ಹೀಗೊಂದು ನಿದ್ದೆ ಪ್ರಹಸನ

Thursday, June 28, 2007

ನಾನು ಅರುಣ ಮೈಸೂರಿಗೆ ಹೋಗಿ ಶ್ರೀನಿವಾಸನ ಜೊತೆಗೂಡಿ ಮೈಸೂರನ್ನು ಸುತ್ತಿ ಬರೋಣವೆಂದು ನಿರ್ಧರಿಸಿದೆವು. ಅರುಣ್ ಮೈಸೂರಿಗೆ ಟ್ರೈನ್ ನಲ್ಲಿ ಹೋಗೋಣವೆಂದ..ನಾನು ಟ್ರೈನ್ ನಲ್ಲಿ ಪಯಣಿಸಿ ಬಹಳ ಕಾಲವಾಗಿತ್ತು ಸರಿಸುಮಾರು ೬ ವರ್ಷ.. ಸರಿಯೆಂದು ಹೊರಟೆವು.....ಮಾರ್ಗಮಧ್ಯಲ್ಲಿ ಸಾಕಷ್ಟು ಫೋಟೋಗಳನ್ನು ಕ್ಲಿಕ್ಕಿಸಿದೆವು. ನಾವು ಮನೆ ಬಿಟ್ಟಾಗ ಒಂದು ಗಂಟೆ....ಮೈಸೂರನ್ನು ತಲುಪಿದಾಗ 7 ಗಂಟೆ .ಇದೆಲ್ಲ ಒತ್ತಟ್ಟಿಗಿರಲಿ.....ಹೀಗೆ ತೆವಳಿಕೊಂಡು ಮೈಸೂರಿನ ಶ್ರೀನಿವಾಸನ ಮನೆಯನ್ನು ಸೇರಿದೆವು.. ವಿವೇಕನು ಸಹ ನಮ್ಮ ಜೊತೆಗೂಡಿದ, ನನಗೆ ಆಗಲೇ ನಿದ್ದೆ ಹತ್ತುತ್ತಿತ್ತು..

ನಾನು ದಿಂಬಿಗೆ ತಲೆ ಇಟ್ಟೆನೋ ಇಲ್ಲವೊ ಎಲ್ಲಾರೂ ಶುರು ಮಾಡಿದರು.."ಏ ಥೂ!!ನಿನ್ನ ನಾಚಿಕೆ ಆಗಲ್ವ..ಇಷ್ಟ್ ಬೇಗ ನಿದ್ದೆ ಮಾಡ್ತ್ಯ?? ಇಲ್ಲಿಗೆ ಬಂದದ್ದು ನಿದ್ದೆ ಮಾಡಕ್ಕಾ??".....ಹೀಗೆ ಸಾಗುತ್ತಿತ್ತು ಅರುಣನ ಹಾಗೂ ಶ್ರೀನಿವಾಸನ ಪ್ರಶ್ನಾವಳಿ. ಶ್ರೀನಿವಾಸ ನಾನು ನಿದ್ದೆ ಗೆ ಶರಣಾಗಬಾರದೆಂದು.. ನನ್ನ ಕಾಲು ಹಿಡಿದೆಳೆಯುತ್ತಿದ್ದ... ಕೊನೆಗೆ ಹೇಳಿದೆ "ಕಾಫಿ ಮಾಡ್ಕೊಂಡ್ ಬಾ ಮಾರಯ"..ಎದ್ದೇಳ್ತೀನಿ.... ಅದಕ್ಕೆ ಮನೆಯಲ್ಲಿ ಹಾಲಿಲ್ಲವೆಂದೊ ಕಾಫಿ ಸಾಧ್ಯವಿಲ್ಲವೆಂದೊ....ಬೇಕಿದ್ದರೆ black tea ಮಾಡ್ಕೊಡ್ತೀನಿ ಅಂದ...ಎನೋ ಒಂದು ಮಾಡ್ಕೊಂಡ್ ಬಾಪ್ಪ... ಆಂದು ಎದ್ದು ಕೂರಲು ಪ್ರಯತ್ನಿಸಿದೆ.

