'ಕುಡುಕ-DRUNKARD' ಎನ್ನುವ ಮುಂಚೆ ಒಮ್ಮೆ ಯೋಚಿಸಿ...!!!

Tuesday, May 1, 2007

ಕೆಲ ವರ್ಷಗಳ ಹಿಂದೆ ಮಾ ಹಿರಣ್ಣಯ್ಯನವರು ನಡೆಸಿಕೊಡುತ್ತಿದ್ದ "ಮಾಸ್ಟರ್" ಎಂಬ ಕಾರ್ಯಕ್ರಮ ಈಟೀವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು....ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೋತ್ತರವಿರುತ್ತಿತ್ತು....ಅದರಲ್ಲಿ ಒಬ್ಬಾತ ಹೀಗೆ ಪ್ರಶ್ನೆಯನ್ನು ಕೇಳಿದ್ದ....
"ಪ್ರತಿದಿನ ಕುಡಿದು ತೂರಾಡಿ..ಗಲಾಟೆ ಮಾಡಿಕೊಂಡು..ಹೆಂಡತಿಯನ್ನು ಹೊಡೆಯುವವನನ್ನು ’ಕುಡುಕ’ ಎನ್ನುತ್ತಾರೆ..
ಯಾರಿಗು ತೊಂದರೆ ಕೊಡದೆ,ಗಲಾಟೆ ಮಾಡದೆ ತಮ್ಮ ಮನೆಯಲ್ಲಿ ಕುಡಿದು silent ಆಗಿ ಮಲಗುವವರನ್ನು ಕೂಡ ’ಕುಡುಕ’ ಎನ್ನುತ್ತದೆ ಸಮಾಜ... ಯಾಕೆ ಹೀಗೆ??"... ಹೀಗೆ ಸಾಗಿತ್ತು ಪ್ರಶ್ನೆ.... ಪ್ರತ್ಯುತ್ತರವಾಗಿ ಮಾ ಹಿರಣ್ಣಯ್ಯನವರು ಏನು ಉತ್ತರಿಸಿದರೆಂದು ನನಗೆ ಮರೆತುಹೋಗಿದೆ...but that question was selected as 'the' best question of that episode...

ಈ ವಿಷಯವಾಗಿ ನನ್ನ ಅಭಿಪ್ರಾಯವನ್ನು ನಿಮ್ಮ ಮುಂದೆ ನಮೂದಿಸಿದ್ದೇನೆ...

ಕುಡಿಯುವವರೆಲ್ಲರನ್ನು ’ಕುಡುಕ’ ಎನ್ನುವುದಾದರೆ.... ಕೆಲಸ ಮಾಡುವವರೆಲ್ಲರು ’ಕಾರ್ಮಿಕ’ರು... ಕೆಟ್ಟ ಮಾತುಗಳನ್ನಾಡುವವರೆಲ್ಲರು ’ಪೋಲಿಗಳು’.... ಹೀಗೆ ಸಾಗುತ್ತದೆ ಪಟ್ಟಿ....

ಕಳ್ಳತನವು ಕೆಲಸವೆ...ಹಾಗೆ ನೋಡಿದರೆ ಬಹಳ ಶ್ರಮವಹಿಸಿ ಮಾಡಬೇಕಾದ ಕೆಲಸವದು...ಅವನನ್ನು ’ಶ್ರಮಿಕ’,’ಕಾರ್ಮಿಕ’..ಎನ್ನಲಾಗುವುದೆ??....ಯೋಚಿಸಿ ನೋಡಿ... ನಾ ಹೇಳಬಯಸುವುದು ಇಷ್ಟೆ... "ಕುಡಿಯುವವರೆಲ್ಲ ಕುಡುಕರಲ್ಲ".....

