಾಯಿ ನಿತ್ಯೋತ್ಸವ.."

೮) ಹಂಸಲೇಖರ ಪ್ರಖ್ಯಾತ ರಚನೆ-

"ದೇವರು ಹೊಸೆದ ಪ್ರೇಮದ ದಾರ,
ದಾರದಿ ಬೆಸೆದ ಋತುಗಳ ಹಾರ!
ಋತುಗಳ ಜೊತೆಗೆ ಪ್ರೇಮದ ಪಯಣ,
ಮುಗಿಯದು ಮುತ್ತಿನ ಹಾರದ ಕವನ..."

೯) ಕಸ್ತೂರಿ ನಿವಾಸದಿಂದ-

"ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ!
ಸೂತ್ರವ ಹರಿದ ಬೊಂಬೆಯ ಮುರಿದು ಮಣ್ಣಾಗಿಸಿದ!...."

೧೦) 'ಗಾಳಿಮಾತು' ಚಿತ್ರದ ಹಾಡು-

"ನಗಿಸಲು ನೀನು ನಗುವೆನು ನಾನು,
ನಾನೊಂದು ಬೊಂಬೆಯು,
ನೀ ಸೂತ್ರಧಾರಿ, ನಿನ್ನ ಎದಿರು ನಾ ಪಾತ್ರಧಾರಿ..."

ಇನ್ನೂ ಹೀಗೆಯೇ ಬೆಳೆಯುತ್ತ ಹೋಗುತ್ತದೆ. ಸದ್ಯಕ್ಕೆ ಇಷ್ಟು ಸಾಕು ಎಂದುಕೊಳ್ಳುತ್ತೇನೆ.. :)

Sridhar Raju said...

[Samnvayaana]: bandhana chitrada full haadu nodi full santhosha aaythu :-)

[Gandabherunda]: Nimma mecchina saalugaLu saha sogasaagive..adaralli nange istha aadaddu saha bahaLive... innu add maadtaane irthini "ondashtu saalugaLu " list ge.. :-)

Anonymous said...

geLeyare,
kannaDada para chintane, charche, hot discussions
ella ee hosa blog alloo nadeetide. illoo bhAgavahisONa banni !

http://enguru.blogspot.com

- KattEvu kannaDada naaDa, kai joDisu baara !

Anonymous said...

long and greasy. I dare say, some of the things are a bit too philosphical! :)
-----------------------------------
The first website to do English-kannada transliteration with Engish words options. No caps worries.
Really cool!
http://quillpad.in/kannada/

Srikanth - ಶ್ರೀಕಾಂತ said...

oLLe collection

ನನಗೆ ಇಷ್ಟವಾದದ್ದು ನಿಮಗೂ ಇಷ್ಟವಾದಲ್ಲಿ ಒಂಡೆರಡು ಸಾಲು ಬರೆಯಿರಿ - ishta aagde idroo comment bareeteevi

ನಮಸ್ಕಾರ.. ಶುಭ ದಿನ ನಿಮ್ಮದಾಗಲಿ - radio mirchi li RJ gaLu heLdangide :-)

Anonymous said...

ನನ್ನ ಮನಸನ್ನು ಹಗುರ ಮಾಡಿತು, ನಿಮ್ಮ ಯಿ ಬ್ಲಾಗ್.