ಮನಸ್ಸಿನ್ನಲ್ಲೇ ಅರುಣನಿಗೆ ಹಾಗು ಶ್ರೀನಿವಾಸನಿಗೆ ಶಪಿಸುತ್ತಿದ್ದೆ...." ಚೆ ಚೆ ಸರಿಯಾಗಿ ನಿದ್ದೆ ಮಾಡಕ್ಕೂ ಬಿಡ್ತಿಲ್ಲ, ಅದೇನು ನಿದ್ದೆ ಕೆಡ್ತಾರೋ ಪಾ ಜನ". ನನ್ನ ಸ್ತಿತಿಯನ್ನು ಕಂಡು ನಾನೇ ಹಲುಬಿಕೊಳ್ಳುತ್ತಿದ್ದೆ.....
ನನಗೆ ನಿದ್ದೆ ಹೋದ ಕೂಡಲೇ...ಯಾರದರೂ ಕರೆದರೂ ಸಾಕು ಎಚ್ಚರವಾಗಿಬಿಡುತ್ತದೆ.. ಎಲ್ಲರೂ ನನ್ನ ಹಾಗೆಯೇ ಇರುತ್ತಾರೆಂಬ ಭಾವನೆಯಲ್ಲಿದ್ದೆ, ಆದರೆ ಅದರ ಮಾರನೆಯ ದಿನದ ಸಂಜೆಯ ಬೆಳವಣಿಗೆಗಳನ್ನು ನೋಡಿ ಆ ನನ್ನ ಅರಿವಿಕೆಯನ್ನು ಕಿತ್ತೆಸೆದೆ....

ಅಂದು ರಾತ್ರಿ ಬಹಳಷ್ಟು ಹರಟಿದೆವು....ಎಲ್ಲರೂ ಮಲಗಿದಾಗ ಸುಮಾರು 3:30 ಇರಬಹುದು

ಮತ್ತೆ ಬೆಳಿಗ್ಗೆ ಶ್ರೀನಿವಾಸ ಬೇಗನೆ ಎದ್ದು ತನ್ನ ಸ್ನಾನಾದಿ ಕಾರ್ಯಗಳನ್ನು ಮುಗಿಸಿ ಮತ್ತೆ ನನ್ನ ಎಬ್ಬಿಸುವುದಕ್ಕೆ ಶುರು ಮಾಡಿದ್ದ..ಜಗ್ಗಾಡೋದು, ಎಳೆದಾಡೋದು ಹೀಗೆ........ಸಾಕಪ್ಪಾ ಇವನ ಹಿಂಸೆ ಯೆಂದು ಎದ್ದು ದೇಹವನ್ನು ಶುಚಿ ಮಾಡಿಕೊಂಡು ಬಂದೆ.........

ನಾ ಬರುವ ಹೊತ್ತಿಗೆ..ಶ್ರೀನಿವಾಸ ಕುರ್ಚಿ ಮೇಲೆ ಕುಳಿತಲ್ಲಿಯೇ ನಿದ್ರಿಸಲು ಶುರು ಮಾಡಿದ್ದ....ಪಾಪ ರಾತ್ರಿ ತುಂಬಾ ಹೊತ್ತು ಎದ್ದಿದ್ದ ಬೆಳಿಗ್ಗೇನೆ ಬೇಗ ಎದ್ದಿದ್ದಾನೆ ಅಂದು ಕೊಳ್ಳುತ್ತಿದ್ದೆ..