ಆದರೆ ಕುಡಿತ ಚಟವಾಗಬಾರದಷ್ಟೆ... ಅದು ನನ್ನ ಕಳಕಳಿಯ ಪ್ರಾರ್ಥನೆ... :-)

ನಮ್ಮ ಸಮಾಜವೆ ವಿಚಿತ್ರ.... ಮದುವೆಗೆ ಗಂಡು ಗೊತ್ತು ಮಾಡುವಾಗ.. ಹುಡುಗ ಕುಡಿಯುತ್ತಾನೆಯೆ..ಸಿಗರೆಟ್ ಸೇದುತ್ತಾನೆಯೆ.. ಎಂದೆಲ್ಲ ಕೇಳಿ ತಿಳಿದುಕೊಳ್ಳುತ್ತಾರೆ.... ಅವನು ಕುಡಿತ..ಇತ್ಯಾದಿ ಇತ್ಯಾದಿ ಗಳೆಲ್ಲವನ್ನು ಮಾಡದಿದ್ದರೆ..ಅವನು ಸಕಲ ಸದ್ಗುಣ ಸಂಪನ್ನ... ಇಲ್ಲವಾದರೆ ನೀಚ..ದೂರ್ತ... ಹೀಗೆ...

ಕುಡಿತವನ್ನು ಮಾನದಂಡವನ್ನಾಗಿ ಇಟ್ಟು ನೋಡುತ್ತದೆ ಸಮಾಜ..... ಅದು ತಪ್ಪೆಂದು ನನ್ನ ಭಾವನೆ...

ಯಾವುದೆ ಚಟವಿಲ್ಲದೆ...ಜೀವನದ ಅಧೋಗತಿಗೆ ಇಳಿದಿರುವವರನ್ನು ನಾ ಕಂಡಿದ್ದೇನೆ...

ನನ್ನ ಪ್ರಕಾರ ಕುಡಿಯುವವರು ಮೂರು ವಿಧ.
೧)ತಮ್ಮ ತೆವಲಿಗಾಗಿ ಕುಡಿಯುವವರು... ಕೂತೂಹಲಿಗಳು.. ;-)
೨)ಜೀವನದ ಕಷ್ಟ ಕೋಟಲೆಗಳನ್ನು ಕ್ಷಣವಾದರೂ ಮರೆಯಲೋಸುಗ ಕುಡಿಯುವವರು...
೩)ಕೊನೆಯವವರು ಅದನ್ನೆ ಚಟವಾಗಿಸಿಕೊಂಡವರು..ಇವರಿಗೆ ಕುಡೀಲಿಕ್ಕೆ ಕಾರಣವೇನು ಬೇಕಾಗಿರುವುದಿಲ್ಲ....

ನಾ ಹೇಳಬಯಸುವುದೆನೆಂದರೆ.. ’ಕುಡಿಯುವವರೆಲ್ಲ ಕುಡುಕರಲ್ಲ’... ಹಾಗೆಂದು ಅವರನ್ನು ’ಕುಡುಕರೆಂದು’ ಕರೆಯುವುದು ಸಲ್ಲ.. :-)

ಕುಡಿತವನ್ನೆ ಚಟವಾಗಿಸಿಕೊಂಡು... ತನಗೂ ತನ್ನನ್ನು ನಂಬಿಕೊಂದವರನ್ನು ತೊಂದರೆಗೀಡು ಮಾಡುವವರನ್ನು ’ಕುಡುಕರೆಂದು’ ಕರೆಯಿರಿ...ಸಾಧ್ಯವಾದರೆ ನಾಲ್ಕು ಬುದ್ದಿ ಮಾತು ಹೇಳಿ.. ಕೇಳಲಿಲ್ಲವೆಂದರೆ ನಾಲ್ಕು ವದೆಗಳು ಕೊಟ್ಟರೂ ಸರಿಯೆ...ತಪ್ಪಿಲ್ಲ....

"ಜಾಣನಿಗೆ ಮಾತಿನ ಪೆಟ್ಟು..ದಡ್ಡನಿಗೆ ದೊಣ್ಣೆ ಪೆಟ್ಟು" ಎಂದು ಕೇಳಿಲ್ಲವೆ..???
ನೀವು ಕೇಳದಿದ್ದರೇನು..ನಾನಂತೂ ಕೇಳಿದ್ದೇನೆ.. ;-)

ಯಾರಿಗೂ ತೊಂದರೆ ಕೊಡದೆ.. ಹಿರಿಯರಿಗೆ ತಿಳಿಸದೆ ;-)... ಅದನ್ನು ಚಟವಾಗಿಸಿಕೊಳ್ಳದೆ ಕುಡಿಯಲು ಮನಸಿದ್ದರೆ ಕುಡಿಯಿರಿ... ಎಷ್ಟೆ ಮಾಡಿದರೂ..ಏನೇ ಆಟವಾಡಿದರೂ..ನಿಮ್ಮ ಪರಿಧಿಯನ್ನು ಅರಿಯುವುದು ಉತ್ತಮ..