ಅವನು ನಿದ್ರಿಸುವ ಭಂಗಿ ಬಹಳ ವಿನೋದದಾಯಕವಾಗಿತ್ತು, comedy ;-)

ನಾನು ಮೆಲ್ಲನೆ ಅವನ ಬಳಿ ಹೋಗಿ ನನ್ನ ಮೊಬೈಲ್ ಅನ್ನು silent mode ಗೆ ಹಾಕಿ ಸರಿಯಾಗಿ zoom focus ಮಾಡಿ ಫೊಟೊ ಒಂದನ್ನು ಕ್ಲಿಕ್ಕಿಸಿದೆ ,ಇಷ್ಟೆಲ್ಲ ಜಾಗರೂಕನಾಗಿ ತೆಗೆದುದ್ದರ ಉದ್ದೇಶ..ಅವನಿಗೆ ಎಲ್ಲಿ ಎಚ್ಚರವಾಗಿಬಿಡುತ್ತದೋ ಎಂಬ ನನ್ನ ಅಳುಕು.... :-)

ಅಂದು ಚಾಮುಂಡಿ ಬೆಟ್ಟ, ನಂಜನಗೂಡು ಎಲ್ಲವನ್ನು ಸುತ್ತಿ ಹೈರಾಣಗಿ ದಣಿದು ಮನೆಗೆ ವಾಪಸ್ಸದೆವು. ಶ್ರೇಯಸ್ ಕೂಡ ನಮ್ಮ ಜೊತೆಗೂಡಿದ್ದ , ಸುಮಾರು ಒಂದುಗಂಟೆ ಹರಟಿ ಅವನು ಬೆಂಗಳೂರಿನ ಹಾದಿಯನ್ನು ಹಿಡಿದ ತನ್ನ ಹೊಸ Bajaj Pulsar 200cc ಯನ್ನು ಹತ್ತಿ..............................

ಅವನು ಹೊರಟ ನಂತರ ಒಬ್ಬಬ್ಬರಾಗಿ ನಿದ್ದೆಗೆ ಜಾರಿದರು....ಶ್ರೀನಿವಾಸ ಒಂದು ಕಡೆ, ಅರುಣ ಒಂದು ಕಡೆ... ನಾನು ಅಲ್ಲೇ ಬಿದ್ಕೊಂಡೆ.....ಮುಂದೆ ನಡೆಯುವ ಘಟನಾವಳಿಗಳ ಅರಿವಿಲ್ಲದೆಯೇ!!.. ನಿದ್ದೆಗೆ ಜಾರಿದ್ದೆ. ಅದೇಕೂ ಏನೋ ನಿದಿರಾದೇವಿಯು ನನಗೆ ಒಲಿಯಲಿಲ್ಲ..ಸುಮಾರು ಒಂದು ಗಂಟೆ ಆಗಿರಬಹುದು..ಎಚ್ಚೆತ್ತುಬಿಟ್ಟೆ. ನನಗೆ ಸಾಧಾರಣವಾಗಿ ಮಧ್ಯಾಹ್ನ ಸಂಜೆಗಳಂದು ನಿದ್ರೆ ಬರುವುದಿಲ್ಲ.. ಈವರೀರ್ವರೊ ಲೋಕದ ಪರಿವೆ ಮರೆತು "ಬಸೋ" ಎಂದು ನಿದ್ದೆ ಹೊಡೀತಿದ್ರು.............

ಎದ್ದು ಕುಳಿತು ಟೀವಿ ನೋಡಲು ಆರಂಭಿಸಿದೆ.. ಒಂದಷ್ಟು ಹಾಡುಗಳು ನೋಡುತ್ತ timepass ಮಾಡುತ್ತಲಿದ್ದೆ, Bore ಆಗಕ್ಕೆ ಶುರು ಆಯಿತು, ಒಂದುಸಲ ಕೂಗಿದೆ....ಶ್ರೀನಿವಾಸ 5:30 ಆಯ್ತು ಎದ್ದೇಳೊ...ಅಂತ..ಉಹುಂ!! sound -e ಇಲ್ಲಾ.. ಅರುಣನಿಗೆ ಹೇಳಿದೆ , ಅವನು 10ನಿಮಿಷ ರಾಜ..ಎದ್ಬಿಡ್ತೀನಿ..ಸರಿ ಸರಿ..ಅಂದುಕೊಂಡು ಸುಮ್ಮನಾದೆ...

System ON ಮಾಡಿದೆ....ಪಾಪಿಷ್ಟ ಶ್ರೀನಿವಾಸ System ಗೆ password ಇಟ್ಟಿದ್ದ, ಒಂದಷ್ಟು try ಮಾಡಿದೆ, work ಆಗ್ಲಿಲ್ಲ.... ಎಬ್ಬಿಸಲು ಮನಸಾಗಲಿಲ್ಲ!!!....ನನಗೆ ಮನಸಿದ್ದರೂ ಅವನು ಎಳುತ್ತಿರಲಿಲ್ಲ..!!!. ಅಂದು ನನ್ನ ಗ್ರಹಗತಿ ಸಂಪೂರ್ಣವಾಗಿ ಕೆಟ್ಟಿತ್ತೆಂದು ತೋರಿ ಬರುತ್ತದೆ, current ಹೋಯಿತು.. ಪೇಚಿಗೆ ಬಿದ್ದು ಮತ್ತೆ ಎಬ್ಬಿಸಲು ಅನುವಾದೆ. ಅರುಣ್ ೧೦ ನಿಮಿಷ ೧೦ ನಿಮಿಷ ಅನ್ನುತ್ತಲೇ ಇದ್ದ....ಶ್ರೀನಿವಾಸನ ಕಡೆ ಇಂದ ಮಾತ್ರ sound ಇಲ್ಲ, ಅಯ್ಯೊ ಕರ್ಮವೇ ಎಂದು ನನ್ನನ್ನು ನಾನೆ ಹಳಿದುಕೊಳ್ಳುತ್ತ.. ಗೆಳೆಯರಿಗೆ SMS ಮಾಡಲು ಶುರುಮಾಡಿದೆ. ಸೋಮ ನನ್ನು ಬಿಟ್ಟು ಬೆರೆ ಯಾರೂ reply ಅತ್ತಲಿಂದ ಇತ್ಲಾಗೆ ಇತ್ತಲಿಂದ ಅತ್ಲಾಗೆ ಒಡಾಡುತ್ತಿದ್ದೆ. ನನಗೆ ಅನ್ನಿಸುತಿತ್ತು ಪರಿಸ್ಥಿತಿ ಗಂಭೀರವಾಗುತ್ತಿದೆ ಎಂದು..ಏನಾದರೊಂದು ಮಾಡಲೇಬೇಕು ಎಂದು , ಹಸಿವಾಗುತಿತ್ತು..ಕಾಫಿ ಮಾಡೋಣವೆಂದರೆ ಹಾಲಿಲ್ಲ ಪಕ್ಕನೆ ಒಂದು idea ಹೊಳೀತು ನನ್ನ ಮೊಬೈಲ್ ನಲ್ಲಿ alarm set ಮಾಡಿ ಹೊರಟೆ....ಇಬ್ಬರಿಗೂ ಎಚ್ಚರ ಆಗುತ್ತೆ ಅಂತ ಭಾವಿಸಿ set ಮಾಡಿ ನಾನು ಮಹಡಿ ಮೇಲೆ ಹೋಗಿಬಿಟ್ಟೆ. ಮೇಲೆ ಹೋಗಿ ನನಗೆ ನಾನೆ "ಶಬ್ಬಾಸ್ ಗಿರಿ " ಕೊಟ್ಟುಕೊಳ್ಳುತ್ತಲಿದ್ದೆ .ಈ ಪ್ಲಾನ್ 100% successful ಅಂತ.............

5 ನಿಮಿಷದ ತರುವಾಯ ಇಳಿದು ಬಂದೆ ನೋಡಿದರೆ ಎನೊಂದು ಆಗಿಲ್ಲವೆಂಬಂತೆ ಇಬ್ಬರು ಇನ್ನು ಮಲಗಿದ್ದಾರೆ. ನನಗೆ ಆಶ್ಚರ್ಯ.. ಅರುಣ್ ಅಂದ ಕೂಗಿದರೆ..ಆತ "ನೀನು alarm ಇಟ್ಟಿದ್ದು, ಅದಾಗದೆ ನಿಂತು ಹೋಯಿತು ಅನ್ಸುತ್ತೆ" ಅಂದ..