ಮೇಲೆ ಹೇಳಿದ ವಿಷಯಗಳು ನಿಮಗೆ ಒಪ್ಪಿಗೆಯಾಗದಿದ್ದಲ್ಲಿ...ನನ್ನ ನಿಲುವು ತಪ್ಪಾಗಿದ್ದಲ್ಲಿ... ಮುಕ್ತ ಚರ್ಚೆಗೆ ಆಹ್ವಾನವೀಯುತ್ತೇನೆ... with or without drinks ;-)

ವಿಶಾಲಮನೋಭಾವದವರಾಗಿ ಚರ್ಚೆಯಲ್ಲಿ ಪಾಳ್ಗೊಳ್ಳುತ್ತೀರೊ...ಅಥವಾ.."ಥೂ..!! ಕಚಡ ನನ್ಮಗ ಎನೇನೊ ಗೀಚಿದ್ದಾನೆ"..ಎಂದು ಮೂಗು ಮುಚ್ಚಿ.. ನನ್ನ ನಿಲುವಿಗೆ ವಿರುದ್ದವಾಗಿ ಮಕಾಡೆ ಮಲಗುತ್ತೀರೊ??

ನಿರ್ಣಯ ನಿಮಗೆ ಬಿಟ್ಟದ್ದು... :-)

11 comments:

Parisarapremi said...

೧)ತಮ್ಮ ತೆವಲಿಗಾಗಿ ಕುಡಿಯುವವರು... ಕೂತೂಹಲಿಗಳು.. ;-)
೨)ಜೀವನದ ಕಷ್ಟ ಕೋಟಲೆಗಳನ್ನು ಕ್ಷಣವಾದರೂ ಮರೆಯಲೋಸುಗ ಕುಡಿಯುವವರು...
೩)ಕೊನೆಯವವರು ಅದನ್ನೆ ಚಟವಾಗಿಸಿಕೊಂಡವರು..ಇವರಿಗೆ ಕುಡೀಲಿಕ್ಕೆ ಕಾರಣವೇನು ಬೇಕಾಗಿರುವುದಿಲ್ಲ....

- ಇದು ವಿಧ ಮಾತ್ರವಲ್ಲ, ಗೆಳೆಯ, ಆರ್ಡರ್ ಕೂಡ.. ಕುತೂಹಲಿಗಳಾಗಿ ಶುರು ಮಾಡಿಕೊಳ್ಳುವವರು, ನಂತರ ಕುಡಿತವು ಕಷ್ಟ ಮರೆಸುತ್ತದೆಂಬ ಭ್ರಮೆಗೆ ಸಿಲುಕಿ ಕುಡಿಯುವ ಕಾರ್ಯವೆಸಗಿ ನಂತರ ಸಂಪೂರ್ಣ ವ್ಯಸನಿಗಳಾಗಿಬಿಡುತ್ತಾರೆ..

ಕರ್ಮ ಅಂದರೆ ಯಥಾವತ್ ಅರ್ಥ ಕೆಲಸ ಅಂತ. ಯಾವ ಕೆಲಸ ಮಾಡುತ್ತೀವೋ ಅದು ಅಪ್ರಸ್ತುತ. ಕರ್ಮ ಈಸ್ ಕೆಲಸ ಅಷ್ಟೇ. ಕೆಟ್ಟ ಕೆಲಸ ಮಾಡುವವರನ್ನು ಕಾರ್ಮಿಕ ಎನ್ನುವುದಿಲ್ಲ - ದುಶ್ಕರ್ಮಿ ಅಂತಾರೆ.