ನನಗೆ ಕಣ್ಣಾಲಿಗಳು ತುಂಬಿ ಬರುವುದೊಂದು ಬಾಕಿ ಇತ್ತು..... ನನ್ನ ತಾಳ್ಮೆ ಹಾರಿ ಹೋಗಿತ್ತು..

"ಲೋ ಏದ್ದೇಳೊ ಹೋಗೋಣ..ನನಗೆ ಹಸಿವಾಗುತ್ತಿದೆ.." ಸರಿ ಸರಿ ಹೋಗೋಣವಂತೆ....ಶ್ರೀನಿವಾಸನನ್ನು ಎಬ್ಬಿಸು ಅಂದ,
ಮೈಮೇಲೆ ಜಿರಲೆ ಬಿದ್ದವನಂತಾಗಿ....ಲೋ ಆಗಲ್ಲಪ್ಪಾ ನೀನೇ ನೋಡ್ಕೋ ಅವ್ನನ್ನ ಅಂದುಬಿಟ್ಟೆ, ನೋಡು ನೀನು ಹೂ! ಅಂದರೆ ಒಂದು ಚೆಂಬಿನಲ್ಲಿ ನೀರು ತಂದು ಸುರಿತೀನಿ....ಆಗ ಅವನು ಏಳಬಹುದು ಎನನ್ನುತ್ತೀಯ???" ಎಂದೆ..
ಅದಕ್ಕೆ ಅರುಣ ಹಾಗೆಲ್ಲಾ ಮಾಡಬೇಡ..ಇರು ನಾನು try ಮಾಡ್ತೀನಿ ಅಂದ
"ಶ್ರೀನಿವಾಸ..ಏಳಪ್ಪಾ ರಾಜ....ಹೋಗೋಣ time ಆಯ್ತು" ಇಷ್ಟು ಅಂದದ್ದೇ ತಡ ಶ್ರೀನಿವಾಸ ಎದ್ಬಿಟ್ಟ.. ನನಗೆ ಆ ಕ್ಷಣದಲ್ಲಿ ಉಂಟಾದ ಭಾವವನ್ನು ವಿವರಿಸಲು ಸಾಧ್ಯವಿಲ್ಲ ಬಿಡಿ...

ಅರುಣ ಹಲ್ಲು ಕಿರಿಯುತಿದ್ದ.."ನೋಡೋ ನಿನಗೆ ಎಬ್ಬಿಸುವುದಕ್ಕೆ ಬರಲ್ಲ" ಅಂತ

"ಲೋ ನಾನು ಅವಾಗಲಿಂದ time time ಗೆ ಅವ್ನನ್ನ ಎಬ್ಬಿಸಿ ಎಬ್ಬಿಸಿ set ಮಾಡಿದ್ದೀನಿ ಅದು ನಿನಗೆ work ಆಯ್ತು ಅಷ್ಟೆ"..ಸುಮ್ನಿರಪ್ಪಾ ಅಂದೆ...

ಅವನು ಸಹ ready ಆಗಿ ಊಟ ಮಾಡಲು ಮನೆಯಿಂದ ಮೂವರೂ ಹೊರಬಿದ್ದೆವು .