ಕುಡಿವವನು ಯಾವುದೇ ಕಾರಣಕ್ಕೆ ಕುಡಿದರೂ ಅದು ಸಮಾಜಕ್ಕೊಳಿತನ್ನಂತೂ ಮಾಡದೆ ಫಲಿತಾಂಶವು ಕ್ರೂರಮಯವಾಗಿರುವುದರಿಂದ ಅವನನ್ನು ಕುಡುಕ ಎಂದು ಕರೆಯುವುದೇ ಸೂಕ್ತ. 'ಹೆಸರು'ಗಳು ಕರ್ಮಾನುಸಾರವಾಗಿರುತ್ತದೆಯೇ ಹೊರೆತು ಕಾರಣಾನುಸಾರವಾಗಿರುವುದಿಲ್ಲವೆಂಬುದನ್ನು ಮನಗಾಣಬೇಕು.

Srinivasa Rajan (Aniruddha Bhattaraka) said...

ಕುಡಿಯುವವರನ್ನು "ಕುಡುಕರು" ಎನ್ನದೆ ಮತ್ತೆಂತು ಸಂಬೋಧಿಸಲಾದೀತು ಶ್ರೀಧರ? ಅರುಣ್ ಸರಿಯಾಗೇ ಗುರುತಿಸಿರುವಂತೆ ಒಬ್ಬ ಮನುಷ್ಯನಿಗೆ ಯಾವುದೇ ಸಂಬೋಧನೆಯು ಸಲ್ಲುವುದಾದರೂ ಅದು ಆತನ ಕರ್ಮವನ್ನನುಸರಿಸುವುದೇ ಹೊರತು ಅದರ ಕಾರಣವನ್ನಲ್ಲ.

ಹಾಗಿದ್ದರೆ ಕಳ್ಳತನಕ್ಕೂ ನೂರು ಕಾರಣಗಳಿರಬಹುದಲ್ಲವೇ? ಎಲ್ಲರನ್ನೂ ಸಮಾನವಾಗಿ "ಕಳ್ಳ" ಎಂದೇಕೆ ಸಂಬೋಧಿಸಿರುವೆ? ನಿಜ ತಾನೆ?

ನನ್ನ ಮಟ್ಟಿಗೆ ಹೇಳುವುದಾದರೆ ಈ ವಿಷಯವಾಗಿ ಏನನ್ನೂ ಏತಕ್ಕೂ "ಯೋಚಿಸುವ" ಪ್ರಮೇಯವೇ ಒದಗದು!

Sridhar Raju said...

[arun]: naavu maado prathi kelasakkoo kaaraNaviruttadeye???.

[Srinivas]: nanage idara bagge yochisuva umedhu idhe.... ;-)

Srinivasa Rajan (Aniruddha Bhattaraka) said...

ಓಹೋ!! ಧಾರಾಳವಾಗಿ ಯೋಚಿಸು. ಆದರೆ ತಪ್ಪು ತಿಳುವಳಿಕೆಯೊಡನೆ ಇದರ ಬಗ್ಗೆ ಏನನ್ನೂ ನಿರ್ಣಯಿಸಬೇಡ. ಅಷ್ಟೇ. ಅದು ಬಹಳ ತಪ್ಪಾದೀತು! :-)

Parisarapremi said...

ನಾವು ಮಾಡೋ ಪ್ರತಿ ಕೆಲಸಗಳಿಗೂ ಕಾರಣವಿರುತ್ತೋ ಬಿಡುತ್ತೋ.. ಆದರೆ ನಾವು ಮಾಡುವ ಕೆಲಸದ ಹೆಸರು ಕಾರಣದ ಮೇಲೆ ಅವಲಂಬಿತವಾಗಿರುತ್ತೆ ಅಂತ ನಾನು ಹೇಳಿದ್ದು...

Sridhar Raju said...

ಕುಡಿವವನು ಯಾವುದೇ ಕಾರಣಕ್ಕೆ ಕುಡಿದರೂ ಅದು ಸಮಾಜಕ್ಕೊಳಿತನ್ನಂತೂ ಮಾಡದೆ ಫಲಿತಾಂಶವು ಕ್ರೂರಮಯವಾಗಿರುವುದರಿಂದ ಅವನನ್ನು ಕುಡುಕ ಎಂದು ಕರೆಯುವುದೇ ಸೂಕ್ತ.