ಆಗ ಹೇಳಿದೆ......"ಲೋ ಶ್ರೀನಿವಾಸ ನೀನು ಹೀಗೆ ಅಂತ ನನಗೆ ಮುಂಚೇನೆ ಗೊತ್ತಿದ್ದಿದ್ದರೆ...ಬೆಳಿಗ್ಗೆ ನೀನು ನಿದ್ದೆ ಮಾಡ್ತಿರೋ pose ನ ನಾನು ರಾಜಾರೋಷವಾಗಿ ತೆಗೆಯುತ್ತಿದ್ದನಲ್ಲೋ.. ಥೂ ನಿನ್ನ!!!
ಹಾಗಾ ಮಲಗೋದು ಕುಂಭಕರ್ಣನ ಅಪರಾವತಾರ ನೀನು" ಮನಸ್ಸಿನಲ್ಲಿ ಮಡುಗಟ್ಟಿದ್ದ ದುಖವನ್ನೆಲ್ಲ ಹೊರಹಾಕುತ್ತಿದ್ದೆ ಅರುಣ ಮತ್ತು ಶ್ರೀನಿವಾಸ ಮನಸಾರೆ ನಗುತ್ತಿದ್ದರು.



ಹೀಗೆ ನಮ್ಮ ಪ್ರವಾಸವನ್ನು ಮುಗಿಸಿ..ಮೈಸೂರಿನಿಂದ ಹೊರಡಲುನುವಾದೆವು....ಶ್ರೀನಿವಾಸನು ನಮ್ಮನ್ನು ಬಸ್ ನಿಲ್ದಾಣಕ್ಕೆ ಬಂದು ಬೀಳ್ಕೊಟ್ಟ...

ಹೀಗೊಂದು ಮರೆಯಲಾರದ ಅನುಭವ ಮಂಟಪ ನೀಡಿದ್ದಕೆ ನಿನಗೆ ಶರಣು....ಮತ್ತೆ ನಿನ್ನ ನಾನು ಎಬ್ಬಿಸುವ ದುಸ್ಸಾಹಸಕ್ಕೆ ಕೈಹಾಕುವುದಿಲ್ಲ...

ಆ ಮಹಿಷಾಸುರನ ಮೇಲಾಣೆ!!!!!!!!

4 comments:

Parisarapremi said...

ಸಸ್ಪೆನ್ಸು ಚೆನ್ನಾಗಿದೆ.. ಫೋಟೋ ತೆಗೆದ ಸ್ಟೋರಿ ಅಂತೂ ವಿನೋದಮಯ! ಹ ಹ್ಹ ಹ್ಹಾ.. ನಿದ್ರಾಲೋಲ ಶ್ರೀನಿವಾಸನಿಗೆ.. ಜೈ!!

Srinivasa Rajan (Aniruddha Bhattaraka) said...

ಹ ಹ್ಹ ಹ್ಹ ಹ್ಹ ಹ್ಹ... :)) ನೋಡ್ರಪ್ಪ.. ಜೀವನದಲ್ಲಿ ಚೆನ್ನಾಗಿ ನಿದ್ರೆ ಮಾಡ್ಬೇಕ್ರಪ್ಪ.. ಮೆದುಳಿಗೆ ಚೆನ್ನಾಗಿ ವಿಶ್ರಾಂತಿ ಸಿಗುತ್ತೆ :p

Srikanth - ಶ್ರೀಕಾಂತ said...

ಕರ್ಮಕಾಂಡ ಅಂದ್ರ ಇದಪ್ಪ...

Anonymous said...

ಯಪ್ಪಾ ಹಿಂಗೆ ನಿದ್ದೆ ಮಾಡಿದೊರ್ಗೆ ನೀರು ಮೈಮೇಲೆ ಸುರಿದರೂ ಎಚ್ಹ್ಚರಿಕೆ ಅಗೋಲ್ಲ ಬಿಡಿ.ಒಟ್ಟಿನಲ್ಲಿ ಮಧಾಹ್ನ ಮತ್ತು ಸಂಜೆನಲ್ಲಿ ನಿದ್ದೆ ಅದ್ ಹೆಂಗ ಬರುತ್ತೋ ಕೆಲವರಿಗೆ ಗೊತ್ತಿಲ್ಲ
ನನಗಂತು ಮಧಾಹ್ನದಹೊತ್ತು ನಿದ್ದೆ ಬರೋಲ್ಲ.......