[arun]: naavu maado prathi kelasavu samaajakke oLithaagatto kettadaagatto yendu yochisi maadutteveye.." oLLeyadhu/kettaddu" yemba padagaLu 'subjective'....

noduva drustikonada mele hoguttade...
avana paadige avanu thanna maneyalli raatre 2 peg haakkond malagidare..samaajakke hege kedukuntaaguttade?????????

[srinivas]: naanu enondhu nirnayisilla.... nanna abhipraayavannu nimma mundhe iduttiddene... sariyo/thappo charchisoNa... enantheeri??

Parisarapremi said...

1. ನಾವು ಮಾಡುವ ಕೆಲಸದಿಂದ ಸಮಾಜಕ್ಕೆ ಒಳಿತಾಗುವುದೋ ಇಲ್ಲವೋ ಕೆಡುಕಾಗದಂತೆ ಎಚ್ಚರ ವಹಿಸಬೇಕಾದ್ದು ಎಲ್ಲರ ಧರ್ಮ. ಒಳಿತು ಮುಖ್ಯವಲ್ಲ, ಕೆಡುಕಾಗದಿರುವುದು ಮುಖ್ಯ.

2. ತನ್ನ ಪಾಡಿಗೆ ತಾನು ಎರಡು ಪೆಗ್ ಹಾಕುವವನು ನೇರವಾಗಿ ಯಾವ ತೊಂದರೆಯನ್ನೂ ಮಾಡದೇ ಇರಬಹುದು. ಆದರೆ ಎಷ್ಟು ಜನ ಹಾಗೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಸುಮ್ಮನೆ ಎರಡು ಪೆಗ್ ಹಾಕಿ ಮಲಗುತ್ತಾರೆ? ನೂರಕ್ಕೆ ಐದು ಜನ ಇರಬಹುದಷ್ಟೆ. ಮಿಕ್ಕವರು ಹಾಗೆ ಮಾಡೋದಿಲ್ಲ. ಆದರೆ ಮಾರುವವನಿಗೆ ಕೊಳ್ಳೋರು ಸಿಕ್ಕರೆ ಸಾಕು. ಅದನ್ನು ಹೇಗೆ ಬಳಸುತ್ತೀಯೆ ಎಂಬುದು ಅವನಿಗೆ ಬೇಕಿಲ್ಲ. ಹಾಗಾಗಿ ಇದರಿಂದ ಹೆಂಡದ ಮಾರಾಟ ಹೆಚ್ಚುತ್ತದೆ.

ಪ್ಲಾಸ್ಟಿಕ್ ಬಳಕೆ ನೀನು ಹೇಗೆ ಮಾಡ್ತೀಯೋ ಅದು ಮಾರುವವನಿಗೆ ಬೇಕಿಲ್ಲ. ಅವನಿಗೆ ಮಾರಾಟವಾದರೆ ಸಾಕು. ಕೆಲವರು ಸುರಕ್ಷಿತವಾಗಿ ಬಳಸುತ್ತಾರೆ, ಮತ್ತೆ ಕೆಲವರು ಬೀದಿಯಲ್ಲಿ ಬಿಸಾಡುತ್ತಾರೆ. ಹೀಗೆ ಬೀದಿಯಲ್ಲ್ಲಿ ಬಿಸಾಡುವವರನ್ನು ನಿರ್ಬಂಧಿಸಲು ಅದರ ಮಾರಾಟವನ್ನೇ ನಿಲ್ಲಿಸಬೇಕು. ಕೊಳ್ಳುವವರಿರುವ ತನಕ ಮಾರುವವರಿರುತ್ತಾರೆ. ಹೆಂಡವೂ ಹೀಗೆಯೇ.

Sridhar Raju said...

naanu nooraralli aa 5 janada bagge maatadtha irodhu :-)

Srinivasa Rajan (Aniruddha Bhattaraka) said...

ಚರ್ಚಿಸುವ.. ಖಂಡಿತ..

Parisarapremi said...

ಮೈನಾರಿಟಿ ಪಾರ್ಟಿ!!

Sridhar Raju said...

naanu minority janara paravaagi horaaduttiddeeni....